ಪ್ರಚಲಿತ

ದೀದಿ ನಾಡಿನಲ್ಲೂ ಮೋದಿ ಹವಾ.!ಪಶ್ಚಿಮ ಬಂಗಾಳದಲ್ಲಿ ಇತಿಹಾಸ ಸೃಷಿಸುತ್ತಾ ಈ ಬಾರಿಯ ಚುನಾವಣೆ?

ಅಲ್ಲೇನಿದ್ದರೂ ಪ್ರತಿನಿತ್ಯ ಬರುವ ಸುದ್ಧಿಯೊಂದೇ, ಅದು ಕೊಲೆ, ಸುಲಿಗೆ, ಅತ್ಯಾಚಾರ. ಧ್ವೇಷ ರಾಜಕಾರಣದಲ್ಲಿ ಕೇರಳ ಹಾಗೂ ಪಶ್ಚಿಮ ಬಂಗಾಳ ಸಹೋದರರಿದ್ದಂತೆ. ಚುನಾವಣಾ ಮತಗಟ್ಟೆಗಳಲ್ಲೂ ಮಚ್ಚು ಲಾಂಗುಗಳ ದರ್ಶನ ಕಡ್ಡಾಯ ಎಂಬಂತಾಗಿದೆ. ಕಮ್ಯುನಿಸ್ಟರ ಅಟ್ಟಹಾಸ ಯಾವ ರೀತಿ ಇದೆಯೆಂದರೆ ಕೇಸರಿ ಧ್ವಜ ಕಟ್ಟಿಕೊಂಡು ಜೈ ಶ್ರೀರಾಮ್ ಎಂದರೆ ಸಾಕು ದೊಣ್ಣೆಯ ಏಟು ತಲೆಯ ಮೇಲೆ ಪಕ್ಕಾ ಎಂಬಂತಾಗಿದೆ. ಒಟ್ಟಾರೆ ಒಂದು ರಾಜಕೀಯ ಪಕ್ಷದ ಲಾಭಕ್ಕಾಗಿ ರಾಜಕೀಯ ಧ್ವೇಷ ಇಟ್ಟುಕೊಂಡು ಕೆಲಸ ಮಾಡುವ ಅತ್ಯಂತ ಕೆಟ್ಟ ರಾಜ್ಯ ಎಂಬ ಕಳಂಕ ಪಶ್ಚಿಮ ಬಂಗಾಳಕ್ಕಿದೆ.

ಇಲ್ಲಿ ಭಾರತೀಯ ಜನತಾ ಪಕ್ಷಕ್ಕೆ ನೆಲೆನೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಮಮತಾ ಬ್ಯಾನರ್ಜಿಯ ಇಬ್ಬಗೆ ನೀತಿ, ಪುಡಿ ರೌಡಿಗಳಿಗೆ ದೀದಿ ನೀಡುವ ಬೆಂಬಲ, ಕತ್ತಿ ಎತ್ತಿದರೂ ಬೆಂಬಲಿಸುವ ಸಿಎಂ ಮಮತಾ ಬ್ಯಾನರ್ಜಿಯ ರಾಜಕೀಯ ತಂತ್ರಗಾರಿಕೆ ಹೀಗೆ ಇದೆಲ್ಲಾ ದಿನನಿತ್ಯದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದವು. ಪ್ರಧಾನಿ ಮೋದಿಯವರನ್ನು ಮನಬಂದಂತೆ ನಿಂದಿಸುವ ದೀದಿ ದೇಶದ ಸೈನಿಕರ ವಿಚಾರವಾಗಿಯೂ ತಾತ್ಸಾರ ನೀತಿಯನ್ನು ಅನುಸರಿಸುತ್ತಾ ಬಂದಿದ್ದರು.

ದೇಶವನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ ಎನ್ನುವ ದೇಶದ್ರೋಹಿಗಳನ್ನು ಮಮತಾ ಬೆಂಬಲಿಸಿದ್ದರು. ಮಮತಾ ನಾಡಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜಾಗವಿಲ್ಲ ಎಂಬ ಮಾತುಗಳನ್ನು ಮಮತಾ ಬ್ಯಾನರ್ಜಿಯ ಈ ಕೆಲ ನೀತಿಗಳೇ ಉಲ್ಟಾ ಹೊಡೆಯುವತ್ತ ಕಾಣುತ್ತಿದೆ. ಈ ಹಿಂದೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಸಮಾವೇಶ ನಡೆಸಲು ಬಂದಾಗ ಮಮತಾ ಬ್ಯಾನರ್ಜಿ ವಿರೋಧಿಸಿ ಬೀದಿಗಿಳಿದಿದ್ದರು. ನಂತರ ಇದನ್ನು ಪ್ರಶ್ನಿಸಿ ಬಿಜೆಪಿ ನಾಯಕರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ದೀದಿಗೆ ತೀವ್ರ ಮುಖಭಂಗ ಅನುಭವಿಸುವಂತೆ ತೀರ್ಪು ನೀಡಿತ್ತು.

Image result for modi in west bengal

ನಂತರ ತನ್ನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ಸಿಬಿಐ ವಿರುದ್ಧ ಬೀದಿಗಳಿದು ಪ್ರತಿಭಟನೆ ನಡೆಸಿ ತನ್ನ ರಾಜ್ಯದಲ್ಲಿ ಸಿಬಿಐ ನಿಷೇಧ ಆದೇಶ ಹೊರಡಿಸಿದ್ದರು. ಆದರೆ ಈ ವಿಚಾರದಲ್ಲೂ ದೀದಿಗೆ ತೀವ್ರ ಮುಖಭಂಗವಾಗಿತ್ತು. ಇದೀಗ ಮೋದಿ ಹೋದಲ್ಲೆಲ್ಲಾ ಜನರು ಲಕ್ಷ ಲಕ್ಷ ಜನರು ಸೇರುತ್ತಿದ್ದಾರೆ. ಬಿಜೆಪಿಗೆ ಬಂಗಾಳದ ಜನರು ಜೈ ಎನ್ನುತ್ತಿದ್ದಾರೆ. ಮಮತಾ ಬ್ಯಾನರ್ಜಿಯ ಧ್ವೇಷದ ರಾಜಕೀಯ ನಡುವೆಯೂ ಜನತೆ ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗಳಿಸುವ ಸ್ಥಾನಕ್ಕಿಂತಲೂ ಮುಂದಿನ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಬೇಕು ಎಂಬುವುದು ಬಿಜೆಪಿ ಪ್ಲಾನ್. ಈ ಪ್ಲಾನ್ ಬಹುತೇಕ ಯಶಸ್ವಿಯಾಗುತ್ತಲೂ ಇದೆ. ದಿನದಿಂದ ದಿನಕ್ಕೆ ಮೋದಿ ಹಾಗೂ ಬಿಜೆಪಿ ಜನಪ್ರಿಯತೆ ಬಂಗಾಳದಲ್ಲಿ ವೃದ್ಧಿಯಾಗುತ್ತಿರುವುದು ದೀದಿ ನಿದ್ದೆಗೆಡುವಂತೆ ಮಾಡಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close