ಪ್ರಚಲಿತ

ಬಿಗ್ ಬ್ರೇಕಿಂಗ್: ವಿಶ್ವ ದಾಖಲೆ ಬರೆದಿದ್ದ ಕಣ್ ಸನ್ನೆ ನಟಿಯ ಮೇಲೆ ಮುಸಲ್ಮಾನರಿಂದ ಎಫ್‍ಐಆರ್!! ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಿ!

ಫೆಬ್ರವರಿ 14ರ ಪ್ರೇಮಿಗಳ ದಿನಚಾರಣೆ ವಿಶೇಷವಾಗಿ ಬಿಡುಗಡೆಯಾಗಿರುವ ಮಲೆಯಾಳಂ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿತ್ತು.. ಈಗಾಗಲೇ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗುವ ಮೂಲಕ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ವಿಡಿಯೋ ಆಗಿದೆ. ಪ್ರೇಮಿಗಳ ದಿನಾಚರಣೆಗೆ ಹಲವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ತುದಿಗಾಲಲ್ಲಿ ಕಾಯುತ್ತಿದ್ದರು… ಇದೇ ವೇಳೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಲೆಯಾಳಂ ಹಾಡೊಂದು ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡಿತ್ತು `ಒರು ಆಡಾರ್ ಲವ್’ ಹೆಸರಿನ ಸಿನಿಮಾದ `ಮಾಣಿಕ್ಯಾ ಮಾಲಾರಾಯಾ ಪೂವಿ’ ಹಾಡಿನಲ್ಲಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣುಗಳು ಸಿನಿಪ್ರಿಯರನ್ನು ಮೋಡಿ ಮಾಡಿತ್ತು.. ಹಾಡಿನಲ್ಲಿನ ಆಕೆಯ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತಿದೆ. ಪ್ರಸ್ತುತ ಈ ಹಾಡಿನ ತುಣುಕನ್ನು ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳ ಸ್ಟೇಟಸ್ ಆಗಿ ಹಾಕುತ್ತಿದ್ದಾರೆ.. ಆದರೆ ಇದೀಗ ಈ ಹಾಡಿಗೆ ಓರ್ವ ಮುಸ್ಲಿಮನಿಂದ ಸಂಕಷ್ಟ ಎದುರಾಗಿದೆ ಅಂತಾನೇ ಹೇಳಬಹುದು…

ಕಣ್ ಸನ್ನೆ ಹುಡುಗಿಗೆ ಎಫ್‍ಐಆರ್!!

ಆದರೆ ಈ ಚಿತ್ರದ ಹಾಡಿಗೆ ಫಲಾಕ್ಕುನ್ನಾ ಪೋಲೀಸ್ ಸ್ಟೇಷನ್‍ನಲ್ಲಿ ದೂರು ದಾಖಲಾಗಿದ್ದು ನಟಿ ಪ್ರಿಯಾ ವಾರಿಯರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.. ಅದಲ್ಲದೆ ಚಿತ್ರದ ನಿರ್ದೇಶಕ ಹಾಗೂ ಹಾಡಿನ ಸಂಯೋಜಕನ ವಿರುದ್ಧವೂ ದೂರು ದಾಖಲಾಗಿದೆ… ದೂರಿನಲ್ಲಿ ಪ್ರವಾದಿ ಮೊಹಮ್ಮದ್ ರ ಬಗ್ಗೆ ಅಗೌರವವನ್ನು ತೋರಿಸಲಾಗಿದೆ.. ಗೂಗಲ್ ಟ್ರಾನ್ಸ್‍ಲೇಟ್‍ಗೆ ಹಾಕಿದಾಗ ಇಂಗ್ಲಿಷ್‍ನಲ್ಲಿ ಪ್ರವಾದಿ ಮೊಹಮ್ಮದ್ ರ್ ಗೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ…

ಆದರೆ ಟೈಮ್ಸ್ ನೌನಲ್ಲಿ ಸಂದರ್ಶನ ನೀಡಿದ ಓಮರ್ ಲಾಲೂ `ಒರು ಆಡಾರ್ ಲವ್’ ಚಿತ್ರದ ನಿರ್ದೇಶಕ ಮಾತನಾಡಿದ್ದು ಈ ಹಾಡಿನಲ್ಲಿ ಯಾವುದೇ ಧರ್ಮಕ್ಕೆ ಧಕ್ಕೆ ಬರುವ ರೀತಿ ಹಾಡನ್ನು ಸೃಷ್ಠಿಸಿಲ್ಲ ಎಂಬುವುದನ್ನು ಸ್ಪಷ್ಟನೆ ನೀಡುತ್ತಿದ್ದಾರೆ… ಈ ಹಾಡಿಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಇದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.. ಈ ರೀತಿಯಾಗಿ ಹಾಡಿನಲ್ಲಿದ್ದರೆ ಇಂತಹ ಮೆಚ್ಚುಗೆ ಪಡೆಯಲು ಸಾಧ್ಯವಾಗುತ್ತಿತ್ತಾ? ಮುಸ್ಲಿಮ್ ಧರ್ಮಕ್ಕೆ ಧಕ್ಕೆ ಬರುವಂತಹ ಯಾವುದೇ ಸಾಲು ಇದರಲ್ಲಿಲ್ಲ ಎಂಬುವುದನ್ನು ಸ್ಪಷ್ಟನೆ ನೀಡುತ್ತಾರೆ….

 

ದೂರಿನ ಬಗ್ಗೆ ಸ್ಪಷ್ಟನೆ ನೀಡಿದ ಮುಖಿತ್ ಖಾನ್!!

ಈ ಹಾಡಿನ ಬಗ್ಗೆ ದೂರು ದಾಖಲಿಸಿದ ಮುಖಿತ್ ಖಾನ್ ಟೈಮ್ಸ್ ನೌ ಜೊತೆ ಮಾತನಾಡಿದ್ದು ಈ ಹಾಡಿನ ಬಗ್ಗೆ ಸ್ಪಷ್ಟನೆಯನ್ನು ನೀಡುತ್ತಾರೆ… ಅವನು ಈ ಹಾಡು ಎಲ್ಲೆಡೆ ಪಸರಿಸುತ್ತಿದ್ದಂತೆ ಈತ ಈ ಹಾಡು ಮಲಯಾಳಂನಲ್ಲಿ ಅರ್ಥವಾಗದೆ ಗೂಗಲ್ ಟ್ರಾನ್ಸ್‍ಲೇಟ್‍ನ ಮೊರೆ ಹೋದನಂತೆ… ಆ ಸಮಯದಲ್ಲಿ ಗೂಗಲ್ ಟ್ರಾನ್ಸ್‍ಲೇಟ್‍ನಲ್ಲಿ       ಪ್ರವಾದಿ ಮೊಹಮ್ಮದ್ ರಿಗೆ ನಿಂದನೆ ಮಾಡುವ ರೀತಿಯಲ್ಲಿ ತೋರಿಸುತ್ತಿತ್ತು ಎಂಬುವುದು ಹೇಳುತ್ತಾನೆ…

ಅದೇ ಸಮಯದಲ್ಲಿ ಟೈಮ್ಸ್ ನೌ ಚಾನಲ್ ಆಂಕರ್ ಇದೇ ಒಂದು ಕಾರಣಕ್ಕಾಗಿ ನೀವು ದೂರು ದಾಖಲಿಸಿದ್ದಿರಾ ಎಂದು ಕೇಳಿದಾಗ ಆತ ನೀಡಿದ ನೀಡಿದ ಪ್ರತಿಕ್ರಿಯೆ ಎಲ್ಲರನ್ನು ಒಂದು ಬಾರಿ ಜೋರಾಗಿ ನಗುವಂತೆ ಮಾಡಿತ್ತು.. ಯಾಕೆಂದರೆ ಆತ ನೀಡಿದ ಉತ್ತರ ಏನು ಗೊತ್ತೇ?… ನನಗೆ ಮಾತನಾಡುವ ಸ್ವಾತಂತ್ರ್ಯವಿಲ್ಲವೇ? ಹಾಗಾಗಿ ನಾನು ಈ ಹಾಡಿನ ವಿರುದ್ಧ ದೂರು ದಾಖಲಿಸಿದೆ ಎಂದು ಹೇಳುತ್ತಾನೆ…

ಈ ಹಾಡಿನ ಬಗ್ಗೆ ಹೇಳುವುದಾದರೆ ಈ ಹಾಡಿನಲ್ಲಿ ಯಾವುದೇ ಧರ್ಮವನ್ನು ನಿಂದಿಸುವ ಯಾವುದೇ ಸಾಲುಗಳಲ್ಲಿ ಎಂಬುವುದು ಸ್ಪಷ್ಟನೆಯನ್ನು ನೀಡುತ್ತದೆ….. ಸರಿಯಾಗಿ ಟ್ರಾನ್ಸ್‍ಲೇಟ್ ಆಗುವುದಿಲ್ಲ.. ಅದರ ಬದಲಾಗಿ ಬೇರೆ ಅರ್ಥ ನೀಡುತ್ತದೆ.. ಅದೇ ಇಲ್ಲಿ ಆಗಿರುವಂತಹದ್ದು.. ಆ ಸಮಯದಲ್ಲಿ ಏನಾಗಿದೆ ಎಂದರೆ ಹಾಡು ಬೇರೆ ಅರ್ಥ ನೀಡಿದೆ…
ಮುಸ್ಲಿಮ್ ಸಮುದಾಯದಲ್ಲಿ ಈ ಬಗ್ಗೆ ಯಾರಿಗಾದರೂ ಇಂಟರ್‍ನೆಟ್ ಬಗ್ಗೆ ತಿಳಿದಿದ್ದರೆ ಅರ್ಥವಾಗಿರಬಹುದು… ಈತ ಸುಖಾ ಸುಮ್ಮನೆ ಕೇಸು ದಾಖಲಿಸಿರುವುದು ನೋಡಿದರೆ ಈತನಿಗೆ ಎಲ್ಲಾ ಕಡೆಗಳಲ್ಲಿ ಫೇಮ್ ಆಗಬೇಕು ಎನ್ನುವ ಉದ್ಧೇಶವಾಗಿರಬುದುದೇನೋ ಎಂಬುವುದು ಎಲ್ಲರ ಮಾತು..

ಇನ್‍ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ. ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ನಟಿ ಪ್ರಿಯಾ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಕೇವಲ ಒಂದು ಚಿತ್ರದ ಹಾಡಿನ ಮೂಲಕ ಪ್ರಿಯಾ ಆಪಾರ ಅಭಿಮಾನಿ ಬಳಗವನ್ನು ಪಡೆದಿದ್ದು, ಇವರ ಇನ್ ಸ್ಟಾಗ್ರಾಮ್ ಖಾತೆಗೆ 1.87 ಲಕ್ಷ ಜನರ ಫಾಲೋ ಮಾಡುತ್ತಿದ್ದಾರೆ. ಅಭಿಮಾನಿಗಳ ಪ್ರೀತಿ ಹೆಚ್ಚು ಸಂತೋಷ ಉಂಟುಮಾಡಿದೆ ಎಂದು ಪ್ರಿಯಾ ತಿಳಿಸಿದ್ದಾರೆ.

ಒಂದು ಹಾಡಿನ ವಿಡಿಯೋ ಮೂಲಕ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿದ್ದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ. ಕೇವಲ ಒಂದು ದಿನದಲ್ಲಿ ಪ್ರಿಯಾ ಅವರ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 6 ಲಕ್ಷ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಫಾಲೋ ಆಗಿರುವ ವಿಶ್ವದ ಮೂರನೇ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 18 ವರ್ಷದ ಪ್ರಿಯಾ ಪ್ರಕಾಶ್ ವಾರಿಯಾರ್ ಈಗ ಹಾಲಿವುಡ್ ನ ಸ್ಟಾರ್ ಗಳಾದ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಾಲಿನಲ್ಲಿ ಬಂದು ನಿಂತಿದ್ದಾರೆ. ಈ ಹಿಂದೆ ಒಂದೇ ದಿನದಲ್ಲಿ ಕೈಲೀ ಜೆನ್ನರ್ 8 ಲಕ್ಷ, ರೊನಾಲ್ಡೊ ಅವರನ್ನು 6.50 ಲಕ್ಷ ಮಂದಿ ಫಾಲೋ ಮಾಡಿದ್ದರು. ಪ್ರಸ್ತುತ 17 ಲಕ್ಷ ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಪ್ರಿಯಾ ಅವರು ಸೆನ್ಸೇಷನ್ ಸೃಷ್ಟಿಸಿದ್ದಾರೆ. ಪ್ರಸ್ತುತ ಅವರ ಇನ್ ಸ್ಟಾಗ್ರಾಮ್ ಖಾತೆಗೆ `ಬ್ಲೂ ಟೀಕ್ ಮಾರ್ಕ್’ ಲಭಿಸಿದೆ.

https://twitter.com/priyapvarrier/status/962654259366916096

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ಒಂದು ಹಾಡಿನ ವಿಡಿಯೋ ಮೂಲಕ ತನ್ನ ಎಕ್ಸ್ ಪ್ರೆಷನ್‍ನಿಂದಲೇ ಇಂಟರ್ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇಷ್ಟು ಪ್ರಸಿದ್ಧಿಯಾಗುತ್ತದೆ, ಸನ್ಸೇಷನ್ ಹುಟ್ಟಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಈ ವಿಡಿಯೋ ಚೆನ್ನಾಗಿದೆ ಎಂದು ಎಲ್ಲರೂ ತಿಳಿಸಿದ್ದರು. ಆದರೆ ಇಷ್ಟು ದೊಡ್ಡಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಪ್ರಿಯಾ ಪ್ರಕಾಶ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ನಾನು ಸದ್ಯ ತುಂಬಾ ಖುಷಿಯಾಗಿದ್ದೀನಿ. ನ್ಯಾಷನಲ್ ಕ್ರಶ್ ಆಗಿದ್ದು ನಾನು ತುಂಬ ಎಕ್ಸೈಟೆಡ್ ಆಗಿದ್ದೀನಿ. ಇದು ನನಗೆ ತುಂಬ ಹೊಸದು. ತುಂಬಾ ಜನ ನನ್ನ ಇಷ್ಟಪಡುತ್ತಿದ್ದಾರೆ. ಇದ್ದರಿಂದ ನನಗೆ ತುಂಬಾನೇ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

ಪವಿತ್ರ

Tags

Related Articles

Close