ಪ್ರಚಲಿತ

ರೇಷ್ಮೆ ಬೆಳೆಗಾರರಿಗೆ ಸಿಗಲಿದೆ ಕೇಂದ್ರ ಸರ್ಕಾರದ ಬಂಪರ್ ಆಫರ್!! ಅಷ್ಟಕ್ಕೂ ರೇಷ್ಮೆ ಬೆಳೆಗಾರರಿಗೆ ನೀಡುವ ವಿನೂತನವಾದ ಸೌಲಭ್ಯವಾದರೂ ಏನು ಗೊತ್ತೇ??

ಈಗಾಗಲೇ ಕೇಂದ್ರ ಸರ್ಕಾರವು ರೈತರಿಗಾಗಿ ನಾನಾ ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರ ಲಾಭಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನ್ ಮಂತ್ರಿ ಸಿಂಚಾಯಿ ಯೋಜನೆ, ಪರಂಪರಾಗತ್ ಕೃಷಿ ವಿಕಾಸ್ ಯೋಜನೆ ಸೇರಿದಂತೆ ಬೆಳೆ ವಿಮೆ ಯೋಜನೆಗಳಂತಹ ನಾನಾ ಯೋಜನೆಗಳನ್ನು ಜಾರಿಗೊಳಿಸಿರುವ ವಿಚಾರ ತಿಳಿದೇ ಇದೆ. ಅಷ್ಟೇ ಅಲ್ಲದೇ ದೇಶದಲ್ಲಿ ಕೃಷಿಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಾನಾ ಯೋಜನೆಗಳನ್ನು ಜಾರಿ ಗೊಳಿಸಿರುವ ಕೇಂದ್ರ ಸರ್ಕಾರವು ಇದೀಗ ಮತ್ತೊಂದು ವಿನೂತನವಾದ ಯೋಜನೆಯೊಂದನ್ನು ಕೃಷಿಕರಿಗಾಗಿ ನೀಡಿದೆ.

ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇದೀಗ ರೇಷ್ಮೆಯ ಬಗ್ಗೆ ವಿಶೇಷವಾದ ಒಲವು ತೋರಿದ್ದು, ದೇಶದಲ್ಲಿ ಮೊದಲ ರೇಷ್ಮೆ ಬ್ಯಾಂಕ್ ಸ್ಥಾಪಿಸುವ ಯೋಜನೆಯೊಂದನ್ನು ಕೈಗೊಂಡಿರುವುದೇ ಹೆಮ್ಮೆಯ ವಿಚಾರವಾಗಿದೆ. ನೂಲು ಮಾರಾಟ ಮತ್ತು ಖರೀದಿಗೆ ಅನುಕೂಲವಾಗಲು ರೇಷ್ಮೆ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಿದ್ದು, ಪರೋಕ್ಷವಾಗಿ ರೇಷ್ಮೆ ಬೆಳೆಗಾರರಿಗೆ ಈ ಒಂದು ಯೋಜನೆ ಅನುಕೂಲವಾಗಲಿದೆ.

ಈ ಬಾರಿಯ ಬಜೆಟ್ ವೇಳೆ ಕೃಷಿಗೆ ಹೆಚ್ಚಿನ ಒಲವು ನೀಡಿರುವ ಕೇಂದ್ರ ಸರ್ಕಾರವು ಕೃಷಿಗೆ ಪ್ರಥಮ ಆದ್ಯತೆಯನ್ನು ನೀಡಿದೆ. ಅಷ್ಟೇ ಅಲ್ಲದೇ ಎಲ್ಲಿಯವರೆಗೆ ಕೃಷಿಯಿಂದ ಬರುವ ಆದಾಯ ಸ್ಪಷ್ಟ ಹಾಗೂ ಅರ್ಹರಿಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ಸಮರ್ಥನೀಯ ಮತ್ತು ನ್ಯಾಯ ಸಮ್ಮತವಾದ ಆರ್ಥಿಕ ಏಳಿಗೆ ಅಸಾಧ್ಯ!! ಹಾಗಾಗಿ ಕೇಂದ್ರ ಸರ್ಕಾರದ ನೆರವು ಲಭ್ಯವಾಗಿಸುವ ಮೂಲಕ ಕೃಷಿಕರಿಗೆ ಹೆಚ್ಚಿನ ಉಪಯೋಗ ಆಗಲಿರುವುದಂತೂ ಅಕ್ಷರಶಃ ನಿಜ!!

ಅಷ್ಟಕ್ಕೂ ದೇಶದ ಮೊದಲ ರೇಷ್ಮೆ ಬ್ಯಾಂಕ್ ಸ್ಥಾಪಿಸುವುದಾದರೂ ಎಲ್ಲಿ ಗೊತ್ತೇ??

ಕೃಷಿಕರಿಗೆ ಉತ್ತೇಜನ ನೀಡುವ ಸಲುವಾಗಿ ನೂಲು ಮಾರಾಟ ಮತ್ತು ಖರೀದಿಗೆ ಅನುಕೂಲವಾಗಲು ರೇಷ್ಮೆ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಿದ್ದು, ಇದಕ್ಕೆ ಆರಂಭಿಕವಾಗಿ ಕೇಂದ್ರದಿಂದ ಐದು ಕೋಟಿ ರೂಪಾಯಿ ನೀಡಲಾಗುವುದು ಎಂದು ಜವಳಿ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಪ್ರಕಟಿಸಿದ್ದಾರೆ. ಹೌದು.. ಅಷ್ಟಕ್ಕೂ ದೇಶದ ಮೊದಲ ರೇಷ್ಮೆ ಬ್ಯಾಂಕ್ ಸ್ಥಾಪಿಸುವುದಾದರೂ ಎಲ್ಲಿ ಗೊತ್ತೇ?? ಅದೂ ಬೇರೆಲ್ಲೂ ಅಲ್ಲ ಕನ್ನಡಿಗರ ನಾಡು ಎಂದೆನಿಸಿರುವ ಕರ್ನಾಟಕದಲ್ಲಿಯೇ ಅನ್ನೋದು ಹೆಮ್ಮೆಯ ವಿಚಾರವಾಗಿದೆ!!!

ನಗರದ ಅಶೋಕ ಹೋಟೆಲ್‍ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರದರ್ಶನ ಮೇಳ “ಟೆಕ್ಸ್‍ಟೈಲ್ ಇನ್ ಕರ್ನಾಟಕ’ಕ್ಕೆ ಚಾಲನೆ ನೀಡಿ ಮಾತಾನಾಡಿದ ಜವಳಿ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಇದೇ ಮಾದರಿಯಲ್ಲಿ ರೇಷ್ಮೆ ಕೋಶ ಸ್ಥಾಪನೆಗೆ ಯಾರಾದರೂ ಮುಂದೆ ಬಂದರೆ, ಅದಕ್ಕೂ ತಲಾ ಐದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಈ ವಿನೂತನ ಬ್ಯಾಂಕಿನಿಂದ ನೇರವಾಗಿ ರೀಲರ್‍ಗಳು, ನೇಕಾರರು ಮತ್ತು ಪರೋಕ್ಷವಾಗಿ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಬೆಳೆಗಾರರಿಂದ ಗೂಡು ಖರೀದಿಸುವ ರೀಲರ್‍ಗಳು, ಅದರಿಂದ ನೂಲು ತೆಗೆಯುತ್ತಾರೆ.

ಆದರೆ ಕೆಲವು ಸಲ ನೂಲು ಖರೀದಿಗೆ ನೇಕಾರರು ಮುಂದೆ ಬರುವುದೇ ಇಲ್ಲ ಇದರಿಂದಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದ್ದು, ಇದು ಪರೋಕ್ಷವಾಗಿ ರೈತರ ಮೇಲೂ ಪರಿಣಾಮ ಬೀರುತ್ತಿದೆ. ಈಗ ರೇಷ್ಮೆ ಕೋಶದಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾದರೆ, ರೀಲರ್‍ಗಳು ರೇಷ್ಮೆ ನೂಲುಗಳನ್ನು ಈ ಬ್ಯಾಂಕಿನಲ್ಲಿ ಇಟ್ಟು, ಮುಂಗಡ ಹಣ ಪಡೆಯಬಹುದು. ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ರೀಲರ್‍ಗಳಿದ್ದು, ಎರಡು ಲಕ್ಷಕ್ಕೂ ಹೆಚ್ಚು ರೇಷ್ಮೆ ಉತ್ಪಾದಕರಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ!!

ಇದಿಷ್ಟೇ ಅಲ್ಲದೇ ಕರ್ನಾಟಕದಲ್ಲಿ ರೇಷ್ಮೆ ಬ್ಯಾಂಕ್ ಸ್ಥಾಪಿಸುವುದರ ಜೊತೆಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿಯೂ ಸ್ಮೃತಿ ಇರಾನಿ ತಿಳಿಸಿದ್ದು, ಇಂಡಸ್ತ್ರೀ ಪ್ರಸ್ತಾಪಿಸುವ ಯಾವುದೇ ರೇಷ್ಮೆ ಬ್ಯಾಂಕ್ ಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಟೆಕ್ಸ್ ಟೈಲ್ ವಲಯದ ಗ್ರಾಹಕ-ವ್ಯಾಪಾರಿಗಳ ಸಮಾವೇಶವನ್ನು ಉದ್ದೇಶಿಸಿ ಮಾತಾನಾಡಿದ ಜವಳಿ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಪವರ್ ಟೆಕ್ಸ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಅನು ಬಿಡುಗಡೆಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಟೆಕ್ಸ್ ಟೈಲ್ ಪಾರ್ಕ್ ಗೆ ಭೂಮಿ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದಾರೆ.

ಏನಿದು ಜವಳಿ ಪಾರ್ಕ್??

ಒಂದೇ ಸೂರಿನಡಿ ಎಲ್ಲ ಸೌಲಭ್ಯ ಒದಗಿಸುವ ಹಾಗೂ ಜವಳಿ ಉದ್ಯಮಕ್ಕೆ ಸಂಬಂಧಿಸಿದ ವೈವಿಧ್ಯಮಯ ಕೈಗಾರಿಕಾ ಘಟಕಗಳ ಸಮೂಹವೇ ಈ ಟೆಕ್ಸ್‍ಟೈಲ್ ಪಾರ್ಕ್. ಬಂಡವಾಳ ಹೂಡಿಕೆದಾರರು ಕೇಂದ್ರ ಸರ್ಕಾರದ ವಿಶೇಷ ಯೋಜನೆಯಾದ “ಸ್ಪೆಷಲ್ ಪರ್ಪಸ್ ವೆಹಿಕಲ್” (ಎಸ್‍ಪಿವಿ) ಮೂಲಕ ನೋಂದಣಿ ಮಾಡಿಕೊಳ್ಳಬೇಕು. ತದ ನಂತರ ಟೆಕ್ಸ್‍ಟೈಲ್ ಪಾರ್ಕ್ ಪ್ರದೇಶದಲ್ಲಿ ನಿವೇಶನ ಗುರುತಿಸಿ ಖರೀದಿಸಬೇಕು. ಇದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ (ಕೆಐಎಡಿಬಿ) ಮೂಲಕ ನಿವೇಶನ ವಶಪಡಿಸಿಕೊಂಡ ನಂತರ ಸಹಾಯಧನ (ಸಬ್ಸಿಡಿ) ಸಿಗುತ್ತದೆ.

ಕೃಷಿ ಕ್ಷೇತ್ರದ ನಂತರ ಅತಿ ಹೆಚ್ಚು ಉದ್ಯೋಗ ನೀಡುವಂತಹ ಕ್ಷೇತ್ರ ಎಂದರೆ ಅದು ಜವಳಿ ಉದ್ಯಮ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಕೈಮಗ್ಗ ನೇಕಾರರು, ವಿದ್ಯುತ್ ಮಗ್ಗದವರ ಜತೆಗೇ ಸಿದ್ಧ ಉಡುಪು ತಯಾರಿಕಾ ಘಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಇವುಗಳೊಂದಿಗೆ, ಜಿಲ್ಲೆಯಲ್ಲಿ ಐದು ಕೈಮಗ್ಗ ಸಹಕಾರ ಸಂಘಗಳು, ಮೂರು ವಿದ್ಯುತ್ ಮಗ್ಗದ ಸಂಘಗಳು ಹಾಗೂ 20 ಜವಳಿ ಘಟಕಗಳು ಇವೆ. ಆದರೆ ಇದೀಗ 100 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಮಾಡುವುದಾಗಿಯೂ ಸ್ಮೃತಿ ಇರಾನಿ ತಿಳಿಸಿದ್ದು, ಇಂಡಸ್ತ್ರೀ ಪ್ರಸ್ತಾಪಿಸುವ ಯಾವುದೇ ರೇಷ್ಮೆ ಬ್ಯಾಂಕ್ ಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಭೂಮಿ ನೀಡುವುದಾದರೆ ಹಾಗೂ ಹೂಡಿಕೆದಾರರು ಮುಂದೆ ಬಂದರೆ, ಯೋಜನೆಗೆ ಸಂಬಂಧಿಸಿದಂತೆ ವಿಶೇಷ ಉದ್ದೇಶ ವಾಹನ (ಎಸ್‍ಪಿವಿ) ರಚಿಸಿ, ಜವಳಿ ಪಾರ್ಕ್ ಸ್ಥಾಪನೆಗಾಗಿ ಕೇಂದ್ರವು ಶೇ. 40ರಷ್ಟು ಸಬ್ಸಿಡಿ ರೂಪದಲ್ಲಿ ಅನುದಾನ ನೀಡಲಿದೆ!! ಅಷ್ಟೇ ಅಲ್ಲದೇ ರೇಷ್ಮೆ ಆಮದು ಸುಂಕವನ್ನು ಕಳೆದ ಬಜೆಟ್‍ನಲ್ಲಿ ಶೇ. 10 ರಿಂದ 20 ರಷ್ಟು ಹೆಚ್ಚಿಸಲಾಗಿದ್ದು, ಈ ಮೂಲಕ ಕೇಂದ್ರ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಬಂಪರ್ ಆಫರ್ ನೀಡಿದೆ!!

– ಅಲೋಖಾ

 

Tags

Related Articles

FOR DAILY ALERTS
 
FOR DAILY ALERTS
 
Close