ಅಂಕಣ

ಕೈಕಳೆದುಕೊಂಡರೂ ಭಗವದ್ಗೀತೆಯ ಒಂದು ಚೀಟಿಯನ್ನು ಹಿಡಿದುಕೊಂಡೇ ಯುದ್ಧ ಮಾಡಿದ್ದ ಈ ವೀರನಿಗೆ ಒದಗಿತ್ತು ಪರಮವೀರ ಚಕ್ರ!

ಇಡೀ ಭಾರತೀಯ ಸೇನೆಯೂ ಎಂದೂ ಮರೆಯದ ಹೆಸರು ಮೇಜರ್ ಸೋಮನಾಥ್ ಶರ್ಮಾ!! ಮೊದಲ ಪರಮವೀರಚಕ್ರ ಪಡೆದ ವೀರ ಯೋಧ ಎನ್ನಲು ಹೆಮ್ಮೆಯೆನಿಸುತ್ತದೆ!! ಕೈಯನ್ನು ಕಳೆದೊಕೊಂಡರೂ ಯುದ್ಧದಲ್ಲಿ ವೀರನಂತೆ ಹೋರಾಡಿ ಕಾಶ್ಮೀರ ಶತ್ರುಗಳ ಕೈ ಸೇರದಂತೆ ಮಾಡಿದ ಅಮರ ಈತ!! ಒಂದು ವೇಳೆ ಅಷ್ಟೊಂದು ನಮ್ಮ ಸೈನಿಕರು ಪ್ರಾಣಾರ್ಪಣೆ ಮಾಡದಿದ್ದರೆ ಕಾಶ್ಮೀರ ಶಾಶ್ವತವಾಗಿ ನಮ್ಮಿಂದ ಕೈತಪ್ಪಿಹೋಗುತ್ತಿತ್ತು!! ಸಣ್ಣದಿಂದಲೂ ದೇಶಭಕ್ತನಾಗಿದ್ದ ಸೋಮನಾಥ್ ಶರ್ಮಾ ತನ್ನ ಹನ್ನೊಂದನೇ ವಯಸ್ಸಿನಲ್ಲೇ ರಾಯಲ್ ಇಂಡಿಯನ್ ಮಿಲಿಟರಿ ಸೇರಿಕೊಂಡರು!!

ಏಳು ವರ್ಷಗಳ ಕಾಲ ಪರಿಶ್ರಮಪಟ್ಟು ಓದಿ ತೇರ್ಗಡೆಯಾದ ಸೋಮನಾಥರನ್ನು 1942 ಫೆಬ್ರವರಿ 22ರಂದು ಬ್ರಿಟಿಷ್ ಸೇನೆಯ `ಹೈದರಾಬಾದ್ ರೆಜಿಮೆಂಟ್’ ಗೆ ಸೇರ್ಪಡೆ ಮಾಡಲಾಯಿತು. ಅದರ ಬೆನ್ನಲ್ಲೇ ಮೊದಲ ಸತ್ವಪರೀಕ್ಷೆಯೂ ಎದುರಾಯಿತು. ಅದಾಗಲೇ ಎರಡನೇ ಮಹಾಯುದ್ಧ ಆರಂಭವಾಗಿ ಮೂರು ವರ್ಷಗಳಾಗಿದ್ದವು. ಭಾರತವನ್ನಾಳುತ್ತಿದ್ದ ಬ್ರಿಟಿಷರನ್ನು ಜಪಾನಿ ಸೇನೆ ನಿದ್ದೆಗೆಡಿಸಿತ್ತು. ಬರ್ಮಾ ಮೂಲಕ ಭಾರತದ ಮೇಲೆ ಆಕ್ರಮಣ ಮಾಡಲು ಯತ್ನಿಸುತ್ತಿದ್ದ ಜಪಾನಿ ಸೇನೆಯನ್ನು ಅರಕ್ಕಾನ್‍ನಲ್ಲಿ ಎದುರಿಸಲಾಯಿತು. ಆ ಕಾರ್ಯಾಚರಣೆಯಲ್ಲಿ ಬ್ರಿಟಿಷ್ ಸೇನೆಯನ್ನು ಮುನ್ನಡೆಸುತ್ತಿದ್ದವರು ನಮ್ಮ ಜನರಲ್ ಕೆ.ಎಸ್. ತಿಮ್ಮಯ್ಯ. ಅಂತಹ ವೀರಸೇನಾನಿಯ ಕೆಳಗೆ ಯುವ ಲೆಫ್ಟಿನೆಂಟ್ ಸೋಮನಾಥ ಶರ್ಮಾ ಮೊದಲ ಯುದ್ಧಪಾಠ ಕಲಿಯಲಾರಂಭಿಸಿದರು.

1945ರ, ಸೆಪ್ಟೆಂಬರ್‍ನಲ್ಲಿ ಸೋಮನಾಥ್ ಶರ್ಮಾ ಮುರಿದ ಕೈಯೊಂದಿಗೆ ದೇಶಕ್ಕೆ ವಾಪಸ್ಸಾದರು.!! ಅಜ್ಜ ಪಂಡಿತ್ ದೌಲತ್ ರಾಮ್ ಅವರು ಹೇಳುತ್ತಿದ್ದ ಭಗವದ್ಗೀತೆಯ ಕಥೆಗಳೆಂದರೆ ಸೋಮನಾಥ್‍ರಿಗೆ ಅಚ್ಚುಮೆಚ್ಚು!! ಮತ್ತೊಂದು ವಿಷಯವೆಂದರೆ 1943ರಲ್ಲಿ ತನ್ನ ತಂದೆಗೆ ಬರೆದ ಪತ್ರವೊಂದರಲ್ಲಿ ಸೋಮನಾಥ್ “ನಾನು ಸಿಕ್ಕ ಕರ್ತವ್ಯವನ್ನು ಚಾಚುತಪ್ಪದೆ ಪಾಲಿಸುತ್ತಿದ್ದೇನೆ. ಈ ಮದ್ಯೆ ಸಾವಿನ ಕ್ಷಣಿಕ ಬಯವೂ ಇದೆ. ಆದರೆ ಯಾವಾಗ ಭಗವದ್ಗೀತೆಯನ್ನು ನೆನೆಸಿಕೊಳ್ಳುತೇನೋ ಆಗ ನನ್ನ ಭಯ ಮಾಯವಾಗುತ್ತದೆ. ಜಗದೊಡೆಯ ಕೃಷ್ಣ `ಆತ್ಮ ಅಮರ’ ಎಂದಿದ್ದಾನೆ ಅಲ್ಲವೇ ಹಾಗಿದ್ದಾಗ ನನ್ನ ದೇಹ ನಷ್ಟವಾದರೇನು? ಅಪ್ಪ, ಮಾತುಕೊಡುತ್ತೇನೆ ನಿಮಿಗ್ಯಾವ ಅಂಜಿಕೆಯೂ ಬೇಡ, ನಿಮ್ಮ ಮಗ ಸಾವಿಗೆ ಹೆದರದೆ ವೀರಾವೇಶದಿಂದ ಹೊರಾಡಿ ಒಬ್ಬ ಮಾದರಿ ಸೈನಿಕನಾಗುತ್ತಾನೆ ಎಂದಿದ್ದರು!!

Image result for somnath sharma

ಅದಲ್ಲದೆ ತನ್ನ ಕುಟುಂಬ ಕೂಡಾ ಅದಾಗಲೇ ಸೇನೆಯಲ್ಲಿ ವೃತ್ತಿಯಲ್ಲಿದ್ದವರು!! ಆದರೆ ಸೋಮನಾಥರ ಮೇಲೆ ಬಹುವಾಗಿ ಪ್ರಭಾವ ಬೀರಿದ್ದು ಜಪಾನಿ ಸೇನೆಯ ಜತೆ ನಡೆದ ಕಾಳಗದಲ್ಲಿ ಪ್ರಾಣಾರ್ಪಣೆ ಮಾಡಿದ ಚಿಕ್ಕಪ್ಪ ಕ್ಯಾಪ್ಟನ್ ಕೃಷ್ಣದತ್ ವಾಸುದೇವ್. ಚಿಕ್ಕಪ್ಪನಂತೆ ತಾನೂ ರಣರಂಗದಲ್ಲಿ ಹೋರಾಡಬೇಕೆಂಬ ತುಡಿತವನ್ನಿಟ್ಟುಕೊಂಡಿದ್ದ ಸೋಮನಾಥ, 11ನೇ ವರ್ಷಕ್ಕೆ ಅಂದರೆ 1934ರಲ್ಲಿ ರಾಯಲ್ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿಕೊಂಡು 1942 ತನ್ನ ಕೈ ಕಳೆದುಕೊಂಡು ಮನೆಗೆ ವಾಪಾಸ್ಸಾಗಿದ್ದರು ಮತ್ತೆ ಸೇನೆಗೆ ವಾಪಾಸ್ಸಾಗಿದ್ದರು!!

1947 ಅಕ್ಟೋಬರ್ 27ರಂದು ಶತ್ರುಗಳು ನಮ್ಮ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಸಜ್ಜಾಗಿದ್ದಾರೆ ಎಂಬ ವಿಷಯ ತಿಳಿದು ಬಂತು!! ಅದಾಗಲೇ ಸ್ವಾತಂತ್ರ್ಯ ಬಂದು ಕೇವಲ ಎರಡು ತಿಂಗಳಷ್ಟೇ ಕಳೆದಿತ್ತಷ್ಟೆ!!… ಸ್ವತಂತ್ರ ಭಾರತವನ್ನು ಯಾವಾಗಲೂ ರಕ್ಷಿಸುವುದಕ್ಕಾಗಿ, ಶ್ರೀನಗರ, ಜಮ್ಮು ಗಡಿ ಪ್ರದೇಶಗಳಲ್ಲಿ ಸೈನಿಕರು ಆಗಲೇ ಗಡಿ ರಕ್ಷಣೆಗಿಳಿದಿದ್ದರು… ಅವರಿಗೆ ಆಗ ವಹಿಸಿದ ಕೆಲಸ ಗಡಿಭಾಗದಲ್ಲಿದ್ದು, ಶತ್ರುಗಳು ನಮ್ಮ ಗಡಿಭಾಗವನ್ನು ದಾಟದಂತೆ ಹಾಗೇ ನೋಡಿಕೊಳ್ಳುವುದು. ಕಾವಲು ಕಾಯುವುದು. ಆದರೆ ಮುಂದಿನ ವಾರದೊಳಗೆ ಭಯೋತ್ಪಾದಕರ ರೂಪದಲ್ಲಿ ಒಂದು ದೊಡ್ಡ ಅಪಘಾತ ಬರುತ್ತದೆಯೆಂದು, ಆಗಿನ್ನೂ ನಮ್ಮ ಸೈನಿಕರಿಗೆ ಗೊತ್ತಿರಲಿಲ್ಲ. ಆದರೂ ಅವರು ಯಾವಾಗಲೂ ಎಚ್ಚರಿಕೆಯಿಂದಿರುತ್ತಿದ್ದರು. ಹೀಗೆ ಇದ್ದಕ್ಕಿದ್ದಂತೆ ಒಂದೇ ಬಾರಿ ಭಯೋತ್ಪಾದಕರ ಗುಂಪೊಂದು ದಾಳಿ ಮಾಡಿತ್ತು!! 200 ಜನ ಸೈನಿಕರು ಕಾವಲು ಕಾಯುತ್ತಿದ್ದಾಗ, ಶ್ರೀನಗರ, ಜಮ್ಮು ಗಡಿ ಪ್ರದೇಶಗಳಲ್ಲಿ ಪ್ರವೇಶಿದ 500 ಜನ ಉಗ್ರರು ಭಾರತ ಸೈನಿಕರನ್ನು ಗುರಿಯಾಗಿಸಿಕೊಂಡು ಗುಂಡಿನ ಮಳೆಗೆರೆದರು.

ಆಗತಾನೇ ಸ್ವಾತಂತ್ರ್ಯ ಸಿಕ್ಕಿದ್ದರಿಂದ ನಮ್ಮ ಸೈನಿಕರಿಗೆ ಸರಿಯಾದ ಆಯುಧಗಳಿರಲಿಲ್ಲ. ಎಲ್ಲಾ ಶಾಖೆಗಳು ಆಗತಾನೇ ಹೊಸದಾಗಿ ನಿರ್ವಹಿಸಲ್ಪಡುತ್ತಿತ್ತು!! ಹಾಗಾಗಿ ನಮ್ಮ ಸೈನಿಕರು ಇರುವ ಹಳೆಯ ಆಯುಧಾಗಳಿಂದಲೇ ಕಾವಲು ಕಾಯಲು ಸಿದ್ದರಾಗಿದ್ದರು!! ಅದೇ ಸಮಯದಲ್ಲಿ ದಾಳಿ ಮಾಡಿದಂತಹ ಭಯೋತ್ಪಾದಕರ ಬಳಿ ಮಾತ್ರ ಅತ್ಯಾಧುನಿಕವಾದ ಆಯುಧಗಳಿವೆ. ಮೋಟರ್’ಗಳೂ ಇತ್ತು!! ಅವುಗಳಿಂದ ಅವರು ಗಡಿಭಾಗದಲ್ಲಿರುವ ನಮ್ಮ ಸೈನಿಕರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದರು!! ಇದರಿಂದ ಮೊದ ಮೊದಲು ನಮ್ಮ ಸೈನಿಕರು ವಿಚಲಿತರಾದರೂ ನಂತರ ಚೈತನ್ಯವಂತರಾಗಿ ಅವರ ದಾಳಿಯನ್ನು ಎದುರಿಸುತ್ತಿದ್ದರು. ಆದರೂ ತಮ್ಮ ಹತ್ತಿರಕ್ಕೆ ನುಗ್ಗಿ ಬರುತ್ತಿದ್ದ ಭಯೋತ್ಪಾದಕರನ್ನು ಹಿಮ್ಮೆಟ್ಟಿಸುತ್ತಿದ್ದರೆ ವಿನಃ ಹಿಂದೆಜ್ಜೆ ಹಾಕಲಿಲ್ಲ. ಏಕೆಂದರೆ ಆ ಗುಂಪಿಗೆ ನಾಯಕತ್ವವನ್ನು ವಹಿಸಿಕೊಂಡದ್ದು ಮೇಜರ್ ಸೋಮನಾಥ್ ಶರ್ಮಾ….

ಅಂದಿಗೆ ಸೋಮನಾಥ್ ಶರ್ಮಾರವರು ಮಿಲಿಟರಿಯಲ್ಲಿ ಸೇರಿ ಕೇವಲ 8 ತಿಂಗಳು ಮಾತ್ರವಾಗಿತ್ತು!! ಆದರೂ ಟ್ರೈನಿಂಗ್ ನಲ್ಲಿ ಶರ್ಮಾ ತೋರಿಸಿದ ಪ್ರತಿಭೆಯ ಆಧಾರವಾಗಿ ಆತನಿಗೆ 50 ಜನ ಸೈನಿಕರಿರುವ ಗುಂಪನ್ನು ನಿರ್ವಹಿಸುವ ಮೇಜರ್ ಜವಾಬ್ದಾರಿಯನ್ನು ಮಿಲಿಟರಿಯ ಉನ್ನತಾಧಿಕಾರಿಗಳು ಒಪ್ಪಿಸಿದ್ದರು!! ಅವರು ಆತನ ಮೇಲಿಟ್ಟಿರುವ ವಿಶ್ವಾಸವನ್ನು ಶರ್ಮಾರವರು ಸುಳ್ಳುಮಾಡಲಿಲ್ಲ. ಭಯೋತ್ಪಾದಕರನ್ನು ಮಣ್ಣುಮುಕ್ಕಿಸಲು ಮುನ್ನುಗ್ಗಿದರು… ಆದರೆ ಅವರ ಆಧುನಿಕ ಆಯುಧಗಳ ಮುಂದೆ ನಮ್ಮ ಸೈನಿಕರು ಹೆಚ್ಚಿನಕಾಲ ಉಳಿಯಲಾಗಲಿಲ್ಲ.

Image result for somnath sharma

ತುಂಬಾ ಜನ ಆಗಲೇ ಮೃತ ಪಟ್ಟಿದ್ದಾರೆ. ಇನ್ನೂ ಕೆಲವರು ತೀರ್ವವಾದ ಗಾಯಗಳಿಂದ ನೆಲಕ್ಕುರಿಳಿದರು. ಆದರೂ ಶರ್ಮಾ ಒಬ್ಬನೇ ಭಯೋತ್ಪಾದಕರ ಎದುರು ನಿಂತು ಹೋರಾಟ ಮಾಡಿದರು… ಸಾಕಷ್ಟು ಜನ ಶತ್ರುಗಳನ್ನು ಕೊನೆಗಾಣಿಸಿದರು, ಕೊನೆಗೆ ಶತ್ರುಗಳ ಗುಂಡಿಗೆ ಬಲಿಯಾದರು!! ಹೆಚ್ಚು ಸಮಯದವರಗೆ ಹೋರಾಟ ಮಾಡಿದ್ದರಿಂದ ಶತ್ರುಗಳಿಗೆ ನಮ್ಮ ಭೂಭಾಗದೊಳಗೆ ಪ್ರವೇಶಮಾಡಲು ತಡವಾಯಿತು. ಅಷ್ಟೊತ್ತಿಗೆ ಇನ್ನೂ ಕೆಲವು ಸೈನಿಕರು ಅಲ್ಲಿಗೆ ಸೇರಿ ಉಳಿದಂತಹ ಶತ್ರುಗಳನ್ನು ಕೊನೆಗಾಣಿಸಿದರು. ಇದೆಲ್ಲದಕ್ಕೂ ಶರ್ಮರವರು ಮಾಡಿದ ಹೋರಾಟವೇ ಕಾರಣ. ಸೋಮನಾಥ್ ಶರ್ಮರವರ ತ್ಯಾಗ ಅಮರವಾದದ್ದು.

Image result for first paramveer chakra somnath sharma

ಮೂರು ದಿನಗಳ ನಂತರ ಅವರ ದೇಹ ಪತ್ತೆಯಾಯಿತು. ತೀವ್ರ ಗುಂಡೇಟುಗಳಿಂದಾಗಿ ವಿರೂಪಗೊಂಡಿದ್ದ ದೇಹ ಅವರದ್ದೇ ಎಂದು ಸಾರಿ ಹೇಳಿದ್ದು ಎದೆಯ ಜೇಬಿನಲ್ಲಿದ್ದ ಭಗವದ್ಗೀತೆಯ ಹಾಳೆಗಳು! ಪವಿತ್ರ ಭಗವದ್ಗೀತೆಯ ಬಗ್ಗೆ ಅಪೂರ್ವವಾದ ಪ್ರೀತಿ ಶ್ರದ್ದೆ ಹೊಂದಿದ್ದ ಸೋಮನಾಥ್, ಭಗದ್ಗೀತೆಯ ಜೊತೆಗೆ ಉಸಿರು ಕಳಕೊಂಡದ್ದು ವಿಶೇಷ. ಅದುವರೆಗೂ ಯುದ್ಧ ಕಾಲದಲ್ಲಿ ತೋರುವ ಶೌರ್ಯಕ್ಕಾಗಿ ನೀಡುತ್ತಿದ್ದ ಅತಿದೊಡ್ಡ ಗೌರವವೆಂದರೆ ಪರಮವೀರ ಚಕ್ರ ಆಗಿತ್ತು. ಪರಮವೀರ ಚಕ್ರ ಪಡೆದ ಮೊದಲ ಭಾರತೀಯ ಮೇಜರ್ ಸೋಮನಾಥ್ ಶರ್ಮರಾದರು…. ಅತೀ ಸಣ್ಣ ವಯಸ್ಸಿನಲ್ಲೇ ಮಿಲಿಟರಿ ಸೇರಿಕೊಂಡು ಶತ್ರುಗಳ ಎದೆಯಲ್ಲೇ ನಡುಕ ಹುಟ್ಟಿಸಿದ್ದ ವೀರನೇ ನಿಜವಾದ ಹೀರೋ!!

source : karunaadavaani.com

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close