ಅಂಕಣ

ಅಮೇರಿಕಾದಂತಹ ಬಲಿಷ್ಟ ರಾಷ್ಟ್ರದ ವಿರುದ್ದ ಗುಟುರು ಹಾಕುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೋನ್ ಉಂಗ್ ಭಾರತದ ವಿರುದ್ದ ಕಮಕ್ ಕಿಮಕ್ ಎನ್ನುವುದಿಲ್ಲ!!

ಅಂಗೈಯಷ್ಟಗಲದ ಪುಟ್ಟ ದೇಶದ ಪ್ರಧಾನಮಂತ್ರಿಯೊಬ್ಬ ತನ್ನ ದೇಶದ ಹತ್ತು ಪಟ್ಟು ಹೆಚ್ಚು ವಿಶಾಲ ಮತ್ತು ಬಲಿಷ್ಟ ರಾಷ್ಟ್ರವನ್ನು ಎದುರು ಹಾಕಿಕೊಳ್ಳುತ್ತಾನೆಂದರೆ ಆತನ ಛಾತಿ ಎಂತದ್ದಿರಬೇಕು ಎಂದಿನಿಸುವುದಿಲ್ಲವೆ? ತನ್ನ ಸರ್ವಾಧಿಕಾರಿ ವ್ಯಕ್ತಿತ್ವಕ್ಕೆ ಹೆಸರಾದ ಕಿಮ್ ಜೋನ್ ಉಂಗ್ ಗೆ ಅಮೇರಿಕಾವನ್ನು ಕಂಡರಾಗುತ್ತಿರಲಿಲ್ಲ. ಪದೆ ಪದೆ ಅಮೇರಿಕಾ ವಿರುದ್ದ ಕಾಲು ಕೆರೆದು ಕೊಂಡು ಜಗಳಕ್ಕೆ ನಿಲ್ಲುತ್ತಿದ್ದ ಕಿಮ್ ಈಗ ಶಾಂತಚಿತ್ತನಾಗಿದ್ದಾನೆ. ಇದೆ ಮಂಗಳವಾರದಂದು ಸಿಂಗಾಪುರದ ‘ಸೆಂಟೋಸಾ’ ದ್ವೀಪ ಐತಿಹಾಸಿಕ ಘಟನೆಗೆಯೊಂದಕ್ಕೆ ಸಾಕ್ಷಿಯಾಯಿತು. ವಿಶ್ವದ ಎರಡು ಬದ್ದ ದ್ವೇಷಿಗಳು “ವಿಶ್ವ ಶಾಂತಿಗಾಗಿ” ವೈಮನಸ್ಯ ಬಿಟ್ಟು ಒಂದಾಗುತ್ತಿರುವ ದೃಶ್ಯವೆ ಎಲ್ಲ ಕಡೆಯಲ್ಲೂ ಹರಿದಾಡಿತು.

ಅಮೇರಿಕಾ ಮತ್ತು ಉತ್ತರ ಕೊರಿಯಾ ಮಧ್ಯದ ಭಿನ್ನಾಭಿಪ್ರಾಯಗಳು ತಾರಕ್ಕಕ್ಕೇರಿ ಮೂರನೆ ವಿಶ್ವ ಯುದ್ದ ನಡೆಯುವ ಭೀತಿ ಎದುರಾಗಿತ್ತು. ಆದರೆ ಅಮೇರಿಕಾ ತೆಗೆದುಕೊಂಡ ಅತ್ಯುತ್ತಮ ನಿರ್ಧಾರದಿಂದಾಗಿ ಮತ್ತೊಮ್ಮೆ ಯುದ್ದ ಭೀತಿಯಲ್ಲಿ ನರಳುತ್ತಿದ್ದ ವಿಶ್ವದ ಎಲ್ಲಾ ರಾಷ್ಟ್ರಗಳು ನಿಟ್ಟುಸಿರು ಬಿಡುವಂತಾಗಿದೆ. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳೂ ತಮ್ಮ ವೈಷಮ್ಯ ಮರೆತು ಹತ್ತಿರವಾಗುತ್ತಿರುವುದೂ ಜಾಗತಿಕ ಶಾಂತಿಯ ದೃಷ್ಟಿಯಿಂದ ಒಳ್ಳೆಯ ವಿಷಯವೆ.

ಶಕ್ತಿಶಾಲಿ ಅಮೇರಿಕಾದ ವಿರುದ್ದ ಗುಟುರು ಹಾಕುತ್ತಿದ್ದ ಕಿಮ್ ಜೋನ್ ಉಂಗ್ ಭಾರತದ ವಿರುದ್ದ ಸೊಲ್ಲೆತ್ತುವುದಿಲ್ಲ ಏಕೆ ಗೊತ್ತೆ?

  • ಬೆಕ್ಕಿನ ಬಿಡಾರ ಬೇರೆ ಎನ್ನುವಂತೆ ತೃತೀಯ ಜಗತ್ತಿನಿಂದ ದೂರವಾಗಿ ರಹಸ್ಯಮಯಿ ರೀತಿಯಲ್ಲಿ ಬದುಕುತ್ತಿರುವ ಉತ್ತರ ಕೊರಿಯಾದ ಅತಿ ದೊಡ್ಡ ವ್ಯಾವಹಾರಿಕ ಪಾಲುದಾರ ಭಾರತ!
  • ಭಾರತ ಮತ್ತು ಉತ್ತರ ಕೊರಿಯಾ ನಡುವಿನ ದ್ವಿಪಕ್ಷೀಯ ವ್ಯಾಪಾರ ವಾರ್ಷಿಕವಾಗಿ ಸುಮಾರು 500 ಮಿಲಿಯನ್ ಡಾಲರ್ ಮೊತ್ತವನ್ನು ಹೊಂದಿದೆ.
  • ಇದಲ್ಲದೆ, ಎರಡೂ ದೇಶಗಳೂ ಪರಸ್ಪರ ಸೌಹಾರ್ದಪೂರ್ಣ ರಾಯಭಾರಿ ಸಂಬಂಧಗಳನ್ನು ನಿಭಾಯಿಸುತ್ತವೆ. ಉತ್ತರ ಕೊರಿಯಾದಲ್ಲಿ ಭಾರತ ತನ್ನ ರಾಯಭಾರಿ ಕಚೇರಿಯನ್ನು ಹೊಂದಿದ್ದರೆ, ಉತ್ತರ ಕೊರಿಯಾದ ರಾಯಭಾರಿ ಕಚೇರಿ ದೆಹಲಿಯಲ್ಲಿದೆ.
  • 2010 ರಲ್ಲಿ ಉತ್ತರ ಕೊರಿಯಾವು ಆಹಾರ ಕೊರತೆಯನ್ನೆದುರಿಸಿತು. ಈ ಸಂದರ್ಭದಲ್ಲಿ ಭಾರತವು ವಿಶ್ವ ಆಹಾರ ಕಾರ್ಯಕ್ರಮದ ಆಶ್ರಯದ ಮೂಲಕ 1300 ಟನ್ ಗಳಷ್ಟು ದವಸ-ಧಾನ್ಯ ಮತ್ತು ಗೋಧಿ ನೀಡುವ ಮೂಲಕ ತುರ್ತು ಸಹಾಯವನ್ನು ಒದಗಿಸಿತು.
  • ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳು ಒಂದು ಕಾಲದಲ್ಲಿ ಶತ್ರುಗಳಾಗಿದ್ದ ಸಂದರ್ಭದಲ್ಲೂ ಭಾರತ ದಕ್ಷಿಣ ಕೊರಿಯಾ ಜೊತೆಯೂ ಸೌಹಾರ್ದ ಪೂರ್ಣ ಸಂಬಂಧ ಹೊಂದಿತ್ತು. ಭಾರತ ಮತ್ತು ದ. ಕೊರಿಯಾ ನಡುವೆ 10 ಡಾಲರ್ ಬಿಲಿಯನ್ ಗಳಷ್ಟು ವಾರ್ಷಿಕ ವ್ಯಾಪಾರ ಸಂಬಂಧವಿದೆ.
  • ಉತ್ತರ ಕೊರಿಯಾದ ವಿದ್ಯಾರ್ಥಿಗಳು ಭಾರತದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಡೆಹ್ರಾಡೂನಿನ CSSTEAP ನಲ್ಲಿ ಉತ್ತರ ಕೊರಿಯಾದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

ತನ್ನ ಅತಿ ದೊಡ್ದ ವ್ಯಾವಹಾರಿಕ ಪಾಲುದಾರನ ವಿರುದ್ದ ನಿಲ್ಲುವ ಶಕ್ತಿ ಉತ್ತರ ಕೊರಿಯಾಕ್ಕೆ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಭಾರತ ಯಾವತ್ತೂ ಯಾರಿಗೂ ಕೇಡು ಬಯಸುವುದಿಲ್ಲ. ಎಲ್ಲರೂ ತನ್ನವರು ಎನ್ನುವ ಭಾವನೆ ಹೊಂದಿರುವ ಭಾರತ ವಿಶ್ವದ ಅತ್ಯಂತ ನಂಬಿಕಸ್ಥ ರಾಷ್ಟ್ರ. ಮೋದಿ ಸರಕಾರ ಬಂದ ಮೇಲಂತೂ ವೈಯಕ್ತಿಕವಾಗಿ ಭಾರತ ಎಲ್ಲಾ ರಾಷ್ಟ್ರಗಳೊಡನೆ ಸೌಹಾರ್ದ ಸಂಬಂಧ ಸ್ಥಾಪಿಸಿ, ಆರ್ಥಿಕ ಮತ್ತು ಸಾಂಸ್ಕೃತಿಕ ವ್ಯವಹಾರವನ್ನು ಗಟ್ಟಿಗೊಳಿಸುತ್ತಿದೆ . ಈಗ ಅಮೇರಿಕಾ ಮತ್ತು ಉತ್ತರ ಕೊರಿಯಾ ತಮ್ಮ ವೈರತ್ವ ಮರೆತು ಹತ್ತಿರವಾಗುತ್ತಿರುವುದು ಭಾರತದ ಮಟ್ಟಿಗೆ ಸಮಾಧಾನಕರ ವಿಷಯ. ಅಮೇರಿಕಾ ಮತ್ತು ಉತ್ತರ ಕೋರಿಯಾ ಎರಡೂ ದೇಶಗಳು ಭಾರತಕ್ಕೆ ಘನಿಷ್ಟ ಮಿತ್ರರೆ. ಒಬ್ಬರಿಗಾಗಿ ಇನ್ನೊಬ್ಬರನ್ನು ಬಿಟ್ಟು ಕೊಡುವಂತಿರಲಿಲ್ಲ. ಆದರೆ ಈಗ ಶತ್ರುಗಳೆ ಶತ್ರುತ್ವ ಮರೆತು ಒಂದಾಗುವತ್ತ ಹೆಜ್ಜೆ ಇಡುತ್ತಿರುವುದರಿಂದ ಭಾರತ ನಿರಾಳವಾಗಿ ಉಸಿರಾಡಬಹುದು.

-ಶಾರ್ವರಿ

Tags

Related Articles

Close