ಪ್ರಚಲಿತ

ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ ಮೊದಲ ಪ್ರಧಾನಿ ಮೋದಿ!! ಮೋದಿಜೀಯನ್ನು ಹಾಡಿ ಹೊಗಳಿದ ಯುಕೆ ದಿ ಲ್ಯಾನ್ಸೆಟ್‍ನ ಸಂಪಾದಕ..

ಪ್ರಧಾನಿ ನರೇಂದ್ರ ಮೋದಿಜೀ ಎಂದರೆ ಇಡೀ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಅವರನ್ನು ಹಾಡಿ ಕೊಂಡಾಡುತ್ತಿದೆ. ಇವರ ರಾಜತಾಂತ್ರಿಕತೆಯ ಯಶಸ್ಸು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೇ ವಿಶ್ವದಲ್ಲೇ ಅತೀ ಪ್ರಭಾವಿ ವ್ಯಕ್ತಿಯಾಗಿ ಮಿಂಚುತ್ತಿದ್ದಾರೆ!! ಯುಪಿಎ ಸರಕಾರ ಸುಮಾರು 60 ವರ್ಷಗಳ ಕಾಲ ಸುದೀರ್ಘವಾದ ಆಡಳಿತವನ್ನು ನಡೆಸಿದ್ದಲ್ಲದೇ ತಮ್ಮ ಪಕ್ಷದ ಆಳ್ವಿಕೆಯ ಅಡಿಯಲ್ಲಿ, ಲೆಕ್ಕವಿಲ್ಲದಷ್ಟು ಹಗರಣಗಳು ಸಂಭವಿಸಿರುವುದನ್ನು ನಾವು ನೋಡಿದ್ದೇವೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ನ ಅಧಿಕಾರವಧಿಯಲ್ಲಿ ಮಾಡಿರುವ ಅನಾಚಾರಗಳು ಎಲ್ಲರಿಗೂ ತಿಳಿದಿರುವಂತಹದ್ದು!!

ಆದರೆ ಮೋದಿಜೀ ಅಧಿಕಾರವಹಿಸಿದಾಗಿನಿಂದ ಭಾರತದ ಚಿತ್ರಣವೇ ಬದಲಾಗಿದೆ!! ಯಾಕೆಂದರೆ ಇಡೀ ಭಾರತವನ್ನೇ ಬದಲಾಯಿಸಿದ ಕೀರ್ತಿ ಮೋದಿಜೀಗೆ ಸಲ್ಲುತ್ತದೆ!! ಮೋದಿಜೀ ಆಡಳಿತಕ್ಕೆ ನಿಬ್ಬೆರಗಾಗಿ ಶತ್ರುರಾಷ್ಟ್ರಗಳೇ ಮೋದಿಜೀಯನ್ನು ಅಪ್ಪಿಕೊಳ್ಳುತ್ತಿದೆ ಎಂದರೆ ಅವರ ಆಡಳಿತ ವೈಖರಿ ಎಷ್ಟರ ಮಟ್ಟಿಗೆ ಇದೆ ಎಂಬುವುದು ಎಲ್ಲರಿಗೂ ತಿಳಿದಿರಬಹುದು!! ಈಗಾಗಲೇ ಹಲವಾರು ಸಮೀಕ್ಷೆಗಳ ಪ್ರಕಾರ ಮೋದಿಜೀಯೇ ವಿಶ್ವ ಟಾಪ್ ನಾಯಕರಾಗಿ ಹೊರಹೊಮ್ಮಿದ್ದಾರೆ!! ಅದಲ್ಲದೆ ವಿಶ್ವದ ಟಾಪ್ ಸಿಇಓಗಳು ಮೋದಿಜೀಯ ನಿರ್ಧಾರ, ಕಾರ್ಯತಂತ್ರ, ಆಡಳಿತ ವೈಖರಿಯನ್ನು ನೋಡಿ ಹಾಡಿಹೊಗಳಿದ್ದಾರೆ ಇದೀಗ ನರೇಂದ್ರ ಮೋದಿಜೀಯನ್ನು ಯುಕೆ ಮೂಲದ ಜರ್ನಲ್ ದಿ ಲ್ಯಾನ್ಸೆಟ್‍ನ ಸಂಪಾದಕ ರಿಚರ್ಡ್ ಹರ್ಟೋನ್ ಹಾಡಿ ಹೊಗಳಿದ್ದಾರೆ!!

Image result for modiji

ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಯುಕೆ ಜರ್ನಲ್ ದಿ ಲ್ಯಾನ್ಸೆಟ್!!

ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಯುಕೆ ಮೂಲದ ಜರ್ನಲ್ ದಿ ಲ್ಯಾನ್ಸೆಟ್ ಹೇಳಿದೆ. ಹಲವು ವರ್ಷಗಳ ನಿರ್ಲಕ್ಷ್ಯದ ಬಳಿಕ ಭಾರತ ಸರ್ಕಾರ ಸಾರ್ವಜನಿಕ ಆರೋಗ್ಯಕ್ಕೆ ಮಹತ್ವ ನೀಡಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಮೋದಿಯವರು ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ಅದಲ್ಲದೆ ಪ್ರಧಾನಿ ಮೋದಿಯವರು ಆರೋಗ್ಯವನ್ನು ಕೇವಲ ನಾಗರಿಕರ ನೈಸರ್ಗಿಕ ಹಕ್ಕಾಗಿ ಮಾತ್ರ ಮಹತ್ವ ನೀಡಿಲ್ಲ. ಬದಲಾಗಿ ಭಾರತದಲ್ಲಿ ಹೆಚ್ಚುತ್ತಿರುವ ಮಧ್ಯಮವರ್ಗಗಳ ಆಶೋತ್ತರಗಳನ್ನು ಈಡೇರಿಸಲು ಬಳಸಿದ್ದಾರೆ ಎಂದು ದಿ ಲ್ಯಾನ್ಸೆಟ್‍ನ ಸಂಪಾದಕ ರಿಚರ್ಡ್ ಹರ್ಟೋನ್ ಮೋದಿಜೀಯನ್ನು ಹಾಡಿ ಹೊಗಳಿದ್ದಾರೆ!!

 

ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ದಿ ಲ್ಯಾನ್ಸೆಟ್‍ನ ಸಂಪಾದಕ!!

ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಸಂಪಾದಕ, ಮೋದಿಕೇರ್‍ಗೆ ರಾಹುಲ್ ಇನ್ನಷ್ಟೇ ಹೊಂದಿಕೆಯಾಗಬೇಕು ಎಂದಿದ್ದಾರೆ. ಆರೋಗ್ಯ ಮುಂಬರುವ ಲೋಕಸಭಾ ಚುನಾವಣೆಗೆ ನಿರ್ಣಾಯಕ ವಿಷಯವಾಗಲಿದೆ ಎಂಬುವುದಾಗಿ ಅವರು ಅಭಿಪ್ರಾಯಿಸಿದ್ದಾರೆ!! ಇಡೀ ಜಗತ್ತಿಗೆ ತಿಳಿದೆ ಮೋದಿಜೀ ಪವರ್ ಏನೂಂತ.. ಹಾಗೇ ಯುಪಿಎ ಸರಕಾರದ ನಿರ್ಲಕ್ಷ್ಯತನವೂ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇಷ್ಟೆಲ್ಲಾ ನಿರ್ಲಕ್ಷ್ಯ ತೋರುವ ಯುಪಿಎ ಸರಕಾರವನ್ನು ಯಾವತ್ತೂ ಅಧಿಕಾರದ ಗದ್ದುಗೆಯೇರಲು ಬಿಡಬಾರದು…

ಪ್ರಧಾನಿ ನರೇಂದ್ರ ಮೋದಿಜೀಯವರ ಆಯುಷ್ಮಾನ್ ಭಾರತ್ ಯೋಜನೆಯಿಂದ ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಈ ಯೋಜನೆ ಅನುಕೂಲವಾಗಿದೆ. ಬಡತನ ರೇಖೆಗಿಂತ ಕೆಳಗಿರುವವರು ಕೆಳ ಹಾಗೂ ಮಧ್ಯಮ ಹಂತದ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಗೆ ಕೇಂದ್ರ ಸರ್ಕಾರ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಿದೆ. ಇದರಿಂದ ಕೋಟ್ಯಂತರ ಜನ ಆರೋಗ್ಯ ಭದ್ರತೆ ಪಡೆಯಲಿದ್ದಾರೆ. ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಸೇವೆಯನ್ನು ಘೋಷಿಸಿದ್ದು, ಆ ಕುಟುಂಬದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗೆ ಯಾವುದೇ ಆಸ್ಪತ್ರೆಯಲ್ಲೂ 5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ಉಚಿತವಾಗಿ ದೊರೆಯಲಿದೆ. ಈ ಯೋಜನೆ ಭಾರತದ 10 ಕೋಟಿ ಕುಟುಂಬಗಳಿಗೆ ತಲುಪಲಿದ್ದು, ಬರೋಬ್ಬರಿ 50 ಕೋಟಿ ಜನರು, ಅಂದರೆ ಭಾರತದಲ್ಲಿ ವಾಸವಿರುವ ಅರ್ಧದಷ್ಟು ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. 10 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಭಾರತದ ಯಾವುದೇ ಕುಟುಂಬವೂ ಆರೋಗ್ಯದ ತೊಂದರೆಯಿಂದ ಹಣದ ಸಮಸ್ಯೆಯನ್ನು ಎದುರಿಸಬಾರದು ಎಂಬ ಆಶೋತ್ತರವನ್ನು ಮೋದಿ ಸರ್ಕಾರ ಈಡೇರಿಸಿದೆ ಎಂದು ಹೇಳಬಹುದು!!

Image result for ayushman bharat scheme

ಭಾರತದ ಅದೆಷ್ಟೋ ಕಡೆಗಳಲ್ಲಿ ಬಡ ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ಆರೋಗ್ಯ ಸಮಸ್ಯೆಯಿಂದ ದಿಕ್ಕೇ ತೋಚದೆ ಭಿಕ್ಷೆ ಬೇಡುವ ಸ್ಥಿತಿಯನ್ನೂ ತಲುಪುವ ಸನ್ನಿವೇಶಗಳನ್ನು ನಾವು ನೋಡುತ್ತಿರುತ್ತೇವೆ. ದುಬಾರಿಯಾಗುತ್ತಿರುವ ಆಸ್ಪತ್ರೆಗಳ ಬಿಲ್‍ಗಳಿಂದ ಅದೆಷ್ಟೋ ಜೀವಗಳು ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಸರ್ಕಾರ ಅದೆಷ್ಟು ಪ್ರಯತ್ನ ಪಡುತ್ತಿದ್ದರೂ ಸಹ ಈ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನೇ ಇಟ್ಟಿದೆ. ಯಾರೂ ನಿರೀಕ್ಷಿಸದಂತೆ ಅತಿ ದೊಡ್ಡ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸಿದ್ದು, ಬಡವರ ಪಾಲಿಗೆ ಭಾರೀ ಕೊಡುಗೆಯನ್ನೇ ನೀಡಿದ್ದು ಬಡ ಜನರಿಗೆ ಮೋದಿ ಸರಕಾರದಿಂದ ಬಹುದೊಡ್ಡ ಕೊಡುಗೆ ಎಂದು ಇಡೀ ಜಗತ್ತೇ ಮೋದಿ ಸರಕಾರವನ್ನು ಹಾಡಿ ಕೊಂಡಾಡುತ್ತಿದೆ.

source : news13.in

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close