ಅಂಕಣಇತಿಹಾಸ

ಭಾರತದ ಇತಿಹಾಸಕ್ಕೆ ಸಂಬಂಧಪಟ್ಟ 50000 ವರ್ಷಗಳಷ್ಟು ಹಳೆಯ ವಿಶಾಲಕಾಯದ ಆನೆಯ ಪಳೆಯುಳಿಕೆಯನ್ನು ಕಾಶ್ಮೀರದ ಮ್ಯೂಸಿಯಂನಿಂದ ಕದ್ದವರು ಯಾರು? ಎಲ್ಲಿದೆ ಆ ಪಳೆಯುಳಿಕೆ?

ಭಾರತೀಯ ಪುರಾಣಗಳಲ್ಲಿ ಉಲ್ಲೇಖವಾಗಿರುವಂತಹ ವಿಶಾಲಕಾಯದ ಆನೆಯ ಪಳೆಯುಳಿಕೆಯೊಂದು ಕಾಶ್ಮೀರದಲ್ಲಿ ಉತ್ಖನನ ನಡೆಸುತ್ತಿದ್ದಾಗ ಪುರಾತತ್ವಶಾಸ್ತ್ರಜ್ಞರಿಗೆ ದೊರಕುತ್ತದೆ. ಈ ಪಳೆಯುಳಿಕೆಗಳ ಕಾರ್ಬನ್ ಡೇಟಿಂಗ್ ನಡೆಸಿದಾಗ ಇದು ಕನಿಷ್ಟ 50000 ಗಳಷ್ಟು ಹಳೆಯದು ಎಂದು ತಿಳಿದುಬರುತ್ತದೆ! ಭಾರತದ ಇತಿಹಾಸ ಮಾತ್ರವಲ್ಲ, ಜಗತ್ತಿನ ಇತಿಹಾಸದ ದೃಷ್ಟಿಯಿಂದಲೂ ಈ ಪಳೆಯುಳಿಕೆ ಅತ್ಯಂತ ಮಹತ್ವಪೂರ್ಣವಾಗಿದೆ. ಆದರೆ ಈಗ ಈ ಪಳೆಯುಳಿಕೆ ಕಾಣೆಯಾಗಿದೆಯಂತೆ!!

ಕಾಶ್ಮೀರದ ಇತಿಹಾಸ

ಕಶ್ಮೀರಕ್ಕೆ ಅದರ ಹೆಸರು ಮಹರ್ಷಿ ಕಶ್ಯಪರಿಂದ ಬಂತೆಂದು ಹೇಳುತ್ತಾರೆ. ಸಂಸ್ಕೃತದಲ್ಲಿ ಕಶ್ಯಪ ಅಂದರೆ “ಕಚ್ಚಪ” ಅರ್ಥಾತ್ ಆಮೆ. ಕಶ್ಮೀರ(ಕಾಶ್ಮೀರ) ಮಹರ್ಷಿ ಕಶ್ಯಪರ ಕರ್ಮ ಭೂಮಿ. ಆದಿ ಕಾಲದಲ್ಲಿ ಈ ಭೂಪ್ರದೇಶ ನೀರಿನಿಂದ ಆವೃತ್ತವಾಗಿತ್ತು, ಕಾಲಕ್ರಮೇಣ ಇಲ್ಲಿನ ನೀರು ಆರಿ ಈಗಿರುವ ಕಶ್ಮೀರ ರೂಪುಗೊಂಡಿತು ಎಂದು ಭೂಗರ್ಭ ಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಪುರಾಣಗಳಲ್ಲಿ ಕಶ್ಯಪರು ಇಲ್ಲಿ ತಮ್ಮ ಪರಿವಾರದೊಂದಿಗೆ ಸಂಸಾರ ಮಾಡಿದ ಉಲ್ಲೇಖಗಳಿವೆ. ಪ್ರಪಂಚದ ಹಲವಾರು ಜಾನಪದೀಯ ಸಂಸ್ಕೃತಿಗಳಲ್ಲಿ ಕಶ್ಯಪರ ಉಲ್ಲೇಖವಿದೆ. ಕ್ಯಾಸ್ಪಿಯನ್ ಸಮುದ್ರ ಕೂಡಾ ಕಶ್ಯಪರ ಹೆಸರಿನಿಂದಲೆ ಬಂದಿರುವಂತದ್ದು. ನ್ಯೂಜಿಲ್ಯಾಂಡ್, ಪರ್ಶಿಯಾ, ಖುರಾಸಾನಿ, ಟರ್ಕ್ ಮೇನಿಸ್ತಾನ್, ಪೋಲಿಶ್ ಮತ್ತು ಟೋಕರಿಯಾನ್ ಇತಿಹಾಸದಲ್ಲೂ ಕಶ್ಯಪರ ಹೆಸರು ಕೇಳಿ ಬರುತ್ತದೆ.

ಕ್ರಿಸ್ಟೋಫರ್ ಸ್ನೋಡೆನ್ ಪ್ರಕಾರ ” ಕಶ್ಯಪ ಮೀರ್” ಅಂದರೆ “ಕಶ್ಯಪ ಸರೋವರ” ವೆ ಅಪಭ್ರಂಶವಾಗಿ ‘ಕಶ್ಮೀರ್’ ಆಗಿ ಮಾರ್ಪಟ್ಟಿದೆ. ವೈಕಲ್ಪಿಕ ರೂಪದಲ್ಲಿ “ಕಶ್ಯಪ ಮೇರು” ಅಂದರೆ ಕಶ್ಯಪ ಪರ್ವತವೆ ಕಶ್ಮೀರ ಆಗಿರುವ ಸಾಧ್ಯತೆ ಇದೆ ಎಂದೂ ಹೇಳುತ್ತಾರೆ. ಸುಮಾರು 50000 ವರ್ಷಗಳ ಹಿಂದೆ ಇಲ್ಲಿ ಒಂದು ಸರೋವರವಿತ್ತು ಮತ್ತು ಕಾಲ ಕ್ರಮೇಣ ಈ ಸರೋವರದ ನೀರು ಇಂಗಿ ಹೋಗಿ ಮನುಷ್ಯ ಈ ಭಾಗದಲ್ಲಿ ಆವಾಸ ಮಾಡಲು ತೊಡಗಿದನು ಎಂದು ಭೂವಿಜ್ಞಾನಿಗಳು ಹೇಳುತ್ತಾರೆ.

ಕಶ್ಯಪರ ಕಶ್ಮೀರದಲ್ಲಿ ದೊರೆಯಿತು 50000 ವರ್ಷಗಳಷ್ಟು ಹಳೆಯ ವಿಶಾಲಕಾಯದ ಆನೆಯ ಪಳೆಯುಳಿಕೆ

2000 ಇಸವಿಯಲ್ಲಿ ಕಾಶ್ಮೀರದ ಗಲಂಧರ್ನಲ್ಲಿ ಉತ್ಖನನ ನಡೆಸುತ್ತಿದ್ದಾಗ ದೊರೆತ ಈ ಪಳೆಯುಳಿಕೆ Pleistocene ಯುಗಕ್ಕೆ ಸಂಬಂಧಪಟ್ಟಿದೆ. Pleistocene ಯುಗ ಈಗಿನಿಂದ 2,588,000 ವರ್ಷಗಳಿಂದ 11,700 ವರ್ಷಗಳವರೆಗೆ ನಡೆದಿದೆ. ಇದೆ ಸಮಯದಲ್ಲಿ ಭೂಮಿಯ ಮೇಲೆ ಮಾನವನ ಉಗಮವಾದದ್ದು ಎಂದು ಸಂಶೋಧನೆಗಳು ಹೇಳುತ್ತವೆ. ಇಲ್ಲಿ ದೊರೆತ ಪಳೆಯುಳಿಕೆ 50000 ವರ್ಷಗಳಷ್ಟು ಹಳೆಯದು!! ಭಾರತದ ಪುರಾಣಗಳಲ್ಲಿ ಈ ಆನೆಯ ಉಲ್ಲೇಖವಿರುವುದು ಅವುಗಳ ವಿಶ್ವಾಸಾರ್ಹತೆ ಮತ್ತು ವಾಸ್ತಕವಿಕತೆಯನ್ನು ತೋರಿಸುತ್ತವೆ. ಸನಾತನ ಭಾರತೀಯ ವೇದಗಳು ಮತ್ತು ಪುರಾಣಗಳನ್ನು ರಚಿಸಲ್ಪಟ್ಟ ಕಾಲವನ್ನು ಈ ಪಳೆಯುಳಿಕೆಗಳಿಂದ ಅಂದಾಜಿಸಬಹುದು.

ಆದರೆ ನಮಗೆ ಆ ಸೌಭಾಗ್ಯ ದೊರಕಲು ಕೆಲವು ರಾಜಕೀಯ ಹಿತಾಸಕ್ತಿಗಳು ಬಿಡುವುದಿಲ್ಲ. ಇಂತಹ ಅತ್ಯಂತ ಮಹತ್ವದ ಪಳೆಯುಳಿಕೆಯ ಜೊತೆ ಚೆಲ್ಲಾಟವಾಡಿ ಈಗ ಆ ಪಳೆಯುಳಿಕೆ ಕಾಣೆಯಾಗಿದೆ ಎಂದು ಕಣ್ಣಿಗೆ ಮಣ್ಣೆರಚಲಾಗುತ್ತಿದೆ. 2007 ರಲ್ಲಿ ಈ ಪಳೆಯುಳಿಕೆಯನ್ನು ಉತ್ಖನನದ ಜಾಗದ ಟಿನ್ ಶೆಡ್ ನಿಂದ “ಗುಪ್ತವಾಗಿ” ಸಾಗಿಸಿ ಜಮ್ಮು ವಿಶ್ವವಿದ್ಯಾನಿಲಯದಲ್ಲಿ ಇಡಲಾಗುತ್ತದೆ.

ಜಮ್ಮುವಿನ ಭೂಗರ್ಭ ಶಾಸ್ತ್ರ ವಿಶ್ವವಿದ್ಯಾನಿಲಯದಲ್ಲಿ ಧೂಳು ತಿನ್ನುತ್ತಿದ್ದ ಈ ಪಳೆಯುಳಿಕೆಯನ್ನು ಪ್ರಾಕೃತಿಕ ಇತಿಹಾಸದ ವಾಡಿಯಾ ಮ್ಯೂಸಿಯಂಗೆ ಸ್ಥಳಾಂತರಿಸಲಾಗುತ್ತದೆ. 2017 ರಲ್ಲಿ ಖಾಲಿದ್ ಬಶೀರ್ ಅಹಮದ್ ಎನ್ನುವ KAS ಅಧಿಕಾರಿ ತಮ್ಮ ಸಂಶೋಧನೆಗೆ ಪಳೆಯುಳಿಕೆ ಬೇಕೆಂದು ಕೇಳಿ ಆರ್.ಟಿ.ಐ ಅರ್ಜಿ ಸಲ್ಲಿಸುತ್ತಾರೆ. ಆರ್.ಟಿ.ಐ ನೀಡಿದ ಉತ್ತರ ನೋಡಿ ಅವರ ತಲೆ ತಿರುಗಿ ಹೋಗುತ್ತದೆ. ಏಕೆಂದರೆ ಅಲ್ಲಿ ಆ ಪಳೆಯುಳಿಕೆಗಳೇ ಇಲ್ಲವೆಂದು ಅವರಿಗೆ ಉತ್ತರ ನೀಡಲಾಗುತ್ತದೆ.

ವಿಶ್ವವಿದ್ಯಾನಿಲಯವನ್ನು ಈ ಕುರಿತಾಗಿ ಪ್ರಶ್ನಿಸಿದಾಗ ಆಡಳಿತ ಮಂಡಳಿಯು ಇದು “ಸಾರ್ವಜನಿಕ ಹಿತಾಸಕ್ತಿಯ” ವಿಷಯವಲ್ಲ ಎಂದು ಹೇಳಿ ಬೇಜಾವಬ್ದಾರಿಯ ಉತ್ತರ ನೀಡುತ್ತದೆ. ವಿಶ್ವ ವಿದ್ಯಾನಿಲಯದ ಉತ್ತರ ಕಂಡು ಕೆಂಡಾಮಂಡಲರಾದ ಖಾಲಿದ್ ಆಡಲಿತ ಮಂಡಳಿಯನ್ನು ಹಿಗ್ಗಾಮುಗಾ ಝಾಡಿಸುತ್ತಾರೆ. 50000 ವರ್ಷಗಳಷ್ಟು ಹಿಂದಿನ ಪಳೆಯುಳಿಕೆಯ ವಿಷಯದಲ್ಲಿ ಇಷ್ಟು ಬೇಜಾವಬ್ದಾರಿಯಿಂದ ವರ್ತಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಪಟ್ಟು ಬಿಡದ ಖಾಲಿದ್ ಮತ್ತೆ ಮತ್ತೆ ಆ ಪಳೆಯುಳಿಕೆಯ ಬಗ್ಗೆ ಪ್ರಶ್ನಿಸುತ್ತಾರೆ ಆದರೆ ಪ್ರತಿ ಬಾರಿಯೂ ಪಳೆಯುಳಿಕೆ ಅಲ್ಲಿಲ್ಲ ಎನ್ನುವ ಉತ್ತರವೆ ಅವರಿಗೆ ದೊರೆಯುತ್ತದೆ.

ಛಲ ಬಿಡದ ಖಾಲಿದ್ ಜಮ್ಮು ಕಾಶ್ಮೀರದ ಅಂದಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಗೂ ಪತ್ರ ಬರೆದು ಪಳೆಯುಳಿಕೆಯನ್ನು ವಾಪಾಸು ಕೊಡುವಂತೆ ಕೇಳಿಕೊಳ್ಳುತ್ತಾರೆ. ಮನವಿಗೆ ಸ್ಪಂದಿಸಿದ ಸರಕಾರ ವಿಶ್ವವಿದ್ಯಾನಿಲಯಕ್ಕೆ ನೋಟೀಸು ನೀಡಿ ಪಳೆಯುಳಿಕೆಯನ್ನು ಸರಕಾರಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡುತ್ತದೆ. ಆದರೆ ಇದ್ಯಾವುದೂ ಫಲ ಕೊಡುವುದಿಲ್ಲ. ಧೃತಿಗೆಡದ ಖಾಲಿದ್ ಅಲ್ಲಿಂದ ಇಲ್ಲಿವರೆಗೂ ಮತ್ತೆ ಮತ್ತೆ ವಿಶ್ವವಿದ್ಯಾಲಯದ ಬಾಗಿಲು ತಟ್ಟುತ್ತಲೆ ಇದ್ದಾರೆ ಆದರೆ ಉತ್ತರ ಮಾತ್ರ ಸಿಕ್ಕಿಲ್ಲ.

9 ಜನವರಿ 2018 ರಂದು ಜಮ್ಮು ವಿಶ್ವವಿದ್ಯಾನಿಲಯದ ಪಿ.ಐ.ಓ ನಿಂದ ಖಾಲಿದ್ ಅಹಮದ್ ರವರಿಗೆ ಪ್ರತವೊದು ಬರುತ್ತದೆ. ದುಃಖದ ವಿಷಯವೇನೆಂದರೆ ಆ ಪತ್ರದಲ್ಲಿ ಆನೆಯ ಪಳೆಯುಳಿಕೆ ವಿಶ್ವವಿದ್ಯಾಲಯದ ಮೂಸಿಯಂನಲ್ಲಿ ಇಲ್ಲವೆಂದು ಬರೆಯಲಾಗಿದೆ. ಹಾಗಾದರೆ ಆ ಪಳೆಯುಳಿಕೆ ಎಲ್ಲಿ ಹೋಯಿತು? ಇದ್ದವರು ಮೂವರು ಕದ್ದವರು ಯಾರು? ಭಾರತೀಯ ಪುರಾತತ್ವ ಸಂಸ್ಥೆಗೆ ಈ ವಿಚಾರದ ಬಗ್ಗೆ ಆಸಕ್ತಿ ಏಕಿಲ್ಲ? ಇಷ್ಟೊಂದು ಮಹತ್ವಪೂರ್ಣ ಪಳೆಯುಳಿಕೆಯನ್ನು ಬೇಜವಾಬ್ದಾರಿಯಿಂದ ಕಳೆದುಕೊಂಡದಕ್ಕೆ ಯಾರಿಗೂ ಶಿಕ್ಷೆ ಯಾಕಾಗಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು?

-Postcard team

Tags

Related Articles

FOR DAILY ALERTS
 
FOR DAILY ALERTS
 
Close