ಪ್ರಚಲಿತ

ಬಿಗ್ ಬ್ರೇಕಿಂಗ್! ಕುಮಾರ ಸ್ವಾಮಿಗೆ ಟ್ವಿಟರ್‍ನಲ್ಲಿ ಸವಾಲು ಹಾಕಿದ ಮೋದಿ! ದೇಶಕ್ಕೇ ಮಾದರಿಯಾದ ನಮೋ “ಹಮ್ ಫಿಟ್ ತೋ ಇಂಡಿಯಾ ಫಿಟ್”…

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇದೀಗ ಮತ್ತೊಂದು  ವಿಭಿನ್ನ ಶೈಲಿಯ ನಡೆಯಿಂದ ಸುದ್ಧಿಯಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಸದಾ ವಿಭಿನ್ನ ಚಿಂತನೆಯಿಂದಲೇ ಮನೆಮಾತಾಗಿರುವ ಮೋದಿಯವರು ವಿರೋಧ ಪಕ್ಷಗಳನ್ನೂ ಕೆಲವೊಮ್ಮೆ ನಿಬ್ಬೆರಗಾಗಿಸುತ್ತಾರೆ. ಈ ಹಿಂದೆ ಸ್ವಚ್ಚತಾ ಕಾರ್ಯಕ್ರಮದಲ್ಲೂ ಇಂತಹಾ ಬೆಳವಣಿಗೆಗಳು ನಡೆದಿತ್ತು. ಇದೀಗ ಅಂತಹದ್ದೇ ಬೆಳವಣಿಗೆ ಮತ್ತೆ ನಡೆದಿದೆ. 

ಕುಮಾರ ಸ್ವಾಮಿಗೇ ಚಾಲೆಂಜ್ ಹಾಕಿದ ಮೋದಿ..!

ಪ್ರಧಾನಿ ಮೋದಿಯವರ ಈ ಒಂದು ಟ್ವೀಟ್ ರಾಷ್ಟ್ರ ರಾಜಕೀಯದಲ್ಲೇ ಸಂಚಲನವನ್ನೇ ಮೂಡಿಸಿದೆ. ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್‍ನಲ್ಲಿ “ಫಿಟ್‍ನೆಸ್ ಛಾಲೆಂಜ್” ಹಾಕಿದ್ದಾರೆ. “ಹಮ್ ಫಿಟ್ ತೋ ಇಂಡಿಯಾ ಫಿಟ್” ಎಂಬ ಅಭಿಯಾನದಲ್ಲಿ ಕುಮಾರ ಸ್ವಾಮಿಗೆ ಮೋದಿ ಚಾಲೆಂಜ್ ಹಾಕಿದ್ದಾರೆ.

ಭಾರತ ತಂಡದ ಕ್ರಿಕೆಟಿಗ ವಿರಾಟ್ ಕೋಹ್ಲಿಯವರ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ಮೋದಿ ತನ್ನ ಫಿಟ್‍ನೆಸ್ ಬಗ್ಗೆ ತಾನು ಅಭ್ಯಾಸಿಸುತ್ತಿದ್ದ ಬಗ್ಗೆ ವೀಡಿಯೋ ಮಾಡಿ ಅದನ್ನು ಟ್ವಿಟರ್‍ನಲ್ಲಿ ಅಳವಡಿಸಿ ಕರ್ನಾಟಕದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಚಾಲೆಂಜ್ ಮಾಡಿದ್ದಾರೆ.

ಏನಿದು ಫಿಟ್ ನೆಸ್ ಚಾಲೆಂಜ್..?

ಪ್ರಥಮವಾಗಿ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ರಾಥೋರ್ ಅವರು “ನಾವು ಆರೋಗ್ಯವಾಗಿಡಬೇಕಾದರೆ ವ್ಯಾಯಾಮ ಮಾಡಬೇಕು, ವ್ಯಾಯಾಮ ಮಾಡಿ ಅದರ ವೀಡಿಯೋ ಮಾಡಿ ಮತ್ತೊಬ್ಬರಿಗೆ ಚಾಲೆಂಜ್ ಮಾಡಿ. ಈ ಮೂಲಕ ನಾವು ಆರೋಗ್ಯವಾಗಿರಬೇಕು ಅದರೊಂದಿಗೆ ದೇಶವೂ ಆರೋಗ್ಯವಾಗಿರಬೇಕು” ಎಂದು ಹೇಳಿದ್ದರು. ಹಾಗೂ ತಾನು ಮಾಡಿದ ವ್ಯಾಯಾಮದ ವೀಡಿಯೋವನ್ನು ಭಾರತ ತಂಡದ ಕ್ರಿಕೆಟಿಗ ವಿರಾಟ್ ಕೋಹ್ಲಿಯವರಿಗೆ ಟ್ವಿಟರ್‍ನಲ್ಲಿ ಹಾಕಿ ಚಾಲೆಂಜ್ ಮಾಡುತ್ತಾರೆ.

ರಾಜವರ್ಧನ್ ರಾಥೋರ್ ಅವರ ಚಾಲೆಂಜ್ ಸ್ವೀಕರಿಸಿದ್ದ ವಿರಾಟ್ ಕೋಹ್ಲಿ ತಾನು ವೀಡಿಯೋ ಮಾಡಿ ಅದನ್ನು ತನ್ನ ಪತ್ನಿ ಅನುಷ್ಕಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಚಾಲೆಂಜ್ ಹಾಕುತ್ತಾರೆ. ಇದೀಗ ಕೋಹ್ಲಿ ಹಾಕಿದ್ದ ಸವಾಲನ್ನು ಸ್ವೀಕರಿಸಿದ ಪ್ರಧಾನಿ ಮೋದಿಯವರು ತಾನು ವ್ಯಾಯಾಮ ಮಾಡಿದ ವೀಡಿಯೋ ಮಾಡಿ ಅದನ್ನು ಟ್ವಿಟರ್‍ನಲ್ಲಿ ಅಳವಡಿಸಿ ಕರ್ನಾಟಕದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಚಾಲೆಂಜ್ ಮಾಡಿದ್ದಾರೆ.

ಮಾದರಿಯಾದ ನಮೋ ಫಿಟ್ ನೆಸ್ ವೀಡಿಯೋ..!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ತನ್ನ ಟ್ವಿಟರ್‍ನಲ್ಲಿ ಅಳವಡಿಸಿದ ಫಿಟ್ ನೆಸ್ ಚಾಲೆಂಜ್ ವೀಡಿಯೋ ದೇಶದಲ್ಲೇ ಮಾದರಿಯಾಗಿದೆ. ಇತರೆಲ್ಲಾ ನಾಯಕರು ಅಥವಾ ಸೆಲೆಬ್ರಿಟಿಗಳುಯ ಹಾಕಿದಂತೆ ಮೋದಿ ಹಾಕದೆ ವಿಭಿನ್ನ ಶೈಲಿಯಲ್ಲಿ ವೀಡಿಯೋ ಹಾಕಿದ್ದಾರೆ. ಮೊದಲು ಹುಲ್ಲಿನ ಮೇಲೆ ನಡೆದು ನಂತರ ಕಲ್ಲೊಂದರ ಮೇಲೆ ಮಲಗುವ ಭಂಗಿಯಲ್ಲಿ ತನ್ನ ವ್ಯಾಯಾಮವನ್ನು ಮಾಡಿದ್ದಾರೆ. ಇದು ರಕ್ತ ಸಂಚಾರವನ್ನು ಸರಳವಾಗಿಸುತ್ತದೆ. ತೆಳುವಾದ ಗ್ರಾನೇಟ್ ಮೇಲೆ ವೇಗವಾಗಿ ನಡೆಯುವ ಮೂಲಕ ಏಕಾಗ್ರತೆಯನ್ನು ಸೂಚಿಸಿದ್ದಾರೆ. ನಂತರ ಅಲ್ಲೇ ಇದ್ದಂತಹ ಮರವೊಂದರ ಸುತ್ತುವರಿದಿದ್ದಾರೆ. ಈ ಮರ ಆರೋಗ್ಯವನ್ನು ವೃದ್ಧಿಸುತ್ತದೆ ಎಂಬ ಸಂದೇಶವೂ ಅದರಲ್ಲಿದೆ. ಅದರಲ್ಲೂ ಒಂದೊಂದು ಸಂದೇಶವನ್ನು ಮೋದಿ ಸಾರಿದ್ದಾರೆ. ಹುಲ್ಲು, ಕಲ್ಲು, ಹೊಯ್ಗೆ, ನೀರು, ಮರ, ಗ್ರಾನೇಟ್ ಮೇಲೆ ನಡೆದು ವ್ಯಾಯಾಮವನ್ನು ಮಾಡಿದ್ದಾರೆ. ನಂತರ ಮರದ ಕೆಳಗಿದ್ದ ಬುದ್ಧನ ಪ್ರತಿಮೆಯ ಎದುರು ನಮಸ್ಕಾರ ಭಂಗಿಯಲ್ಲಿ ಪ್ರಾಣಾಯಾಮ ಮಾಡಿದ್ದಾರೆ. ಯೋಗಾಸನ, ಪ್ರಾಣಾಯಾಮ, ವ್ಯಾಯಾಮ ಸಹಿತ ಅನೇಕ ಸಂದೇಶಗಳನ್ನು ಮೋದಿಯವರು ಕೇವಲ ಒಂದೇ ವೀಡಿಯೋದಲ್ಲಿ ನೀಡಿದ್ದಾರೆ.

ಇದೀಗ ಮೋದಿಯವರು ಈ ಚಾಲೆಂಜನ್ನು ಕರ್ನಾಟಕದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಹಾಕಿದ್ದು ಭಾರೀ ಕುತೂಹಲಗಳನ್ನೇ ಕೆರಳಿಸಿದೆ. ಕುಮಾರ ಸ್ವಾಮಿಯವರು ಈ ಸವಾಲನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುವುದು ಇದೀಗ ಚರ್ಚೆಗಳು ನಡೆಯುತ್ತಿವೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close