ಪ್ರಚಲಿತ

ಮೋದಿ ಮುಡಿಗೆ ಮತ್ತೊಂದು ಗರಿಮೆ!! ಚುನಾವಣಾ ಹೊಸ್ತಿಲಲ್ಲೇ ಟ್ವಿಪ್ಲಾಮಸಿಯಿಂದ ಗುಡ್ ನ್ಯೂಸ್!! ಮೋದಿ ಫ್ಯಾನ್ಸ್ ಫುಲ್ ಖುಷ್!!

ಪ್ರಧಾನಿ ನರೇಂದ್ರ ಮೋದಿ ಹವಾ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ಮುಂದುವರಿದಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ, ಈಗಾಗಲೇ ವಿಶ್ವದ ಅತಿರಥರನ್ನೆಲ್ಲಾ ಹಿಂದಿಕ್ಕಿರುವ ನರೇಂದ್ರ ಮೋದಿಯವರ ಜನಪ್ರಿಯತೆ ನಾಗಾಲೋಟದಂತೆ ಹೆಚ್ಚಾಗುತ್ತಿದೆ!! ಅಷ್ಟೇ ಅಲ್ಲದೇ, ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಇವರು  ಇದೀಗ ವಿಶ್ವದ ಮೂರನೇ ಅತ್ಯಂತ ಪ್ರಭಾವಿ ನಾಯಕರಾಗಿ ಹೊರ ಹೊಮ್ಮಿದ್ದಾರೆ.

ಹೌದು… ಈಗಾಗಲೇ ಅಮೇರಿಕಾದ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಅತ್ಯಂತ ಪ್ರಭಾವಿ ನಾಯಕರ ಪಟ್ಟಿಯ ಟಾಪ್ 10ನಲ್ಲಿ ಪ್ರಧಾನಿ ನರೇಂದ್ರ ಮೋದಿ 9ನೇ ಸ್ಥಾನ ಅಲಂಕರಿಸಿದ್ದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಗ್ರಸ್ಥಾನವನ್ನು ಪಡೆದಿದ್ದರು. 100 ಮಿಲಿಯನ್ ಜನರಲ್ಲಿ ಪ್ರಭಾವ ಹೊಂದಿರುವ ನಾಯಕನನ್ನು ವರ್ಷದ ಅತ್ಯಂತ ಪ್ರಭಾವಿ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಟಾಪ್ 10 ಪಟ್ಟಿಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಗ್ರಸ್ಥಾನಕ್ಕೇರಿದ್ದಾರೆ ಅಂತಾ ಫೋರ್ಬ್ಸ್ ನಿಯತಕಾಲಿಕೆ ಹೇಳಿದೆ.

ಆದರೆ ಇದೀಗ ತಮ್ಮ ಟ್ವಿಟರ್ ಖಾತೆಯಲ್ಲಿ 42 ದಶಲಕ್ಷ ಫಾಲೋವರ್ಸ್ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಮೂರನೇ ಅತ್ಯಂತ ಪ್ರಭಾವಿ ನಾಯಕ ಎಂದು ಜಾಗತಿಕ ಸಮೀಕ್ಷೆ ಸಾರಿದೆ. ಇನ್ನು, ಮೊದಲ ಸ್ಥಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆದಿದ್ದರೆ, ವಿಶ್ವದ ಎರಡನೆ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅಲಂಕರಿಸಿದ್ದಾರೆ.

“ಕಳೆದ 12 ತಿಂಗಳಲ್ಲಿ ಟ್ರಂಪ್ ಅವರು ತಮ್ಮ ಟ್ವಿಟರ್ ಖಾತೆಯನ್ನು ಬಳಸಿ 264 ದಶಲಕ್ಷ ಪ್ರತಿಕ್ರಿಯೆ ನೀಡಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು 52 ದಶಲಕ್ಷ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರು 12 ದಶಲಕ್ಷ ಸಂವಾದ ನಡೆಸಿದ್ದಾರೆ ಎಂದು ಜಾಗತಿಕ ಡಿಜಿಟಲ್ ವೇದಿಕೆ ಟ್ವಿಪ್ಲಾಮಸಿ ತಿಳಿಸಿದೆ. ಅಷ್ಟೇ ಅಲ್ಲದೇ, ನರೇಂದ್ರ ಮೋದಿಯವರು ತಮ್ಮ ವೈಯಕ್ತಿಕ ಖಾತೆಯಲ್ಲಿ 42 ದಶಲಕ್ಷ ಫಾಲೋವರ್ಸ್ ಹಾಗೂ ಸಾಂಸ್ಥಿಕ ಖಾತೆಯಲ್ಲಿ 26 ದಶಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಈ ಸಾಂಸ್ಥಿಕ ಖಾತೆ ಕೂಡ ಜಗತ್ತಿನ ನಾಲ್ಕನೆ ಅತಿದೊಡ್ಡ ಖಾತೆ, ಎಂದು ಟ್ವಿಪ್ಲಾಮಸಿ ತಿಳಿಸಿದೆ.

Image result for getty images of modi with trump

ಇನ್ನು, ವಿಶ್ವದ ಅಗ್ರ ಹತ್ತು ಪ್ರಭಾವಿ ಟ್ವಿಟರ್ ಖಾತೆಗಳ ಪಟ್ಟಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹೆಸರೂ ಸೇರಿದ್ದು, ಇವರು 11 ದಶಲಕ್ಷ ಫಾಲೋವರ್ಸ್ ಹೊಂದುವ ಮೂಲಕ ವಿಶ್ವದ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಸೇರಿದ್ದಾರೆ!! ಈಗಾಗಲೇ, ಅಮೇರಿಕಾದ ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಅತ್ಯಂತ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯವರು, ಅಮೇರಿಕಾ ಹಾಗೂ ಚೀನಾ ಭೇಟಿ ವೇಳೆ ಜಾಗತಿಕ ಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ!! ಹವಾಮಾನ ವೈಪರಿತ್ಯ ನಿಯಂತ್ರಣ ಕುರಿತ ಅಂತರಾಷ್ಟ್ರೀಯ ಪ್ರಯತ್ನದಲ್ಲಿ ಮೋದಿ ಪ್ರಮುಖ ನಾಯಕರಲ್ಲೊಬ್ಬರಾಗಿದ್ದಾರೆ. ಇನ್ನು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡನೇ ಸ್ಥಾನ, ಅಮೇರಿಕಾ ಅಧ್ಯಕ್ಷ ಹ ಟ್ರಂಪ್ ಮೂರನೇ ಸ್ಥಾನವನ್ನು ಪಡೆದಿದ್ದರು!! ಅಲ್ಲದೇ, ಫೇಸ್‍ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ 13, ಚೀನಾ ಪ್ರಧಾನಿ ಲಿ ಕಿಕ್ವಿಂಗ್ 15, ಆ್ಯಪಲ್ ಸಿಇಒ ಟಿಮ್ ಕುಕ್ 24, ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ 32 ನೇ ಸ್ಥಾನ ಪಡೆದುಕೊಂಡಿದ್ದಾರೆ.

ನರೇಂದ್ರ ಮೋದಿಯವರು ಈಗಾಗಲೇ, ಫೇಸ್ ಬುಕ್ ನಲ್ಲಿ ಗರಿಷ್ಠ ಫಾಲೋವರ್ಸ್ ಹೊಂದುವ ಮೂಲಕ ನಂ.1 ಪಟ್ಟವನ್ನು ಗಿಟ್ಟಿಸಿಕೊಂಡಿದ್ದು, ತದನಂತರದಲ್ಲಿ ಭಾರತದ ರಾಜಕೀಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿ ಎಂದು ಅಮೇರಿಕದ ಅಧ್ಯಯನ ಕೇಂದ್ರದ ಹೊಸ ಸಮೀಕ್ಷೆಯೊಂದು ಹೇಳಿತ್ತು!! ಅಷ್ಟೇ ಅಲ್ಲದೇ ಬ್ಲೂಮ್ ಸಂಸ್ಥೆಯು ಈ ಹಿಂದೆ ಕೈಗೊಂಡಿರುವ ಸಮೀಕ್ಷೆಯ ಪ್ರಕಾರ, 2019ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರುವ ಜತೆಗೆ, 2024ರ ನಂತರದಲ್ಲೂ ಪ್ರಧಾನಿಯಾಗಿ ಆಡಳಿತ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿ ಮಾಡಿತ್ತು!!

Related image

ಇನ್ನು, ಅಮೇರಿಕದ ಅಧ್ಯಕ್ಷ ಸ್ಥಾನದಿಂದ ಬರಾಕ್ ಒಬಾಮ ಕೆಳಗಿಳಿದು ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ ಹೊತ್ತಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ತಾಣದಲ್ಲಿ ಒಬಾಮ ನಂತರ ಅತೀ ಹೆಚ್ಚು ಹಿಂಬಾಲಕರಿರುವ ಪ್ರಭಾವಿ ನಾಯಕ ಎಂದೆನಿಸಿಕೊಂಡಿದ್ದರು!! ಸಾಮಾಜಿಕ ಜಾಲತಾಣಗಳಾದ ಟ್ವಿಟರ್‍ನಲ್ಲಿ 26.5 ಮಿಲಿಯನ್, ಫೇಸ್ ಬುಕ್ ನಲ್ಲಿ 39.2 ಮಿಲಿಯನ್, ಗೂಗಲ್ ಪ್ಲಸ್ ನಲ್ಲಿ 3.2 ಮಿಲಿಯನ್, ಲಿಂಕ್ಡ್ ಇನ್ ನಲ್ಲಿ 1.99 ಮಿಲಿಯನ್, ಇನ್ಟ್ರಾಗ್ರಾಂ ನಲ್ಲಿ 5.8 ಮಿಲಿಯನ್ ಮತ್ತು ಯೂಟ್ಯೂಬ್ ನಲ್ಲಿ 5.91 ಲಕ್ಷ ಜನ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಮೋದಿ ಪ್ರಭಾವಿ ನಾಯಕ ಎಂದೆನಿಸಿಕೊಂಡಿದ್ದರು.

ಆದರೆ ಇದೀಗ ತಮ್ಮ ಟ್ವಿಟರ್ ಖಾತೆಯಲ್ಲಿ 42 ದಶಲಕ್ಷ ಫಾಲೋವರ್ಸ್ ಹೊಂದಿರುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಮೂರನೇ ಅತ್ಯಂತ ಪ್ರಭಾವಿ ನಾಯಕ ಎಂದು ಜಾಗತಿಕ ಸಮೀಕ್ಷೆ ಸಾರಿದೆ ಎಂದರೆ ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ.

ಮೂಲ: https://timesofindia.indiatimes.com/

– ಪುಷ್ಕರ

Tags

Related Articles

FOR DAILY ALERTS
 
FOR DAILY ALERTS
 
Close