ಪ್ರಚಲಿತ

ಗೋಮಾತೆಯ ರಕ್ಷಣೆಗಾಗಿ ಹೊಸ ಅಭಿಯಾನ ಆರಂಭ! ದೇಶಾದ್ಯಂತ ಗೋಹತ್ಯಾ ನಿಷೇಧಕ್ಕೆ ಹೆಚ್ಚಾದ ಆಗ್ರಹ!

ಹಿಂದೂ ಧರ್ಮದ ಆಚಾರ ವಿಚಾರಗಳನ್ನು ನಾಶ ಮಾಡಬೇಕೆಂಬ ಉದ್ದೇಶದಿಂದ ಕೆಲವೊಂದು ಹಿಂದೂ ವಿರೋಧಿ ಕೈಗಳು ಷಡ್ಯಂತ್ರ ನಡೆಸುತ್ತಲೇ ಬಂದಿದ್ದು, ಅದೆಷ್ಟೋ ವರ್ಷಗಳಿಂದ ಗೋ ಹತ್ಯಾ ನಿಷೇಧ ಮಾಡಬೇಕೆಂಬ ಆಗ್ರಹ ಮಾಡಿದರೂ ಕೂಡ ಇದರಿಂದ ಯಾವುದೇ ಪ್ರಯೋಜನ ಉಂಟಾಗಲಿಲ್ಲ. ಕೆಲವೊಂದು ರಾಜಕೀಯ ಆಟಕ್ಕೆ ಒಳಗಾಗಿ ಗೋಹತ್ಯಾ ನಿಷೇಧಕ್ಕೆ ರಾಜಕಾರಣಿಗಳು ಕೂಡ ಕೈಜೋಡಿಸದೇ ಇರುವುದು ಈವರೆಗೆ ಗೋಹತ್ಯಾ ನಿಷೇಧ ಮಾಡದೇ ಇರಲು ಮುಖ್ಯ ಕಾರಣವಾಗಿದೆ. ಆದರೆ ಈ ಬಾರಿ ದೇಶಾದ್ಯಂತ ಭಾರೀ ಕೂಗು ಕೇಳಿ ಬಂದಿದ್ದು, ಮಾತೃ ಸ್ಥಾನ‌ ನೀಡಿ ಗೋವನ್ನು ಪೂಜಿಸಲಾಗುತ್ತದೆ, ಅದೆಷ್ಟೋ ಕುಟುಂಬಗಳ ಜೀವನಾಧಾರವಾಗಿರುವ ಗೋವನ್ನು ಸಂರಕ್ಷಿಸದೇ ಇದ್ದರೆ, ಮುಂದೊಂದು ದಿನ ಗೋವು ಎಂಬುದು ಕೇವಲ ಇತಿಹಾಸ ಪುಟ ಸೇರುತ್ತದೆ ಎಂದು ಸಾಮಾಜಿಕ‌ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದ್ದು, ದೇಶಾದ್ಯಂತ ಗೋಹತ್ಯಾ ನಿಷೇಧ ಮಾಡಬೇಕು ಮತ್ತು ಗೋವಿನ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಆಗ್ರಹಿಸಲಾಗಿದೆ.!

ಹೌದು, ಗೋವು ಎಂಬುದು ನೋಡುಗರ ಕಣ್ಣಿಗೆ ಕೇವಲ ಒಂದು ಪ್ರಾಣಿ ಆಗಿರಬಹುದು, ಆದರೆ ಹಿಂದೂ ಧರ್ಮದಲ್ಲಿ ಗೋವಿಗೆ ವಿಶೇಷ ಸ್ಥಾನ ನೀಡಲಾಗಿದೆ, ಮಾತೃ ಸ್ಥಾನ ನೀಡಿ ಗೌರವಿಸಲಾಗಿದೆ. ಮೂವತ್ತ ಮೂರು ಕೋಟಿ ದೇವರುಗಳನ್ನು ತನ್ನಲ್ಲಿ ಹೊತ್ತುಕೊಂಡ‌ ಗೋವು ಕೇವಲ ಒಂದು ಪ್ರಾಣಿ ಅಲ್ಲ. ಯಾಕೆಂದರೆ ಹಿಂದೂಗಳಲ್ಲಿ ಶುಭ ಕಾರ್ಯಕ್ಕೆ ಗೋವು ಅತೀ ಮುಖ್ಯ, ಹಾಲು, ಗೋಮೂತ್ರ, ಸೆಗಣಿ ಸೇರಿದಂತೆ ಗೋವಿನಿಂದ ಸಿಗುವ ಎಲ್ಲವೂ ಉಪಯೋಗಕ್ಕೆ ಬರುತ್ತದೆ. ‌ ಒಂದರ್ಥದಲ್ಲಿ ಹೇಳುವುದಾದರೆ ಗೋವು ಎಂಬುದು “ಕಲ್ಪವೃಕ್ಷ”. ಯಾಕೆಂದರೆ ಗೋವಿನಿಂದ ಉತ್ಪತ್ತಿಯಾಗುವ ಎಲ್ಲಾ ವಸ್ತುಗಳು ಕೂಡ ಮನುಷ್ಯ ಉಪಯೋಗಿಸಲು ಸೂಕ್ತವಾದ ವಸ್ತುಗಳೇ ಆಗಿವೆ. ಗೋವಿನ ಸೆಗಣಿಯಿಂದ ಗೊಬ್ಬರ ಮಾಡಿದರೆ, ಗೋಬರ್ ಗ್ಯಾಸ್ ಮಾಡುವ ತಂತ್ರಜ್ಞಾನ ಇದೆ.‌ ಅಷ್ಟೇ ಅಲ್ಲದೆ ಹಾಲು, ತುಪ್ಪ ಮೊಸರು, ಗೋಮೂತ್ರ, ಹೀಗೆ ಪ್ರತಿಯೊಂದು ಕೂಡ ಉಪಯೋಗಿಸಬಹುದಾದ ವಸ್ತುಗಳೇ ಆಗಿವೆ. ಆದರೆ ಕೆಲವೊಂದು ಪಂಗಡಗಳು ಮಾತ್ರ ಗೋವನ್ನು ತಮ್ಮ ಆಹಾರ ಎಂಬಂತೆ ಉಪಯೋಗಿಸುತ್ತಿದ್ದು, ಗೋ ಸಂತತಿ ನಾಶ ಮಾಡಲು ಹೊರಟಿದ್ದಾರೆ. ಆದರೆ ಗೋವಿನ ಉಳಿವಿಗಾಗಿ ಹೋರಾಟ ನಡೆದಿದೆ ಮತ್ತು ನಡೆಯುತ್ತಲೇ ಇದೆ. ಇದೀಗ ಮತ್ತೆ ದೇಶಾದ್ಯಂತ “ಗೋಮಾತೆಯನ್ನು ರಕ್ಷಿಸೋಣ” ಎಂಬ ಅಭಿಯಾನ ಆರಂಭವಾಗಿದ್ದು, ಸರಕಾರದ ಮೆಲೆ ಒತ್ತಡ ಹೆಚ್ಚಾಗಿದೆ.!

ಟ್ವಿಟರ್, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ‌ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದ್ದು, ಗೋ ಸಂತತಿ ಉಳಿವಿಗಾಗಿ ಸರಕಾರ ಹೊಸ ಯೋಜನೆ ಅಥವಾ ಆದೇಶ ಹೊರಡಿಸಬೇಕು ಎಂಬ ಕೂಗು ಹೆಚ್ಚಾಗಿದೆ. ಆಹಾರದ ಹೆಸರಿನಲ್ಲಿ ಹಿಂದೂಗಳು ಪೂಜಿಸುವ ಗೋವನ್ನು ಮಾರಣಹೋಮ‌ ಮಾಡುವುದು ಸರಿಯಲ್ಲ ಎಂಬುದು ಹಿಂದೂಗಳ ಆಗ್ರಹವಾದರೆ, ಇದರ ಬಗ್ಗೆ ಸರಕಾರ ಮಾತ್ರವಲ್ಲದೆ ಹಿಂದೂ ಧಾರ್ಮಿಕ‌ ಮಠಗಳು ಕೂಡ ವಿಶೇಷ ಒತ್ತು ನೀಡಬೇಕು ಎಂದು ಆಗ್ರಹಿಸಲಾಗಿದೆ.‌!

ಮಠಕ್ಕೊಂದು ಗೋಶಾಲೆ ನಿರ್ಮಾಣ!

ದೇಶದಲ್ಲಿ ಸಾವಿರಾರು ಮಠಗಳು ಇದ್ದು, ಪ್ರತಿಯೊಂದು ಮಠ ಕೂಡ ಒಂದು ಗೋಶಾಲೆ ಹೊಂದುವಂತೆ ಮಾಡಬೇಕು ಎಂದು ಹಿಂದೂಪರ ಸಂಘಟನೆಗಳು ಮತ್ತು ಗೋಪ್ರೇಮಿಗಳು ಆಗ್ರಹಿಸಿದ್ದಾರೆ. ಈಗಾಗಲೇ ಅನೇಕ ಮಠಗಳಲ್ಲಿ ಗೋಶಾಲೆ ಹೊಂದಿದ್ದು, ಬಾಕಿ ಇರುವ ಮಠಗಳು ಕೂಡ ಗೋಶಾಲೆ ನಿರ್ಮಾಣ ಮಾಡಿ ಗೋವನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅದೇ ರೀತಿ ಗೋರಕ್ಷಾ ಅಭಿಯಾನದಲ್ಲಿ ಎಲ್ಲಾ ಮಠಗಳು ಕೈಜೋಡಿಸಬೇಕು ಮತ್ತು ಸರಕಾರದ ಮೇಲೆ ಹೆಚ್ಚಿನ‌ ಒತ್ತಡ ಹೇರಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ರವಾನೆಯಾಗುತ್ತಿದ್ದು, ಗೋರಕ್ಷಾ ಅಭಿಯಾನ ಭಾರೀ ಸದ್ದು ಮಾಡಿದೆ.‌ ಗೋ ಸಂತತಿ ನಾಶವಾದರೆ ಮುಂದಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಬೇಕಾದ ಗೋಮೂತ್ರ, ಹಾಲು ತುಪ್ಪ ಸೇರಿದಂತೆ ಕೆಲವು ವಸ್ತುಗಳು ಸಿಗುವುದು ಕಷ್ಟವಾಗಲಿದೆ. ಆದ್ದರಿಂದ ಈಗಿಂದಲೇ ಜಾಗೃತಿ ಮೂಡಿಸಿ ಗೋಮಾತೆಯನ್ನು ರಕ್ಷಿಸೋಣ ಎಂದು ಅಭಿಯಾನ ಆರಂಭವಾಗಿದೆ.!

ಗೋಮೂತ್ರದಿಂದ ಅದೆಷ್ಟೋ ಖಾಯಿಲೆಗಳು ಕೂಡ ನಿವಾರಣೆಯಾಗುತ್ತದೆ ಎಂಬುದು ಸ್ವತಃ ವೈಜ್ಞಾನಿಕವಾಗಿ ಕೂಡ ಸಾಬೀತಾಗಿದ್ದು, ಹಿರಿಯರು ಹೇಳಿದ ಮಾತನ್ನೇ ಇಂದು‌ ವಿಜ್ಞಾನ ಕೂಡ ಹೇಳುತ್ತಿದೆ. ಆದರೂ ಗೋವಿನ ಉಳಿವಿಗಾಗಿ ಯಾವ ಕ್ರಮವೂ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಸರಿ. ‌ಕಳೆದ ಬಾರಿ ಮೋದಿ ಸರಕಾರ ಗೋಹತ್ಯೆಗೆ ಕೆಲವೊಂದು ಷರತ್ತು ವಿಧಿಸಿದ್ದು, ಈ ಹಿಂದೆ ನಡೆಯುತ್ತಿದ್ದ ಗೋಹತ್ಯೆಗೆ ಕಡಿವಾಣ ಹಾಕಲಾಗಿದೆ.‌ ಆದರೂ ಕಳ್ಳ ಮಾರ್ಗದಲ್ಲಿ ಇನ್ನೂ ಕೂಡ ಗೋಕಳ್ಳತನ, ಗೋಹತ್ಯೆ ನಡೆಯುತ್ತಿದ್ದು ಸಂಪೂರ್ಣವಾಗಿ ಇದಕ್ಕೆಲ್ಲ ಕಡಿವಾಣ ಹಾಕಬೇಕೆಂಬ ನಿಟ್ಟಿನಲ್ಲಿ ಈ ಅಭಿಯಾನ‌ ಆರಂಭಿಸಲಾಗಿದೆ. ಯಾವುದೇ ಒಂದು ಸಂಘಟನೆ ಅಥವಾ ಸಂಸ್ಥೆ ಮಾತ್ರ ಈ ಅಭಿಯಾನ ನಡೆಸುತ್ತಿಲ್ಲ, ಬದಲಾಗಿ ಸಮಸ್ತ ಹಿಂದೂ ಧರ್ಮದ ಉಳಿವಿಗಾಗಿ, ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವ ಸಲುವಾಗಿ ಈ ಅಭಿಯಾನ‌ ಆರಂಭಿಸಲಾಗಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close