ಅಂಕಣಪ್ರಚಲಿತ

ಪಂಜಾಬ್ ನ ಕಾಂಗ್ರೆಸ್ ಮುಖ್ಯಮಂತ್ರಿ ಅತೀ ಶೀಘ್ರದಲ್ಲೇ ಬಿಜೆಪಿಗೆ.!! ಮೋದಿಯ ಮಾಸ್ಟರ್ ಸ್ಟ್ರೋಕ್ ಹೇಗೆ ವರ್ಕೌಟ್ ಆಯ್ತು ಗೊತ್ತಾ.?!

ದೇಶದ ರಾಜಕೀಯದಲ್ಲಿ ದಿನಕ್ಕೊಂದು ಬದಲಾವಣೆ ನಡೆಯುತ್ತಲೇ ಇದೆ. ದೇಶವನ್ನು ೬೦ ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಇಂದು ತನ್ನ ಅಸ್ತಿತ್ವ ಕಂಡುಕೊಳ್ಳಲು ಸೆಣಸಾಡುತ್ತಿರುವುದನ್ನು ಗಮನಿಸಿದರೆ ರಾಜಕೀಯ ಸ್ಥಿತಿ ಯಾವ ರೀತಿಯಲ್ಲಿ ಬದಲಾಗುತ್ತಿದೆ ಎಂಬೂದು ತಿಳಿಯುತ್ತದೆ. ನರೇಂದ್ರ ಮೋದಿಯವರು ಪ್ರಧಾನಿ ಯಾದ ದಿನದಿಂದಲೇ ಕಾಂಗ್ರೆಸ್ ನ ಪತನಕ್ಕೆ ಕ್ಷಣಗಣನೆ ಆರಂಭವಾಗಿತ್ತು.  ಚುನಾವಣೆಗೂ ಮೊದಲೇ ‘ಕಾಂಗ್ರೆಸ್ ಮುಕ್ತ ಭಾರತ’ ದ ಗುರಿ ಹೊಂದಿದ್ದ ನರೇಂದ್ರ ಮೋದಿ, ತಮ್ಮ ಆಡಳಿತ ವೈಖರಿಯಿಂದಲೇ ಕಾಂಗ್ರೆಸ್ ನ್ನು ದೇಶದಿಂದ ಕಿತ್ತುಹಾಕಲು ಸಜ್ಜಾಗಿದ್ದಾರೆ.!

ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ರಾಜ್ಯಗಳ ಚುನಾವಣೆಯಲ್ಲೂ ಮಕಾಡೆ ಮಲಗಿರುವ ಕಾಂಗ್ರೆಸ್, ತಮ್ಮ ಕೈಯಲ್ಲಿ ಉಳಿದಿರುವ ರಾಜ್ಯವನ್ನೂ ಕಳೆದುಕೊಳ್ಳುವ ಭೀತಿಯಿಂದ ಹರಸಾಹಸ ಪಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯವನ್ನು ಗೆದ್ದು ಕೇಸರಿ ಪತಾಕೆ ಹಾರಿಸಿರುವ ಮೋದಿ ಸರಕಾರ ಸದ್ಯ ಕರ್ನಾಟಕದಲ್ಲೂ ವಿಜಯಯಾತ್ರೆ ನಡೆಸಲು ತಂತ್ರ ರೂಪಿಸಿದ್ದಾರೆ.

ಕಾಂಗ್ರೆಸ್ ಕೈಯಲ್ಲಿದೆ ಬೆರಳೆಣಿಕೆಯ ರಾಜ್ಯಗಳು..!

ದೇಶವನ್ನು ೬೦ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನ ಕೈಯಲ್ಲಿ ಇರುವುದು ಇಂದು ಬೆರಳೆಣಿಕೆಯಷ್ಟು ರಾಜ್ಯಗಳು. ಪುದುಚೇರಿ , ಪಂಜಾಬ್ , ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಗೆ ಇದೀಗ ಎಲ್ಲಾ ರಾಜ್ಯಗಳು ಕೈತಪ್ಪುವ ಭೀತಿ ಎದುರಾಗಿದೆ. ಯಾಕೆಂದರೆ ನರೇಂದ್ರ ಮೋದಿಯವರು ಇಂತಹದ್ದೊಂದು ಸೂಚನೆ ನೀಡಿದ್ದಾರೆ‌. ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ಎಲ್ಲಾ ರಾಜ್ಯಗಳು ಇಂದು ಬಿಜೆಪಿಯ ಕೈಯಲ್ಲಿದೆ. ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಗೆ ಇಡೀ ದೇಶವೇ ತಲೆ ಬಾಗಿದ್ದು , ಬಿಜೆಪಿಯನ್ನು ಗೆಲ್ಲಿಸುತ್ತಾ ಒಂದೊಂದೇ ರಾಜ್ಯವನ್ನು ಮೋದಿಯವರ ಬತ್ತಳಿಕೆಗೆ ಸೇರಿಸುತ್ತಿದ್ದಾರೆ.

ಪಂಜಾಬ್ ನಲ್ಲೂ ಬಿಜೆಪಿ ಸರ್ಕಾರ ರಚನೆ..!

ಕಾಂಗ್ರೆಸ್ ಆಡಳಿತವಿರುವ ಬಲಿಷ್ಠ ರಾಜ್ಯ ಎಂದರೆ ಅದು ಪಂಜಾಬ್. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಪಂಜಾಬ್ ಕಾಂಗ್ರೆಸ್ ಭರ್ಜರಿ ಜಯಗಳಿಸಿತ್ತು. ಅಮರೇಂದರ್ ಸಿಂಗ್ ನೇತ್ರತ್ವದಲ್ಲಿ ರಚನೆಯಾದ ಸರಕಾರ ಪಂಜಾಬ್ ನಲ್ಲಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ಆದರೆ ಇದೀಗ ಪಂಜಾಬ್ ಕೂಡಾ ಬಿಜೆಪಿಯ ಕೈ ಸೇರಲಿದೆ ಎಂಬ ಸಂಶಯ ಹೆಚ್ಚಾಗಿದೆ. ಮೋದಿ ಸರಕಾರದ ಪ್ರತಿಯೊಂದು ನಿರ್ಧಾರವನ್ನು ಬೆಂಬಲಿಸಿಕೊಂಡು ಬರುತ್ತಿದ್ದ ಪಂಜಾಬ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್ , ಕಾಂಗ್ರೆಸ್ ನ ಎಲ್ಲಾ ತತ್ವಗಳಿಗೂ ವಿರುದ್ಧವಾಗಿಯೇ ನಡೆದುಕೊಂಡವರು.

ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ವೇಳೆ ಇಡೀ ವಿಶ್ವವೇ ಭಾರತೀಯ ಸೇನೆಯನ್ನು ಹೊಗಳಿಕೊಂಡಿತ್ತು. ಆದರೆ ಕಾಂಗ್ರೆಸ್ ಮಾತ್ರ ಭಾರತೀಯ ಸೇನೆ ಮತ್ತು ಮೋದಿ ಸರಕಾರದ ಈ ನಡೆಯನ್ನು ವಿರೋಧಿಸಿ ,ಭಾರತೀಯ ಸೈನಿಕರ ಸಾಮಾರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಈ ಸಂದರ್ಭದಲ್ಲೂ ಪಂಜಾಬ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ಭಾರತೀಯ ಸೇನೆಯ ಈ ನಡೆಯನ್ನು ಬೆಂಬಲಿಸಿದ್ದರು.

ಭಾರತದ ಒಂದು ಸೈನಿಕನ ಹತ್ಯೆಯಾದರೆ, ಪಾಕಿಸ್ತಾನದ ಹತ್ತು ಸೈನಿಕರ ತಲೆ ಉರುಳಿಸಬೇಕೆಂದು ಹೇಳಿಕೊಂಡಿದ್ದರು ಅಮರೇಂದರ್ ಸಿಂಗ್. ಮೋದಿ ಸರಕಾರದ ಎಲ್ಲಾ ನಿರ್ಧಾರಗಳನ್ನು ಬೆಂಬಲಿಸಿಕೊಂಡು ಬರುತ್ತಿರುವ ಅಮರೇಂದರ್ ಸಿಂಗ್, ಸದ್ಯವೇ ಬಿಜೆಪಿ ಸೇರುವ ನಿರೀಕ್ಷೆ ಇದೆ.

ಅಮರೇಂದರ್ ಬೆಂಬಲಕ್ಕೆ ನಿಂತ ಮೋದಿ..!

ಭಾರತ ಪ್ರವಾಸದಲ್ಲಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಂಡೊ ಸ್ವಾಗತಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೋಗಿರಲಿಲ್ಲ. ಏಳು ದಿನಗಳ ಕಾಲ ಭಾರತ ಪ್ರವಾಸದಲ್ಲಿ ಇರುವ ಜಸ್ಟಿನ್ ಕೇವಲ ಅರ್ಧ ದಿನ ಕಾಲಾವಕಾಶವನ್ನು ಭಾರತದ ಉನ್ನತ ನಾಯಕರುಗಳೊಂದಿಗೆ ಕಳೆಯಲಿದ್ದಾರೆ. ಸತತ ಏಳು ದಿನ ಭಾರತದಲ್ಲಿದ್ದರೂ ಕೂಡಾ ಅರ್ಧ ದಿನ ಮಾತ್ರ ಭಾರತದ ನಾಯಕರೊಂದಿಗೆ ಕಳೆಯುವ ಕೆನಡಾ ಪ್ರಧಾನಿ ಯ ಈ ನಡೆಗೆ ಭಾರತ ಮತ್ತು ಕೆನಾಡದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆನಡಾದ ಒಟ್ಟು ಜನಸಂಖ್ಯೆಯಲ್ಲಿ ಶೇ ೩ ರಷ್ಟು ಭಾರತೀಯ ಸಿಖ್ ಸಮುದಾಯದ ಜನರೇ ಇದ್ದು, ಸಿಖ್ ಮತದಾರರನ್ನು ಓಲೈಸುವುದಕ್ಕಾಗಿ ಜಸ್ಟಿನ್ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಆದರೆ ಪಂಜಾಬ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ಕೂಡಾ ಈ ವೇಳೆಯಲ್ಲಿ ಬರಮಾಡಿಕೊಳ್ಳಲು ಹೋಗಲಿಲ್ಲ. ಕೆನಡಾ ಭಯೋತ್ಪಾದನೆ ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ದೇಶ, ಅದೇ ಕಾರಣಕ್ಕಾಗಿ ಕೆನಡಾ ಪ್ರಧಾನಿಯ ಭಾರತ ಪ್ರವಾಸಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನರೇಂದ್ರ ಮೋದಿಯವರು ಇತ್ತೀಚೆಗೆ ಸಮಾವೇಶ ಒಂದರಲ್ಲಿ ಮಾತನಾಡುತ್ತಾ , ಕಾಂಗ್ರೆಸ್ ಕೈಯಲ್ಲಿ ಇರುವುದು ಪುದುಚೇರಿ ಮತ್ತು ಕರ್ನಾಟಕ ಮಾತ್ರ , ಕರ್ನಾಟಕದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿಕೊಂಡಿದ್ದರು. ಈ ಮೂಲಕ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ನರೇಂದ್ರ ಮೋದಿಯವರು ಏನೇ ಹೇಳಿಕೆ ನೀಡಿದರೂ ಅದರ ಹಿಂದೆ ಹಲವಾರು ಕಾರಣಗಳಿರುತ್ತವೆ. ಆದ್ದರಿಂದಲೇ ಮೋದಿಯವರ ಈ ಹೇಳಿಕೆ ಬಹಳ ಕುತೂಹಲ ಹುಟ್ಟುಹಾಕಿದ್ದು ಕಾಂಗ್ರೆಸ್ ಗೆ ತಲೆನೋವಾಗಿದೆ.

ಅಮರೇಂದರ್ ಸಿಂಗ್ ಯಾಕೆ ಬಿಜೆಪಿ ಸೇರಬೇಕು..?

ಅಮರೇಂದರ್ ಸಿಂಗ್ ಒಬ್ಬ ದೇಶಭಕ್ತ ಎಂಬೂದರಲ್ಲಿ ಯಾವುದೇ ಸಂಶಯವೇ ಇಲ್ಲ. ಯಾಕೆಂದರೆ ದೇಶದ ವಿಚಾರದಲ್ಲಿ ಕಾಂಗ್ರೆಸ್ ಸದಾ ದೇಶವಿರೋಧಿಗಳಿಗೇ ಮಣೆ ಹಾಕಿತ್ತು‌. ಪಾಕಿಸ್ತಾನಕ್ಕೆ ಬೆಂಬಲ ನೀಡುವವರನ್ನು ಕಾಂಗ್ರೆಸ್ ಬೆಂಬಲಿಸುತ್ತಿತ್ತು. ಆದರೆ ಅಮರೇಂದರ್ ಸಿಂಗ್ ಕಾಂಗ್ರೆಸ್ ನ ಎಲ್ಲಾ ತತ್ವಗಳಿಗೂ ತದ್ವಿರುದ್ಧವಾಗಿ ನಡೆದುಕೊಂಡು ಬಂದವರು.

ಅಮರೇಂದರ್ ಸಿಂಗ್ ರವರ ತಂದೆ ಮಹಾರಾಜ ಯಧುವೀಂದ್ರ ಸಿಂಗ್ ಮತ್ತು ತಾಯಿ ಮಹಾರಾಣಿ ಮೊಹಿಂದರ್ ಕೌರ್. ಫುಲ್ಕಣಿ ರಾಜವಂಶದಲ್ಲಿ ಹುಟ್ಟಿದ ಅಮರೇಂದರ್ ಸಿಂಗ್ ಅಪ್ಪಟ ದೇಶಾಭಿಮಾನಿ ಎಂಬೂದಕ್ಕೆ ಬೇರೊಂದು ಉದಾಹರಣೆ ಬೇಕಾಗಿಲ್ಲ.  ಬಿಜೆಪಿ ಕೂಡಾ ದೇಶಪ್ರೇಮಿಗಳ ಪಕ್ಷವಾಗಿರುವುದರಿಂದ ಅಮರೇಂದರ್ ಸಿಂಗ್ ಬಿಜೆಪಿ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.

ಭಯೋತ್ಪಾದಕರಿಗೆ ಬೆಂಬಲ ನೀಡಿದ ನಟಿ ರಮ್ಯಾ..!

ಒಂದಲ್ಲ ಒಂದು ರೀತಿಯಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ರಮ್ಯಾ ಸದ್ಯ ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಮಂತ್ರಿ ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದರೂ , ಕೆನಡಾದ ಪ್ರಧಾನಿಗೆ ಭಾರತ ಗೌರವ ನೀಡಬೇಕು ಎಂದು ಹೇಳಿಕೊಂಡಿದ್ದಾಳೆ. ಜಸ್ಟಿನ್ ಟ್ರೂಂಡೊ ಗೆ ಭಾರತದಲ್ಲಿ ವಿಶೇಷ ಗೌರವ ನೀಡಬೇಕು. ಭಾರತೀಯ ನಾಯಕರು ಕೆನಡಾ ದ ಪ್ರಧಾನಿಯ ಜೊತೆ ಸ್ನೇಹದಿಂದ ನಡೆದುಕೊಳ್ಳಬೇಕೆಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಪಾಕಿಸ್ತಾನವನ್ನು ಸ್ವರ್ಗ ಎಂದು ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಕಾರಣವಾಗಿದ್ದರು.

ಇದೀಗ ಅಮರೇಂದರ್ ಸಿಂಗ್ ಕೂಡಾ ಬಿಜೆಪಿ ಸೇರುತ್ತಾರಾ ? ಎಂಬ ಸಂಶಯ ಹೆಚ್ಚಾಗುತ್ತಿದೆ. ಯಾಕೆಂದರೆ ಅಮರೇಂದರ್ ಸಿಂಗ್ ಗೆ ಈ ಹಿಂದೆ ಮೋದಿ ಮತ್ತು ಯೋಗಿ ಬೆಂಬಲ ನೀಡಿದ್ದರು‌. ಈ ಮೂಲಕ ಅಮರೇಂದರ್ ಸಿಂಗ್ ಗೆ ಬಿಜೆಪಿ ಮಣೆ ಹಾಕುವ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಕಾಂಗ್ರೆಸ್ ಕೈಯಲ್ಲಿರುವ ಪಂಜಾಬ್ ಕೂಡಾ ಬಿಜೆಪಿ ಪಾಲಾಗುವ ಭೀತಿಯಲ್ಲಿ ಕಾಂಗ್ರೆಸ್ ಕಂಗಾಲಾಗಿದೆ..!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close