ಅಂಕಣಪ್ರಚಲಿತ

ಮೋದಿ ಆಗಮನಕ್ಕೆ ಕರುನಾಡಿನಲ್ಲಿ ಭರ್ಜರಿ ತಯಾರಿ!! ಬರಪೂರ ಸ್ವಾಗತಕ್ಕೆ ಬೆಂಗಳೂರು ಹೇಗೆ ಸಚ್ಚಾಗಿದೆ ಗೊತ್ತಾ?!

ಕಾಂಗ್ರೆಸ್‍ನ ಕುತಂತ್ರಗಳ ನಡುವೆಯೂ ಇಂದು ಮೋದಿ ಆಗಮನಕ್ಕೆ ಅಬ್ಬರದ ರೋಡ್ ಶೋ, ರ್ಯಾಲಿಗಳ ಆರ್ಭಟ, ಪಕ್ಷಗಳ ನಡುವಿನ ರಾಜಕೀಯ ಕೆಸರೆರಚಾಟ, ಪಕ್ಷಾಂತರ ಪರ್ವ ಇತ್ಯಾದಿಗಳಿಂದಾಗಿ ಈಗಾಗಲೇ ವಿಧಾನಸಭೆ ಚುನಾವಣೆಯ ಜ್ವರ ಏರಿರುವ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮನ ಮತ್ತಷ್ಟು ರಂಗೇರಿಸಲಿದೆ. ಪರಿವರ್ತನಾ ಯಾತ್ರೆ ಮೂಲಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಭರ್ಜರಿ ಪ್ರಚಾರ ನಡೆಸಿರುವ ರಾಜ್ಯ ಬಿಜೆಪಿಗೆ ನವಶಕ್ತಿ ತುಂಬಲು ಮೋದಿ ಭಾನುವಾರ ರಾಜಧಾನಿಗೆ ಆಗಮಿಸುತ್ತಿದ್ದು, ಪರಿವರ್ತನಾ ರ್ಯಾಲಿ ಸಮಾರೋಪದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸುಮಾರು 4 ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಂಡಿರುವ ಕಮಲ ಪಾಳಯ ಉತ್ಸಾಹದಿಂದ ಕೂಡಿದ್ದರೆ, ಕಾಂಗ್ರೆಸ್ ನಾಯಕರಿಗೆ ಹೊಸ ಸವಾಲು ಸೃಷ್ಟಿಸಿದೆ. ಕೇಂದ್ರ ಬಜೆಟ್ ನಂತರ ಮೋದಿ ಪಾಲ್ಗೊಳ್ಳುತ್ತಿರುವ ಬಹಿರಂಗ ರ್ಯಾಲಿ ಇದಾಗಿರುವುದರಿಂದ ರಾಷ್ಟ್ರೀಯ ಮಟ್ಟದಲ್ಲಿಯೂ ಕುತೂಹಲ ಮೂಡಿಸಿದೆ.

ಘೋಷಣೆ ಕುತೂಹಲ

ರಾಜ್ಯಕ್ಕೆ ಮೋದಿ ಯಾವ ಕೊಡುಗೆ ಘೋಷಿಸಲಿದ್ದಾರೆಂಬ ಕುತೂಹಲ ಗರಿಗೆದರಿದೆ. ಪ್ರಮುಖವಾಗಿ ಕರ್ನಾಟಕಕ್ಕೆ ಬಜೆಟ್ನಿಂದ ಆಗುವ ಲಾಭವನ್ನು ವಿವರಿಸಲಿದ್ದಾರೆ. ಕೃಷಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಒತ್ತು, ಎಲ್ಲಕ್ಕಿಂತ ಮುಖ್ಯವಾಗಿ, ದೇಶದ 50 ಕೋಟಿ ಜನರಿಗೆ ಆರೋಗ್ಯ ರಕ್ಷಣೆ ನೀಡುವ ಭರವಸೆಯ ರಾಷ್ಟ್ರೀಯ ಆರೋಗ್ಯ ರಕ್ಷಾ ಯೋಜನೆಯ ಮತ್ತಷ್ಟು ವಿವರ ತಿಳಿಸಲಿದ್ದಾರೆ ಎನ್ನಲಾಗಿದೆ.

20 ಎಲ್‍ಇಡಿ ಪರದೆಗಳ ವ್ಯವಸ್ಥೆ

ರ್ಯಾಲಿಯಲ್ಲಿ ಜನರು ಕುಳಿತುಕೊಳ್ಳಲು 24 ಬೃಹತ್ ಬ್ಲಾಕ್‍ಗಳನ್ನು ನಿರ್ವಿಸಲಾಗಿದೆ. ವೇದಿಕೆಯಿಂದ ಸಾಕಷ್ಟು ದೂರದಲ್ಲಿರುವವರಿಗೂ ಕಾರ್ಯಕ್ರಮ ಸಂಪೂರ್ಣ ಕಾಣುವಂತಾಗಲು 20 ಬೃಹತ್ ಎಲ್‍ಇಡಿ ಸ್ಕ್ರೀನ್‍ಗಳನ್ನು ಅಳವಡಿಸಲಾಗಿದೆ.

ಸೌಲಭ್ಯ, ಸಿದ್ಧತೆಗಳು ಪೂರ್ಣ

ಸಂಚಾರ ದಟ್ಟಣೆ ನಿಯಂತ್ರಣಕ್ಕೆ 300, ಜಾಲತಾಣ ನಿರ್ವಹಣೆಗೆ 200 ಕಾರ್ಯಕರ್ತರು ನಿಯೋಜನೆಯಾಗಿದ್ದಾರೆ. 250 ಶೌಚಗೃಹ, ತಲಾ 8 ಸಿಬ್ಬಂದಿಯ ನಾಲ್ಕು ಆಸ್ಪತ್ರೆ, ಆಹಾರ ವಿತರಣೆಗೆ 250 ಕೌಂಟರ್, 16 ಲಕ್ಷ ನೀರಿನ ಪ್ಯಾಕೆಟ್ ವ್ಯವಸ್ಥೆ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಪರಿವರ್ತನೆಗೆ ನಮೋ

ರಾಜ್ಯ ರಾಜಕೀಯ ಇತಿಹಾಸದಲ್ಲೆ ನಡೆದಿರದಂತಹ ಬೃಹತ್ ಹಾಗೂ ವ್ಯವಸ್ಥಿತ ಕಾರ್ಯಕ್ರಮವಾಗಿಸಬೇಕೆಂಬ ನಿಟ್ಟಿನಲ್ಲಿ ಭಾನುವಾರ ಬೆಂಗಳೂರು ಅರಮನೆ ಮೈದಾನದಲ್ಲಿ 4 ಲಕ್ಷ ಜನರನ್ನು ಸೇರಿಸಲು ಬಿಜೆಪಿ ಮುಂದಾಗಿದೆ.

ಮಧ್ಯಾಹ್ನ 3 ಗಂಟೆಯಿಂದ ನಡೆಯುವ ಬಿಜೆಪಿ ಪರಿವರ್ತನಾ ಸಮಾರೋಪ ರ್ಯಾಲಿಯ ಪ್ರಮುಖ ಆಕರ್ಷಣೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ನೇರವಾಗಿ 4 ಲಕ್ಷ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೋಟ್ಯಂತರ ಜನರನ್ನು ತಲುಪಲಿದ್ದಾರೆ.

ಕೇಂದ್ರ ಬಜೆಟ್ ನಂತರ ನಡೆಯುತ್ತಿರುವ ಮೊದಲ ರ್ಯಾಲಿ ಇದಾದ್ದರಿಂದ ದೇಶದ ಗಮನ ಸೆಳೆದಿದ್ದು, ಭದ್ರತಾ ವ್ಯವಸ್ಥೆಯಲ್ಲಿ ಒಂದೇ ಒಂದು ಲೋಪವಾಗದಂತೆ ಪೆÇಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಮೋದಿ, ಷಾ ನಿರಂತರ ಪ್ರವಾಸ

ಬೃಹತ್ ಕಾರ್ಯಕ್ರಮ ನಡೆಸಿದ ವಾತಾವರಣವನ್ನು ಚುನಾವಣೆಗೆ ಬಳಸಿಕೊಳ್ಳಲು ಬಿಜೆಪಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಫೆಬ್ರವರಿ ಪೂರಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿವಿಧ ಜಾತಿ, ಸಮುದಾಯ ಸೇರಿ 35 ರಾಜ್ಯಮಟ್ಟದ ರ್ಯಾಲಿಗಳು ಈಗಾಗಲೆ ಯೋಜನೆಯಾಗಿವೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಾರಕ್ಕೆ ಎರಡು ದಿನ ರಾಜ್ಯದ ವಿವಿಧ ಭಾಗಗಳಲ್ಲಿ ರ್ಯಾಲಿ, ಚುನಾವಣಾ ಸಿದ್ಧತೆ, ಅವಲೋಕನ ನಡೆಸಲಿದ್ದಾರೆ. ರಾಜ್ಯ ಕೇಂದ್ರಿತ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಮೂರು ಬಾರಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ವಿವಿಧ ಇಲಾಖೆಗಳ ಕೇಂದ್ರ ಸಚಿವರು ತಮ್ಮ ತಮ್ಮ ಇಲಾಖೆಗಳ ಪ್ರಮುಖ ಯೋಜನೆಗಳನ್ನು ರಾಜ್ಯದಲ್ಲೆ ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಊಟ, ಪಾರ್ಕಿಂಗ್ ಕಟ್ಟುನಿಟ್ಟು

ನವೆಂಬರ್ 2ಕ್ಕೆ ಬೆಂಗಳೂರಿನಲ್ಲಿ ಚಾಲನೆಗೊಂಡಿದ್ದ ನವಕರ್ನಾಟಕ ನಿರ್ವಣಕ್ಕಾಗಿ ಪರಿವರ್ತನಾ ಯಾತ್ರೆಯ ಬೃಹತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನೇಕ ಲೋಪಗಳನ್ನು ಬಿಜೆಪಿ ಗುರುತಿಸಿತ್ತು. ಮುಖ್ಯವಾಗಿ, ಕಾರ್ಯಕ್ರಮ ಸ್ಥಳದಿಂದ ಊಟದ ಕೌಂಟರ್‍ಗಳು ಸಾಕಷ್ಟು ದೂರದಲ್ಲಿದ್ದವು. ಮೈದಾನಕ್ಕೆ ವಾಹನಗಳ ಆಗಮನ, ಪಾರ್ಕಿಂಗ್ ನಲ್ಲಿ ಸಾಕಷ್ಟು ಸಮಸ್ಯೆಯಾಗಿತ್ತು. ಈ ಬಾರಿ ಅಂಥ ಸಮಸ್ಯೆಗಳಾಗದಿರಲು ಸಂಪೂರ್ಣ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಮೈದಾನಕ್ಕೆ 8 ದ್ವಾರಗಳಿಂದ ಪ್ರವೇಶ ಕಲ್ಪಿಸಲಾಗಿದೆ. ವಿಐಪಿ, ವಿವಿಐಪಿ ಪಾಸ್ ಹೊಂದಿರುವವರು, ಪ್ರತ್ಯೇಕ ಜಿಲ್ಲೆಗಳಿಂದ ಆಗಮಿಸುವ ಕಾರ್ಯಕರ್ತರು, ಸಾರ್ವಜನಿಕರಿಗೆ ದ್ವಾರಗಳನ್ನು ನಿಗದಿ ಮಾಡಲಾಗಿದೆ. ಉಪಾಹಾರಕ್ಕೆ 250 ಕೌಂಟರ್ ಸ್ಥಾಪಿಸಲಾಗಿದ್ದು, ಅರ್ಧ ಎಕರೆ ಪ್ರದೇಶದಲ್ಲಿ ನಿರ್ವಣವಾಗಿರುವ 4 ಅಡುಗೆ ಮನೆಯಲ್ಲಿ 600 ಬಾಣಸಿಗರು ಆಹಾರ ತಯಾರಿಸುತ್ತಾರೆ. ಬೆಳಗಿನ ಉಪಾಹಾರ ಹಾಗೂ ಮದ್ಯಾಹ್ನದ ಭೋಜನ ಅಲ್ಲೆ ನೀಡುವುದರ ಜತೆಗೆ ದೂರದ ಜಿಲ್ಲೆಯವರಿಗೆ ಪಾರ್ಸೆಲ್ ನೀಡಿ ಕಳಿಸಲಾಗುತ್ತದೆ.

5ರಿಂದ 50 ಸಾವಿರ ಕಾರ್ಯಕರ್ತರು

4 ಲಕ್ಷ ಜನರನ್ನು ಕೆಲವೇ ಕ್ಷೇತ್ರದಿಂದ ಕರೆತಂದು ಹೊರಗಿನವರಿಗೆ ಶಕ್ತಿ ಪ್ರದರ್ಶನ ಮಾಡಿದರೆ ಸಾಲದು, ಪಕ್ಷದ ಸಂಘಟನೆಗೂ ಬಲ ದೊರಕಬೇಕು ಎಂಬ ಕಾರಣಕ್ಕೆ ವಿಶೇಷ ಉಪಾಯ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕಾರ್ಯಕರ್ತರನ್ನು ಕರೆತರಲು ಗುರಿ ನೀಡಲಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಾಹಿತಿ ಪ್ರಕಾರ ಬೆಂಗಳೂರು ಗ್ರಾಮಾಂತರ, ಹುಬ್ಬಳ್ಳಿ ಧಾರವಾಡದಿಂದ ತಲಾ 50 ಸಾವಿರ, ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳು, ತುಮಕೂರು, ಕೋಲಾರ, ಶಿವಮೊಗ್ಗ ಜಿಲ್ಲೆಗಳಿಂದ ತಲಾ 25 ಸಾವಿರ, ಮಂಡ್ಯ, ಹಾಸನ, ಚಾಮರಾಜನರ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಧಾರವಾಡ, ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಿಂದ ತಲಾ 10 ಸಾವಿರ, ಹಾವೇರಿ, ಗದಗ, ಉತ್ತರ ಕನ್ನಡ, ರಾಯಚೂರು, ಕೊಪ್ಪಳ, ವಿಜಯಪುರದಿಂದ ತಲಾ 5 ಸಾವಿರ ಕಾರ್ಯಕರ್ತರನ್ನು ಕರೆತರಲು ಸಿದ್ಧತೆ ನಡೆಯುತ್ತಿದೆ. ಉತ್ತರ ಕರ್ನಾಟಕ ಭಾಗದಿಂದ ಆಗಮಿಸಿದ 15 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಶನಿವಾರ ರಾತ್ರಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ವಾಸ್ತವ್ಯ ಹೂಡಿದ್ದರು.

ಜಾಲತಾಣ ಪ್ರಭಾವ

ಸಾಮಾಜಿಕ ಜಾಲತಾಣದಲ್ಲಿ ಪ್ರಭಾವ ಬೀರಲು ಈ ಕಾರ್ಯ ಕ್ರಮವನ್ನು ಸಂಪೂರ್ಣ ಬಿಜೆಪಿ ಬಳಸಿಕೊಳ್ಳಲಿದೆ. ಸುಮಾರು 200 ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಜಾಲತಾಣದಲ್ಲಿ ಪ್ರಭಾವ ಬೀರುವ 500 ಜನರನ್ನು ಆಹ್ವಾನಿಸಲಾಗಿದ್ದು, ಪ್ರತ್ಯೇಕ ಆಸನ ಕಲ್ಪಿಸಲಾಗಿದೆ. ಬಿಜೆಪಿ ವೆಬ್‍ಸೈಟ್, ಯುಟ್ಯೂಬ್, ಫೇಸ್‍ಬುಕ್, ಟ್ವಿಟ್ಟರ್ ಮೂಲಕ ನೇರ ಪ್ರಸಾರ, ವೀಕೆಂಡ್ ವಿತ್ ಮೋದಿ, ಮೋದಿ ಇನ್ ಬೆಂಗಳೂರು ಹ್ಯಾಷ್ ಟ್ಯಾಗ್ ಮೂಲಕ ಟ್ರೆಂಡ್ ಮಾಡಲು ಸಿದ್ಧತೆ ನಡೆದಿದೆ.

ಭದ್ರತೆಗೆ 4,200 ಪೆÇಲೀಸರು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ 4,200 ಪೆÇಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ 3 ಸಾವಿರ, ಸಂಚಾರ ನಿಯಂತ್ರಣಕ್ಕೆ 1,200 ಪೆÇಲೀಸರನ್ನು ನೇಮಕ ಮಾಡಲಾಗಿದೆ ಎಂದು ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೇಳಿದ್ದಾರೆ. ಭದ್ರತೆಗೆ 50 ಕೆಎಸ್‍ಆರ್‍ಪಿ, 30 ಸಿಎಆರ್ ತುಕಡಿ ನಿಯೋಜಿಸಲಾಗಿದೆ. 11 ಡಿಸಿಪಿಗಳು ಹಾಗೂ 32 ಎಸಿಪಿಗಳು ನಿಗಾ ವಹಿಸಲಿದ್ದಾರೆ. ಅರಮನೆ ಮೈದಾನ ಸುತ್ತಲಿನ ಪ್ರದೇಶಗಳಾದ ಬಳ್ಳಾರಿ ರಸ್ತೆ, ಜಯಮಹಲ್ ಹಾಗೂ ಮೇಖ್ರಿ ವೃತ್ತದಲ್ಲಿ ಅಧಿಕ ಪೆÇಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎಲ್ಲ ದಿಕ್ಕುಗಳಲ್ಲೂ ನಗರ ಪ್ರವೇಶಿಸುವವರನ್ನು ತಪಾಸಣೆ ನಡೆಸಲು ಪೆÇಲೀಸ್ ಆಯುಕ್ತರು ಸೂಚಿಸಿದ್ದಾರೆ. ಪ್ರಧಾನಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿ ನೀರಿಗಾಗಿ ವೇದಿಕೆ ಬಳಿ ಪ್ರತಿಭಟನೆ ನಡೆಸಲು ಪೆÇಲೀಸರು ಅವಕಾಶ ಕಲ್ಪಿಸಿಲ್ಲ. ಸ್ವಾತಂತ್ರ ಉದ್ಯಾನದಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಪ್ರಧಾನಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲೆಂದು ಶನಿವಾರ ಸಂಜೆ ರಾಜಧಾನಿಗೆ ಹೊರಟಿದ್ದ 60 ಮಂದಿ ಕಳಸಾ-ಬಂಡೂರಿ ಹೋರಾಟಗಾರರನ್ನು ಗ್ರಾಮೀಣ ಠಾಣೆ ಪೆÇಲೀಸರು ತಾಲೂಕಿನ ಹೆಬಸೂರು ಗ್ರಾಮದಲ್ಲಿ ಬಂಧಿಸಿದ್ದಾರೆ.

ಕೇಂದ್ರದ ಕೊಡುಗೆ ಪ್ರಸ್ತಾಪ

ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಚರ್ಚೆಗೆ ಕಾಂಗ್ರೆಸ್ ಶನಿವಾರದಿಂದಲೇ ಚಾಲನೆ ನೀಡಿದೆ. ಸಚಿವರು ಏನೇನು ಕೆಲಸ ಮಾಡಿದ್ದಾರೆ.. ಅಮಿತ್ ಷಾ ಹೇಳಿಕೆ ನಿಜವೇ? ಎಂಬೆಲ್ಲ ಚರ್ಚೆಗಳಿಗೆ ಪ್ರಧಾನಿ ಮೋದಿ ಉತ್ತರ ನೀಡಲಿದ್ದಾರೆ. ಕೇಂದ್ರದ ಯೋಜನೆಗಳ ಕುರಿತು ಉತ್ತರಿಸುವುದಷ್ಟೇ ಅಲ್ಲ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ದಾಳಿ ನಡೆಸುವ ಯಾವ ಅವಕಾಶವನ್ನೂ ಮೋದಿ ಬಿಡುವುದಿಲ್ಲ. ಪ್ರಧಾನಿಯಾದರೇನು? ಚುನಾವಣೆಗೆ ಕಾಂಗ್ರೆಸ್ ಬಳಸಿಕೊಳ್ಳಬೇಕೆಂದಿರುವ ಪ್ರತ್ಯೇಕ ಧರ್ಮ, ಕನ್ನಡ ಅಸ್ಮಿತೆ, ದಲಿತ ಮತಗಳು, ಅಲ್ಪಸಂಖ್ಯಾತರು ಸೇರಿದಂತಹ ಪ್ರಮುಖ ಅಂಶಗಳ ಕುರಿತು ಮೋದಿ ನೇರವಾಗಿ ಮಾತಾಡಲಿದ್ದಾರೆ ಎಂದು ಪ್ರಮುಖ ನಾಯಕರೊಬ್ಬರು ತಿಳಿಸಿದ್ದಾರೆ.

3 ಸಾವಿರಕ್ಕೂ ಹೆಚ್ಚು ಬಸ್

ರಾಜ್ಯದ ವಿವಿಧೆಡೆಯಿಂದ ಕಾರ್ಯಕರ್ತರನ್ನು ಕರೆತರಲು ಸಾರಿಗೆ ಇಲಾಖೆಯ 1,500ಕ್ಕೂ ಹೆಚ್ಚು ಬಸ್ ಬುಕ್ ಮಾಡಲಾಗಿದೆ. ತುಮಕೂರು ಡಿಪೆÇೀದಿಂದ 104, ಚಿಕ್ಕಬಳ್ಳಾಪುರದಿಂದ 112, ಹಾಸನದಿಂದ 80, ಚಿಕ್ಕಮಗಳೂರಿನಿಂದ 113 ಸೇರಿ ಕೆಎಸ್‍ಆರ್‍ಟಿಸಿಯಿಂದ 622, ಬಿಎಂಟಿಸಿಯಿಂದ 610, ಈಶಾನ್ಯ ಸಾರಿಗೆಯಿಂದ 15 ಹಾಗೂ ವಾಯವ್ಯ ಸಾರಿಗೆಯಿಂದ 100ಕ್ಕೂ ಹೆಚ್ಚು ಬಸ್?ಗಳನ್ನು ಸ್ಥಳೀಯ ಮಟ್ಟದ ಬಿಜೆಪಿ ನಾಯಕರು ಬುಕ್ ಮಾಡಿದ್ದಾರೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ರ್ಯಾಲಿ ಇತಿಹಾಸ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 2013 ಸೆಪ್ಟೆಂಬರ್ 25ರಂದು ಭೋಪಾಲ್‍ನಲ್ಲಿ ಆಯೋಜಿಸಲಾಗಿದ್ದ ಮೋದಿ ರ್ಯಾಲಿಯಲ್ಲಿ 5 ಲಕ್ಷ ಜನರು ಪಾಲ್ಗೊಂಡಿದ್ದರು.

2017 ಜನವರಿ 2 ರಂದು ಲಖನೌನಲ್ಲಿ ನಡೆದ ಮೋದಿ ರ್ಯಾಲಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.

ರ್ಯಾಲಿ ಗೆ ಈ ಮಾರ್ಗಗಳಲ್ಲೇ ಬರಬೇಕು

ಅರಮನೆ ಮೈದಾನದಲ್ಲಿ ಭಾನುವಾರ ಆಯೋಜನೆಗೊಂಡಿರುವ ಬಿಜೆಪಿ ಪರಿವರ್ತನಾ ಸಮಾರೋಪ ರ್ಯಾಲಿಗೆ ಸಾರ್ವಜನಿಕರನ್ನು ಕರೆತರುವ ವಾಹನಗಳಿಗೆ ಸಂಚಾರಿ ಪೆÇಲೀಸರು ಮಾರ್ಗ ನಿಗದಿಪಡಿಸಿದ್ದು, ಸುಗಮ ಸಂಚಾರಕ್ಕಾಗಿ ಈ ನಿಯಮ ಅನುಸರಿಸುವಂತೆ ತಿಳಿಸಲಾಗಿದೆ.

ಮೈಸೂರು ಹಾಗೂ ತುಮಕೂರು ರಸ್ತೆ ಕಡೆಯಿಂದ ಬರುವ ವಾಹನಗಳು ಮೈಸೂರು ರಸ್ತೆಯ ನಾಯಂಡಹಳ್ಳಿ-ಗೊರಗುಂಟೆಪಾಳ್ಯ- ಹೆಬ್ಬಾಳ ಮೇಲ್ಸೇತುವೆ ಮಾರ್ಗದಲ್ಲಿ ಬರಬೇಕು. ಕನಕಪುರ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ಬನಶಂಕರಿ ದೇವಾಲಯ-ಜಯನಗರ ಸೌತ್ ಎಂಡ್ ಸರ್ಕಲ್-ಟೌನ್ ಹಾಲ್-ಮೈಸೂರು ಬ್ಯಾಂಕ್-ಕಂಟೋನ್ಮೆಂಟ್ ಸುರಂಗ ಮಾರ್ಗದ ಮೂಲಕ ಪ್ರವೇಶಿಸಬೇಕು. ಬನ್ನೇರುಘಟ್ಟ ಕಡೆಯಿಂದ ಬರುವ ವಾಹನಗಳು ಡೈರಿ ಸರ್ಕಲ್-ಲಾಲ್‍ಬಾಗ್ ಮುಖ್ಯದ್ವಾರ-ಬನಶಂಕರಿ ದೇವಾಲಯ-ಜಯನಗರ ಸೌತ್‍ಎಂಡ್ ಸರ್ಕಲ್-ಟೌನ್‍ಹಾಲ್-ಮೈಸೂರು ಬ್ಯಾಂಕ್- ಕಂಟೋನ್‍ನ್ಮೆಂಟ್ ಸುರಂಗ ಮಾರ್ಗ ಮೂಲಕ ತಲುಪಬೇಕು. ಹೊಸೂರು ರಸ್ತೆ ಮೂಲಕ ಬರುವ ವಾಹನಗಳು ಮಡಿವಾಳ ಜಂಕ್ಷನ್-ಡೈರಿ ವೃತ್ತ-ಲಾಲ್‍ಬಾಗ್ ಮುಖ್ಯದ್ವಾರ-ಬನಶಂಕರಿ ದೇವಾಲಯ-ಜಯನಗರ ಸೌಂತ್‍ಎಂಡ್ ಸರ್ಕಲ್-ಟೌನ್ ಹಾಲ್-ಮೈಸೂರು ಬ್ಯಾಂಕ್-ಕಂಟೋನ್ಮೆಂಟ್ ಸುರಂಗ ಮಾರ್ಗದ ಮೂಲಕ ಆಗಮಿಸಬೇಕು. ಹಳೇ ಮದ್ರಾಸ್ ರಸ್ತೆ ಕಡೆಯಿಂದ ಬರುವ ವಾಹನಗಳು ಕೆಆರ್ ಪುರ-ಹೆಣ್ಣೂರು ಜಂಕ್ಷನ್-ಹೆಬ್ಬಾಳ ಮೇಲು ಸೇತುವೆ ಮೇಖ್ರಿ ಸರ್ಕಲ್ ಮೂಲಕ ಅರಮನೆ ಮೈದಾನಕ್ಕೆ ಬರಬೇಕು. ಬಳ್ಳಾರಿ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ದೇವನಹಳ್ಳಿ-ಚಿಕ್ಕಜಾಲ-ಕೊಡುಗೆಹಳ್ಳಿ ಗೇಟ್-ಹೆಬ್ಬಾಳ ಮೇಲು ಸೇತುವೆ ಮಾರ್ಗ ಅನುಸರಿಸ ಬೇಕು. ದೊಡ್ಡಬಳ್ಳಾಪುರ ಕಡೆಯಿಂದ ಬರುವ ವಾಹನಗಳು ದೊಡ್ಡಬಳ್ಳಾಪುರ ರಸ್ತೆ- ಮೇಜರ್ ಉನ್ನಿಕೃಷ್ಣನ್ ಜಂಕ್ಷನ್-ಬಳ್ಳಾರಿ ರಸ್ತೆ- ಹೆಬ್ಬಾಳ ಮೇಲ್ಸೇತುವೆ ಮೂಲಕ ಆಗಮಿಸಬೇಕು.

ಎಚ್‍ಎಎಲ್ ಮೈದಾನದಿಂದ ಮೋದಿ ಹೆಲಿಕಾಪ್ಟರ್ ಮೂಲಕ ಆಗಮಿಸಲು ನಿಶ್ಚಯವಾಗಿದ್ದ ಹೆಲಿಪ್ಯಾಡನ್ನು ಭದ್ರತೆ ದೃಷ್ಟಿಯಿಂದ ವಾಯುಸೇವೆ ತರಬೇತಿ ಕೇಂದ್ರದ ಹೆಲಿಪ್ಯಾಡ್ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಸರ್ಕಸ್ ಮೈದಾನ ಮತ್ತು ಮಾವಿನಕಾಯಿ ಮಂಡಿ ಬಳಿ ಬಸ್ ಹಾಗೂ ಕಾರುಗಳ ರ್ಪಾಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳು ಸರ್ಕಸ್ ಮೈದಾನ ಪ್ರವೇಶಿಸಿ ಗೋಕಾರ್ಟಿಂಗ್ ಮೈದಾನದಲ್ಲಿ ಪಾರ್ಕ್ ಮಾಡಬಹುದು.

ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

ರಮಣಮಹರ್ಷಿ, ಪ್ಯಾಲೇಸ್, ಕಬ್ಬನ್, ಸರ್ ಸಿ.ವಿ.ರಾಮನ್, ಬಳ್ಳಾರಿ ರಸ್ತೆ, ಮೇಖ್ರಿ ವೃತ್ತ, ಚಾಲುಕ್ಯ ವೃತ್ತ, ಹೆಬ್ಬಾಳ ಮೇಲ್ಸೇತುವೆ ಮೇಲೆ ಭಾನುವಾರ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ವಾಹನಗಳ ರ್ಪಾಂಗ್ ನಿಷೇಧಿಸಲಾಗಿದೆ ಎಂದು ಸಂಚಾರ ಪೆÇಲೀಸರು ತಿಳಿಸಿದ್ದಾರೆ.

ಕೃಪೆ: ವಿಜಯವಾಣಿ

ಪವಿತ್ರ

Tags

Related Articles

Close