ದೇಶಪ್ರಚಲಿತ

ಆರ್.ಎಸ್.ಎಸ್ ಶಾಲೆಗಳನ್ನೇ ಮುಚ್ಚಲು ಮುಂದಾಗಿರುವ ಮಮತಾ ಬ್ಯಾನರ್ಜಿ ಪುರಾತನವಾದ ಜೈಲುಗಳನ್ನೇ ಸ್ಥಳಾಂತರಿಸಲು ಮುಂದಾಗಿರುವುದಾದರೂ ಯಾಕೆ ಗೊತ್ತೇ??

ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುವ ಮಮತಾ ಬ್ಯಾನರ್ಜಿ ಮೊಹರಂ ನ ಸಮಯದಲ್ಲಿ ದುರ್ಗಾಪೂಜೆಯ ಮೂರ್ತಿ ವಿಸರ್ಜನೆಯಿಂದಾಗಿ ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿಯಾಗುವುದೆಂಬ ಕಾರಣವನ್ನಿಟ್ಟುಕೊಂಡು ದುರ್ಗಾ ಮಾತೆಯ ವಿಸರ್ಜನೆಯನ್ನು ಮುಂದೂಡುವಂತೆ ಹೇಳಿ ಹಿಂದೂಗಳನ್ನು ಕೆರಳಿಸುವಂತೆ ಮಾಡಿದ್ದರು. ಆದರೆ ಇದೀಗ ಸರ್ವಾಧಿಕಾರಿಯಂತೆ ವರ್ತಿಸಲು ಆರಂಭಿಸಿರುವ ಇವರು ತಮ್ಮ ಸ್ವಾರ್ಥ ಸಾಧನೆಯಿಂದಾಗಿ ಪ್ರತಿಪಕ್ಷ ಸೇರಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು…. ಒಂದಲ್ಲ ಒಂದು ರೀತಿಯಲ್ಲಿ ಹಿಂದೂಗಳನ್ನು ದಮನ ಮಾಡುತ್ತಲೇ ಇರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರ್ಯಕರ್ತರು “ವಂದೇ ಮಾತರಂ” ಘೋಷಣೆ ಕೂಗುತ್ತಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿ ತೀವ್ರ ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೇ, ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ವಿರುದ್ಧ ಆಜೀವ ಪರ್ಯಂತ ಹೋರಾಡಿ ಅಧಿಕಾರವನ್ನೇರಿದ್ದು, ಇದೀಗ ಕಮ್ಯುನಿಸ್ಟರಿಗಿಂತ ಹೆಚ್ಚಾಗಿ ಹಿಂದೂಗಳನ್ನು ದ್ವೇಷಿಸಲು ಆರಂಭಿಸಿದ್ದಾರೆ. ಅದಕ್ಕೆ ದುರ್ಗಾ ಪೂಜೆಗೆ ಅಡ್ಡಿಯಾದ ರೀತಿ, ಕೋಮುವಾದ ಸೃಷ್ಟಿ ಸೇರಿ ಹಲವು ಕಾರಣಗಳನ್ನು ನೀಡಬಹುದು.

ಆದರೆ ಇದೀಗ ಹವಾಯಿ ಚಪ್ಪಲಿ, ಸಾಧಾರಣ ಸೀರೆ ತೊಟ್ಟು ಸರಳತನಕ್ಕೆ ಹೆಸರುವಾಸಿಯಾಗಿದ್ದ ದೀದಿ ಮಾತ್ರ ಇತ್ತೀಚೆಗೆ ಅಪಾರ ಸೌಲಭ್ಯ ಹಾಗೂ ಸರ್ವಾಧಿಕಾರಿಯಂತೆ ವರ್ತಿಸಲು ಆರಂಭಿಸಿದ್ದಾರೆ. ಇದಕ್ಕೆ ಮುನ್ನುಡಿಯಾಗಿ ತಮಗೆ ಮನೆಯಲ್ಲಿದ್ದಾಗ ಮೊಬೈಲಿಗೆ ನೆಟ್ ವರ್ಕ್ ಸಿಗುತ್ತಿಲ್ಲ ಎಂದು ಕೋಲ್ಕತ್ತಾದಲ್ಲಿರುವ ಪುರಾತನ ಮೂರು ಜೈಲುಗಳನ್ನೇ ಸ್ಥಳಾಂತರಿಸಲು ಮುಂದಾಗಿದ್ದು, ಪ್ರತಿಪಕ್ಷ ಸೇರಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಇತ್ತ ಕಡೆ 2000 ಕೈದಿಗಳನ್ನು ಎಲ್ಲಿಗೆ ಸ್ಥಳಾಂತರಿಸಬೇಕು ಎನ್ನುವ ಪ್ರಶ್ನೆ ಕೋಲ್ಕತ್ತಾ ಮಹಾನಗರ ಪಾಲಿಕೆಗೆ ಕಾಡಲಾರಂಭಿಸಿದೆ.

ಈಗಾಗಲೇ ಮಮತಾ ಬ್ಯಾನರ್ಜಿ ಹಿಂದೂಗಳನ್ನು ವಿರೋಧಿಸಲು ಹೊಸದೊಂದು ಅಸ್ತ್ರವೊಂದನ್ನು ಬಳಸಿ ತೀವ್ರ ಸುದ್ದಿಯಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ಆರೆಸ್ಸೆಸ್ ನಡೆಸುತ್ತಿದ್ದ 125 ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿರುವ ವಿಚಾರ ಎಲ್ಲೆಡೆ ಸುದ್ದಿಯಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಡೆಸುತ್ತಿರುವ 125 ಶಾಲೆಗಳನ್ನು ಮುಚ್ಚಬೇಕು ಎಂದು ರಾಜ್ಯ ಶಿಕ್ಷಣ ಸಚಿವ ಪಾರ್ಥ ಸಚಿವ ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಿದ್ದರು. ಅಷ್ಟೇ ಅಲ್ಲದೆ ಸುಮಾರು 493 ಶಾಲೆಗಳನ್ನು ಮುಚ್ಚಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪಾರ್ಥ ಚಟರ್ಜಿ ತಿಳಿಸಿದ್ದರು.

ಇದಕ್ಕೆ ರಾಜ್ಯ ಸರ್ಕಾರ ಹಲವು ನೆಪವೊಡ್ಡಿದ್ದು, ಆರೆಸ್ಸೆಸ್ ನಡೆಸುತ್ತಿರುವ ಶಾಲೆಗಳಲ್ಲಿ ಅಹಿಂಸೆಗೆ ಪ್ರಚೋದನೆ, ಧರ್ಮ ಧರ್ಮಗಳ ನಡುವೆ ಅಸಹಿಷ್ಣುತೆ ಬಿತ್ತುತ್ತಿದೆ ಎಂದು ಆರೋಪಿಸಲಾಗಿದ್ದು, ಹಿಂದೂಗಳನ್ನು, ಅದರಲ್ಲೂ ಆರೆಸ್ಸೆಸ್ಸನ್ನು ಮಟ್ಟಹಾಕಲು ದೀದಿ ಈ ಕುತಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿವೆ. ಆದರೆ ಇದೀಗ ತಮ್ಮ ಸ್ವಾರ್ಥ ಸಾಧನೆಗೋಸ್ಕರವಾಗಿ ಪುರಾತನವಾದ ಮೂರು ಜೈಲುಗಳನ್ನೇ ಸ್ಥಳಾಂತರಿಸಲು ಮುಂದಾಗಿರುವ ಮಮತಾ ಬ್ಯಾನರ್ಜಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವ ಸಂಶಯವನ್ನು ಸೃಷ್ಟಿ ಮಾಡುತ್ತಿದೆ.

ಈಗಾಗಲೇ ಕೇಂದ್ರ ಸರ್ಕಾರದ ನೋಟು ನಿಷೇಧವನ್ನು ವಿರೋಧಿಸಿ ಪಡೆ ಕಟ್ಟಿ ನಗಪಾಟಲಿ ಗೀಡಾಗಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ನಿಲುವುಗಳ ವಿರುದ್ಧ, ನರೇಂದ್ರ ಮೋದಿಯವರ ವಿರುದ್ಧ ಆಗಾಗ ವಿರೋಧ ವ್ಯಕ್ತಪಡಿಸುತ್ತಲೇ ಬರುತ್ತಿರುವ ವಿಚಾರ ಗೊತ್ತೇ ಇದೆ. ಅಷ್ಟೇ ಅಲ್ಲದೇ, ಕೇಂದ್ರ ಸರ್ಕಾರ ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿರುವ ಆದೇಶ ಧಿಕ್ಕರಿಸಲು ಹೊರಟಿರುವ ಮಮತಾ ಬ್ಯಾನರ್ಜಿ, ತನ್ನ ಮೊಬೈಲ್ ಸಂಪರ್ಕ ಕಡಿತಗೊಳಿಸಿದರೂ ಸರಿಯೇ, ಮೊಬೈಲ್ ನಂಬರ್ ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲ್ಲ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಅಲ್ಲದೇ, ಸಾರ್ವಜನಿಕರ ಹಕ್ಕು ಹಾಗೂ ಖಾಸಗಿತನದ ವಿಷಯಗಳಲ್ಲಿ ಕೇಂದ್ರ ಸರ್ಕಾರ ವಿನಾಕಾರಣ ಮಧ್ಯಸ್ಥಿಕೆ ವಹಿಸುತ್ತಿದೆ. ಆಧಾರ್ ಸಂಖ್ಯೆ ಮೊಬೈಲ್ ನಂಬರಿಗೆ ಲಿಂಕ್ ಮಾಡುವ ಆದೇಶವೇ ಸರಿಯಿಲ್ಲ. ನಾನಂತೂ ಲಿಂಕ್ ಮಾಡಿಸುವುದಿಲ್ಲ ಎಂದು ಬೊಬ್ಬೆ ಹೊಡೆದಿದ್ದ ಮಮತಾ ಬ್ಯಾನರ್ಜಿ ಇದೀಗ ವಾಸವಾಗಿರುವ ಹರೀಶ್ ಚಟರ್ಜಿ ರಸ್ತೆಯಲ್ಲೇ ಮೂರು ಜೈಲುಗಳಿದ್ದು, ಇದೇ ಇವರಿಗೆ ತೀವ್ರ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ಅಷ್ಟೇ ಅಲ್ಲದೇ ಆ ಕಾರಣಕ್ಕಾಗಿ ಜೈಲನ್ನೇ ಸ್ಥಳಾಂತರಿಸಲು ನಿರ್ಧರಿಸಿರುವುದು ಮಾತ್ರ ವಿಪರ್ಯಾಸದ ಸಂಗತಿ.

ತನ್ನ ಮನೆಯ ಸಮೀಪವೇ ಇರುವ ಈ ಜೈಲಿನಲ್ಲಿ ಮೊಬೈಲ್ ನೆಟ್ ವರ್ಕ್ ಜಾಮರ್ ಅಳವಡಿಸಿದ್ದ ಕಾರಣ ಇದೀಗ ಮಮತಾ ಬ್ಯಾನರ್ಜಿ ಅವರು ನೆಟ್ ವರ್ಕ್ ಸಮಸ್ಯೆಯಾಗಿದೆ ಎಂದು ಬೊಬ್ಬಿಡಲು ಆರಂಭಿಸಿದ್ದಾರೆ. ಆದರೆ ಇದಕ್ಕೆ ಪರ್ಯಾಯ ಮಾರ್ಗವನ್ನು ಹುಡುಕುವ ಬದಲು ಜೈಲುಗಳನ್ನೇ ಸ್ಥಳಾಂತರಿಸಲು ದೀದಿ ಕೋಲ್ಕತ್ತಾ ಮಹಾನಗರ ಪಾಲಿಕೆಗೆ ಆದೇಶ ನೀಡಿರುವುದು ಹಲವು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕೇವಲ ಮೊಬೈಲ್ ನಂಬರ್ ಅನ್ನು ಆಧಾರ್ ಗೆ ಲಿಂಕ್ ಮಾಡಲು ಒಲ್ಲೆ ಎಂದ ಇವರು ಜೈಲನ್ನೇ ಸ್ಥಳಾಂತರಗೊಳಿಸಬೇಕೆಂದು ಉದ್ಧಟತನ ತೋರಿದ್ದಾರೆ.

ಈಗ ಮಮತಾ ಬ್ಯಾನರ್ಜಿ ಅವರ ಆದೇಶದಿಂದ ಪ್ರೆಸಿಡೆನ್ಸಿ ಜೈಲ್, ಎಲಿಪೆÇೀರ್ ಸೆಂಟ್ರಲ್ ಜೈಲ್ ಹಾಗೂ ಎಲಿಪೆÇೀರ್ ಮಹಿಳಾ ಜೈಲನ್ನು ಸ್ಥಳಾಂತರಿಸುವ ಅನಿವಾರ್ಯ ಎದುರಾಗಿದೆ ಎಂದು ತಿಳಿದು ಬಂದಿದೆ. ಇವುಗಳು ಸುಮಾರು 150 ಎಕರೆ ವ್ಯಾಪ್ತಿಯಲ್ಲಿದ್ದು, ಮತ್ತೊಂದೆಡೆ ನಿರ್ಮಾಣ ಮಾಡಬೇಕಿದೆ ಎನ್ನುವ ಸಮಸ್ಯೆ ಇದೀಗ ಎದುರಾಗಿದೆ. ಅಲ್ಲದೆ ಇದಕ್ಕೆ ಮಾರ್ಚ್ 31ರ ಗಡುವು ನೀಡಲಾಗಿದ್ದು, ಸುಮಾರು 2000 ಕೈದಿಗಳನ್ನು ಸಹ ಸ್ಥಳಾಂತರಿಸಬೇಕಾಗಿರುವುದು ಪಾಲಿಕೆಗೆ ನುಂಗಲಾರದ ತುತ್ತಾಗಿದೆ. ಆದರೆ ಮಮತಾ, ತನ್ನ ವಾಸಸ್ಥಳವನ್ನು ಬದಲಾಯಿಸಿಕೊಳ್ಳಲು ಮುಂದಾಗದೇ ಪುರಾತನವಾದ ಜೈಲನ್ನು ಬದಲಾಯಿಸಲು ಆದೇಶಿಸಿರುವುದನ್ನು ನೋಡಿದರೆ ಹಲವಾರು ಅನುಮಾನಗಳಿಗೆ ಇದು ಎಡೆಮಾಡಿಕೊಟ್ಟಂತಾಗಿದೆ.

ಒಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಹಿಂದೂಗಳನ್ನು ದಮನ ಮಾಡುತ್ತಲೇ ಇದ್ದು, ಇದೀಗ ನೆಟ್ ವರ್ಕ್ ಸಮಸ್ಯೆ ಇದೆ ಎನ್ನುವ ಕಾರಣಕ್ಕಾಗಿ ಪುರಾತನವಾದ ಜೈಲನ್ನೇ ಬದಲು ಮಾಡಲು ಹೊರಟಿದ್ದಾರೆ ಎಂದರೆ ಇದರ ಹಿಂದಿರುವ ಒಳಗುಟ್ಟಾದರೂ ಏನು ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close