ಪ್ರಚಲಿತ

ಮತ್ತೊಂದು ಮಹಾ ಸಮೀಕ್ಷೆ ಬಹಿರಂಗ! ಮೋದಿ ಮುಂದೆ ಪಾತಾಳಕ್ಕೆ ಕುಸಿದ ರಾಹುಲ್ ಜನಪ್ರಿಯತೆ! ಏರ್ ಸ್ಟ್ರೈಕ್ ನಂತರ ಮತ್ತಷ್ಟು ಹೆಚ್ಚಿದ ನಮೋ‌ ಹವಾ!

ಮೋದಿ..ಮೋದಿ..ಮೋದಿ.. ಯಾರಿಗೆ ಗೊತ್ತಿಲ್ಲ ಹೇಳಿ ಈ ಹೆಸರು. ಇಷ್ಟೊಂದು ಜನಪ್ರಿಯತೆ ಗಳಿಸಿದೆ ವ್ಯಕ್ತಿ ನಮ್ಮ ದೇಶದಲ್ಲಿ ಇರಲಿಕ್ಕಿಲ್ಲ ಎಂದರೂ ತಪ್ಪಾಗದು, ಯಾಕೆಂದರೆ ರಾಜಕೀಯ ಕಂಡರೆ ದೂರ ಓಡಿ ಹೋಗುತ್ತಿದ್ದ ಜನ ಕೂಡ ಇಂದು ಮೋದಿಯ ಕೆಲವೊಂದು ಕಾರ್ಯ ವೈಖರಿಯಿಂದ ರಾಜಕೀಯದ ಕಡೆ ಮುಖ ಮಾಡುತ್ತಿದ್ದಾರೆ ಎಂದರೆ ದೇಶದ ಜನರಲ್ಲಿ ಯಾವ ರೀತಿಯ ಬದಲಾವಣೆ ಉಂಟು ಮಾಡಿದ್ದಾರೆ ಎಂಬುದು ಅರ್ಥವಾಗುತ್ತದೆ. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಮೋದಿ ವರ್ಚಸ್ಸು ಹೆಚ್ಚಾಗುತ್ತಲೇ ಇದೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ‌ ಪೈಪೋಟಿ ನಡೆಯುತ್ತಿದ್ದರೆ ಇತ್ತ ಮಹಾ ಸಮೀಕ್ಷೆಯೊಂದು ಹೇಳುವ ಪ್ರಕಾರ ವಿಪಕ್ಷಗಳು ಎಲ್ಲವೂ ಒಟ್ಟಾಗಿ ಮೋದಿ ವಿರುದ್ಧ ನಿಂತರೂ ಕೂಡ ಮೋದಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ, ಯಾಕೆಂದರೆ ದೇಶದ ಜನರು ಈಗಲೂ ಮೋದಿಯೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಲಾಗಿದೆ.!

ಹೌದು ಇತ್ತೀಚೆಗೆ ರಿಪಬ್ಲಿಕ್’ ಸುದ್ದಿವಾಹಿನಿಯು ಸಿ ವೋಟರ್ ಸಂಸ್ಥೆಯ ಜೊತೆಗೂಡಿ ನಡೆಸಿದ ಮಹಾ ಸಮೀಕ್ಷೆಯ ಫಲಿತಾಂಶ ಇದೀಗ ಬಹಿರಂಗಗೊಂಡಿದ್ದು ಮೋದಿ ಮುಂದೆ ರಾಹುಲ್ ಗಾಂಧಿಯಾಗಲಿ ಅಥವಾ ಇತರ ವಿಪಕ್ಷದ ನಾಯಕರಾಗಲಿ ಯಾರೂ ಕೂಡ ಸರಿಸಮಾನರಲ್ಲ, ಮೋದಿ ವರ್ಚಸ್ಸಿನ ಮುಂದೆ ಎದುರಾಳಿಯಾಗಿ ನಿಲ್ಲುವ ತಾಕತ್ತು ಯಾರಿಗೂ ಇಲ್ಲ ಎಂಬ ಸ್ಪಷ್ಟ ಮಾಹಿತಿಯನ್ನು ಸಮೀಕ್ಷೆ ಹೇಳಿಕೊಂಡಿದೆ. ಅದರಲ್ಲೂ ಚುನಾವಣೆ ಸಮೀಪಿಸುತ್ತಿದ್ದಂತೆ ದೇಶಾದ್ಯಂತ ಕಳೆದ ಮೂರು ತಿಂಗಳಲ್ಲಿ ನಡೆದ ಈ ಸಮೀಕ್ಷೆಯ ಪ್ರಕಾರ, ವಿಪಕ್ಷಗಳು ಎಷ್ಟೇ ಮೋದಿ ವಿರುದ್ಧ ಆರೋಪ ಅಥವಾ ಷಡ್ಯಂತ್ರ ಹೂಡಿದರು ಕೂಡ ಅದು ಫಲಿಸಲಿಲ್ಲ, ಮೋದಿ ಮೇಲಿನ ವಿಶ್ವಾಸ ಈ ದೇಶದ ಜನರಿಗೆ ಕಡಿಮೆಯಾಗಿಲ್ಲ, ಅದರಲ್ಲೂ ಕಾಂಗ್ರೆಸ್‌ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಹೋದಲ್ಲೆಲ್ಲಾ ಹೇಳಿಕೊಂಡು ರ್ಯಾಲಿ, ಸಮಾವೇಶಗಳಲ್ಲಿ ಭಾಗವಹಿಸುತ್ತಿರುವ ರಾಹುಲ್ ಮೋದಿ ಮುಂದೆ ಸ್ಪರ್ಧಿಸಲು ಯೋಗ್ಯನೇ ಅಲ್ಲ ಎಂಬುದನ್ನು ಕೂಡ ಸಮೀಕ್ಷೆಯ ಫಲಿತಾಂಶ ಸೂಚಿಸುತ್ತದೆ.!

ಮೋದಿಯೇ ಬೆಸ್ಟ್ ಎಂದ ದೇಶದ ಜನ!

ಸದ್ಯದ ಪರಿಸ್ಥಿತಿಯಲ್ಲಿ ಮೋದಿಗೆ ಎದುರಾಳಿಯಾಗಿ ಸ್ಪರ್ಧಿಸುವ ಮತ್ತೊಬ್ಬ ನಾಯಕ ಯಾರೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಮೋದಿಯನ್ನು ಸೋಲಿಸುವ ಉದ್ದೇಶದಿಂದ ಒಂದಾಗಿರುವ ವಿಪಕ್ಷಗಳು ಮೋದಿ ವಿರುದ್ಧ ಸಮರ ಸಾರಿದೆ. ಆದರೆ ಈ ಮಧ್ಯೆ ನಡೆದ ಸೀ ವೋಟರ್ ಸಮೀಕ್ಷೆ ಬಹಳಷ್ಟು ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದೆ. ಅದೇನೆಂದರೆ ದೇಶದ ಭದ್ರತೆಯ ಅಥವಾ ಇನ್ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಮತ್ತು ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ವಿಪಕ್ಷಗಳು ದೇಶವನ್ನಾಳಲು ಯೋಗ್ಯರಲ್ಲ ಎಂಬ ಸಂದೇಶ ಸಾರಿದ್ದಾರೆ. ಅದರಲ್ಲೂ ಇತ್ತೀಚೆಗೆ ಪಾಕಿಸ್ತಾನದ ಮೇಲೆ ನಡೆದ ಏರ್ ಸ್ಟ್ರೈಕ್ ನಂತರ ಮೋದಿ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿಕೊಂಡಿದೆ. ಯಾಕೆಂದರೆ ಏರ್ ಸ್ಟ್ರೈಕ್ ನಡೆಯುವ ಮೊದಲು ೪೮% ಜನರು ಮೋದಿ ಪರವಾಗಿದ್ದರೆ, ಏರ್ ಸ್ಟ್ರೈಕ್ ನಡೆದ ನಂತರ ಏಕಾಏಕಿ ೫೬% ಜನರು ಮೋದಿಯೇ ಬೆಸ್ಟ್ ಎಂದು ಹೇಳಿಕೊಂಡಿದ್ದಾರೆ. ಜನವರಿ ತಿಂಗಳಲ್ಲಿ ಕೇವಲ ೩೨% ಜನರು ಮೋದಿ ಪರವಾಗಿ ಇದ್ದರು ಮತ್ತು ಬಜೆಟ್ ನಂತರ ಒಮ್ಮೆಗೆ ೩೯% ಗೆ ಏರಿಕೆಯಾಗಿತ್ತು.

ಇತ್ತ ರಾಹುಲ್ ಗಾಂಧಿ ಕೂಡ ಕೊಂಚ ಮಟ್ಟಿಗೆ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಾ ಇರುವಾಗಲೇ ಪಾಕ್ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್‌ಗೆ ಸಾಕ್ಷಿ ಕೇಳಲು ಹೋಗಿ ತನ್ನ ಮಾನ ಕಳೆದುಕೊಂಡ ರಾಹುಲ್ ಇದೀಗ ತನಗಿದ್ದ ಸ್ವಲ್ಪ ಜನಪ್ರಿಯತೆಯನ್ನು ಕೂಡ ಸಂಪೂರ್ಣ ಕಳೆದುಕೊಂಡಿದ್ದಾರೆ. ಭಾರತೀಯ ಸೇನೆಯ ಮೇಲೆ ಪದೇ ಪದೇ ಅನುಮಾನ ವ್ಯಕ್ತಪಡಿಸುತ್ತಾ ಸೇನೆಗೆ ಅವಮಾನ ಮಾಡುವ ವಿಪಕ್ಷಗಳಿಗೆ ದೇಶದ ಜನತೆ ಸರಿಯಾಗಿ ಉತ್ತರ ನೀಡಿದ್ದಾರೆ.
ಯಾಕೆಂದರೆ ಸದ್ಯ ಅಂದರೆ ಮಾರ್ಚ್ ೭ರವರೆಗೆ ಸಮೀಕ್ಷೆಯ ಪ್ರಕಾರ ೬೩%ರಷ್ಟು ಜನರು ಮೋದಿ ಪರ ಒಲವು ತೋರಿಸಿದ್ದಾರೆ ಎಂದು ಹೇಳಲಾಗಿದೆ.!

ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಲೇ ಇದ್ದು ವಿಪಕ್ಷಗಳ ಯಾವ ತಂತ್ರಗಾರಿಕೆಯೂ ಫಲಿಸುತ್ತಿಲ್ಲ.‌ ಇತ್ತ ಚುನಾವಣೆ ಕೂಡ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವದರಿಂದ ಈ ಮಹಾ ಸಮೀಕ್ಷೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಅದೇನೇ ಇರಲಿ ದೇಶದ ಜನತೆ ಮೋದಿ ಪರವಾಗಿ ನಿಂತಿದ್ದಾರೆ ಎಂದರೆ ಮೋದಿ ಈ ಬಾರಿ ಕೂಡ ಜಯಭೇರಿ ಬಾರಿಸುವುದರಲ್ಲಿ ಸಂಶಯವಿಲ್ಲ.!

-ಪಿ ಆರ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close