ಇತಿಹಾಸಪ್ರಚಲಿತ

ಹಿಂದೂ ದೇವಾಲಯದಂತೆ ಕಾಣುತ್ತಿದೆ ಬ್ರಿಟಿಷರಿಂದ ನಿರ್ಮಾಣವಾದ ಭಾರತದ “ಸಂಸತ್ ಭವನ”!! ಪ್ರಜಾಪ್ರಭುತ್ವದ ದೇಗುಲದ ಹಿಂದೆ ಅಡಗಿದೆ ರೋಚಕ ರಹಸ್ಯ!!

ಹಿಂದೂ ಧರ್ಮದಲ್ಲಿರುವ ಪ್ರತಿಯೊಂದು ವಿಚಾರಕ್ಕೂ, ಪ್ರತಿಯೊಂದು ಘಟನೆಗಳಿಗೂ ತನ್ನದೇ ಆದ ಇತಿಹಾಸವಿದ್ದು, ಆಧುನಿಕ ಜಗತ್ತಿಗೆ ಒಳಿತಾಗುವ ಅನೇಕ ಅಂಶಗಳು ಹಿಂದೂ ಧರ್ಮದಲ್ಲಿದೆ!! ಈ ವಿಚಾರದ ಬಗ್ಗೆ ಅದೆಷ್ಟೋ ರಾಷ್ಟ್ರಗಳು ಸಂಶೋಧನೆ ನಡೆಸಿ ಆ ಬಗ್ಗೆ ಉತ್ತರ ಕಂಡುಕೊಂಡಿದ್ದಾರಲ್ಲದೇ ಅದೆಷ್ಟೋ ವಿದೇಶಿಯರು ಹಿಂದೂ ಧರ್ಮವನ್ನು ಅಪ್ಪಿಕೊಂಡಿರುವುದೇ ಇದಕ್ಕೆ ಉತ್ತಮ ಸಾಕ್ಷಿಯಾಗಿದೆ!! ಆದರೆ ಬ್ರಿಟಿಷರಿಂದ ನಿರ್ಮಿತವಾದ ಭಾರತದ ‘ಪ್ರಜಾಪ್ರಭುತ್ವದ ದೇಗುಲ’ ಎಂದೇ ಹೆಸರುವಾಸಿಯಾಗಿರುವ ಸಂಸತ್ ಭವನದ ನಿರ್ಮಾಣದಲ್ಲೂ ಹಿಂದೂ ಧರ್ಮದ ಕಲಾ ನೈಪುಣ್ಯತೆಯೇ ತುಂಬಿ ತುಳುಕಾಡುತ್ತಿದೆ ಎಂದರೆ ನಂಬ್ತೀರಾ?

ಹೌದು, ಹಿಂದೂಗಳ ಪುಣ್ಯಭೂಮಿಯಾಗಿರುವ ಭಾರತದಲ್ಲಿ ಪುರಾತನ ವಸ್ತುಗಳನ್ನು ಅಥವಾ ಪುರಾತನವಾದ ಮಸೀದಿ, ಚರ್ಚ್‍ಗಳನ್ನೇ ಉತ್ಖನನ ಮಾಡಿದಾಗ ಅದರಲ್ಲಿ ಸಿಗುವುದು ಹಿಂದೂ ಧರ್ಮದ ಕುರುಹುಗಳು!! ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಸಿಗುವ ಅದೆಷ್ಟೋ ಕುರುಹುಗಳು ಧರ್ಮದ ಇತಿಹಾಸವನ್ನೇ ಎತ್ತಿ ತೋರಿಸುತ್ತಿರುತ್ತವೆಯಲ್ಲದೇ ಇದರ ಹಿಂದಿರುವ ಇತಿಹಾಸ ಕೂಡ ವೈಜ್ಞಾನಿಕವಾಗಿ ದೃಢಪಟ್ಟಿದೆ!! ಅದಕ್ಕೆ ಉತ್ತಮ ಸಾಕ್ಷಿಯಾಗಿ ನಿಂತಿರುವುದು 1927 ರಲ್ಲಿ ನಿರ್ಮಾಣವಾದ ಭಾರತದ ಪಾರ್ಲಿಮೆಂಟ್ ಹೌಸ್!! ಬ್ರಿಟಿಷರು ಕಟ್ಟಿಸಿದಂತಹ ಈ ಸಂಸತ್ ಭವನದಲ್ಲಿ ಹಿಂದೂ ಧರ್ಮದ ಪ್ರಭಾವವೇ ತುಂಬಿ ತುಳುಕಾಡುತ್ತಿದೆ!! ಅಷ್ಟಕ್ಕೂ ಸಂಸತ್ ಭವನ ನಿರ್ಮಾಣಕ್ಕೆ ಬ್ರಿಟಿಷರಿಗೆ ಸ್ಫೂರ್ತಿಯಾಗಿದ್ದಾದರೂ ಏನು ಗೊತ್ತೇ?

ಸಂಸತ್ ಭವನದ ವಿನ್ಯಾಸಕ್ಕೆ ಸ್ಪೂರ್ತಿಯಾಗಿದ್ದು ಬೇರಾವುದೂ ಅಲ್ಲ…. ಮಧ್ಯಪ್ರದೇಶದ ಚೌಸಾತ್ ಯೋಗಿನಿ ಎಕತ್ರಾಸೋ ಮಹಾದೇವ ದೇವಾಲಯ!! ಚೌಸಾತ್ ಯೋಗಿನಿ ದೇವಾಲಯ ಖಜುರಾಹೋದಲ್ಲಿನ ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 875 ರಿಂದ 900 ಮಧ್ಯ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯವು ಪಶ್ಚಿಮ ಸಮೂಹಕ್ಕೆ ಸೇರಿದ್ದಾಗಿದೆ. ಈ ದೇವಾಲಯವು 64 ಯೋಗಿನಿಗಳಿಗೆ ಅಂಕಿತವಾದಂತಹ ಸುಂದರವಾದ ದೇವಾಲಯ ಇದಾಗಿದೆ. ಈ ದೇವಾಲಯದಲ್ಲಿ ಮುಖ್ಯವಾಗಿ ದುರ್ಗಾ ದೇವತೆಯು ನೆಲೆಸಿದ್ದು, ವಿವಿಧ ರೂಪಗಳಲ್ಲಿ ಕಾಣಿಸುತ್ತಾಳೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಈ ದೇವಾಲಯ ಶಿಲ್ಪಗಳು ಸರಳವಾದ ಹಾಗು ಯಾವುದೇ ಆಭರಣದ ಅಲಂಕಾರವಿಲ್ಲದೇ ಸುಂದರವಾಗಿ ಇದ್ದು, ದೇವಾಲಯದ ಗೋಡೆಗಳ ಮೇಲೆ ಖಜುರಾಹೋ ದೇವಾಲಯದ ಮೇಲಿರುವ ಸ್ವಾಭಾವಿಕ ಕೆತ್ತನೆಗಳನ್ನು ಕಾಣಬಹುದಾಗಿದೆ. ದೊಡ್ಡದಾದ ವಿಗ್ರಹವೆಂದರೆ ಅದು ದುರ್ಗ ದೇವಿ ವಿಗ್ರಹವಾಗಿದ್ದು, ಈ ದೇವಾಲಯವು ಖಜರಾಹೋದಲ್ಲಿನ ಅತ್ಯಂತ ಪುರಾತನವಾದ ದೇವಾಲಯಗಳಲ್ಲಿ ಒಂದಾಗಿದೆ. ಇದು ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ಯೋಗಿನಿ ದೇವಾಲಯವಾಗಿದೆ.

ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿರುವ ಯೋಗಿನಿ ದೇವಾಲಯ ಹಾಗೂ ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣದ ಶೈಲಿ ಒಂದೇ ರೀತಿಯ ಹಾಗೆ ಕಾಣುತ್ತದೆ. ಇನ್ನು, ಈ ಚೌಸಾತ್ ಯೋಗಿನಿ ದೇವಾಲಯವು ಒಂದು ಕಾಲದಲ್ಲಿ ಮಂತ್ರ, ತಂತ್ರ ಸಾಧಕರುಗಳು, ಯೋಗಿಗಳು ಅವರ ವಿಶ್ವವಿದ್ಯಾಲಯವಾಗಿ ಬಳಸುತ್ತಿದ್ದರು. ಅಷ್ಟೇ ಅಲ್ಲದೇ, ಈ ದೇವಾಲಯವನ್ನು ವಿಶೇಷವಾಗಿ ಯೋಗಿನಿಗಳು ಹಾಗು ತಾಂತ್ರಿಕರು ತಮ್ಮ ಮಂತ್ರ ಸಾಧನೆಗಾಗಿ ಬಳಸುತ್ತಿದ್ದರು. ಹಾಗಾಗಿಯೇ ಇದನ್ನು ತಾಂತ್ರಿಕ ವಿದ್ಯಾಲಯ ಎಂದು ಕರೆಯುತ್ತಾರೆ.

ಇಂದಿಗೂ ಕೂಡ ಕೆಲವು ಮಂತ್ರ ಸಾಧಕರು ಭೇಟಿ ನೀಡುವ ಈ ದೇವಾಲಯವು ಸುಮಾರು 300 ಅಡಿ ಎತ್ತರದಲ್ಲಿದೆ. ಈ ದೇವಾಲಯದ ನಿರ್ಮಾಣ ಶೈಲಿಯು ವೃತ್ತಾಕಾರವಾಗಿದ್ದು, ಅದರಲ್ಲಿ 64 ಯೋಗಿನಿಗಳ ಶಿಲ್ಪಗಳ ಗುಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಪುರಾತನವಾದ ಶಿವಾಲಯ ಕೂಡ ಇದ್ದು, ಪ್ರಸ್ತುತ ಪುರಾತತ್ವ ಇಲಾಖೆಯವರ ಅಧೀನದಲ್ಲಿದೆ. ಅತ್ಯಂತ ಪುರಾತನವಾದ ದೇವಾಲಯವಾಗಿರುವ ಚೌಸತ್ ಯೋಗಿನಿ ಸುಮಾರು 9 ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಇನ್ನು, ಈ ಮಂದಿರ ನಿರ್ಮಾಣವು ಆಗಿನ ಕಾಲದಲ್ಲಿ ಆಗಮ ಶಾಸ್ತ್ರದ ಪ್ರಕಾರ ಕಟ್ಟಲಾಗುತ್ತಿತ್ತು. ಮಂದಿರ ನಿರ್ಮಾಣವಾಗುವ ಜಾಗವನ್ನು ಎಲ್ಲಿ ಬೇಕಾದರಲ್ಲಿ ಮಾಡುವುದಲ್ಲ, ಎಲ್ಲಿ ಧನಾತ್ಮಕ ಶಕ್ತಿ ವಿಪುಲವಾಗಿರುತ್ತೋ ಅಂತಹ ಸ್ಥಳವನ್ನೇ ಗುರುತಿಸಿ ಅಲ್ಲಿ ಆಗಮ ಶಾಸ್ತ್ರದ ಪ್ರಕಾರ ಮಂದಿರಗಳ ರಚನೆಯನ್ನು ಮಾಡಲಾಗುತ್ತಿತ್ತು. ಹಾಗೆಯೇ ಧನಾತ್ಮಕ ಶಕ್ತಿ ಯಥೇಚ್ಛವಾಗಿರುವ ಜಾಗದಲ್ಲಿ ಮಂದಿರ ನಿರ್ಮಾಣವಾದರೆ ಮಂದಿರಕ್ಕೆ ಬರುವ ಭಕ್ತರಿಗೆ ಧನಾತ್ಮಕ ಶಕ್ತಿ ಸಿಕ್ಕು ಅವರಿಗರ ಶಾಂತಿ ನೆಮ್ಮದಿ ಒದಗುತ್ತದೆ ಅನ್ನೋದು ನಮ್ಮ ಪೂರ್ವಜರ ವೈಜ್ಞಾನಿಕ ಮನೋಭಾವನೆಯಾಗಿತ್ತು.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಈ ಯೋಗಿನಿಗಳ ಶಿಲ್ಪಗಳು ಅತ್ಯಂತ ಸುಂದರವಾಗಿದ್ದು, ಮೊಘಲ್ ಚಕ್ರವರ್ತಿಗಳು ಈ ದೇವಾಲಯದ ಮೇಲೆ ಹಲವಾರು ಬಾರಿ ಧಾಳಿಯನ್ನು ಮಾಡಿದ್ದಾರೆ. ಹಾಗಾಗಿಯೇ ಇಲ್ಲಿನ ಸುಂದರವಾದ ಶಿಲ್ಪಗಳನ್ನು ನಾಶ ಮಾಡಿದ್ದಾರೆ. ಅದ್ದರಿಂದಲೇ ಶಿಲ್ಪಗಳು ಬಿನ್ನವಾಗುರುವಂತೆ ಕಾಣುತ್ತದೆ. ಅಪೂರ್ವವಾದ ಇಲ್ಲಿನ ನಿರ್ಮಾಣ ಶೈಲಿ ಎಂತಹವರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ದೇವಾಲಯದ ಗರ್ಭಗುಡಿಯಲ್ಲಿ ಶಿವಪಾರ್ವತಿಗಳು ನಂದಿಯೊಂದಿಗೆ ನೆಲೆಸಿರುವುದನ್ನು ಕಾಣಬಹುದಾಗಿದೆ. ಒಬ್ಬ ಋಷಿ ಮುನಿಯ ತಪಸ್ಸಿಗೆ ಮೆಚ್ಚಿ ಮಹಾ ಶಿವನು ಈ ಸ್ಥಳದಲ್ಲಿ ಬಂದು ನೆಲೆಸಿದ ಎಂಬುದು ಒಂದು ಸ್ಥಳ ಪುರಾಣವಿದೆ. ಹಾಗಾಗಿಯೇ ಇಲ್ಲಿನ ಮೂಲ ಮೂರ್ತಿಯನ್ನು ದರ್ಶನ ಮಾಡಿದರೆ ವಿವಾಹಕ್ಕೆ ಸಂಬಂಧಿಸಿದಂತೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಹೇಳಲಾಗುತ್ತದೆ.

ಸಂಸತ್ ಭವನದ ವಿನ್ಯಾಸಕ್ಕೆ ಸ್ಪೂರ್ತಿಯಾಗಿರುವ ಮಧ್ಯಪ್ರದೇಶದ ಚೌಸಾತ್ ಯೋಗಿನಿ ಎಕತ್ರಾಸೋ ಮಹಾದೇವ ದೇವಾಲಯವು ವೃತ್ತಾಕಾರದಲ್ಲಿದ್ದು, 170 ಅಡಿ ವಿಸ್ತೀರ್ಣವಿದೆ. ಇದರಲ್ಲಿ 64 ದೇವತೆಗಳ ಮೂರ್ತಿಯಿವೆ. 64 ಕೋಣೆಗಳಿದ್ದು, ಪ್ರತಿಯೊಂದು ಕೋಣೆಯಲ್ಲೂ ಒಂದು ಶಿವಲಿಂಗವಿದೆ. ಗೋಲಾಕಾರದ ಮಧ್ಯಭಾಗದಲ್ಲಿ ಶಿವನ ದೇವಾಲಯವಿದೆ. ಕ್ರಿಸ್ತಶಕ 1323ರಲ್ಲಿ ದೇವಾಲಯದ ನಿರ್ಮಾಣ ಮಾಡಲಾಗಿದ್ದು, ಈಗಲೂ ಉತ್ತಮ ಸ್ಥಿತಿಯಲ್ಲಿದೆ. ಪುರಾತತ್ವ ಇಲಾಖೆ ಇದನ್ನು ಐತಿಹಾಸಿಕ ಸ್ಮಾರಕವೆಂದು ಘೊಷಿಸಿದೆ.

ನಮ್ಮ ಪಾರ್ಲಿಮೆಂಟ್ ಭವನ ನಿರ್ಮಾಣ ರಹಸ್ಯ!

ಇನ್ನು ಇದೇ ರೀತಿಯ ವಿನ್ಯಾಸವನ್ನು ಭಾರತದ ಸಂಸತ್ ಭವನದಲ್ಲೂ ನಿರ್ಮಾಣ ಮಾಡಿದ್ದು, ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ 1912-13ರಲ್ಲಿ ಇದರ ವಿನ್ಯಾಸ ಮಾಡಿದ್ದರು. 1921ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದ್ದು, 1927ರ ಜನವರಿ 18ರಂದು ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಇರ್ವಿನ್ ಭವನವನ್ನು ಉದ್ಘಾಟಿಸಿದ್ದರು. ವಿಶ್ವದ ಅದ್ಭುತ ಕಟ್ಟಡಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಸಂಸತ್ ಭವನ ಗೋಲಾಕಾರದಲ್ಲಿದ್ದು, ಅಶೋಕ ಚಕ್ರದ ಪ್ರೇರಣೆಯಿಂದ ನಿರ್ಮಿಸಲಾಗಿದೆ. ಭವನದ ಹೊರಗಡೆ ನಿರ್ಮಿಸಲಾಗಿರುವ ಬೃಹತ್ ಉದ್ಯಾನ ಅದನ್ನು ಸುತ್ತುವರಿದಿರುವ ಬೇಲಿಗೆ ಸಾಂಚಿಯ ಸ್ತೂಪದ ವಿನ್ಯಾಸ ಸ್ಪೂರ್ತಿ.

ಒಟ್ಟಿನಲ್ಲಿ ಬ್ರಿಟಿಷರಿಂದ ನಿರ್ಮಾಣವಾಗಿರುವ ಭಾರತದ ಸಂಸತ್ ಭವನವೂ ಹಿಂದೂ ಧರ್ಮದ ಕಲಾ ನೈಪುಣ್ಯತೆಯನ್ನು ಮೈಗೂಡಿಸಿ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪ್ರವಾಸಿ ಧಾಮವಾಗಿ ಇಂದು ವಿಶ್ವದೆಲ್ಲೆಡೆ ಕಂಗೊಳಿಸುತ್ತಿದೆ!!

ಮೂಲ: ವಿಜಯವಾಣಿ

– Postcard team

Tags

Related Articles

FOR DAILY ALERTS
 
FOR DAILY ALERTS
 
Close