ಅಂಕಣ

ಹಿಂದೂ ರಾಷ್ಟ್ರವಾಗಬೇಕಿದ್ದ ನೇಪಾಳ ನೆಹರೂ ಪ್ರೇರಿತ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರಿಂದ ಕೈತಪ್ಪಿದ್ದು ಹೇಗೆ ಗೊತ್ತಾ?!

ಎಂತಹ ದೌರ್ಭಾಗ್ಯ ನೋಡಿ. ಅನಾದಿ ಕಾಲಾದಿಂದಲೂ ಹಿಂದೂ ರಾಷ್ಟ್ರವಾಗಿದ್ದ ಭಾರತವನ್ನು ಕಾಂಗ್ರೆಸ್ ಮತ್ತು ಕಮ್ಯೂನಿಷ್ಟರು ಸೇರಿ “ಜಾತ್ಯಾತೀತ” ರಾಷ್ಟ್ರವನ್ನಾಗಿ ಪರಿವರ್ತಿಸಿದರು. ಈ ಎರಡು ಹಿಂದೂ ದ್ರೋಹಿ ಪಕ್ಷಗಳು ಭಾರತವನ್ನಷ್ಟೇ ಅಲ್ಲ ನಮ್ಮ ನೆರೆಯ, ಒಂದು ಕಾಲದಲ್ಲಿ ಭಾರತದ ಅಂಗವೇ ಆಗಿದ್ದ ನೇಪಾಳವಾನ್ನೂ ವಿಶ್ವದ ಏಕೈಕ ಹಿಂದೂ ರಾಷ್ಟ್ರವೆನ್ನುವ ಹೆಗ್ಗಳಿಕೆಯಿಂದ ಕಿತ್ತೊಗೆದು ಬಿಟ್ಟರು.

ಇವತ್ತಿಗೂ ನೇಪಾಳಿಗರು ಭಾರತವನ್ನು ತಮ್ಮ ತಾಯಿಯಂತೆ ಕಾಣುತ್ತಾರೆ. ನೇಪಾಳಿಗರು ನೇಪಾಳವನ್ನು “ಸ್ವದೇಶ್” ಎಂದು ಕರೆದರೆ ಭಾರತವನ್ನು ಮಾತ್ರ “ದೇಶ್” ಎಂದು ಸಂಬೋಧಿಸುತ್ತಾರೆ. ಪ್ರಪಂಚದ ಉಳಿದೆಲ್ಲಾ ರಾಷ್ಟಗಳನ್ನು ಅವರು “ವಿದೇಶ್” ಎಂದೇ ಕರೆಯುತ್ತಾರೆಂದರೆ ಭಾರತದ ಮೇಲೆ ಅವರಿಗಿರುವ ಪ್ರೀತಿಯನ್ನು ಊಹಿಸಿಕೊಳ್ಳಿ. ಪಾಕಿಸ್ತಾನ ಮತ್ತು ಬಾಂಗ್ಲಾದೇಶವೂ ಕೂಡಾ ಭಾರತದ ಅಂಗವೇ ಆಗಿತ್ತು. ಆದರೆ ಅಲ್ಲಿರುವ ಮುಸಲ್ಮಾನರು ಭಾರತವನ್ನು ಎಷ್ಟು ದ್ವೇಷಿಸುತ್ತಾರೆನ್ನುವುದು ನಿಮಗೇ ಗೊತ್ತು. ಆದರೆ ನೇಪಾಳಿಗರು ಹಾಗಲ್ಲ ಅವರಿಗೆ ಭಾರತವೆಂದರೆ ಅದಮ್ಯ ಪ್ರೀತಿ.

ನಿಮಗೆ ಗೊತ್ತೇ, ಸತತ ಎರಡು ಬಾರಿ ನೇಪಾಳವನ್ನು ಭಾರತದೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆಯನ್ನು ಸ್ವತಃ ನೇಪಾಳವೇ ಭಾರತದ ಅಂದಿನ ಪ್ರಧಾನಿ ನೆಹರೂ ರವರ ಮುಂದಿಟ್ಟಿತ್ತು. 1947 ರಲ್ಲಿ ನೇಪಾಳದಲ್ಲಿ ರಾಜ ತ್ರಿಭುವನ ಅವರ ಆಳ್ವಿಕೆ ಇತ್ತು. ಮಾತೃಕಾ ಪ್ರಸಾದ್ ಕೋಯಿರಾಲಾ ಆಗ ಅಲ್ಲಿನ ಪ್ರಧಾನಮಂತ್ರಿಯಾಗಿದ್ದರು.

ಮಾತೃಕಾ ಪ್ರಸಾದ್ ರವರು ನೇಪಾಳದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಂತೆ ಕೋರಿ ನೇಪಾಳವನ್ನು ಭಾರತದೊಂದಿಗೆ ವಿಲೀನಗೋಲಿಸುವ ಪ್ರಸ್ತಾವನೆಯನ್ನು ನೆಹರೂರವರಿಗೆ ಕಳುಹಿಸಿದರು. ಆದರೆ ನೆಹರೂರವರು ಮಾತೃಕಾರವರ ಪ್ರಸ್ತಾವನೆಯನ್ನು ತಿರಸ್ಕರಿಸಿದರು. ಮುಂದೆ 1950 ರಲ್ಲಿ ಬಹಾದುರ್ ರಾಣಾ ರವರು ಪ್ರಧಾನಮಂತ್ರಿಯಾದರು. ರಾಣಾರವರು ಕಟ್ಟಾ ಪ್ರಜಾಪ್ರಭುತ್ವದ ಪ್ರತಿಪಾದಕರಾಗಿದ್ದರಿಂದ ರಾಜಾ ತ್ರಿಭುವನ್ ರವರ ಗದ್ದುಗೆ ಅಲ್ಲಾಡುತ್ತಿತ್ತು. ತನ್ನ ಗದ್ದುಗೆ ಉಳಿಸಿಕೊಳ್ಳಲು ರಾಜಾ ತ್ರಿಭುವನ್ ನೆಹರೂ ರವರ ಮೊರೆ ಹೋದರು.

ರಾಜಾ ತ್ರಿಭುವನ್ ನೆಹರೂರವರಲ್ಲಿ ನೇಪಾಳವನ್ನು ಭಾರತದಲ್ಲಿ ವಿಲೀನಗೊಳಿಸಿ ತನ್ನ ದೇಶಕ್ಕೆ ಭಾರತದ ರಾಜ್ಯದ ಪಟ್ಟ ಕೊಡುವಂತೆ ಕೇಳಿಕೊಂಡರು. ಬದಲಾಗಿ ತನಗೆ ರಾಜ್ಯಪಾಲ ಹುದ್ದೆ ಕೊಟ್ಟರೆ ಸಾಕೆಂದರು. ಆಗಲೂ ಪರಮ “ಪಂಡಿತ” ನೆಹರೂರವರು ನೇಪಾಳವನ್ನು ಬರಿಯ ನೆರೆಯ ದೇಶವಾಗಿ ನೋಡಲು ಇಷ್ಟಪಡುತ್ತೇನೆ, ನೇಪಾಳ ಸ್ವತಂತ್ರವಾಗಿರುವುದು ಭಾರತದ ‘ಹಿತ ದೃಷ್ಟಿಯಿಂದ’ ಮುಖ್ಯವೆಂದರು!!

ಇಂತಹ ಮೂರ್ಖ ಶಿಖಾಮಣಿಗೆ ಪಂಡಿತ ಎಂಬ ಬಿರುದು ಕೊಟ್ಟವರಿಗೆ ಯಾವುದಲ್ಲಿ ಹೋಡೆಯಬೇಕು ನೀವೇ ಹೇಳಿ. ಅಂದು ನೇಪಾಳ ಭಾರತದಲ್ಲಿ ವಿಲೀನಗೊಂಡಿದ್ದರೆ ಇಂದು ಕೈಲಾಸ ಭಾರತದಲ್ಲಿರುತ್ತಿತ್ತು. ನೇಪಾಳ ಭಾರತದ ಭಾಗವಾಗಿದ್ದಲ್ಲಿ ಕುತಂತ್ರಿ ಚೀನಾವನ್ನು ಸುಲಭವಾಗಿ ಬಗ್ಗು ಬಡಿಯಬಹುದಿತ್ತು. ಆದರೆ ಪಂಡಿತರ ಅತಿ ಬುದ್ದಿವಂತಿಕೆಯಿಂದಾಗಿ ಹಾಗಾಗಲಿಲ್ಲ ನಮ್ಮ ಕರ್ಮ. ತ್ರಿಭುವನರ ಮರಣಾನಂತರ ಆತನ ಮಗ ಮಹೇಂದ್ರ ತದನಂತರ ಮಹೇಂದ್ರರ ಮಗ ಬೀರೇಂದ್ರ ಭಾರತದಿಂದ ದೂರಾವಾಗುತ್ತಾ ಚೀನಾಕ್ಕೆ ಹತ್ತಿರವಾಗುತ್ತಾ ಹೋದರು.

2001 ರವರೆಗೆ ನೇಪಾಳದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಪ್ರಾರಂಭವಾಗಿತ್ತು. ಸರಿಯಾಗಿ ಅದೇ ಸಮಯಕ್ಕೆ ಭಾರತದಲ್ಲಿ ಯೂಪಿಎ ಸರಕಾರ ಗದ್ದುಗೆ ಏರಿತ್ತು. ನೇಪಾಳದ ರಾಜ ಪರಿವಾರದಲ್ಲಿ ಆತಂರಿಕ ಕಲಹವೆದ್ದು ರಾಜಾ ಬೀರೇಂದ್ರರನ್ನು ಪರಿವಾರ ಸಮೇತ ಹತ್ಯೆ ಮಾಡಲಾಯಿತು. ಇದಕ್ಕೆ ಯಾರ ಕುಮ್ಮಕ್ಕಿತ್ತು ಎನ್ನುವುದನ್ನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ಭಾರತದ “ಕಮ್ಮಿನಿಷ್ಟರು” ನೇಪಾಳದ ರಾಜ ಜ್ಞಾನೇಂದ್ರರನ್ನು ಪುಸಲಾಯಿಸಿ ತಮ್ಮ ತೆಕ್ಕೆಗೆ ಜಾರಿಸಿ ಕೊಂಡರು. ಅಧಿಕಾರದ ಲಾಲಸೆಗೆ ಜ್ಞಾನೇಂದ್ರರು ತಮ್ಮ ಜನಗಳಿಗೇ ಮೋಸ ಮಾಡಿಬಿಟ್ಟರು. ಆದರೆ ಹುಟ್ಟಾ ಕಮ್ಮಿನಿಷ್ಟರು ಜ್ಞಾನೇಂದ್ರರ ಬೆನ್ನಿಗೆ ಚೂರಿ ಇಕ್ಕಿ ಬಿಟ್ಟರು.

ಕಾಂಗ್ರೆಸ್ ಜೊತೆಗೂಡಿ ಜ್ಞಾನೇಂದ್ರರನ್ನು ಗದ್ದುಗೆಯಿಂದ ಇಳಿಸಿ ತಮ್ಮ ನಾಯಕನನ್ನು ಅಲ್ಲಿ ಪ್ರತಿಷ್ಟಾಪಿಸಿ ಬಿಟ್ಟರು. ನೇಪಾಳದ ಆತಂತರಿಕ ಸಂಘರ್ಷವನ್ನು ಹತ್ತಿಕ್ಕಲು ನೇಪಾಳ ಸೇನೆ ಹರಸಾಹಸ ಪಡುತ್ತಿತ್ತು. ಆ ಸಮಯದಲ್ಲಿ ಭಾರತದಿಂದ ನೇಪಾಳ ಸೇನೆಗೆ ರಫ್ತಾಗಬೇಕಿದ್ದ ಶಸ್ತ್ರಾಸ್ತಗಳನ್ನು ನೇಪಾಳದ ಮಾವೋವಾದಿಗಳ ಕೈಗೆ ತಲುಪಿಸಿದ್ದೇ ಭಾರತದ ಕಮ್ಮಿನಿಷ್ಟ ಪಾರ್ಟಿಯ ನೇತಾರ ಸೀತಾರಾಮ್ ಯೆಚೂರಿ. ಈತನೇ ನೇಪಾಳದ ಪ್ರಂಚಂಡನೆಂಬ ವಿಶ್ವಾಸ ದ್ರೋಹಿಯ ಜತೆಗೂಡಿ ನೇಪಾಳದ ಜನತೆಯ ಬೆನ್ನಿಗೆ ಚೂರಿ ಹಾಕಿದವನು.

ಭಾರತದ ಕಾಂಗ್ರೆಸ್-ಕಮ್ಯೂನಿಷ್ಟ್ ಸರಕಾರಗಳು ನೇಪಾಳದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಅಲ್ಲಿಯೂ ಕಾಂಗ್ರೆಸ್-ಕಮ್ಯೂನಿಷ್ಟ್ ಸಮ್ಮಿಶ್ರ ಸರಕಾರವನ್ನು ಅಸ್ತಿತ್ವಕ್ಕೆ ತಂದವು. ಈ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ಮಾಡಿದ ಮೊದಲ ಕೆಲಸವೇ ನೇಪಾಳವನ್ನು “ಹಿಂದೂ ರಾಷ್ಟ್ರವೆಂಬ” ಹೆಗ್ಗಳಿಕೆಯಿಂದ ಹೊರದಬ್ಬಿದ್ದು ಮತ್ತು ನೇಪಾಳಕ್ಕೆ ಜಾತ್ಯಾತೀತ ರಾಷ್ಟ್ರವೆಂಬ ಹಣೆಪಟ್ಟಿ ಕೊಟ್ಟಿದ್ದು. ಡಿಸೆಂಬರ್ 28, 2007 ರಂದು ನೇಪಾಳವನ್ನು ಜಾತ್ಯಾತೀತ ರಾಷ್ಟವೆಂದು ಘೋಷಿಸುವ ವಿಧೇಯಕಕ್ಕೆ ಸಹಿ ಹಾಕಲಾಯಿತು.

ಸರಕಾರದ ಈ ನಿರ್ಧಾರದ ವಿರುದ್ದ ಸಾವಿರಾರು ನೇಪಾಳಿಗರು ಸತ್ಯಾಗ್ರಹ ಮಾಡಿದರು, ಆದೋಂಲನ ಕೈಗೊಂಡರು ಆದರೆ ಜನರು ಪ್ರಾಣ ಕಳೆದುಕೊಂಡರೇ ಹೊರತು ನೇಪಾಳ ಜಾತ್ಯಾತೀತ ಎಂಬ ಹಣೆ ಪಟ್ಟಿಯಿಂದ ಕಳಚಿಕೊಳ್ಳಲಿಲ್ಲ. ಯಾವಾಗ ನೇಪಾಳ ಜಾತ್ಯಾತೀತ ಪಕ್ಷವೆಂದು ಘೋಷಣೆಗೊಂಡಿತೋ ಇದನ್ನೇ ಕಾಯುತ್ತಿದ್ದ “ಇಸ್ಲಾಂ” ನ ರಣಹದ್ದು ಗಳು ಮತ್ತು ವೆಟಿಕನ್ ನ ಮಿಶ”ನರಿ”ಗಳು ನೇಪಾಳದಲ್ಲಿ ಬೀಡು ಬಿಟ್ಟವು. ಎಗ್ಗಿಲ್ಲದೆ ಮತಾಂತರ ದಂಧೆಯ ಅಂಗಡಿಗಳನ್ನು ತೆರೆದು ಬಿಟ್ಟವು. ತಮ್ಮ ಮಾತೃ ಧರ್ಮವನ್ನು ಉಳಿಸಿಕೊಳ್ಳಲು 2017 ರಲ್ಲಿ ನೇಪಾಳದ ರಾಷ್ಟಪತಿಯವರು ಧರ್ಮಾಂತರಣದ ವಿರುದ್ದ ಕಾನೂನು ವಿಧೇಯಕ್ಕೆ ಸಹಿ ಹಾಕಿ ಸಂಸತ್ ನಿಂದ ಅನುಮೋದನೆ ಪಡೆದುಕೊಳ್ಳಬೇಕಾಯಿತೆಂದರೆ ದಂಧೆ ಯಾವ ರೀತಿ ನಡೆದಿರಬೇಕೆಂಬುದನ್ನು ಊಹಿಸಿ.

ನೇಪಾಳದ ಬಹುಸಂಖ್ಯಾತ ಹಿಂದುಗಳು ಅಂದಿನಿಂದಲೂ ತಮ್ಮ ದೇಶವನ್ನು ಮತ್ತೆ ಹಿಂದೂ ರಾಷ್ಟವೆಂದು ಘೋಷಿಸುವಂತೆ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಕಮರಿ ಹೋಗಿದ್ದ ಅವರ ಆತ್ಮವಿಶ್ವಾಸ ಮತ್ತೆ ಜೀವ ಪಡೆದದ್ದು ಭಾರತದಲ್ಲಿ ಮೋದಿ ಸರಕಾರ ಮತ್ತು ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ಬಂದ ಮೇಲೆ. ಮೋದಿ-ಯೋಗಿ ಜೋಡಿ ಭಾರತವನ್ನೇ ಕೇಸರೀ ಮಯವಾಗಿಸಿರುವಾಗ ನೇಪಾಳವೇನು ಮಹಾ? ಶತ ಕೋಟಿ ಭಾರತೀಯರು ಮತ್ತು ಮುಕ್ಕೋಟಿ ನೇಪಾಳಿಗರ ಬಯಕೆ ಒಂದೇ ತಮ್ಮ ದೇಶ ಮತ್ತೆ ಹಿಂದೂ ರಾಷ್ಟ್ರವಾಗುವುದು. ಈ ಬಯಕೆ ಆದಷ್ಟು ಬೇಗ ಈಡೇರಲಿ ಎನ್ನುವುದೇ ನಮ್ಮ ಹಾರೈಕೆ.

ಶನ್ನು.

Tags

Related Articles

FOR DAILY ALERTS
 
FOR DAILY ALERTS
 
Close