ಪ್ರಚಲಿತ

ಪಾಕಿಸ್ತಾನಿ ಪ್ರೇಮಿಗಳೇ….. ಇನ್ನು ಕೇಲವೇ ಕೆಲವು ದಿನಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರಕ್ಕೆ ನೀವೂ ಬಲಿಯಾಗಲಿದ್ದೀರಿ!! ಈ ಬಗ್ಗೆ ಮಾಹಿತಿ ನೀಡಿದ್ದಾದರೂ ಯಾರು ಗೊತ್ತೇ?!

ಭಾರತವನ್ನು ಕಂಡರೆ ಸಾಕು ಉರಿದು ಬೀಳುತ್ತಿರುವ ಪಾಕಿಸ್ತಾನವು ಪದೇ ಪದೇ ತನ್ನ ನರಿ ಬುದ್ದಿಯನ್ನು ತೋರಿಸುತ್ತಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಸುಂಜ್ವಾನ್ ನಲ್ಲಿರುವ ಜಮ್ಮು- ಕಾಶ್ಮೀರ ಲೈಟ್ ಇನ್ಪೆಂಟ್ರಿಯ ಸೇನಾ ಶಿಬಿರದ ಮೇಲೆ ಪಾಕ್ ಮೂಲದ ಉಗ್ರರು ದಾಳಿ ನಡೆಸಿ ತನ್ನ ಅಟ್ಟಹಾಸವನ್ನು ಮೆರೆದಿದ್ದರು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿಯಂತೆ ಪಾಕ್ ಇಡೀ ಭಾರತವನ್ನೇ ಉಡೀಸ್ ಮಾಡಲು ನೂತನ ಪ್ರಯೋಗವನ್ನು ಮಾಡಲಾರಂಭಿಸಿದೆ ಎಂದು ತಿಳಿದು ಬಂದಿದೆ.

ಹೌದು… ಸುಂಜ್ವಾನ್ ನಲ್ಲಿರುವ ಜಮ್ಮು-ಕಾಶ್ಮೀರ ಲೈಟ್ ಇನ್ಪೆಂಟ್ರಿಯ ಸೇನಾ ಶಿಬಿರದ ಮೇಲೆ ಪಾಕ್ ಮೂಲದ ಜೈಷ್ ಎ ಮೊಹಮ್ಮದ್ ಸಂಘಟನೆಯ ಶಂಕಿತ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 5 ಯೋಧರು ಸೇರಿ ಇಬ್ಬರು ಜ್ಯೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಹುತಾತ್ಮರಾಗಿದ್ದು, ಇತರ 9 ಮಂದಿ ಗಾಯಗೊಂಡಿದ್ದರು. ಇದೂ ಸಾಲದು ಎಂಬಂತೆ ಪಾಕ್ ತನ್ನ ನರಿ ಬುದ್ದಿಯನ್ನು ಪದೇ ಪದೇ ತೋರಿಸಲು ಮುಂದಾಗುತ್ತಿರುವ ಬಗ್ಗೆ ಅಮೆರಿಕ ಭಾರತಕ್ಕೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ತನ್ನ ನೆಲದಲ್ಲಿ ಹೊಸ ಮಾದರಿಯ ಪರಮಾಣು ಅಸ್ತ್ರವನ್ನು ರಹಸ್ಯವಾಗಿ ಅಭಿವೃದ್ಧಿ ಪಡಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದಲ್ಲದೇ, ಸಣ್ಣ ಯುದ್ಧಕ್ಕೆ ಬಳಕೆಯಾಗುವ ಅಣ್ವಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಮಾಹಿತಿ ನೀಡಿದೆ!! ಸಮುದ್ರ ಆಧಾರಿತ ಕ್ರೂಸ್ ಕ್ಷಿಪಣಿ, ಏರ್ ಕ್ರೂಸ್ ಕ್ಷಿಪಣಿ ಮತ್ತು ದೀರ್ಘ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಗಳನ್ನು ಪಾಕ್ ಅಭಿವೃದ್ಧಿಪಡಿಸುತ್ತಿದ್ದು, ಇದು ಭಾರತದ ಪಾಲಿಗೆ ಆತಂಕಕಾರಿ ಬೆಳವಣಿಗೆ ಎಂದು ಅಮೆರಿಕ ದ ಗುಪ್ತಚರ ಇಲಾಖೆ ತಿಳಿಸಿದೆ.

ವಾಷಿಂಗ್ಟನ್ ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅಮೆರಿಕದ ಗುಪ್ತಚರ ಇಲಾಖೆ ನಿರ್ದೇಶಕ ಡ್ಯಾನ್ ಕೋಟ್ಸ್ ಈ ಬಗ್ಗೆ ಸ್ಫೋಟಕ ಮಾಹಿತಿ ಯನ್ನು ನೀಡಿದ್ದು, ಅಮೆರಿಕದ ಆರ್ಥಿಕ ನೆರವಿನ ಸ್ಥಗಿತದ ಹೊರತಾಗಿಯೂ ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ನೆರವು ಅಬಾಧಿತವಾಗಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಭಾರತ, ಆಫ್ಘಾನಿಸ್ತಾನದಂತಹ ರಾಷ್ಟ್ರಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗುತ್ತಿದೆ. ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳೊಂದಿಗಿನ ತನ್ನ ಸಂಬಂಧವನ್ನು ಮುಂದುವರೆಸಿದ್ದು, ಅಂತೆಯೇ ಚೀನಾದೊಂದಿಗೂ ಉತ್ತಮ ಬಾಂಧವ್ಯ ವನ್ನು ಮುಂದುವರೆಸಿದೆ ಎಂದು ಕೋಟ್ಸ್ ಹೇಳಿದ್ದಾರೆ.

ಅಮೆರಿಕ ಸಂಸದರ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಟ್ಸ್ ಪ್ರಮುಖವಾಗಿ ಪಾಕಿಸ್ತಾನದ ಪರಮಾಣು ಯೋಜನೆ ಕುರಿತು ಆತಂಕ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ, ತಮಗೆ ದೊರೆತಿರುವ ಆಂತರಿಕ ಮಾಹಿತಿಗಳ ಅನ್ವಯ ಪಾಕಿಸ್ತಾನ ರಹಸ್ಯವಾಗಿ ಬೃಹತ್ ಪರಮಾಣು ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಹೊಸ ಮಾದರಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಪೈಕಿ ಕಡಿಮೆ ದೂರಗಾಮಿ ಯುದ್ಧತಂತ್ರದ ಶಸ್ತ್ರಾಸ್ತ್ರಗಳು, ನೌಕಾ ಕ್ಷಿಪಣಿಗಳು, ಖಂಡಾತರ, ವಾಯು ದಾಳಿ ಕ್ಷಿಪಣಿಗಳು, ದೂರಗಾಮಿ ಕ್ಷಿಪಣಿಗಳು ಕೂಡ ಸೇರಿವೆ ಎಂದು ಹೇಳಿದ್ದಾರೆ.

ಈ ಹೊಸ ಮಾದರಿಯ ಶಸ್ತ್ರಾಸ್ತ್ರಗಳು ವಿಶ್ವ ಸಮುದಾಯಕ್ಕೆ ಹೊಸ ಭದ್ರತಾ ಸವಾಲೊಡ್ಡಿದ್ದು, ಇವುಗಳು ಉಗ್ರರ ಕೈ ಸೇರಿದರೆ ಊಹೆಗೂ ನಿಲುಕದ ವಿಧ್ವಂಸ ಸಂಭವಿಸುತ್ತದೆ ಎಂದು ಕೋಟ್ಸ್ ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನ ದುಸ್ಸಾಹಸದಿಂದಾಗಿ ವಿಶ್ವ ಸಮುದಾಯ ಸಾಕಷ್ಟು ಆತಂಕ ಎದುರಿಸುತ್ತಿದೆ. ಈ ಹೊತ್ತಿನಲ್ಲಿ ಪಾಕಿಸ್ತಾನ ರಹಸ್ಯ ಪರಮಾಣು ಯೋಜನೆ ಮತ್ತಷ್ಟು ಆತಂಕ ತಂದೊಡ್ಡಿದೆ ಎಂದು ಕೋಟ್ಸ್ ಹೇಳಿದ್ದಾರೆ.

ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ಸಂಬಂಧದ ಕುರಿತು ಮಾತನಾಡಿದ ಕೋಟ್ಸ್, ದಕ್ಷಿಣ ಏಷ್ಯಾದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಕಾಶ್ಮೀರದಲ್ಲಿ ಉಗ್ರ ದಾಳಿ ಮತ್ತು ಇಂಡೋ-ಪಾಕ್ ಗಡಿಯಲ್ಲಿ ನಿರಂತರ ಗುಂಡಿನ ಚಕಮಕಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಸಂಬಂಧ ದಿನೇ ದಿನೇ ಮತ್ತಷ್ಟು ಹಳಸುತ್ತಿದೆ ಎಂದು ಅವರು ಹೇಳಿದ್ದಾರೆ.

ಸಮುದ್ರ ಆಧಾರಿತ ಕ್ರೂಸ್ ಕ್ಷಿಪಣಿ, ಏರ್ ಕ್ರೂಸ್ ಕ್ಷಿಪಣಿ ಮತ್ತು ದೀರ್ಘ ವ್ಯಾಪ್ತಿಯ ಖಂಡಾಂತರ ಕ್ಷಿಪಣಿಗಳನ್ನು ಪಾಕ್ ಅಭಿವೃದ್ಧಿಪಡಿಸುತ್ತಿದ್ದು, ಇದು ಭಾರತದ ಪಾಲಿಗೆ ಆತಂಕಕಾರಿ ಬೆಳವಣಿಗೆಯಾಗಿರುವುದಂತೂ ಅಕ್ಷರಶಃ ನಿಜ!! ಇನ್ನು ಪಾಕ್ ಪೆÇೀಷಿತ ಉಗ್ರ ಸಂಘಟನೆಗಳು ಮುಂದಿನ ದಿನಗಳಲ್ಲಿ ಭಾರತದಲ್ಲಿ ಇನ್ನಷ್ಟು ವಿಧ್ವಂಸಕ ಕೃತ್ಯವೆಸಗು ಸಾಧ್ಯತೆ ದಟ್ಟವಾಗಿದ್ದು, ಭಾರತವನ್ನು ಅತಿಕ್ರಮಿಸುವ ದುಷ್ಟ ಸಾಹಸಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಪಾಕಿಸ್ತಾನವು ವಿಶ್ವದೆಲ್ಲೆಡೆ ಛೀಮಾರಿ ಹಾಕಿಸಿಕೊಳ್ಳುತ್ತಿದ್ದು, ಉಗ್ರರನ್ನು ಪೋಷಿಸುವ ರಾಷ್ಟ್ರವೆಂದೇ ಪ್ರಸಿದ್ಧಿಯನ್ನು ಪಡೆದಿದೆ. ಆದರೂ ಕೂಡ ಬುದ್ದೀಜೀವಿಗಳೆಂದೆನಿಸಿದ ಕೆಲವರು ಪಾಕಿಸ್ತಾನವನ್ನು ಸ್ವರ್ಗ ಎಂದು ಕರೆಯುತ್ತಿದ್ದಾರಲ್ಲದೇ, ಐ ಲವ್ ಪಾಕಿಸ್ತಾನ್ ಎಂದೂ ಉಗ್ರ ರಾಷ್ಟ್ರದೊಂದಿಗೆ ಶಾಮೀಲಾಗಿ ತನ್ನ ದೇಶಕ್ಕೆ ಕೇಡು ಬಗೆಯುತ್ತಿದ್ದಾರೆ ಎನ್ನುವುದೇ ಬೇಸರದ ಸಂಗತಿ!! ಪಾಕಿಸ್ತಾನಕ್ಕೆ ಸಾಥ್ ನೀಡುವ ಕಿಡಿಗೇಡಿಗಳೇ, ದುಷ್ಟರ ಕುತಂತ್ರ ಬುದ್ದಿಗೆ ನೀವು ಕೂಡ ಬಲಿಯಾಗಲಿದ್ದೀರಿ ಎನ್ನುವುದನ್ನು ಮಾತ್ರ ಮರಿಯಬೇಡಿ!! ಪಾಕಿಸ್ತಾನಿ ಪ್ರೇಮಿಗಳೇ… ಇನ್ನಾದರೂ ಎಚ್ಚೆತ್ತುಕೊಳ್ಳಿ!!

– ಅಲೋಖಾ

Tags

Related Articles

Close