ಪ್ರಚಲಿತ

ಮತ್ತೆ ಹಿಂದೂಗಳನ್ನು ಕೆಣಕಿದ ಮಣಿಶಂಕರ್ ಅಯ್ಯರ್.!ರಾಮ ಹುಟ್ಟಿದ್ದು ಎಲ್ಲೆಂದು ಗೊತ್ತೇ ಇಲ್ಲವಂತೆ..!

ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಿಂದಿಸಿ ಕಾಂಗ್ರೆಸ್ಸಿನಿಂದಲೇ ಉಚ್ಚಾಟನೆಯಾಗಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಇದೀಗ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾನೆ. ರಾಷ್ಟ್ರದಲ್ಲಿ ಹಿಂದೂಗಳ ಆರಾಧ್ಯ ಮೂರ್ತಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭವ್ಯ ಮಂದಿರವನ್ನು ಅಯೋಧ್ಯೆಯ ಪುಣ್ಯಭೂಮಿಯಲ್ಲೇ ನಿರ್ಮಿಸಬೇಕೆಂಬ ಹೋರಾಟಗಳು ನಡೆಯುತ್ತಿದೆ. ಸ್ಥಳದಲ್ಲಿದ್ದ ಬಾಬ್ರೀ ಮಸೀದಿಯನ್ನು ಧ್ವಂಸಗೊಳಿಸಿದ್ದರೂ ಸ್ವತಃ ಮುಸಲ್ಮಾನರೇ ರಾಮ ಮಂದಿರ ನಿರ್ಮಾಣಕ್ಕೆ ಜೈ ಎಂದಿದ್ದಾರೆ.

ಆದರೆ ಸದಾ ಹಿಂದೂಗಳ ಭಾವನೆಯನ್ನು ಕೆರಳಿಸುತ್ತಿರುವ ಕಾಂಗ್ರೆಸ್ ನಾಯಕರು ಇದೀಗ ಮತ್ತೆ ಹಿಂದೂಗಳನ್ನು ಕೆರಳಿಸಿದ್ದಾರೆ. ಈ ಹಿಂದೆ ಮೋದಿಯವರನ್ನು ನೀಚ ಎಂದು ಹೇಳಿ ದೇಶದಲ್ಲೇ ಸಿಟ್ಟಿಗೇಳಲು ಕಾರಣರಾಗಿದ್ದ ಮಣಿಶಂಕರ್ ಅಯ್ಯರ್ ಇದೀಗ ರಾಮನನ್ನು ನಿಂದಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ. “ಶ್ರೀ ರಾಮ ಎಲ್ಲಿ ಹುಟ್ಟಿದ್ದೆಂದು ಯಾರಿಗೆ ಗೊತ್ತು?” ಎನ್ನುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾನೆ.ಏಕ್ ಶಾಮ್ ಬಾಬ್ರಿ ಮಸ್ಜಿದ್ ಕೆ ನಾಮ್ ಎಂಬ ಕಾರ್ಯಕ್ರಮದಲ್ಲಿ ಮಣಿಶಂಕರ್ ಅಯ್ಯರ್ ಈ ಉಡಾಫೆ ಮಾತುಗಳನ್ನು ಆಡಿದ್ದಾನೆ. “ದಶರಥನ ಮಹಲಿನಲ್ಲಿ ಒಟ್ಟು ೧೦೦೦ ಕೋಣೆಗಳಿದ್ದವು. ಅದರಲ್ಲಿ ರಾಮ ಯಾವ ಕೋಣೆಯಲ್ಲಿ ಹುಟ್ಟಿದ್ದಾನೆ ಎಂದು ಯಾರಿಗೆ ಗೊತ್ತು? ಮತ್ತೆ ಮಂದಿರವನ್ನು ಯಾವ ಕೋಣೆಯಲ್ಲಿ ಕಟ್ಟುತ್ತೀರ? ನಮ್ಮ ಸರ್ಕಾರದ ನರಸಿಂಹ ರಾವ್ ಅವರ ಹಿಂದೂ ಪರವಾಗಿರುವ ಧೋರಣೆಯಿಂದ ತಪ್ಪಾಗಿದೆ” ಎಂದು ಇದೇ ವೇಳೆ ಹೇಳಿದ್ದಾನೆ.

ಒಟ್ಟಾರೆ ಹಿಂದೂಗಳನ್ನು ನಿಂದಿಸುವ ಕಾಂಗ್ರೆಸ್ಸಿನ ಮನಸ್ಥಿತಿ ಇದೀಗ ಮತ್ತೊಮ್ಮೆ ಹಿಂದೂಗಳನ್ನು ಕೆಣಕಿದೆ. ಈ ಮೂಲಕ ನಾವೂ ಹಿಂದೂಗಳ ಪರವೆಂದು ಜನಿವಾರ ತೋರಿಸಿ ಜನರನ್ನು ಮೂರ್ಖರನ್ನಾಗಿಸಿದ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮುಖವಾಡ ಕಳಚಿ ಬಿದ್ದಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close