ಪ್ರಚಲಿತ

ರಫೆಲ್ ದಾಳಿ ಮಾಡಿದ ಕಾಂಗ್ರೆಸ್ಸಿಗೆ ಪ್ರತಿದಾಳಿ ಮಾಡಿದ ಲೇಡಿ ಫೈರ್ ಬ್ರಾಂಡ್!! ರಫೇಲ್ ಡೀಲ್ ನಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಮಾಹಿತಿ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್!!

ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಪರ ಭಾಷಣ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿಯನ್ನೇ ನಡೆಸಿದ್ದರು. ತಮ್ಮ ಭಾಷಣದಲ್ಲಿ ಮೋದಿ ಕಾರ್ಯವೈಖರಿಯನ್ನು ಟೀಕಿಸಿದ್ದ ರಾಹುಲ್, ಪ್ರಮುಖವಾಗಿ ರಫೆಲ್ ಯುದ್ಧ ವಿಮಾನ ಖರೀದಿ ಹಗರಣದ ಕುರಿತು ಪ್ರಸ್ತಾಪ ಮಾಡಿದ್ದರು. ಆದರೆ ಪ್ರಾನ್ಸ್ ಕಂಪನಿಯಿಂದ 126 ರಫೆಲ್ ಜೆಟ್ ಗಳನ್ನು ಖರೀದಿ ಮಾಡುವ ಸಲುವಾಗಿನ ಮಾತುಕತೆಯು ಯುಪಿಎ ಅವಧಿಯಲ್ಲಿ ಯಾಕೆ ವಿಫಲಗೊಂಡಿತು ಎಂಬುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ವಿವರಿಸಿದ್ದಾರೆ!!

ರಫೇಲ್‍ನಂತಹ ಹೈಟೆಕ್ ಯುದ್ಧ ವಿಮಾನಗಳು ಭಾರತಕ್ಕೆ ಅಗತ್ಯವಿದ್ದು ಪ್ರಸ್ತುತ ಇರುವ ಮಧ್ಯಮ ವ್ಯಾಪ್ತಿಯ ತೇಜಸ್ ಒಂದರಿಂದಲೇ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ಈಗಾಗಲೇ ತೇಜಸ್ ಮೇಲೆ ವಾಯುಪಡೆ ಭಾರೀ ವೆಚ್ಚ ಮಾಡುತ್ತಿದೆ. ತೇಜಸ್ ಮಾರ್ಕ್-2 ಹೆಸರಿನ 12 ಸ್ಕ್ವಾಡ್ರನ್‍ಗಳ ಖರೀದಿಗೆ ವಾಯುಪಡೆ ಮುಂದಾಗಿದೆ. ಈಗಾಗಲೇ 123 ಮಾರ್ಕ್-ಎ ಜೆಟ್‍ಗಳನ್ನು ಖರೀದಿಸಲಾಗಿದೆ’ ಎಂದು ಇತ್ತೀಚೆಗಷ್ಟೇ ಧನೋವಾ ತಿಳಿಸಿದ್ದಾರೆ!! ಇದರ ಬೆನ್ನಲ್ಲೇ ಯುಪಿಎ ಅವಧಿಯಲ್ಲಿ 126 ರಫೆಲ್ ಜೆಟ್ ಗಳನ್ನು ಖರೀದಿ ಮಾಡುವ ಸಲುವಾಗಿನ ಮಾತುಕತೆ ಯಾಕೆ ವಿಫಲಗೊಂಡಿತು ಎಂಬುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರಿಸಿದ್ದಾರೆ!!

Related image

ಹೌದು, ಎಚ್ ಎ ಎಲ್ ನ್ನು ರಫೆಲ್ ಡೀಲ್ ನೊಳಗೆ ಯಾಕೆ ಒಳಪಡಿಸಲಿಲ್ಲ ಎಂಬ ಕಾಂಗ್ರೆಸ್ಸಿಗರ ಪ್ರಶ್ನೆಗೆ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್, ಯುಪಿಎ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಎಚ್ ಎ ಎಲ್ ಗೆ ಫ್ರೆಂಚ್ ಕಂಪೆನಿ ಡಸಾಲ್ಟ್ ಆವಿಯೇಶನ್ ಸಹಭಾಗಿತ್ವದೊಂದಿಗೆ ರಫೆಲ್ ಜೆಟ್ ನ್ನು ತಯಾರಿಸುವ ಅತ್ಯಗತ್ಯ ಸಾಮರ್ಥ್ಯ ಇರಲಿಲ್ಲ ಎಂದು ಸಚಿವೆ ಹೇಳಿದ್ದಾರೆ. ಅಷ್ಟೇ ಅಲ್ಲದೇ, 2013ರಲ್ಲಿ ವೆಚ್ಚ ಸಮಾಲೋಚನಾ ಸಮಿತಿಯು ರಫೆಲ್ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದ ವೇಳೆ ಅಂದಿನ ರಕ್ಷಣಾ ಸಚಿವ ಎಕೆ ಆಂಟೋನಿಯವರು ಮಧ್ಯಪ್ರವೇಶ ಮಾಡಿ ಎಲ್ಲವನ್ನೂ ಬಿಗಡಾಯಿಸಿದರು ಎಂದಿದ್ದಾರೆ.

ಎಚ್ ಎ ಎಲ್ ನೊಂದಿಗೆ ಹಲವಾರು ಸುತ್ತಿನ ಮಾತುಕತೆಯನ್ನು ನಡೆಸಿದ ಬಳಿಕ ಡಿಸಾಲ್ಟ್ ಸಂಸ್ಥೆ ಭಾರತದಲ್ಲಿ ರಫೆಲ್ ಜೆಟ್ ತಯಾರು ಮಾಡಿದರೆ ಅದಕ್ಕೆ ತಗಲುವ ವೆಚ್ಚ ಇನ್ನಷ್ಟು ಏರಿಕೆಯಾಗಲಿದೆ ಎಂದು ಭಾವಿಸಿತು. ಅಷ್ಟೇ ಅಲ್ಲದೇ ಎಚ್ ಎ ಎಲ್ ತಾನು ಉತ್ಪಾದಿಸಿದ ರಫೆಲ್ ಜೆಟ್ ಗೆ ಗ್ಯಾರೆಂಟಿ ನೀಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ವಾಯುಸೇನೆಗೆ ಗ್ಯಾರೆಂಟಿ ಅತ್ಯಗತ್ಯವಾಗಿತ್ತು ಎಂದು ಸೀತಾರಾಮನ್ ಹೇಳಿದ್ದಾರೆ!!

ಇತ್ತೀಚೆಗಷ್ಟೇ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದ್ದ ರಫೆಲ್ ಯುದ್ಧವಿಮಾನ ಖರೀದಿ ಒಪ್ಪಂದವನ್ನು ಎನ್ ಡಿ ಎ ಸರಕಾರ ರದ್ದುಗೊಳಿಸಲು ಕಾರಣವೇನು ಎಂಬುದನ್ನು ರಾಷ್ಟ್ರೀಯ ಮಾಧ್ಯಮವೊಂದು ಬಯಲು ಮಾಡಿತ್ತು!! ಅದರ ಪ್ರಕಾರ, ಫ್ರಾನ್ಸ್ ನ ಡಸಲ್ಟ್ ಏವಿಯೇಷನ್ಸ್ ಕಂಪನಿ ಉತ್ಪಾದಿಸುವ 126 ರಫೆಲ್ ಯುದ್ಧವಿಮಾನ ಖರೀದಿಗೆ ಯುಪಿಎ ಸರಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ 2015ರಲ್ಲಿ ಈ ಒಪ್ಪಂದವನ್ನು ಎನ್ ಡಿ ಎ ಸರಕಾರ ರದ್ದುಗೊಳಿಸಿತ್ತು. ಬದಲಿಗೆ ಕಾರ್ಯಾಚರಣೆಗೆ ಸಿದ್ಧಗೊಂಡಿರುವ 36 ಯುದ್ಧ ವಿಮಾನಗಳನ್ನು ಮಾತ್ರ ಖರೀದಿಸಲು ನರೇಂದ್ರ ಮೋದಿ ಸರಕಾರ ನಿರ್ಧರಿಸಿತ್ತಲ್ಲದೇ ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

Related image

ಕೇಂದ್ರ ಸರಕಾರದ ಟಿಪ್ಪಣಿ ಪ್ರಕಾರ, ಯುಪಿಎ ಸರಕಾರ ಕರೆದಿದ್ದ ಟೆಂಡರ್ ನಲ್ಲಿ ಅತಿ ಕಡಿಮೆ ಬಿಡ್ ಮಾಡಿರುವ ಕಾರಣಕ್ಕೆ ಡಸಲ್ಟ್ ಏವಿಯೇಷನ್ಸ್ ಗೆ ಯುದ್ಧವಿಮಾನ ಪೂರೈಕೆ ಗುತ್ತಿಗೆ ಸಿಕ್ಕಿತ್ತು. ಆದರೆ ಈಗ ಸರಕಾರಿ ಸ್ವಾಮ್ಯದ ಬೆಂಗಳೂರು ಮೂಲದ ಎಚ್ ಎ ಎಲ್ ನಲ್ಲಿ ಹಲವು ವಿಮಾನಗಳು ತಯಾರಾಗುತ್ತಿದ್ದು, ಡಸಲ್ಟ್ ಏವಿಯೇಷನ್ಸ್ ಕಂಪನಿಗಿಂತಲೂ ಕಡಿಮೆ ವೆಚ್ಚದಲ್ಲಿ ಯುದ್ಧ ವಿಮಾನಗಳನ್ನು ಉತ್ಪಾದಿಸಬಹುದಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾಕ್ಕೆ ಒತ್ತು ಸಿಗುತ್ತದೆ ಎಂಬುದು ಎನ್ ಡಿ ಎ ಸರಕಾರದ ಲೆಕ್ಕಾಚಾರ ಎನ್ನಲಾಗಿದೆ.

ಈಗಾಗಲೇ ಈ ಕುರಿತು ರಕ್ಷಣಾ ಇಲಾಖೆ ಮತ್ತು ಭಾರತೀಯ ವಾಯುಪಡೆ ತಯಾರಿಸಿರುವ ವರದಿಯಲ್ಲಿ ಸ್ಪಷ್ಟ ಉಲ್ಲೇಖವಿದ್ದು, ವಿಮಾನ ಖರೀದಿ ಬಳಿಕ ಅದರ ನಿರ್ವಹಣೆ ಮೇಲಿನ ವೆಚ್ಚದಲ್ಲೂ ಕಡಿಮೆ ಮಾಡಲು ಫ್ರಾನ್ಸ್ ಒಪ್ಪಿಕೊಂಡಿದೆ!! ದೇಶದ ರಕ್ಷಣೆಗಾಗಿ ರಫೆಲ್ ಯುದ್ಧ ವಿಮಾನದ ಅವಶ್ಯಕತೆ ಇದೆಯಾದರೂ, ಅದನ್ನು ಆದಷ್ಟು ಕಡಿಮೆ ವೆಚ್ಚದಲ್ಲಿ ತನ್ನದಾಗಿಸಿಕೊಳ್ಳಲು ಮೋದಿ ಸರಕಾರ ಯಶಸ್ವಿ ಒಪ್ಪಂದ ಮಾಡಿಕೊಂಡಿದೆ ಎಂಬುದು ತಿಳಿದು ಬಂದಿತ್ತು!!

ಇನ್ನು ಇತ್ತೀಚೆಗಷ್ಟೇ, “ಎರಡು ಸ್ಕ್ವಾಡ್ರನ್ ರಫೇಲ್ ವಿಮಾನಗಳನ್ನಷ್ಟೇ ವಾಯುಪಡೆಗೆ ಖರೀದಿಸಲಾಗುತ್ತಿದ್ದು, ಹಿಂದೆಯೂ ಈ ರೀತಿ ವಿದೇಶಿ ಯುದ್ಧ ವಿಮಾನಗಳನ್ನು ಖರೀದಿಸಿದ ಉದಾಹರಣೆಗಳಿವೆ ಎಂದು ಏರ್ಚೀಫ್ ಮಾರ್ಷಲ್ ಧನೋವಾ ಸಮರ್ಥಿಸಿಕೊಂಡಿದ್ದರು!! ಶತ್ರು ದೇಶಗಳು ತಮ್ಮ ಮಿಲಿಟರಿ ಬಲವನ್ನು ಶೀಘ್ರಗತಿಯಲ್ಲಿ ಆಧುನೀಕರಣಗೊಳಿಸುತ್ತಿರುವ ಸಂದರ್ಭ ಭಾರತ ಸುಮ್ಮನೇ ಕೂರಲು ಸಾಧ್ಯವಿಲ್ಲ. ಜಗತ್ತಿನ ಮತ್ಯಾವುದೇ ದೇಶಕ್ಕಿಂತಲೂ ಭಾರತಕ್ಕೆ ತನ್ನ ಶತ್ರುಗಳಿಂದ ಹೆಚ್ಚಿನ ಅಪಾಯವಿದೆ ಎಂದು ಹೇಳಿದ್ದರು!!

Related image

ಅಷ್ಟೇ ಅಲ್ಲದೇ, ಈ ಸಂದರ್ಭದಲ್ಲಿ ವಾಯುಪಡೆಯ ಸಾಮರ್ಥ್ಯ ವೃದ್ಧಿಗಾಗಿ ಭಾರತ ರಫೇಲ್ ಯುದ್ಧ ವಿಮಾನ ಹಾಗು ಟ್ರಯಂಫ್ ಕ್ಷಿಪಣಿ ರಕ್ಷಾ ಕವಚ ಖರೀದಿ ಮಾಡುತ್ತಿದೆ. ಶತ್ರುಗಳು ಸುಮ್ಮನೇ ಕುಳಿತಿಲ್ಲ, ಚೀನಾ ತನ್ನ ವಾಯುಪಡೆಯನ್ನು ತ್ವರಿತಗತಿಯಲ್ಲಿ ಆಧುನೀಕರಣಗೊಳಿಸುತ್ತಿದೆ. ಹಾಗಾಗಿ ನಾವೂ ಅದಕ್ಕೆ ಸಿದ್ಧರಾಗಬೇಕು ಅದಲ್ಲದೆ ಇಂತಹ ಹೈಟೆಕ್ ಯುದ್ಧ ವಿಮಾನ ಖರೀದಿ ಮಾಡಲು ನಿರ್ಧರಿಸಿದ ಕೇಂದ್ರ ಸರಕಾರದ ನಿಲುವು ಖಂಡಿತ ಸ್ಪಷ್ಟವಾಗಿದೆ ಎಂದಿದ್ದರು!! ಇದರ ಬೆನ್ನಲ್ಲೇ ರಫೆಲ್ ಜೆಟ್ ಗಳನ್ನು ಖರೀದಿ ಮಾಡುವ ಸಲುವಾಗಿನ ಮಾತುಕತೆಯು ಯುಪಿಎ ಅವಧಿಯಲ್ಲಿ ಯಾಕೆ ವಿಫಲಗೊಂಡಿತು ಎಂಬುವುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರಿಸಿದ್ದಾರೆ!!

ಮೂಲ: https://www.thehindu.com/

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close