ಪ್ರಚಲಿತ

ಮೋದಿಯವರ ನಿರ್ಭಯಾ ನಿಧಿಯಲ್ಲಿ ಕರ್ನಾಟಕ ಟಾಪ್!! ಕರುನಾಡಿಗೆ ಬಿಡುಗಡೆಯಾದ ನಿರ್ಭಯಾ ನಿಧಿಯ ಮೊತ್ತವೆಷ್ಟು?

683 Shares

ಹಿಳೆಯರ ನೇತೃತ್ವದಲ್ಲಿ ಮಹಿಳಾ ವಿಕಾಸವೆಂಬ ಮಂತ್ರದೊಂದಿಗೆ ನರೇಂದ್ರ ಮೋದಿ ಸರಕಾರವು ಕೆಲಸ ಮಾಡುತ್ತಿದ್ದು, ಮಹಿಯರ ಸುರಕ್ಷತೆಗೆಂದೇ ನಾನಾ ಯೋಜನೆಗಳನ್ನು ಜಾರಿಗೊಳಿಸಿರುವ ವಿಚಾರ ಗೊತ್ತೇ ಇದೆ!! ಇತ್ತೀಚೆಗಷ್ಟೇ ಮಹಿಳೆಯರ ಸುರಕ್ಷತೆಗಾಗಿ ಕೇಂದ್ರ ಸರಕಾರವು ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನವನ್ನು ಜಾರಿಗೊಳಿಸಿ ಮಹಿಳಾ ತಾರತಮ್ಯ ನಿವಾರಣೆಯತ್ತ ಮಹತ್ತರವಾದ ಕಾರ್ಯ ಮಾಡಿದ್ದು, ಇದೀಗ ದೇಶದ 8 ನಗರಗಳನ್ನು ಮಹಿಳಾ ಸ್ನೇಹಿಯನ್ನಾಗಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ.

Image result for beti padhao beti bachao

ಹೌದು… ದೇಶದಲ್ಲಿ ಮಹಿಳೆಯರಿಗೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರಕಾರವು ನಾನಾ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಮಹಿಳೆಯರಿಗೆ ಹೆಚ್ಚಿನ ಭದ್ರತೆಯ ಜೊತೆಗೆ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡುತ್ತಲೇ ಬರುತ್ತಿದ್ದಾರೆ. ಆದರೆ ಇದೀಗ ದೆಹಲಿ, ಮುಂಬಯಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಲಕ್ನೋಗಳಲ್ಲಿ ನಿರ್ಭಯಾ ನಿಧಿಯಡಿ ಸುಮಾರು 2919.55 ಕೋಟಿಯ ಯೋಜನೆಯನ್ನು ಸರಕಾರ ಅನುಷ್ಠಾನಕ್ಕೆ ತರುತ್ತಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಖಾತೆ ರಾಜ್ಯ ಸಚಿವ ವೀರೇಂದ್ರ ಕುಮಾರ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದು, “ನಿರ್ಭಯಾ ನಿಧಿ ಅಡಿ ಒಟ್ಟು 2919.55 ಕೋಟಿ ರೂಪಾಯಿ ವೆಚ್ಚವಾಗಲಿರುವ ಈ ಯೋಜನೆ ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್ ಹಾಗೂ ಲಕ್ನೋ ನಗರಗಳಲ್ಲಿ ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ” ಎಂದು ಅವರು ವಿವರಿಸಿದ್ದಾರೆ.

Image result for nirbhaya nidhi yojana

“ಬೀದಿ ದೀಪಗಳು, ಸುರಕ್ಷಿತ ಸಾರ್ವಜನಿಕ ಸಾರಿಗೆ, ಪೊಲೀಸ್ ಪಹರೆ ಬಿಗಿಗೊಳಿಸುವುದೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ಎಂಟು ನಗರಗಳಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವುದು ಇದರ ಮುಖ್ಯ ಉದ್ದೇಶ. ಪ್ರತಿ ನಗರದಲ್ಲೂ ಇದನ್ನು ಈ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಆಯಾ ನಗರಗಳ ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆಗಳ ಉನ್ನತಾಧಿಕಾರಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಯೋಜನೆ ರೂಪಿಸಲಾಗುವುದು” ಎಂದು ಸಚಿವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ರಸ್ತೆ, ಪಾರ್ಕ್, ಮಾರುಕಟ್ಟೆ, ಶಾಲೆ, ಕಾಲೇಜು, ಮೆಟ್ರೋಸ್ಟೇಶನ್ ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ 5,500 ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ, 100 ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ಔಟ್ ಪೊಲೀಸ್ ತೆರೆಯುವುದು, ಬಸ್ ನಿಲ್ದಾಣ, ಸಾರ್ವಜನಿಕ ಪ್ರದೇಶಗಳಲ್ಲಿ ರಕ್ಷಣೆಗೆ ಅಲರ್ಟ್ ನೀಡುವ ಸೇಫ್ಟಿ ಅಲರಾಂ, ಮಹಿಳೆಯರ ಸುರಕ್ಷತೆಗಾಗಿ 300 ನಾಲ್ಕು ಚಕ್ರದ ಹಾಗೂ 1 ಸಾವಿರ ಬೈಕ್ ಗಳ ಖರೀದಿ ಮತ್ತು ಮಹಿಳಾ ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಎನ್.ಜಿ.ಒ ಹಾಗೂ ಕೌನ್ಸೆಲರ್ಸ್‍ಗಳ ನೇಮಕ ಸೇರಿದಂತೆ ಹಲವಾರು ಯೋಜನೆಗಳನ್ನು ಒಳಗೊಂಡಿದೆ!!

Image result for banglore

ಬೆಂಗಳೂರಿಗೆ ಸಿಗಲಿದೆ ಅಗ್ರಸ್ಥಾನ!! ಎರಡನೇ ಸ್ಥಾನದಲ್ಲಿ ದೆಹಲಿ!!

ಹೌದು… ಮಹಿಳೆಯರ ಸುರಕ್ಷತೆಗಾಗಿ ನಿಗದಿಗೊಳಿಸಿರುವ ಮೊತ್ತದಲ್ಲಿ ಬೆಂಗಳೂರಿಗೆ ಅಗ್ರಸ್ಥಾನ ಲಭಿಸಿದೆ. ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎನಿಸಿರುವ ಬೆಂಗಳೂರಿನಲ್ಲಿ 667 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಕಣ್ಗಾವಲು, ಕ್ಷಿಪ್ರ ಪ್ರತಿಕ್ರಿಯೆ, ಪೊಲೀಸ್ ವಾಹನಗಳ ವ್ಯವಸ್ಥೆ, ಪೊಲೀಸ್ ಠಾಣೆಗಳು ಹಾಗೂ ಪ್ರಮುಖ ಆಸ್ಪತ್ರೆಗಳ ತೀವ್ರ ನಿಗಾ ಸ್ಪಂದನೆ ಘಟಕಗಳಲ್ಲಿ ಮಹಿಳೆಯರ ಹೆಲ್ಪ್ ಡೆಸ್ಕ್, ಎನ್.ಜಿ.ಒ ಸ್ವಯಂಸೇವಕರ ನೇಮಕ, ಮಹಿಳೆಯರು ಮತ್ತು ಮಕ್ಕಳಿಗಾಗಿ ಸಮಗ್ರ ಬೆಂಬಲ ಕೇಂದ್ರಗಳ ಸ್ಥಾಪನೆ, ಜಿಐಎಸ್ ಆಧಾರಿತ ಅಪರಾಧ ಪತ್ತೆ ಮತ್ತು ವಿಶ್ಲೇಷಣೆ ಸೌಲಭ್ಯ, ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣಗಳ ಬಳಿ ಮಹಿಳಾ ಪೊಲೀಸ್ಔಟ್ ಪೊಲೀಸ್ ವ್ಯವಸ್ಥೆ, ಸೂಕ್ಷ್ಮ ಸ್ಥಳಗಳಲ್ಲಿ ಸುರಕ್ಷಿತ ಕೇಂದ್ರ ಸೃಷ್ಟಿ ಇತ್ಯಾದಿ ಯೋಜನೆಗಳೂ ಇದರಲ್ಲಿ ಸೇರ್ಪಡೆಯಾಗಲಿವೆ.

ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯ ಮತ್ತು ಹಿಂಸಾಚಾರಗಳನ್ನು ತಡೆಗಟ್ಟಲು ಸಾರ್ವಜನಿಕರನ್ನು ಜಾಗೃತಗೊಳಿಸಿ ಪೊಲೀಸರಿಗೆ ಮಾಹಿತಿ ನೀಡಲು ರಾಣಿ ಚೆನ್ನಮ್ಮ ತಂಡಗಳನ್ನು ರಚಿಸುವ ಪ್ರಸ್ತಾಪವೂ ಇದರಲ್ಲಿದೆ ಎಂದು ವೀರೇಂದ್ರ ಕುಮಾರ್ ವಿವರಿಸಿದ್ದಾರೆ. ಬೆಂಗಳೂರು ನಂತರ ಎರಡನೇ ಸ್ಥಾನದಲ್ಲಿ ದೆಹಲಿ ಇದ್ದು, ಇಲ್ಲಿಗೆ 663.67 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುತ್ತದೆ!! ಇನ್ನು, ಚೆನ್ನೈಗೆ 425 ಕೋಟಿ ರೂಪಾಯಿ, ಹೈದರಾಬಾದ್‍ಗೆ 282.50 ಕೋಟಿ ರೂಪಾಯಿ, ಅಹಮದಾಬಾದ್‍ಗೆ 253 ಕೋಟಿ ರೂಪಾಯಿ, ಮುಂಬೈಗೆ 252 ಕೋಟಿ ರೂಪಾಯಿ, ಲಕ್ನೋಗೆ 195 ಕೋಟಿ ರೂಪಾಯಿ ಮತ್ತು ಕೋಲ್ಕತಾಗೆ 181.32 ಕೋಟಿ ರೂಪಾಯಿಗಳ ಮೊತ್ತವನ್ನು ಈ ಉದ್ದೇಶಗಳಿಗೆ ಮೀಸಲಿಡಲಾಗುತ್ತಿದೆ.

ಒಟ್ಟಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವ ನರೇಂದ್ರ ಮೋದಿ ಸರಕಾರವು ಮಹಿಳಾ ಸುರಕ್ಷತೆಗಾಗಿ ನಾನಾ ಯೋಜನೆಗಳನ್ನು ಕೈಗೊಳ್ಳುತ್ತಲೇ ಬರುತ್ತಿದ್ದಾರೆ. ಆದರೆ ಇದೀಗ ದೇಶದ 8 ನಗರಗಳಲ್ಲಿ 2919.55 ಕೋಟಿ ರೂಪಾಯಿಯ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತಿದೆ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರವೇ ಆಗಿದೆ.

ಮೂಲ: http://zeenews.india.com/mumbai/to-make-8-cities-safer-for-women-centre-eyes-rs-2919-55-crore-worth-projects-2130176.html

– ಅಲೋಖಾ

683 Shares
Tags

Related Articles

FOR DAILY ALERTS
Close