ಪ್ರಚಲಿತ

ಮೋದಿ ಮಹಿಮೆ! ಉದ್ಘಾಟನೆಯಾದ ಒಂದು ಕಂಪನಿಯಲ್ಲಿ ಸೃಷ್ಟಿಯಾದ ಉದ್ಯೋಗವೆಷ್ಟು ಗೊತ್ತಾ..? ಇನ್ನೂ ಮೋದೀಜಿಯನ್ನು ತೆಗಳುತ್ತೀರಾ?

ತಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಉದ್ಯಮಕ್ಕೆ, ಅದರಲ್ಲೂ ಸ್ವದೇಶಿ ಉದ್ಯಮಕ್ಕೆ ಅತಿ ಹೆಚ್ಚು ಪ್ರೋತ್ಸಾಹವನ್ನು ನೀಡುತ್ತಿದ್ದ ಮೋದಿಯವರು ಪ್ರಧಾನಮಂತ್ರಿ ಆದ ನಂತರವೂ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಕೇವಲ ಉದ್ಯಮಶೀಲತೆ ಅಥವಾ ಭಾರತದ ಘನತೆ ಮಾತ್ರವೇ ಅಡಗಿರದೆ ದೇಶದ ನಿರುದ್ಯೋಗಿಗಳ ಉದ್ಯೋಗದ ದೂರದೃಷ್ಟಿಯೂ ಅಡಗಿರುತ್ತದೆ. ಇಂತಹಾ ಮತ್ತೊಂದು ಕ್ಷಣ ಇದೀಗ ಎದುರಾಗಿದೆ.

ನೋಯ್ಡಾದಲ್ಲಿ ವಿಶ್ವದಿಗ್ಗಜ ಮೊಬೈಲ್ ಕಂಪನಿ.!

ಇತ್ತೀಚೆಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಜಗತ್ತಿನ ಅತಿದೊಡ್ಡ ಮೊಬೈಲ್ ಕಂಪನಿಯೊಂದು ಉದ್ಘಾಟನೆಗೊಂಡಿದೆ. ಇದರ ಉದ್ಘಾಟನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾಡಿದ್ದಾರೆ. ಇದು ವಿಶ್ವದಲ್ಲಿ ಭಾರೀ ಮನ್ನಣೆ ಪಡೆದಿದ್ದ ಸ್ಯಾಮ್‍ಸಂಗ್ ಮೊಬೈಲ್ ಕಂಪನಿ. ಬರೋಬ್ಬರಿ 35 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ಕಂಪನಿ ಜಗತ್ತಿನ ಅತಿದೊಡ್ಡ ಕಂಪನಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಕಂಪನಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು  ಉದ್ಘಾಟಿಸಿದ್ದರು.

ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾದ ಕನಸು!

ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದ ಕೂಡಲೇ ಹಲವಾರು ವಿಭಿನ್ನ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದರಲ್ಲಿ ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಕೂಡಾ. ಜಗತ್ತಿನ ಅತೀದೊಡ್ಡ ಉದ್ಯಮಿಗಳಿಂದ ಹಿಡಿದು ಅತೀಸಣ್ಣ ಉದ್ದಿಮೆದಾರರಿಗೂ ಸಹಾಯವಾಗುವ ಮೇಕ್ ಇನ್ ಇಂಡಿಯಾ ಯೋಜನೆ ಇಂದು ಯಶಸ್ಸಿನ ಹಂತದಲ್ಲಿದೆ. ಸ್ಕಿಲ್ ಇಂಡಿಯಾ ಕೂಡಾ ಪ್ರಧಾನಿ ಮೋದಿ ಕನಸನ್ನು ನನಸು ಮಾಡುತ್ತಿದೆ. ಈ ಎರಡೂ ಯೋಜನೆಗಳೂ ಕೂಡಾ ಇತ್ತೀಚೆಗೆ ಉಧ್ಘಾಟನೆಗೊಂಡ ಮೊಬೈಲ್ ಕಂಪನಿಯಲ್ಲಿ ಅಡಗಿಕೊಂಡಿದೆ.

Image result for samsungmodi make in india

ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಗೊತ್ತಾ..?  

ಮೋದಿ ಚುನಾವಣೆಗೂ ಮುನ್ನ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ ಪ್ರಧಾನಿಯಾದ ನಂತರ ಉದ್ಯೋಗನೇ ಸಿಕ್ತಾ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದ ವಿರೋಧ ಪಕ್ಷಗಳಿಗೆ ಈ ಹಿಂದೆಯೇ ಮೋದಿ ಸರ್ಕಾರ ದಿಟ್ಟ ಉತ್ತರವನ್ನು ನೀಡಿತ್ತು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಸಾರಿಗೆ ಇಲಾಖೆಯಲ್ಲೇ ಬರೋಬ್ಬರಿ ಒಂದು ಕೋಟಿ ಉದ್ಯೋಗ  ಸೃಷ್ಟಿಯಾಗಿದೆ ಎಂದು ಸ್ವತಃ ಕೇಂದ್ರ ಸಚಿವ ನಿತಿನ್ ಗಡ್ಕರಿಯವರೇ ಮಾಹಿತಿ ನೀಡಿದ್ದರು.

ಇದೀಗ ಉತ್ತರ ಪ್ರದೇಶ ನೋಯ್ಡಾದಲ್ಲಿ ಇತ್ತೀಚೆಗೆ ಉಧ್ಘಾಟನೆಗೊಂಡಿರುವ ಜಗತ್ತಿನ ಅತಿದೊಡ್ಡ ಮೊಬೈಲ್ ಕಂಪನಿ ಸ್ಯಾಮ್ ಸಂಗ್ ಸ್ಮಾರ್ಟ್‍ಫೋನ್ ಕಂಪನಿಯೊಂದರಲ್ಲಿ 70,000 ಉದ್ಯೋಗ ಸೃಷ್ಟಿಯಾಗಿದೆ. ಕೇವಲ ಒಂದು ಕಂಪನಿಯಲ್ಲಿ 70,000 ಉದ್ಯೋಗ ಸೃಷ್ಟಿಯಾಗಬೇಕಾದರೆ ಇದರ ಹಿಂದೆ ಪ್ರಧಾನಿ ಮೋದಿಯವರ ದೂರದೃಷ್ಟಿ ಅಡಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

Image result for modi make in india company

ಮೇಡ್ ಇನ್ ಇಂಡಿಯಾ ಹ್ಯಾಂಡ್‍ಸೆಟ್…

ಈವರೆಗೂ ಮೇಡ್ ಇನ್ ಚೈನಾ, ಮೇಡ್ ಇನ್ ಜಪಾನ್ ಎಂದೆಲ್ಲಾ ಉತ್ತಮ ಉತ್ಪಾದನೆಯನ್ನು ಕಂಡು ಬೇಸರಿಸುತ್ತಿದ್ದ ಭಾರತೀಯರು ಇನ್ನು ಮುಂದೆ “ಮೇಡ್ ಇನ್ ಇಂಡಿಯಾ” ಎಂಬ ಉತ್ತಮ ಉತ್ಪನ್ನವನ್ನು ಉಪಯೋಗಿಸಲಿದ್ದಾರೆ. ನೋಯ್ಡಾದಲ್ಲಿ ಆರಂಭವಾಗಿರುವ ಸ್ಯಾಮ್‍ಸಂಗ್ ಕಂಪನಿಯಲ್ಲಿ ಬರೋಬ್ಬರಿ 5.3ಕೋಟಿ ಮೇಡ್ ಇನ್ ಇಂಡಿಯಾ ಹ್ಯಾಂಡ್ ಸೆಟ್ ತಯಾರಾಗಲಿದೆ. ಈ ಮೂಲಕ ಜಗತ್ತಿನ ಅತಿದೊಡ್ಡ ಮೊಬೈಲ್ ಕಂಪನಿಯು ಮೇಡ್ ಇನ್ ಇಂಡಿಯಾದ್ದಾಗಲಿದೆ.

4,915 ಕೋಟಿ ರೂಗಳನ್ನು ಸ್ಯಾಮ್ ಸಂಗ್ ಕಂಪನಿ ಹೂಡಿಕೆ ಮಾಡಿದೆ. ಈ ಎಲ್ಲಾ ಬೆಳವಣಿಗೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಿದ್ದು ಗ್ರಾಹಕರಿಗೂ ಅತೀ ಕಡಿಮೆ ಬೆಲೆಯಲ್ಲಿ ಸ್ಯಾಮ್ಸಂಗ್ ಮೊಬೈಲ್ ಕೈಸೇರಲಿದೆ. ಇದು ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಆಗಿದ್ದು ಭಾರತವೇ ಹೆಮ್ಮೆ ಪಡುವಂತಾಗಿದೆ.

Related image

ಮೋದಿ ಅಧಿಕಾರಕ್ಕೆ ಬಂದ ನಂತರ ಉದ್ಯೋಗ ಸೃಷ್ಟಿ ಮಾಡಿಲ್ಲ ಎನ್ನುತ್ತಿರುವ ವಿರೋಧಿಗಳಿಗೆ ಇದು ದಾಖಲೆ ಸಮೇತ ಉತ್ತರವಾಗಿದೆ. ಇದು ಕೇವಲ ಒಂದು ಕಂಪನಿಯ ಉದ್ಯೋಗದ ವಿಚಾರವಾಗಿದ್ದು, ಇನ್ನು ಇನ್ನಿತರ ಇಲಾಖೆಗಳಲ್ಲಿ ಅನೇಕ ಉದ್ಯೋಗಳನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ. ಇದೀಗ ನೂತನವಾಗಿ ಉಧ್ಘಾಟನೆಗೊಂಡ ಕಂಪನಿಯಲ್ಲಿ ಕೂಡಾ 70000 ಉದ್ಯೋಗ ಸೃಷ್ಟಿಯಾಗಿದ್ದು ಮತ್ತೊಂದು ದಾಖಲೆಯನ್ನು ಮೋದಿ ಮಾಡಿದ್ದಾರೆ. ಜಗತ್ತಿನ ಅತಿದೊಡ್ಡ ಉದ್ಯಮಗಳು ಭಾರತಕ್ಕೆ ಬರಲು ಹೆದರುತ್ತಿದ್ದು ಇದೀಗ ಮೋದಿ ಕಾರಣದಿಂದಾಗಿ ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close