ಪ್ರಚಲಿತ

ಬ್ರೇಕಿಂಗ್: ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಮೈಸೂರು ಮಹಾರಾಜ! ಸಿಎಂಗೆ ಯದುವೀರ್ ಅರಸರು ಕೊಟ್ಟ ಟಾಂಗ್ ಏನು ಗೊತ್ತಾ..?

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಇನ್ಯಾರ ಬಾಯಲ್ಲೆಲ್ಲಾ ಛೀ ಥೂ ಎಂದು ಕೇಳಬೇಕೋ ಗೊತ್ತಿಲ್ಲ. ರಾಜಕೀಯದ ಹೊರತಾಗಿಯೂ ಅನೇಕ ರಂಗದ ನಾಯಕರಿಂದ ಉಗಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸ್ವತಃ ಮೈಸೂರಿನ ಒಡೆಯ ಶ್ರೀ ಯಧುವೀರ್ ಒಡೆಯರ್ ಅವರಿಂದಲೇ ಉಗಿಸಿಕೊಂಡಿದ್ದಾರೆ.

ನಮ್ಮ ಸಾಧನೆಯನ್ನು ನಾವು ಹೇಳಬೇಕೆಂದೇನಿಲ್ಲ…

“ನಮ್ಮ ಸಾಧನೆಯನ್ನು ಕೆಲವರು ತುಚ್ಛವಾಗಿ ಟೀಕಿಸುತ್ತಾರೆ. ಆದರೆ ನಮ್ಮ ಸಾಧನೆಯನ್ನು ನಾವು ಹೇಳಬೇಕೆಂದೇನಿಲ್ಲ. ನಮ್ಮ ಸಾಧನೆಯನ್ನು ಜನರೇ ಹೇಳಿಕೊಳ್ಳುತ್ತಾರೆ. ಮೈಸೂರಿಗೆ ಅರಸರ ಕೊಡುಗೆ ಏನು ಎಂಬುವುದು ಜನತೆಗೆ ಗೊತ್ತಿದೆ. ಅದನ್ನು ಜನರು ಹೇಳಬೇಕು. ಅಂದಿನ ಕಾಲಘಟ್ಟವೇ ಬೇರೆ ಇಂದಿ ಕಾಲಘಟ್ಟವೇ ಬೇರೆ. ಕೆಆರ್‍ಎಸ್ ಗೆ ಅರಸರು ಯವ ಕೊಡುಗೆ ನೀಡಿದ್ದಾರೆ ಎಂಬುವುದನ್ನು ಅರಿಯಲಿ. ಹಾಗೂ ನಂತರ ಅಂತಹ ಯಾವ ಕೊಡುಗೆಯನ್ನು ಯಾರು ನೀಡಿದ್ದಾರೆ ಎನ್ನುವುದನ್ನೂ ಹೇಳಲಿ” ಎಂದು ಮೈಸೂರು ಅರಸರಾದ ಯಧುವೀರ್ ಕೃಷ್ಣ ದತ್ತ ಚಾಮರಜ ಒಡೆಯರ್ ಕಿಡಿಕಾರಿದ್ದಾರೆ.

 

ಅರಸರನ್ನು ಅವಮಾನಿಸಿದ್ದ ಸಿದ್ದರಾಮಯ್ಯ…

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರಿಗೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು ಅರಸರ ಬಗ್ಗೆ ಅವಮಾನಕರ ಹೇಳಿಕೆಯೊಂದನ್ನು ಹೇಳಿದ್ದರು. ತಮ್ಮ ಸರ್ಕಾರದ ಸಾಧನೆಯ ಬಣ್ಣಿಸುವ ನೆಪದಲ್ಲಿ ಮೈಸೂರು ಅರಸರಿಗೆ ಅವಮಾನ ಮಾಡಿದ್ದರು. ನಾವು ಅತ್ಯಂತ ಅಧಿಕಗತಿಯಲ್ಲಿ ಸಾಧನೆ ಮಡಿದ್ದೇವೆ. ನಮ್ಮ ಸಾಧನೆಯನ್ನು ಈವರೆಗೂ ಯಾರೂ ಮಾಡಲೇ ಇಲ್ಲ. ಸ್ವತಃ ಮೈಸೂರನ್ನು ಆಳಿದ ಮೈಸೂರು ಮಹಾರಾಜರೇ ಇಂತಹ ಸಾಧನೆಯನ್ನು ಮಾಡಿಲ್ಲ ಎಂದು ಹೇಳಿದ್ದರು. ಇದು ಭಾರೀ ಆಕ್ರೋಷಕ್ಕೆ ಕಾರಣವಾಗಿತ್ತು. ಮಾಜಿ ಸಂಸದ ವಿಶ್ವನಾಥ್ ಸೇರಿದಂತೆ ಹಲವಾರು ಮಂದಿ ಈ ಬಗ್ಗೆ ಕಿಡಿ ಕಾರಿದ್ದರು. ಭಾರತೀಯ ಜನತಾ ಪಕ್ಷದ ನಾಯಕರೂ ಮುಖ್ಯಮಂತ್ರಿಗಳ ಈ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಮೈಸೂರು ರಾಜರನ್ನು ಏಕವಚನದಲ್ಲಿ ನಿಂದಿಸಿದ್ದರು..!

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಮಹಾರಾಜರನ್ನು ಏಕವಚನದಲ್ಲಿ ನಿಂದಿಸಿ ಭಾರೀ ಟೀಕೆಗೆ ಗುರಿಯಾಗಿದ್ದರು. ತನ್ನ ಮಾತಿನ ಭರದಲ್ಲಿ ಮೈಸೂರು ಒಡೆಯರ ಬಗ್ಗೆ ಇಲ್ಲ ಸಲ್ಲದ ಆರೋಪವನ್ನು ಮಾಡಿದ್ದರು. ಆಗಲೇ ಮುಖ್ಯಮಂತ್ರಿಗಳ ಆ ಹೇಳಿಕೆ ವಿರುದ್ಧ ನೇರ ಟೀಕೆಯನ್ನು ಮಾಡಿದ್ದ ಯದುವೀರ್ ಒಡೆಯರ್ ಹಾಗೂ ಆಕೆಯ ಮಾತೆ ರಾಣಿ ಪ್ರಮೋದ ದೇವಿ ಈ ಬಾರಿ ಮತ್ತೆ ಗುಡುಗಿದ್ದಾರೆ. ಪ್ರತಿ ಬಾರಿಯೂ ಮಹಾರಾಜರನ್ನು ಟಾರ್ಗೆಟ್ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಬಾರಿ ಸರಿಯಾದ ಕ್ಲಾಸ್‍ನ್ನೇ ಮೈಸೂರು ಅರಮನೆಯ ಒಡೆಯರ್ ತೆಗೆದುಕೊಂಡಿದ್ದಾರೆ.

ಒಟ್ಟಾರೆ ಈ ಬಾರಿ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸಿದ್ದ ನೀಚ ಹೇಳಿಕೆಗೆ ಮೈಸೂರು ಅರಸರು ಸರಿಯಾಗಿಯೇ ಟಾಂಗ್ ನೀಡಿದ್ದು ಮುಖ್ಯಮಂತ್ರಿಗಳು ತಮ್ಮ ಯೋಗ್ಯತೆಯನ್ನು ಅರಿತುಕೊಳ್ಳಬೇಕಾಗಿದೆ. ಮೈಸೂರು ಒಡೆಯರಿಗೆ ಸಾಧನೆಯ ಪಾಠವನ್ನು ಹೇಳುವ ಮುಖ್ಯಮಂತ್ರಿಗಳ ಸಾಧನೆ ಏನು ಎಂಬುವುದನ್ನು ಹೇಳಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close