ಪ್ರಚಲಿತ

ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಮಾಡಲ್ಲ! ಲೋಕಸಭಾ ಚುನಾವಣೆಗೂ ಮೊದಲೇ ಮಹಾಘಟಬಂಧನಕ್ಕೆ ಶಾಕ್ ನೀಡಿದ ಎಸ್‌ಪಿ -ಬಿಎಸ್‌ಪಿ!

ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸುವ ಉದ್ದೇಶದಿಂದ ಒಂದಾಗಿರುವ ವಿಪಕ್ಷಗಳು ಮಹಾಘಟಬಂಧನದ ಹೆಸರಿನಲ್ಲಿ ಒಂದುಗೂಡಿ ಚುನಾವಣೆ ಎದುರಿಸಲು ಸಜ್ಜಾಗಿವೆ. ಯಾವುದೇ ಕಾರಣಕ್ಕೂ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬಾರದು ಎಂದು ಪಣತೊಟ್ಟಿರುವ ಮಹಾಘಟಬಂಧನಕ್ಕೆ ಇದೀಗ ಪ್ರಮುಖ ಎರಡು ಪಕ್ಷಗಳು ಶಾಕ್ ನೀಡಿದೆ. ಒಂದೆಡೆ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತಿದ್ದು ಇದಕ್ಕೆ ಮಹಾಘಟಬಂಧನದ ಯಾವ ಪಕ್ಷಗಳು ಕೂಡ ಒಪ್ಪಿಗೆ ನೀಡುತ್ತಿಲ್ಲ.‌ ತಮ್ಮ‌ ತಮ್ಮ ಲಾಭವನ್ನೇ ನೋಡಿಕೊಂಡು ತಂತ್ರ ರೂಪಿಸಿರುವ ವಿಪಕ್ಷಗಳು ತಾವೇ ಪ್ರಧಾನಿ ಆಗಬೇಕೆಂದು ಪ್ರಯತ್ನಿಸುತ್ತಿದೆ. ಆದರೆ ಇದೀಗ ಮಹಾಘಟಬಂಧನದಲ್ಲಿ ಭಾರೀ ಬಿರುಕು ಉಂಟಾಗಿದ್ದು, ಎಸ್‌ಪಿ – ಬಿಎಸ್‌ಪಿ ಪಕ್ಷಗಳೆರಡೂ ಕೂಡ ಮಹಾಘಟಬಂಧನದಿಂದ ಹೊರಗುಳಿಯಲು ನಿರ್ಧರಿಸಿದೆ. ಕಾಂಗ್ರೆಸ್ ಜೊತೆ ಸೇರಿಕೊಂಡರೆ ತಮ್ಮ ಪಕ್ಷಕ್ಕೆ ಹಿನ್ನಡೆ ಆಗಲಿದೆ, ಆದ್ದರಿಂದ ನಾವು ಚುನಾವಣೆಗೂ ಮೊದಲೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಎರಡೂ ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ.!

ರಾಹುಲ್ ಗಾಂಧಿ ಪ್ರಧಾನಿ ಆಗುವುದಾದರೆ ನಾವೂ ಕೂಡ ಬೆಂಬಲ ನೀಡುವುದಿಲ್ಲ ಎಂದು ಈಗಾಗಲೇ ಹೇಳಿಕೊಂಡ ಮಮತಾ ಬ್ಯಾನರ್ಜಿ, ತಾನೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದಾಗಿ ಘೋಷಣೆ ಮಾಡದೇ ಇದ್ದರು ಕೂಡ, ಎಲ್ಲಾ ತಯಾರಿ ನಡೆಸುತ್ತಿದೆ. ಇದಕ್ಕೆ ಒಪ್ಪಿಗೆ ನೀಡದ ಇತರ ಕೆಲ ಪಕ್ಷಗಳು, ರಾಹುಲ್ ಪ್ರಧಾನಿ ಅಭ್ಯರ್ಥಿ ಆದರೆ ನಾವು ನೀಡಿದ ಬೆಂಬಲ ವಾಪಾಸ್ ಪಡೆಯುತ್ತೇವೆ ಎಂದು ಈಗಾಗಲೇ ಬಹಿರಂಗವಾಗಿ ಹೇಳಿಕೊಂಡಿವೆ. ಆದ್ದರಿಂದ ಮಹಾಘಟಬಂಧನ ಯಾವ ಕಾರಣಕ್ಕೂ ಯಶಸ್ವಿಯಾಗಲು ಸಾಧ್ಯವಿಲ್ಲ, ಆದರೂ ಕೂಡ ಮೋದಿಯನ್ನು ಸೋಲಿಸುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಇದೀಗ ಎಸ್‌ಪಿ – ಬಿಎಸ್‌ಪಿ ಪಕ್ಷದ ಈ ನಡೆಯಿಂದಾಗಿ ಕಾಂಗ್ರೆಸ್‌ಗೆ ಮತ್ತಷ್ಟು ಹೊಡೆತ ಬಿದ್ದಂತಾಗಿದೆ.!

ಮೈತ್ರಿ ಕೈಕೊಟ್ಟರೆ ವಿಪಕ್ಷಗಳ ತಂತ್ರ ಫಲಿಸುತ್ತಾ?

ಅಷ್ಟಕ್ಕೂ ವಿಪಕ್ಷಗಳು ಯಾವ ಕಾರಣಕ್ಕಾಗಿ ಮಹಾಘಟಬಂಧನ ಮಾಡಿಕೊಂಡಿವೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ. ‌ಪ್ರಧಾನಿ ಮೋದಿಯವರನ್ನು ಎದುರಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಸತ್ಯಾಂಶ ಗೊತ್ತಿದ್ದು ವಿಪಕ್ಷಗಳೆಲ್ಲವೂ ಒಂದಾಗಿ ಮಹಾಘಟಬಂಧನ ರೂಪಿಸಿವೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಮಹಾಘಟಬಂಧನದಲ್ಲಿ ಒಂದೊಂದೇ ಕೊಂಡಿಗಳು ಕಳಚಿ ಬೀಳುತ್ತಿದೆ.‌ ಉತ್ತರ ರಾಜ್ಯಗಳಲ್ಲಿ ಪ್ರಮುಖವಾಗಿ ಇರುವ ಪಕ್ಷಗಳಲ್ಲಿ ಒಂದಾದ ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳು ಇದೀಗ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಚುನಾವಣೆಗೂ ಮೊದಲು ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.‌ಇದರಿಂದ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ. ಯಾಕೆಂದರೆ ಕಾಂಗ್ರೆಸ್ ಒಂಟಿಯಾಗಿ ಮೋದಿಯವರನ್ನು ಸೋಲಿಸಲು ಸಾಧ್ಯವಿಲ್ಲ, ಆದರೆ ಮಹಾಘಟಬಂಧನದ ಮೂಲಕ ಪ್ರಬಲ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಎಂಬ ನಂಬಿಕೆ‌ ಕಾಂಗ್ರೆಸ್‌ಗೆ ಇತ್ತು, ಇದೀಗ ಆ ನಂಬಿಕೆ ಕೂಡ ಹುಸಿಯಾಗಿದೆ.‌ಯಾಕೆಂದರೆ ಮಹಾಘಟಬಂಧನದ ಪ್ರಮುಖ‌‌ ಎರಡು ಪಕ್ಷಗಳು ಹಿಂದೆ ಸರಿದಿದ್ದು, ಮತ್ತೊಂದು ನಿರ್ಧಾರಕ್ಕೆ ಮುಖ ಮಾಡುವಂತಾಗಿದೆ.!

ಕಾಂಗ್ರೆಸ್‌ಗೆ ಅಧಿಕಾರ ಬೇಕು , ಮೋದಿ‌ ಸೋಲಬೇಕು ಎಂಬ ಉದ್ದೇಶವಿದ್ದರೆ, ಇತರ ಪಕ್ಷಗಳಿಗೆ ಅಧಿಕಾರವೇ ಮುಖ್ಯವಾಗಿದೆ. ‌ಹೇಗಾದರೂ ಮಾಡಿ ಮೋದಿಯನ್ನು ಸೋಲಿಸಿ ತಮ್ಮದೇ ಪಕ್ಷದ ನಾಯಕರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕೆಂದು ಹಾತೊರೆಯುತ್ತಿವೆ. ಆದರೆ ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುತ್ತಿಲ್ಲ, ಇತ್ತ ಕಾಂಗ್ರೆಸ್‌ಗೆ ಇತರ ವಿಪಕ್ಷಗಳು ಅವಕಾಶ ನೀಡುತ್ತಿಲ್ಲ. ಒಟ್ಟಾರೆಯಾಗಿ ಯಾವುದೇ ಉಪಯೋಗವಿಲ್ಲದೆ ನಿರ್ಮಾಣವಾದ ಮಹಾಘಟಬಂಧನ ಚುನಾವಣೆಗೂ ಮೊದಲೇ ವಿಫಲವಾಗಿ ಮೂಲೆ ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ..!

ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close