ಇತಿಹಾಸ

ಭದ್ರಕಾಳಿಯನ್ನು ಅಲ್ಲಾಹುವಾಗಿ ಬದಲಾಯಿಸಿದ ಮತಾಂಧ ರಾಜ!! ಯಾರೂ ಬಾಯಿಬಿಡದ ಜಮಾ ಮಸೀದಿಯ ಐತಿಹಾಸಿಕ ಕಥನವಿದು!!

ಜಮಾ ಮಸೀದಿ..!! ಬಹುಶಃ ಈ ಹೆಸರನ್ನು ಕೇಳದವರು ಯಾರು ಇರಲಿಕ್ಕಿಲ್ಲ. ಗುಜರಾತಿನ ಅಹಮದಾಬಾದಿನಲ್ಲಿ ಅಹಮದ್ ಶಾ 1452 ರಲ್ಲಿ ಕಟ್ಟಿದ್ದಾರೆನ್ನಲಾಗಿರುವ ಮಸೀದಿಯದು.

ಪ್ರತೀ ಬಾರಿಯೂ ಇಂತಹ ಒಂದು ಶೀರ್ಷಿಕೆಯನ್ನೊಳಗೊಂಡು ಲೇಖನವನ್ನು ಬರೆಯಹೊರಟಾಗ ಅನೇಕ ವಿರೋಧಗಳು ವ್ಯಕ್ತವಾಗುತ್ತವೆ. ಅದಕ್ಕೆ ಒಂದೇ ಕಾರಣ. ಬಹಿರಂಗ ಸತ್ಯವನ್ನು ನಗ್ನವಾಗಿಸುತ್ತೇವೆಂದು. ಆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಯಾರೂ ತಯಾರಿಲ್ಲದೇ ಇರುವುದು ಕೂಡ ಅವರ ವಿರೋಧಕ್ಕೆ ಒಂದು ಕಾರಣ. ಇಷ್ಟೇ ಹೇಳಬಲ್ಲೆ. ಹಿಂದೂವಾಗಿದ್ದರೆ ಹೆಮ್ಮೆ ಪಡಿ. ಮತಾಂಧನಾಗಿದ್ದರೆ ಬದಲಾಗಿ, ಸತ್ಯವನ್ನು ಒಪ್ಪಿಕೊಳ್ಳಿ.

ಹಳದಿ ಕಲ್ಲಿನ ಸ್ಮಾರಕ ನಿರ್ಮಾಣವಾಗಿದ್ದು ದೇವಾಲಯ ನಾಶದಿಂದಾದ ಉಳಿದ ಪಳೆಯುಳಿಕೆಗಳಿಂದ. ಆ ಪ್ರದೇಶಗಳಲ್ಲಿದ್ದ ಹಿಂದೂ ದೇವಾಲಯಗಳನ್ನು ಮುಘಲರು ನೆಲಸಮ ಮಾಡಿದ್ದರು. ನಮಗೆಲ್ಲಾ ಅರಿವಿದೆ ಮುಘಲ್ ಮತಾಂಧ ರಾಜರು ದೇವಾಲಯಗಳನ್ನು ಧ್ವಂಸ ಮಾಡಿ ಅಲ್ಲಿ ಮಸೀದಿಯನ್ನು ನಿರ್ಮಾಣ ಮಾಡಿ ಮತಾಂಧತೆಯ ಚಟುವಟಿಕೆಗಳಿಗೆ ಮುನ್ನುಟಿಯಿಟ್ಟಿದ್ದರು.

ಪುರಾತನ ಹಿಂದೂ ದೇವಾಲಯಗಳು ಕೇವಲ ಪ್ರಾರ್ಥನೆ, ಪೂಜೆಗಳಿಗೆ ಮಾತ್ರ ಸೀಮಿತವಾಗಿಲ್ಲದೆ, ಆಯುರ್ವೇದ, ಯೋಗ, ಮುಂತಾದ ಶಿಕ್ಷಣಗಳಿಗೆ ಕೇಂದ್ರಸ್ಥಾನವೂ ಆಗಿತ್ತೆಂಬುದು ವಿಶೇಷ. ಅಲ್ಲಿ ಸಂಸ್ಕಾರಗಳನ್ನು, ಸಂಸ್ಕøತಿಯನ್ನು ಬೋಧಿಸಲಾಗುತ್ತಿತ್ತು. ಹಾ.. ಮುಸಲ್ಮಾನರ ಆಕ್ರಮಣವಾಗುವಲ್ಲಿಯವರೆಗೆ!!

ಒಂದು ಕಾಲದಲ್ಲಿ ಮಾಲ್ವದ ರಜಪೂತ ರಾಜರ ಅಧೀನದಲ್ಲಿದ್ದ ಹಿಂದೂ ದೇವಾಲಯವಾಗಿತ್ತು ಜಮಾ ಮಸೀದಿ. ರಜಪುತ್ಘರನಾದ ಕುಲದೇವತೆಯಾಗಿರುವ ಭದ್ರಕಾಳಿಗೆ ಗೌರವದ ಹಾಗೂ ಭಕ್ತಿಯ ಪ್ರತೀಕವಾಗಿ ನಿರ್ಮಿಸಲಾದ ದೇವಾಲಯವದು. ಉತ್ಖನದ ಮೂಲಕ, ಪುರಾತನ ಸಾಹಿತ್ಯಗಳ ಮೂಲಕ, ಲಪಿಯ ಮೂಲಕ ರಜಪೂತರ ಕಾಲದಲ್ಲಿದ್ದ ವೈಭವದ ಸ್ಥಿತಿಗತಿಯನ್ನು ಇತಿಹಾಸದಲ್ಲಿ ಬಹಳವಾಗಿ ಉಲ್ಲೇಖಿಸಲಾಗಿರುವುದು ಗಮನಿಸಿದರೆ ಮಾಲ್ವ, ಮೇವಾರ್ ಹಾಗೂ ಕಚ್ ಪ್ರಾಂತ್ಯದಲ್ಲಿ ಆಳ್ವಿಕೆ ಮಾಡುತ್ತಿದ್ದ ರಜಪೂತರ ಶೌರ್ಯದ, ಹಾಗೂ ಅವರ ಕೊಡುಗೆಗಳ ಕುರಿತಾಗಿ ನಾವು ತಿಳಿಯುವುದಕ್ಕೆ ಸಾಧ್ಯವಿದೆ.

ಅಹಮದಾಬಾದ್ ಅನ್ನುವ ನಗರ ರಜಪೂತ್ ರಾಜರ ಆಡಳಿತದ ಸಂದರ್ಭದಲ್ಲಿ “ಭದ್ರ” ಅಥವಾ “ಕರ್ಣಾವತಿ” ಅನ್ನುವ ನಾಮಧೇಯದಿಂದ ಕರೆಯಲ್ಪಡುತ್ತಿತ್ತು. ತಮ್ಮ ಕುಟುಂಬವನ್ನು ಸದಾ ಸಂರಕ್ಷಿಸುವ ಭದ್ರಕಾಳಿಯ ಪ್ರೀತ್ಯರ್ಥವಾಗಿ ಈ ನಾಮಧೇಯವನ್ನು ಇಡಲಾಗಿತ್ತು. ಹಿಂದೂ ರಾಜರುಗಳಿಂದ ಮುಸಲ್ಮಾನರು ಈ ಸ್ಥಳವನ್ನು ಆಕ್ರಮಿಸಿಕೊಂಡ ನಂತರ ಈ ತಾಣವನ್ನು ಅಹಮದ್ ಶಾ “ಅಹಮದಾಬಾದ್ ” ಎಂಬುದಾಗಿ ಬದಲಾವಣೆ ಮಾಡಿದ.

ಯಾವ ಭದ್ರಕಾಳಿ ದೇವಾಲಯವನ್ನು ಈಗ ಜಮಾ ಮಸೀದಿಯೆಂದು ಕರೆಯಲಾಗುತ್ತಿದೆಯೋ, ಒಂದು ಕಾಲದಲ್ಲಿ ಅತ್ಯದ್ಭುತ ಶಿಲ್ಪಕಲೆಯಿಂದ ಕೂಡಿದ ಸುಂದರ ಹಾಗೂ ಶ್ರೀಮಂತ ಅರಮನೆಯಾಗತ್ತು. ರಜಪೂತರ ಆಳ್ವಿಕೆಯ ಕಾಲದಲ್ಲಿನ ಶಿಲ್ಪ ಕಲೆಯ ಸುವರ್ಣಯುಗಕ್ಕೆ ಇದೊಂದು ಉದಾಹರಣಯಾಗಿತ್ತೆನ್ನಬಹುದು.

ಹೂವಿನ ಅಲಂಕಾರದ ರೂಪವನ್ನು ನೀಡಿ ಕೆತ್ತನೆ, ಕಮಲದ ಹೂಗಳು, ಮಂಡಲಗಳು, ಆನೆಗಳು, ಕುಂಡಲಿನಿಯನ್ನು ಪ್ರತಿನಿಧಿಸುವ ಸುರುಳಿಯಾಕಾರದ ಸರ್ಪಗಳು, ಖಗೋಳ ನೃತ್ಯಗಾರರು, ಮುಂತಾದ 100 ಕೆತ್ತನೆಗಳನ್ನು ದೇವಾಲಯದಲ್ಲಿ ನಿರ್ಮಿಸಲಾದ ಕಂಬಗಳಲ್ಲಿ ರಚಿಸಲಾಗಿರುವುದು ಅವರ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿ.

ಈಗ ಒಂದು ವಿಚಾರವನ್ನು ಹೀಗೆ ವಿಮರ್ಶಿಸಿ. ಒಂದು ವೇಳೆ ಜಮಾ ಮಸೀದಿ ನಿಜವಾಗಿಯೂ ಮಸೀದಿಯಾಗಿದ್ದಿದ್ದರೆ, ಇಂತಹ ಮೂರ್ತಿಗಳ ಕೆತ್ತನೆಯನ್ನು ನಾಶ ಮಾಡಬೇಕಿತ್ತು. ಕಾರಣ ಅವರ ಶರಿಯಾ ಕಾನೂನಿನ ಪ್ರಕಾರ ಯಾವುದೇ ಚಿತ್ರಗಳ ಮೂಲಕ ಅಥವಾ ಮೂರ್ತಿಗಳ ಮೂಲಕ ಭಗವಂತನನ್ನು ಪೂಜಿಸಿವುದು ಅಪರಾಧವಾಗಿರುತ್ತದೆ. ಈಗ ಹೇಳಿ?? ಅದು ಮಸೀದಿಯೋ ಅಥವಾ ಒಂದು ಪುರಾತನ ದೇವಾಲಯವಾಗಿತ್ತೋ??

ಧರ್ಮ ಬೋಧಿಸುವುದಕ್ಕೆ ತದ್ವಿರುದ್ಧವಾಗಿದೆ ಈ ಮಸೀದಿ!!

ವಾಸ್ತವವಾಗಿಯೂ ಸತ್ಯವಿದು. ಅವರ ಧರ್ಮ ಬೋಧಿಸುವುದು ಒಬ್ಬನೇ ದೇವರಿದ್ದಾನೆ ಹಾಗೂ ಹಲವು ನಾಮಗಳಿಂದ ದೇವರನ್ನು ಪೂಜಿಸುವುದು ಮಹಾಪರಾಧ. ಅದು ಸತ್ಯವೇ ಆಗಿದ್ದರೆ ಈ ಮಸೀದಿಯ ಪ್ರಾಂಗಣದಲ್ಲಿ ನಿರ್ಮಿಸಲಾದ ಕಂಬಗಳಲ್ಲಿ ಇಷ್ಟೊಂದು ದೇವರ ಚಿತ್ರಗಳ ಕೆತ್ತನೆಗಳಿರಲು ಹೇಗೆ ಸಾಧ್ಯವಾಯಿತು? ಅಷ್ಟಕ್ಕೂ ಈ ಕಂಬಗಳು ಪ್ರಾರ್ಥನಾ ಮಂದಿರದ ಒಳಗೇ ಇವೆ. ಅದು ಒಂದು ದೊಡ್ಡ ಸಭಾಂಗಣದ ರೀತಿಯಲ್ಲೇ ಇವೆ ಎಂಬುದು ಸೋಜಿಗದ ಸಂಗತಿ. ಇನ್ನೊಂದು ಪ್ರಶ್ನೆಗೆ ಉತ್ತರವನ್ನು ಹೇಳಿ. ಒಂದು ವೇಳೆ ಮಸೀದಿಯ ಒಳಗಡೆ ಇಂತಹ ಕಂಬಗಳು ಇದ್ದುದರಿಂದ ಮುಸಲ್ಮಾನರಿಗೆ ನಮಾಜ್ ಮಾಡುವ ಸಂದರ್ಭದಲ್ಲಿ ಉಪಟಳವಾಗುವುದಿಲ್ಲವೇ??

ಸಹಜವಾಗಿಯೇ ದೇವಾಲಯಗಳಲ್ಲಿ ಹಾಗೂ ಮಂದಿರಗಳಲ್ಲಿ ಇಂತಹ ಕಂಬಗಳನ್ನು ನಿರ್ಮಿಸಲಾಗುತ್ತದೆ. ಉದ್ದದ ಕಂಬಗಳು ಮಂದಿರಗಳೇನಕದಲ್ಲಿ ನಮ್ಮ ಪುರಾತನ ರಾಜರು ನಿರ್ಮಿಸಿದ್ದು ಮಾತ್ರ ಸುಳ್ಳಲ್ಲ.

ರಾಮಾಯಣ, ಮಹಾಭಾರತ, ವೇದ, ಪುರಾಣ ಹಾಗೂ ಉಪನಿಷತ್ ಮುಂತಾದವುಗಳಲ್ಲಿ ಉಲ್ಲೇಖವಾದ ಕಥನಗಳನ್ನು ಆಧರಿಸಿಯೇ ಇಂತಹ ಕೆತ್ತನೆಗಳನ್ನು ಹಿಂದೂ ದೇವಾಲಯಗಳಲ್ಲಿ ಕೆತ್ತಲಾಗಿದೆ. ಭದ್ರಕಾಳಿಯ ಪ್ರೀತ್ಯರ್ಥವಾಗಿ ಪ್ರಜಾಪತಿ ದಕ್ಷ ಮಾಡಿದ ಯಾಗದ ಕುರಿತಾಗಿ ಶಿವ ಪುರಾಣ ಉಲ್ಲೇಖಿಸುತ್ತದೆ. ರಜಪೂತರು ಭದ್ರಕಾಳಿಯ ಭಕ್ತರಾಗಿದ್ದ ಕಾರಣ ಅಂತಹ ಕಥನಗಳನ್ನು ಶಿಲ್ಪದ ಮೂಲಕ ಕೆತ್ತಿಸಿ ಆ ಮೂಲಕ ಆ ಕಥೆಗಳನ್ನು ಉಳಿಸುವ ಪ್ರಯತ್ನವನ್ನೂ ಮಾಡಿರುವುದು ನಮಗೂ ಹೆಮ್ಮೆ ತರುವ ಸಂಗತಿಯೇ ಸರಿ.

ಇಂತಹ ಸುಂದರವಾದ ಹಾಗೂ ಸುವಿವರವಾದ ದೇವಾಲಯವನ್ನು ದೇವತೆಗೆ ಗೌರವವನ್ನು ಸೂಚಿಸುವ ಸುಲುವಾಗಿ ರಜಪೂತ
ರಾಜರು ನಿರ್ಮಿಸಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲವೆಂಬುದೂ ಅಷ್ಟೇ ಸ್ಪಷ್ಟ ಹಾಗೂ ವಾಸ್ತವ.!!

Source :Bhadrakali turned to Allah

postcard team

Tags

Related Articles

FOR DAILY ALERTS
 
FOR DAILY ALERTS
 
Close