ಪ್ರಚಲಿತ

ಮೋದಿ ಸರಕಾರ ಮಹಿಳೆಯರಿಗಾಗಿ ತಂದ ಈ ಅದ್ಧುತ ಯೋಜನೆಯಿಂದಾಗಿ ಇನ್ನು ಎರಡು ದಶಕಗಳಷ್ಟು ಕಾಲ ಸೋಲಿಸುವುದು ಅಸಾಧ್ಯ!!

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಂದಿನಿಂದಲೂ ದೇಶವನ್ನು ಅಭಿವೃದ್ಧಿಯ ಪಥದತ್ತ ಮುನ್ನುಗ್ಗುವಂತೆ ಮಾಡಲು ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ತಂತ್ರಗಳನ್ನು ಹೂಡಿರುವ ವಿಚಾರ ತಿಳಿದೇ ಇದೆ!! ಇದರೊಂದಿಗೆ ದೇಶದಲ್ಲಿ ಮಹಿಳೆಯರಿಗಾಗಿ ವಿಶೇಷ ಸ್ಥಾನಮಾನವನ್ನು ಕಲ್ಪಿಸುತ್ತಿರುವ ನರೇಂದ್ರ ಮೋದಿ ಸರ್ಕಾರವು ಈಗಾಗಲೇ ನಾನಾ ರೀತಿಯ ಯೋಜನೆಗಳನ್ನು ಜಾರಿ ತಂದಿದ್ದು, ಇದೀಗ ಮತ್ತೊಂದು ವಿನೂತನ ಯೋಜನೆಯೊಂದನ್ನು ಮಹಿಳೆಯರಿಗಾಗಿ ಜಾರಿಗೊಳಿಸಿದೆ.

ಹೌದು… ಈಗಾಗಲೇ ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ನಾನಾ ಯೋಜನೆಗಳನ್ನು ಜಾರಿಗೊಳಿಸಿರುವ ನರೇಂದ್ರ ಮೋದಿ ಸರ್ಕಾರವು ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮಹಿಳೆಯರ ಆರೋಗ್ಯಕ್ಕೆ ಸಹಾಯವಾಗುವ “ಸುವಿಧಾ ಯೋಜನೆ”ಯನ್ನು ಜಾರಿಗೆ ತಂದಿದೆ!! ಈ ಹಿಂದೆ ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಅಧಿಕ ಜಿ.ಎಸ್.ಟಿ ವಿಧಿಸಿ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಕೇವಲ 2.50 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಒದಗಿಸುವುದರ ಮೂಲಕ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹತ್ತರವಾದ ಕೊಡುಗೆಯನ್ನು ನೀಡಿದೆ.

ಮಹಿಳೆಯರ ಆರೋಗ್ಯಕ್ಕೆ ಅನುಕೂಲವಾಗುವ “ಸುವಿಧಾ” ಯೋಜನೆಗೆ ಕೇಂದ್ರ ಸಚಿವ ಅನಂತಕುಮಾರ್ ಅವರು ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಚಾಲನೆ ನೀಡಿದ್ದಾರೆ. ಈ ಯೋಜನೆಯಡಿ ಜೈವಿಕವಾಗಿ ವಿಘಟನೆ ಹೊಂದುವ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ಕೇವಲ 2.50ಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಪ್ಯಾಡ್‍ಗಳು ಜನೌಷಧಿ ಕೇಂದ್ರಗಳಲ್ಲಿ ಮೇ 28ರಿಂದ ಲಭ್ಯವಾಗಲಿವೆ ಎಂದು ಸಚಿವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರು ಈ ಬಗ್ಗೆ ಮಾತನಾಡಿ, “ಭಾರತೀಯ ಜನೌಷಧ ಪರಿಯೋಜನೆಯಡಿ ಪೂರೈಸುವ ಇದು ಶೇಕಡಾ 100ರಷ್ಟು ಆಕ್ಸೊ ಬಯೊ ಡಿಗ್ರೇಡೆಬಲ್ ಆಗಿರುವುದರಿಂದ ಪರಿಸರಕ್ಕೂ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ದೇಶದ ಸೌಲಭ್ಯವಂಚಿತ ಮಹಿಳೆಯರ ಸ್ವಚ್ಛತೆ, ಆರೋಗ್ಯ ಮತ್ತು ಸೌಖ್ಯದ ದೃಷ್ಟಿಯಿಂದ ಯೋಜನೆ ಜಾರಿ ಮಾಡಲಾಗುತ್ತಿದ್ದು, ಎಲ್ಲರಿಗೂ ಕೈಗೆಟಕುವ ಮತ್ತು ಗುಣಮಟ್ಟದ ಆರೋಗ್ಯ ಒದಗಿಸುವ ಪ್ರಧಾನಿ ಮೋದಿ ಕನಸಿನ ಭಾಗವಿದು” ಎಂದು ಅನಂತಕುಮಾರ್ ಅವರು ತಿಳಿಸಿದ್ದಾರೆ.

ಕೆಲವೇ ತಿಂಗಳ ಹಿಂದೆ ನ್ಯಾಪ್ಕಿನ್‍ಗೆ ಜಿಎಸ್‍ಟಿ ವಿಧಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನಿಟ್ಟುಕೊಂಡು ನರೇಂದ್ರ ಮೋದಿಯವರ ಸರ್ಕಾರವನ್ನು ಹಲವರು ಟೀಕಿಸಿದ್ದರು. ಆದರೆ ಈಗ ಕೇಂದ್ರ ಸರ್ಕಾರ, ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಕಡಿಮೆ ದರದಲ್ಲಿ ನ್ಯಾಪ್ಕಿನ್ ಒದಗಿಸುವ ಮೂಲಕ ಪ್ರತ್ಯುತ್ತರ ನೀಡಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಒಂದು ನ್ಯಾಪ್ಕಿನ್ ದರ 8 ರೂಪಾಯಿ ಇದೆ. ಆದರೆ ಈಗ ಮೋದಿ ಸರ್ಕಾರ ಕೇವಲ ಎರಡೂವರೆ ರೂಪಾಯಿಗೆ ನ್ಯಾಪ್ಕಿನ್ ಗಳನ್ನು ಒದಗಿಸಲಿದೆ.

ಅಷ್ಟಕ್ಕೂ ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರ ನೀಡಿದ ಕೊಡುಗಳೇನು ಗೊತ್ತೇ?

* ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಇದುವರೆಗೆ 3.48 ಕೋಟಿ ಜನರಿಗೆ ಸಾಲ ವಿತರಿಸಲಾಗಿದ್ದು, ಅದರಲ್ಲಿ ಶೇ.79 ರಷ್ಟು ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದರು. ಆದರೆ ಇದೀಗ ಮುದ್ರಾ ಸಾಲದಿಂದ 7.88 ಕೋಟಿ ಮಹಿಳಾ ಉದ್ಯಮಿಗಳ ಹಣಕಾಸು ಅಶೋತ್ತರಗಳ ಕನಸು ನನಸಾಗಿದೆ.

* ದೇಶಾದ್ಯಂತ ತಾಯಿಯಾಗುತ್ತಿರುವವರಿಗೆ “ಗರ್ಭಾವಸ್ಥೆ ಮಕ್ಕಳ ಪೆÇೀಷಣೆ ಮತ್ತು ಮಕ್ಕಳ ಜನನ” ಸಂಬಂಧಿತ 5.82 ಕೋಟಿ ಶ್ರವಣ ಸಂದೇಶಗಳ ರವಾನೆ ಮಾಡಲಾಗಿದೆ.

* ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, 3.5 ಕೋಟಿ ಬಡ ಮಹಿಳೆಯರಿಗೆ ಹೊಗೆ ರಹಿತ ಬದುಕು ನೀಡುವ ಉಚಿತ ಅಡುಗೆ ಅನಿಲ ಸಂಪರ್ಕ, ಈ ಗುರಿಯನ್ನು 5 ಕೋಟಿಯಿಂದ 8 ಕೋಟಿಗೆ ಹೆಚ್ಚಿಸಲಾಗಿದೆ.

* ಸ್ವಚ್ಛ ಭಾರತ ಯೋಜನೆಯ ಭಾಗವಾಗಿ ಕಳೆದ 2 ವರ್ಷದಲ್ಲಿ 1.92 ಕೋಟಿ ಶೌಚಾಲಯಗಳನ್ನ ನಿರ್ಮಿಸಲಾಗಿದ್ದರೆ, 4,17,196 ಶೌಚಾಲಯಗಳನ್ನು ಹೆಣ್ಣು ಮಕ್ಕಳಿಗಾಗಿ ಶಾಲೆಗಳಲ್ಲಿ ನಿರ್ಮಿಸಲಾಗಿದೆ.

* ‘ಸಖಿ’ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಈಗಾಗಲೇ 14 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂದಿನ ವರ್ಷದೊಳಗೆ ಇನ್ನೂ 183 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಇದೆ..

* ‘ಸುಕನ್ಯಾ ಸಮೃದ್ಧಿ’ ಯೋಜನೆಯಡಿಯಲ್ಲಿ ಇದುವರೆಗೆ 91 ಲಕ್ಷ ಹೆಣ್ಣು ಮಕ್ಕಳು ಖಾತೆ ತೆರೆದಿದ್ದು, ಅದರ ಜೊತೆಗೆ 6510 ಕೋಟಿ ಹಣವನ್ನು ಜಮಾ ಮಾಡಿದ್ದಾರೆ.

* ರಾಷ್ಟ್ರದ ಮನಸ್ಥಿತಿಯನ್ನು ಬದಲಾವಣೆ ತಂದ ಭೇಟಿ ಬಚಾವೋ, ಭೇಟಿ ಪಡಾವೋ ಆಂದೋಲನವನ್ನು ದೇಶದ 167 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅಳವಡಿಸಿ ನಂತರ 640 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿದೆ.

* ಪ್ಯಾನಿಕ್ ಬಟನ್ ಹಾಗು ಜಿಪಿಎಸ್ ಅನ್ನು ಮೊಬೈಲ್ ಗಳಲ್ಲಿ ಅಳವಡಿಸಲು ಸೂಚಿಸಲಾಗಿದೆ.

* ‘ಯೂನಿವರ್ಸಲ್ ವುಮನ್ ಹೆಲ್ಪ್ ಲೈನ್ ನಂ.’ ಆಗಿ 181 ನ್ನ ಜಾರಿಗೊಳಿಸಲಾಗಿದೆ.

* ಅಮೃತ್ ಸರ್-ನವದೆಹಲಿ ಎಕ್ಸ್ಪ್ರೆಸ್ ನಲ್ಲಿ ಸಿಸಿಟಿವಿ ಯನ್ನ ಅಳವಡಿಸಲಾಗಿದೆ.

* ಸಿ.ಆರ್.ಪಿ.ಎಫ್.ನಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳಲಾಗಿದೆ.

* ಮಹಿಳಾ ಸೆಕ್ಯುರಿಟಿ ಗಾರ್ಡ್ ಗಳಿಗೆ ವಿಶೇಷವಾದ ತರಬೇತಿ ನೀಡಲಾಗುತ್ತಿದೆ..

* ಗರ್ಭಿಣಿ ಮಹಿಳೆಯರಿಗಾಗಿ ‘ಜನನಿ ಸುರಕ್ಷಾ ಯೋಜನಾ’ ಮತ್ತು ‘ಶಿಶು ಸುರಕ್ಷಾ ಕಾರ್ಯಕ್ರಮ’ ಕ್ಕೆ ಚಾಲನೆ ನೀಡಲಾಗಿದೆ..

* ‘ಮಿಷನ್ ಇಂದ್ರ ಧನುಷ್’ ಯೋಜನೆಯಡಿಯಲ್ಲಿ 44 ಲಕ್ಷ ಜನ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗಿದೆ.

* ಹೊಸ ಹೊಸ ಮಹಿಳಾ ಉದ್ಯಮಗಳನ್ನು ಪೆÇ್ರೀತ್ಸಾಹಿಸಲು ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆ ಜಾರಿಗೊಳಿಸಲಾಗಿದೆ.

* ಮಾತೆಗೆ ಮತ್ತು ಮಗುವಿಗೆ ಸೂಕ್ತ ಪೆÇೀಷಣೆಯ ಖಾತ್ರಿ ಗರ್ಭಿಣಿ ಅಥವಾ ಹಾಲೂಡಿಸುವ ಮಾತೆಗೆ 6000 ರೂ. ಹಣಕಾಸು ನೆರವು.

* ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಜಾರಿಗೊಳಿಸಿದ್ದು, ಮಹಿಳಾ ಸ್ವಸೇವಾ ಗುಂಪುಗಳಿಗೆ ನೀಡುವ ಸಾಲದ ಪ್ರಮಾಣ ಶೇ.37 ರಷ್ಟು ಹೆಚ್ಚಳ ಮಾಡಲಾಗಿದೆ.

* ಗರ್ಭಾವಸ್ಥೆಯ ಸುರಕ್ಷಿತಗೊಳಿಸುವಿಕೆಯನ್ನು ಸಾಮೂಹಿಕ ಆಂದೋಲನವಾಗಿಸುವ ಅಭಿಯಾನ, ಒಂದು ಕೋಟಿಗೂ ಹೆಚ್ಚು ಮಂದಿ ಗರ್ಭಿಣಿಯರನ್ನು ಪರೀಕ್ಷಿಸಲಾಗಿದೆ.

* ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ ನೀಡುವ ಸಲುವಾಗಿ ಹೆಣ್ಣುಮಕ್ಕಳಿಗೆ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಶಿಷ್ಯವೇತನ ನೀಡಿಕೆ.

* ಮುಸ್ಲಿಂ ಮಹಿಳೆಯರನ್ನು ಸಬಲೀಕರಣಗೊಳಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ್ದಲ್ಲದೇ , ಮುಸ್ಲಿಂ ಮಹಿಳೆಯರು ಪುರುಷ ಜೊತೆಗಾರ ಇಲ್ಲದೆ ಹಜ್ ಯಾತ್ರೆ ಕೈಗೊಳ್ಳಬಹುದಾಗಿದೆ.

ಇವಿಷ್ಟೇ ಅಲ್ಲದೇ, ನರೇಂದ್ರ ಮೋದಿ ಸರ್ಕಾರವು ಮಹಿಳಾ ಸಬಲೀಕರಣದ ದೃಷ್ಟಿಯಿಂದ ನಾನಾ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದೀಗ ಮಹಿಳೆಯರ ಆರೋಗ್ಯಕ್ಕೆ ಅನುಕೂಲವಾಗುವ “ಸುವಿಧಾ” ಯೋಜನೆಯನ್ನು ಜಾರಿಗೊಳಿಸಿದೆ. ಈ ಹಿಂದೆ ಕೇಂದ್ರ ಸರ್ಕಾರವು ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಅಧಿಕ ಜಿ.ಎಸ್.ಟಿ ವಿಧಿಸಿ ಟೀಕೆಗೆ ಗುರಿಯಾಗಿತ್ತು. ಆದರೆ ಇದೀಗ ಕೇವಲ 2.50 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಒದಗಿಸುವುದರ ಮೂಲಕ ಮಹಿಳೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಹತ್ತರವಾದ ಕೊಡುಗೆಯನ್ನು ನೀಡಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!!!

ಮಣ್ಣಿನಲ್ಲಿ ಕರಗುವ ಸಂಪೂರ್ಣ ಸಾವಯವ “ಸುವಿಧಾ” ನ್ಯಾಪ್ಕಿನ್‍ಗಳನ್ನು ದೇಶಾದ್ಯಂತ ಸದ್ಯ ಇರುವ ಎಲ್ಲಾ 3200 ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈಗಾಗಲೇ ಜನೌಷಧಿ ಕೇಂದ್ರಗಳು ದೇಶದ ಮೂಲೆ ಮೂಲೆಯಲ್ಲಿಯೂ ಆರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಈ ಯೋಜನೆ ತಲುಪಲಿದೆ. ಒಟ್ಟಿನಲ್ಲಿ ಬಡ, ಗ್ರಾಮೀಣ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ “ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ” ಕಾರ್ಯಕ್ರಮದಡಿ, ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳಲ್ಲಿಯೇ ಎರಡೂವರೆ ರೂಪಾಯಿಗೆ ಒಂದರಂತೆ ಈ ನ್ಯಾಪ್ ಕಿನ್‍ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರೆ ಅದಕ್ಕಿಂತಲೂ ಸಂತಸದ ವಿಚಾರ ಮತ್ತೊಂದಿಲ್ಲ!!

– ಅಲೋಖಾ

 

Tags

Related Articles

Close