ಇತಿಹಾಸ

ಭಾರತ ಭಾಗ್ಯ ವಿಧಾತ ಉಕ್ಕಿನ ಮನುಷ್ಯನ ಮಗಳನ್ನು ವಿಕಾಸ ಪುರುಷ ನೆಹರೂ ನಡೆಸಿಕೊಂಡ ರೀತಿ ಆತ ಪಟೇಲರನ್ನು ಎಷ್ಟು ದ್ವೇಷಿಸುತ್ತಿದ್ದರೆನ್ನುವುದಕ್ಕೆ ಹಿಡಿದ ಕೈಗನ್ನಡಿ

ಕಾಶ್ಮೀರದಿಂದ ಕನ್ಯಾಕುಮಾರಿ, ಕಛ್ ನಿಂದ ಮಣಿಪುರದವೆರೆಗೆ ಇವತ್ತು ಅಖಂಡ ಭಾರತ ನಮ್ಮದಾಗಿದ್ದರೆ ಅದಕ್ಕೆ ಕಾರಣ ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲರು. ಭಾರತವನ್ನು ಹರಿದು ಹಂಚುವ ನೆಹರೂ ಕುತಂತ್ರಕ್ಕೆ ಸಡ್ಡು ಹೊಡೆದು ಯಾರನ್ನೂ ಲೆಕ್ಕಿಸದೆ ದೇಶದ್ರೊಹಿಗಳನ್ನು ಬಗ್ಗು ಬಡಿದು, ದೇಶದ ಪ್ರತಿ ರಾಜ್ಯವನ್ನೂ ಭಾರತದೊಂದಿಗೆ ಜೋಡಿಸಿದ ಕೀರ್ತಿ ಕೇವಲ ಪಟೇಲರಿಗೆ ಸಲ್ಲುತ್ತದೆ. ಅಂದು ಪಟೇಲರು ರಾಷ್ಟ್ರ ಹಿತದ ನಿರ್ಣಗಳನ್ನು ತೆಗೆದುಕೊಂಡಿರದಿದ್ದರೆ, ಇಂದು ಭಾರತ ಹರಿದು ಹಂಚಿ ಹೋಳಾಗಿರುತ್ತಿತ್ತು.

ಇಂತಹ ಧೀಮಂತ ವ್ಯಕ್ತಿತ್ವದ ಸರ್ದಾರ್ ಪಟೇಲರನ್ನು ಅವಮಾನ ಮಾಡುವ ಯಾವ ಅವಕಾಶಗಳನ್ನೂ ನೆಹರೂ ಕಳಕೊಳ್ಳುತ್ತಿರಲಿಲ್ಲ. 1950 ರಲ್ಲಿ ಪಟೇಲರ ದೇಹಾಂತ್ಯವಾದಾಗ ಅವರನ್ನು ಸುಡಲು ದೆಹಲಿಯಲ್ಲಿ ಒಂದು ತುಂಡು ಭೂಮಿಯನ್ನೂ ಕಾಂಗ್ರೆಸ್ ಕೊಡಲಿಲ್ಲ. ಭಾರತವನ್ನು ಏಕಛತ್ರದಡಿ ಬೆಸೆದ ಪಟೇಲರ ಆಸ್ತಿ ಒಬ್ಬ ಮಗಳು ಮಣಿ ಬೇನ್ ಬಿಟ್ಟರೆ ಅವರಲ್ಲಿ ಬೇರೇನೂ ಆಸ್ತಿ ಪಾಸ್ತಿಗಳಿರಲಿಲ್ಲ. ನಿಜವಾಗಿ ನೋಡಿದರೆ ಸ್ವಾತಂತ್ರ ಹೋರಾಟಕ್ಕೆ ಪ್ರಾಣರ್ಪಣೆಗೈದ ವೀರರ ಪರಿವಾರದವರು ಸರಕಾರದ ಸವಲತ್ತುಗಳಿಗೆ ಅರ್ಹರು. ಆದರೆ ದೌರ್ಭಾಗ್ಯ ನೋಡಿ ಅವರ ಪರಿವಾರದ ಜನರು ಎಲ್ಲಿದ್ದಾರೆ, ಯಾವ ಸ್ಥಿತಿಯಲ್ಲಿದ್ದಾರೆನ್ನುವುದೆ ನಮಗೆ ತಿಳಿದಿಲ್ಲ. ಬದುಕಿರುವವರೆಗೂ ತಮ್ಮದೆಲ್ಲವನ್ನೂ ದೇಶಕ್ಕಾಗಿ ಧಾರೆ ಎರೆದ ಹುತಾತ್ಮರ ಪರಿವಾರದ ಅಪರಾಧಿಗಳು ನಾವೆಲ್ಲಾ.

ಸರ್ದಾರ್ ಪಟೇಲ್ ಅವರ ಮಗಳು ಮಣಿ ಬೇನ್ ತನ್ನ ತಂದೆಯ ಮರಣಾನಂತರ ನೆಹರೂರನ್ನು ಕಾಣಲು ದೆಹಲಿಗೆ ಬರುತ್ತಾರೆ. ಮಣಿ ಬೇನ್ ತನ್ನನ್ನು ಕಾಣಲು ಬಂದಿರುವದನ್ನು ಅರಿತರೂ ನೆಹರೂ ಅವರನ್ನು ಭೇಟಿಯಾಗುವುದಿಲ್ಲ. ತುಂಬಾ ಹೊತ್ತು ಕಾದ ಬಳಿಕ ಮಣಿ ಬೇನ್ ಅವರನ್ನು ಭೇಟಿಯಾಗಲು ಬರ ಹೇಳುತ್ತಾರೆ. ಆಕೆ ತನ್ನೊಡನೆ ತಂದ ಒಂದು ಬ್ಯಾಗ್ ಮತ್ತು ಒಂದು ಡೈರಿಯನ್ನು ನೆಹರೂರವರಿಗೆ ಹಸ್ತಾಂತರಿಸುತ್ತಾರೆ. ಅದರಲ್ಲೇನಿತ್ತು ಎಂದು ತಿಳಿದರೆ ನಿಮಗೆ ಪಟೇಲರ ಮತ್ತು ಅವರ ಮಗಳ ಮೇಲೆ ಅಭಿಮಾನ ಉಕ್ಕಿ ಹರಿಯುವುದು. ಆ ಬ್ಯಾಗಿನಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಭಾರತೀಯರು ದೇಣಿಗೆ ನೀಡಿದ್ದ 35 ಲಕ್ಷ ರುಪಾಯಿಗಳಿದ್ದವು ಮತ್ತು ಪುಸ್ತಕದಲ್ಲಿ ದೇಣಿಗೆ ನೀಡಿದವರ ಹೆಸರುಗಳನ್ನು ಬರೆಯಲಾಗಿತ್ತು! ಸಾಯುವ ಮುನ್ನ ಈ ಬ್ಯಾಗ್ ಮತ್ತು ಪುಸ್ತಕವನ್ನು ನೆಹರೂರವರ ಕೈಯಲ್ಲೇ ಕೊಡಬೇಕು ಎಂದು ತನ್ನ ಅಂತಿಮ ಇಚ್ಚೆಯನ್ನು ಮಗಳಿಗೆ ತಿಳಿಸಿದ್ದರು ಪಟೇಲರು. ಅದರಂತೆ ಹಣವನ್ನು ನೆಹರೂಗೆ ಒಪ್ಪಿಸಿದ್ದರು ಮಗಳು!!

ಎಂಥಾ ದೇಶಪ್ರೇಮ!! ಎಂಥಾ ಪ್ರಾಮಾಣಿಕತೆ ಪಟೇಲರದ್ದು! ತಂದೆಗೆ ತಕ್ಕ ಮಗಳು ಮಣಿಬೇನ್. ಆ ಕಾಲದಲ್ಲಿ 35 ಲಕ್ಷ ರುಪಾಯಿ ಬಹು ದೊಡ್ಡ ಮೊತ್ತ. ಪಟೇಲರು ಅಥವಾ ಮಣಿಬೇನ್ ಮನಸ್ಸು ಮಾಡಿದ್ದರೆ ಆ ದುಡ್ಡನ್ನು ತಮ್ಮ ಬಳಿಯೆ ಇಟ್ಟುಕೊಳ್ಳಬಹುದಿತ್ತು. ಯಾರಿಗೂ ಅವರ ಬಳಿ ಹಣವಿರುವುದು ಗೊತ್ತಿರಲಿಲ್ಲ. ಆದರೆ ತಂದೆ ಮಗಳು ಹಾಗೆ ಮಾಡಲಿಲ್ಲ ಬದಲಾಗಿ ದೇಶದ ಹಣವನ್ನು ದೇಶಕ್ಕಾಗಿ ಮರಳಿಸಿದರು. ಆದರೆ ಬದಲಾಗಿ ದೇಶ ಅವರಿಗೇನು ಕೊಟ್ಟಿತು? ಇಂಥ ಪ್ರಾಮಾಣಿಕ ತಂದೆಯ ಮಗಳು ತುತ್ತು ಕೂಳಿಗೂ ಕಷ್ಟ ಪಡಬೇಕಾದಂತಹ ಪರಿಸ್ಥಿತಿಯಲ್ಲಿ ಬದುಕಬೇಕಾಯಿತು. ಆಕೆ ಹಣ ವಾಪಾಸು ಕೊಡಲು ಹೋಗಿದ್ದಾಗ ಬಾಯಿ ಮಾತಿಗೂ ನಿನ್ನ ಪರಿಸ್ಥಿತಿ ಹೇಗಿದೆ? ನಿನಗೇನಾದರೂ ಬೇಕೆ ಎಂದು ನೆಹರೂ ಕೇಳಲಿಲ್ಲ ಎಂದು ತಮ್ಮ ದುಖಃವನ್ನು ಆಪ್ತರಲ್ಲಿ ತೋಡಿಕೊಂದಿದ್ದರು ಮಣಿಬೇನ್.

ದೃಷ್ಟಿ ದೋಷದಿಂದಾಗಿ ಆಕೆಯ ಕಣ್ಣುಗಳು ಮಂಜಾಗಿದ್ದವು. ಮೂವತ್ತು ವರ್ಷಗಳಿಂದಲೂ ಒಂದೆ ಕನ್ನಡಕ ಉಪಯೋಗಿಸಿದ್ದರಿಂದ ಆಕೆಯ ಕಣ್ಣಿನ ನಂಬರ್ ಹೆಚ್ಚಾಗಿ ಬೇರೆ ಕನ್ನಡಕ ಹಾಕಬೇಕಾಗಿತ್ತು ಆದರೆ ಆಕೆಯ ಬಳಿ ಕನ್ನಡಕ ಕೊಳ್ಳಲೂ ಕಾಸಿರಲಿಲ್ಲ. ಗುಜರಾತಿನ ಅಹಮದಾಬಾದಿನ ರಸ್ತೆಗಳಲ್ಲಿ ನಡೆದಾಡುವಾಗ ಆಕೆ ಹಲವು ಬಾರಿ ತಲೆ ತಿರುಗಿ ಬೀಳುತ್ತಿದ್ದರು. ಹೀಗೆ ಒಂದು ದಿನ ರಸ್ತೆಯಲ್ಲಿ ನಡೆಯುವಾಗ ಬಿದ್ದು ಪ್ರಾಣ ಕಳೆದು ಕೊಂಡರು. ದೇಶಕ್ಕಾಗಿ ದುಡಿದವರ ಪರಿವಾರಕ್ಕೆ ಕಾಂಗ್ರೆಸ್ ಕೊಟ್ಟ ಉಡುಗೊರೆಯ ಫಲ ಇದು.

ದೇಶಕ್ಕಾಗಿ ಮಡಿದವರು ತುತ್ತು ಕೂಳಿಲ್ಲದೆ ಸತ್ತರು ಆದರೆ ನಮ್ಮ ವಿಕಾಸ ಪುರುಷ ಮತ್ತು ಆತನ ಪರಿವಾರದವರು ತಿಂದು ತೇಗಿ ಮೆರೆದರು. ನಾಚಿಗೆಗೆಟ್ಟ ಕಾಂಗ್ರೆಸ್ ಪಟೇಲರಿಗೆ ಭಾರತರತ್ನವನ್ನೂ ನೀಡಿಲಿಲ್ಲ. ಪಟೇಲರ ಮರಣದ 41 ವರ್ಷಗಳ ಬಳಿಕ 1991 ರಲ್ಲಿ ಅವರಿಗೆ ಭಾರತರತ್ನ ನೀಡಲಾಯಿತು. ಚುನಾವಣೆಯ ಸಮಯದಲ್ಲಿ ಮಾತ್ರ ಅವರ ಭಾವಚಿತ್ರವನ್ನು ತಮ್ಮ ಬ್ಯಾನರ್ ಗಳಲ್ಲಿ ಹಾಕಿಕೊಳ್ಳುವ ಕಾಂಗ್ರೆಸ್ ಇವತ್ತು ಮೋದಿಯವರು ಗುಜರಾತಿನಲ್ಲಿ ಪಟೇಲರ ಆಳೆತ್ತರದ ಪ್ರತಿಮೆ ಮಾಡುತ್ತಿದ್ದರೆ ಅದಕ್ಕೂ ಕ್ಯಾತೆ ತೆಗೆಯುತ್ತದೆ. ದೇಶಕ್ಕಾಗಿ ಹೋರಾಡಿದ ಅಸಂಖ್ಯಾತ ಪರಿವಾರಗಳು ಕಾಂಗ್ರೆಸಿನಿಂದಾಗಿ ಬೀದಿಗೆ ಬಿದ್ದಿವೆ. ಅವರ ಕಣ್ಣೀರ ಶಾಪ ಕಾಂಗ್ರೆಸಿಗೆ ತಟ್ಟದಿರದು ಅದಕ್ಕೆ ಇಂದು ಕಾಂಗ್ರೆಸ್ಸೇ ಬೀದಿಗೆ ಬಂದು ನಿಂತಿದೆ. ಇಂತಹ ನಾಲಾಯಕ್ ಪಕ್ಷವನ್ನು ದೇಶದ ಭೂಪಟದಿಂದಲೆ ಹೊರಗೆಸಯಬೇಕು. ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಬೇಕು. ಅವರ ಪರಿವಾರದ ಜನರಿಗೆ ನ್ಯಾಯ ದೊರಕಬೇಕು……ಕಾಂಗ್ರೆಸ್ ಮುಕ್ತ ಭಾರತ…..

-Postcard team

Source
patriotsforum
Tags

Related Articles

FOR DAILY ALERTS
 
FOR DAILY ALERTS
 
Close