ದೇಶ

ರಾಷ್ಟ್ರ ರಕ್ಷಣೆಗಾಗಿ ಮೋದಿ ಸರಕಾರದ ರಹಸ್ಯಮಯಿ ಯೋಜನೆ!! ದೇಶದ ಪರಮಾಣು ನೌಕೆಗಳನ್ನು ನಿರ್ಮಿಸಲು ಮತ್ತು ರಕ್ಷಿಸಲು ಸಮುದ್ರದಾಳದಲ್ಲಿ ಭೂಗತ ನೌಕಾನೆಲೆ ನಿರ್ಮಾಣ!!

ಶತ್ರುಗಳ ಮೇಲೆ ಆಕಾಶ-ಭೂಮಿ ಮತ್ತು ಸಾಗರದಾಳದಿಂದಲೂ ಆಕ್ರಮಣ ಮಾಡಲು ರಣನೀತಿಯನ್ನು ತಯಾರಿಸುತ್ತಿದೆ ಮೋದಿ ಸರಕಾರ. ದೇಶದ ಇತಿಹಾಸದಲ್ಲಿ ಇದುವರೆಗೂ ಕಂಡು ಕೇಳರಿಯದ ರೀತಿಯಲ್ಲಿ ದಶದಿಕ್ಕಿನಿಂದಲೂ ಭಾರತವನ್ನು ರಕ್ಷಿಸುತ್ತಿದೆ ಭಾರತೀಯ ರಕ್ಷಣಾ ಪಡೆಗಳು. ಇದಕ್ಕೆಲ್ಲ ಕಾರಣ ಮೋದಿ ಅವರ “ದೇಶ ಮೊದಲು” ಎನ್ನುವ ನೀತಿ. ದೇಶದ ರಕ್ಷಣೆಯ ವಿಷಯದಲ್ಲಿ ತೃಣ ಮಾತ್ರದ ಲೋಪವನ್ನೂ ಮೋದಿ ಸಹಿಸಲಾರರು. ದೇಶ ರಕ್ಷಣೆಗಾಗಿ ಸಾಗರದಡಿಯಲ್ಲಿ ಭೂಗತ ರಹಸ್ಯ ನೌಕಾ ನೆಲಯನ್ನು ನಿರ್ಮಿಸುವ ಕೆಲಸಕ್ಕೆ ಈಗಾಗಲೆ ಶ್ರೀ ಗಣೇಶ ಹಾಡಿದೆ ಮೋದಿ ಸರಕಾರ. ಈ ಯೋಜನೆಗೆ ಪ್ರೊಜೆಕ್ಟ್ ವರ್ಷ ಎಂದು ಹೆಸರಿಡಲಾಗಿದೆ.

ಏನಿದು ಪ್ರೊಜೆಕ್ಟ್ ವರ್ಷ ಯೋಜನೆ?

ಮೋದಿ ಸರಕಾರದ ಪ್ರಾಜೆಕ್ಟ್ ವರ್ಷದಡಿಯಲ್ಲಿ ಭಾರತೀಯ ನೌಕಾದಳಕ್ಕೆ ಹೊಸ ನೌಕಾ ನೆಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯ ಅನ್ವಯ INS ವರ್ಷ ಎಂಬ ನೌಕಾನೆಲೆಯನ್ನು ಸ್ಥಾಪಿಸಲಾಗುತ್ತಿದೆ. ಇದು ವಿಶೇಷವಾಗಿ ನೌಕಾಪಡೆಯ ಹೊಸ ಪರಮಾಣು ಜಲಾಂತರ್ಗಾಮಿ ನೌಕೆಗಳ ಮತ್ತು ಹಡಗುಗಳ ತಂಗುದಾಣವಾಗಲಿದೆ. ವಿಶಾಖಪಟ್ಟಣದಿಂದ 50 ಕಿ.ಮೀ ದೂರದಲ್ಲಿರುವ ರಂಬಿಲ್ಲಿಯಲ್ಲಿ ಈ ನೌಕಾನೆಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ವಿಶಾಖಪಟ್ಟಣ ಬಂದರಿನಲ್ಲಿ ನಾಗರಿಕ ಹಡಗುಗಳು ಮತ್ತು ನೌಕಾ ಪಡೆಯ ಹಡಗುಗಳೂ ಲಂಗರು ಹಾಕುವುದರಿಂದ ಅಲ್ಲಿ ಜಾಗದ ಸಮಸ್ಯೆ ತಲೆದೋರುತ್ತಿದೆ. ಅಲ್ಲದೆ ನೌಕಾ ಪಡೆಯ ಹಡಗುಗಳನ್ನು ಅಲ್ಲಿ ನಿಲ್ಲಿಸುವುದು ಭದ್ರತೆ ದೃಷ್ಟಿಯಿಂದಲೂ ಅನುಕೂಲಕರವಲ್ಲ.

ಹಾಗಾಗಿ ಮೋದಿ ಸರಕಾರ ಪ್ರೊಜೆಕ್ಟ್ ವರ್ಷವನ್ನು ಕಾರ್ಯಗತಗೊಳಿಸಿದೆ. ವರ್ಷಾ ನೌಕಾ ನೆಲೆಯು ಭಾಭಾ ಅಟಾಮಿಕ್ ರಿಸರ್ಚ್ ಸೆಂಟರಿನ (BARC) ಸೌಲಭ್ಯವನ್ನು ಹೊಂದಿರುತ್ತದೆ ಮತ್ತು ಆಧುನಿಕ ಪರಮಾಣು ಇಂಜಿನಿಯರಿಂಗ್ ಬೆಂಬಲ ಸೌಲಭ್ಯಗಳು ಮತ್ತು ವ್ಯಾಪಕವಾದ ಸಿಬ್ಬಂದಿ ಸೌಕರ್ಯಗಳನ್ನು ಕೂಡಾ ಹೊಂದಲಿದೆ. ಶತ್ರು ಪಡೆಯ ಮೇಲೆ ದಾಳಿ ಮಾಡುವಂತಹ 8-12 ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ದಾಳಿ ನಡೆಸುವ ಸಬ್ ಮರೀನಗಳ ನಿರ್ಮಾಣ ಕಾರ್ಯ ಇಲ್ಲಿ ನಡೆಯಲಿದೆ. ಈ ಯೋಜನೆಯ ಕಾರ್ಯತಂತ್ರದ ತಾಂತ್ರಿಕ ಪ್ರದೇಶದ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನಿರ್ಮಿಸಲು ರಂಬಿಲ್ಲಿಯಲ್ಲಿ 670 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಕೇಂದ್ರ ಸರಕಾರವು ನೌಕಾನೆಲೆಗೆ ಹಸ್ತಾಂತರಿಸಿದೆ. ಮೊದಲನೆ ಹಂತದ ಕೆಲಸ ಭರದಿಂದ ಸಾಗುತ್ತಿದೆ ಎನ್ನಲಾಗಿದೆ.

ಶತ್ರುಗಳ ಗೂಢಚಾರ ಉಪಗ್ರಹಗಳಿಂದ ಜಲಾಂತರ್ಗಾಮಿಗಳನ್ನು ಮರೆಮಾಡಲು ಮತ್ತು ಶತ್ರುವಿನ ವಾಯುದಾಳಿಯಿಂದ ನೌಕೆಗಳನ್ನು ರಕ್ಷಿಸಲು ಭೂಗತ ನೆಲೆಗಳನ್ನೂ ಮಾಡಲಾಗಿದೆ. ಈ ನೌಕಾನೆಲೆ ಯೋಜನೆಯನ್ನು ಚೀನಾದ ಪಿಎಲ್ಎ ನೌಕಾಪಡೆಯ ಅತ್ಯಂತ ರಹಸ್ಯ ಮಯ “ಹೈನನ್” ಪರಮಾಣು ಜಲಾಂತರ್ಗಾಮಿ ನೆಲೆ ಯೋಜನೆಗೆ ಹೋಲಿಸಲಾಗಿದೆ! ಮೋದಿ ಸರಕಾರದ ‘ಲುಕ್ ಈಸ್ಟ್ ಪಾಲಿಸಿ’ ಮತ್ತು ‘ಟಾರ್ಗೆಟ್ ಚೈನಾ’ ನೀತಿಯನ್ವಯ ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಇನ್ನೂ ಒಂದು ವಿಶೇಷವೆಂದರೆ ಈ ನೌಕಾನೆಲೆಯ ಸುಪರ್ದಿಯನ್ನು ನೇರವಾಗಿ ಪ್ರಧಾನಮಂತ್ರಿ ಕಾರ್ಯಾಲಯವೆ ವಹಿಸಿಕೊಂಡಿದೆ ಎನ್ನಲಾಗಿದೆ!

ಭಾರತದಲ್ಲಿ ಸದ್ಯದ ಮಟ್ಟಿಗೆ INS ಅರಿಹಂತ್ ಮತ್ತು INS ಚಕ್ರ ಇವೆರಡೆ ಜಲಾತಂರ್ಗಾಮಿ ಪರಮಾಣು ನೌಕೆಗಳಾಗಿವೆ. ಶತ್ರು ದಾಳಿಯಿಂದ ಈ ನೌಕೆಗಳನ್ನು ರಕ್ಷಿಸಲು ಮತ್ತು ಅರಿಹಂತ್ ನಂತೆಯೆ ಇನ್ನಿತರ ಪರಮಾಣು ನೌಕೆಗಳನ್ನು ನಿರ್ಮಾಣ ಮಾಡಲು ಈ ಯೋಜನೆಗೆ ಜೀವ ತುಂಬಲಾಗಿದೆ. 2009 ರಲ್ಲಿ ಶುರುವಾಗಿ 2014ರೊಳಗೆ ಮುಗಿಯಬೇಕಾಗಿದ್ದ ಈ ಯೋಜನೆ, ಯೂಪಿಎ ಕಾಲದಲ್ಲಿ ಕೈ-ಕಮಾಂಡಿನ ನಿರಾಸಕ್ತಿಯಿಂದಾಗಿ ನೆನೆಗುದಿಗೆ ಬಿದ್ದಿತ್ತು. ಭಾರತವನ್ನು ನಿರ್ನಾಮ ಮಾಡಲೆಂದೆ ಬಂದವರು ಭಾರತದ ರಕ್ಷಣೆಯ ಭಾರ ಹೊರುವರೆ? ಮೇಡಮ್ ಜಿ ಅನ್ನು ಭಾರತಕ್ಕೆ ಕಳುಹಿಸಿದ್ದೆ ದೇಶ ಒಡೆಯಲು. ಆದರೆ ಭಾರತದ ಜನತೆ ಮೋದಿಯನ್ನು ಗೆಲ್ಲಿಸಿದ್ದೆ ದೇಶ ರಕ್ಷಿಸಲು. ಜನತೆ ತನ್ನ ಮೇಲೆ ಇಟ್ಟ ಭರವಸೆ ಮತ್ತು ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಪ್ರಧಾನ ಸೇವಕ ಮೋದಿ.

2011-12ರ ಬಜೆಟ್ನಲ್ಲಿ 160 ಕೋಟಿ ರುಪಾಯಿಗಳನ್ನು ಯೋಜನೆಗಾಗಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 58 ಕೋಟಿ ರೂ.ಸಿವಿಲ್ ಕೆಲಸಕ್ಕೆ ಮತ್ತು 100 ಕೋಟಿ ವಿಎಲ್ಎಫ್ ಸಂವಹನ ವ್ಯವಸ್ಥೆಗೆ ಎಂದು ನಿರ್ಧರಿಸಲಾಗಿತ್ತು. 2013-14ನೇ ಸಾಲಿನಲ್ಲಿ 547 ಕೋಟಿ ರೂ ಬಿಡುಗಡೆಯಾಗಿತ್ತು. 2015-16ರ ಬಜೆಟಿನಲ್ಲಿ 531 ಕೋಟಿ ರೂ ಈ ಯೊಜನೆಗಾಗಿ ಎತ್ತಿಡಲಾಗಿದೆ. ಯೂಪಿಎ ಕಾಲದಲ್ಲಿ ಯೋಜನೆ ನೆನೆಗುದಿಗೆ ಬಿದ್ದಿದ್ದರಿಂದ ಖರ್ಚಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗಿದೆ.

ಇನ್ನು ಮುಂದೆ ಭಾರತೀಯ ನೌಕಾ ಸೇನೆಯ ಜಲಾಂತರ್ಗಾಮಿ ನೌಕೆಗಳು ಸಮುದ್ರದಾಳದಲ್ಲಿ ನೀರಿನ ಸುರಂಗಮಾರ್ಗಗಳ ಮೂಲಕ ಯಾವ ಉಪಗ್ರಹದ ಕಣ್ಣಿಗೂ ಬೀಳದೆ ನೌಕಾನೆಲೆಯ ಒಳಗೆ ಪ್ರವೇಶಿಸಬಹುದು ಮತ್ತು ನಿರ್ಗಮಿಸಬಹುದು. ಇಂತಹ ಒಂದು ಯೋಜನೆಯನ್ನು ಕಾರ್ಯಗತಗೊಳಿಸಿ ಸ್ವತಃ ಮೇಲ್ವಿಚಾರಣೆ ನೋಡುತ್ತಿರುವ ಮೋದಿಜಿ ಅವರ ನಾಯಕತ್ವಕ್ಕೆ ನಮೋ ಎನ್ನಲೆಬೇಕು. ಮೋದಿ ಎಂಬ ದೇಶಪ್ರೇಮಿಯ ದೇಶಪ್ರೇಮದ ಪರಿಯನ್ನು ಬಣ್ಣಿಸಲು ಪದಗಳೆ ಸಾಲದು. ರಷ್ಯಾದಲ್ಲಿ ಪುತಿನ್ ಮತ್ತು ಚೀನಾದಲ್ಲಿ ಜಿನ್ ಪಿಂಗ್ ಹೇಗೆ ಅಜೀವ ಪ್ರಧಾನಮಂತ್ರಿಗಳಾದರೋ ಅದೆ ರೀತಿ ಭಾರತದಲ್ಲಿ ಮೋದಿಯೆ ಆಜೀವನ ಪರ್ಯಂತ ಪ್ರಧಾನಮಂತ್ರಿಯಾಗಿರಲಿ. ಭಾರತ ವಿಶ್ವದ ಬಲಿಷ್ಟ ರಾಷ್ಟ್ರವಾಗಲಿ.

-ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close