ಪ್ರಚಲಿತ

ಸಿದ್ದರಾಮಯ್ಯ ವಿರುದ್ಧವೇ ತೊಡೆ ತಟ್ಟಿದ ಲಿಂಗಾಯತರು.! ಉಲ್ಟಾ ಆಯ್ತು ಸಿಎಂ ಲೆಕ್ಕಾಚಾರ.!!

ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದರೆ ಎಲ್ಲರ ಬಾಯಲ್ಲೂ ಒಂದೇ ಮಾತು, ‘ಚುನಾವಣೆ , ಚುನಾವಣೆ , ಚುನಾವಣೆ’. ಯಾಕೆಂದರೆ ಇಡೀ ದೇಶದ ಚಿತ್ತ ಕರ್ನಾಟಕದತ್ತ ಇದೆ ಎಂದರೆ ಅದ್ಯಾವ ರೀತಿಯಲ್ಲಿ ಚುನಾವಣೆ ಜನರನ್ನು ಕೆರಳಿಸುತ್ತಿದೆ ಎಂದು ಅರಿವಾಗುತ್ತದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವು ಸಮಯ ಬಾಕಿ ಇರುವುದರಿಂದ ಇದೀಗ ರಾಜ್ಯಸಭಾ ಚುನಾವಣೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಿಂದ ಹೊರಬಿತ್ತು ಅಭ್ಯರ್ಥಿಗಳ ಪಟ್ಟಿ..!

ಬಹು ನಿರೀಕ್ಷಿತ ರಾಜ್ಯ ಸಭಾ ಚುನಾವಣೆಗೆ ಎಲ್ಲಾ ಪಕ್ಷಗಳ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ , ಟಿಕೆಟ್ ಅಂತಿಮವಾಗಿದ್ದೇ ತಡ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ತಮ್ಮ ಹೆಸರು ಇಲ್ಲ ಎಂಬ ಕಾರಣದಿಂದ ಕೆಲ ಅಭ್ಯರ್ಥಿಗಳು ಬಂಡಾಯದ ಸಮರ ಸಾರಿದ್ದಾರೆ.

ಜಾತಿ ರಾಜಕಾರಣಕ್ಕೆ ಬಿತ್ತು ಗೂಸಾ..!

ಸಿಎಂ ಸಿದ್ದರಾಮಯ್ಯನವರು ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹಿಂದೂ‌ ಧರ್ಮವನ್ನು ಇಬ್ಬಾಗ ಮಾಡಿ ಅಸರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಲು ತಂತ್ರ ರೂಪಿಸಿದ್ದರು. ಲಿಂಗಾಯತ – ವೀರಶೈವ ಧರ್ಮವನ್ನು ಪ್ರತ್ಯೇಕಿಸಿ ಅದರಿಂದ ತಮ್ಮ ಲಾಭ ಗಳಿಸಲು ಹುನ್ನಾರ ಹೂಡಿದ್ದರು. ಆದರೆ ಸಿದ್ದರಾಮಯ್ಯನವರು ಬೀಸಿದ ಬಲೆಯಲ್ಲಿ ಸ್ವತಃ ಕಾಂಗ್ರೆಸ್ ಬಿದ್ದು ಒದ್ದಾಡುವಂತಾಗಿದೆ.
ಈ ಹಿಂದೆ ಲಿಂಗಾಯತ ಮತ್ತು ವೀರಶೈವ ಧರ್ಮದ ಪ್ರತ್ಯೇಕತೆಗಾಗಿ ನಮ್ಮ ಸಚಿವರು ರಾಜೀನಾಮೆ ನೀಡಲು ಸಿದ್ಧ ಎಂದು ನಾಟಕವಾಡುತ್ತಿದ್ದ ಕಾಂಗ್ರೆಸ್ ನ ಅಸಲಿ ಮುಖ ಬಯಲಾಗಿದೆ. ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರದ ಮೋದಿ ಸರಕಾರಕ್ಕೆ ಬೊಟ್ಟು ಮಾಡಿ ತೋರಿಸುವ ರಾಜ್ಯ ಕಾಂಗ್ರೆಸ್ ಗೆ ಇದೀಗ ತೀವ್ರ ಹಿನ್ನಡೆಯಾಗಿದೆ.

ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ಲಿಂಗಾಯತ-ವೀರಶೈವ..!

ಈವರೆಗೆ ಮತಕ್ಕಾಗಿ ಕಾಂಗ್ರೆಸ್ ಲಿಂಗಾಯತ ಮತ್ತು ವೀರಶೈವ ಧರ್ಮದ ಪರವಾಗಿ ಬೀದಿಗಿಳಿಯುತ್ತೇವೆ ಎನ್ನುತ್ತಿದ್ದ ಕಾಂಗ್ರೆಸ್ ಇದೀಗ ರಾಜ್ಯಸಭಾ ಚುನಾವಣೆಯಲ್ಲಿ ಒಂದೇ ಒಂದು ಟಿಕೆಟ್ ನೀಡದೆ ಸಂಪೂರ್ಣವಾಗಿ ಕಡೆಗಣಿಸಿದೆ.

ಕಾಂಗ್ರೆಸ್ ನ‌ ರಾಜಕೀಯ ಆಟಕ್ಕೆ ಬಲಿಯಾದ ಲಿಂಗಾಯತ ಮತ್ತು ವೀರಶೈವ ಧರ್ಮ ತಮ್ಮ ಸ್ವಂತ ಖರ್ಚಿನಲ್ಲಿ ನಡೆಸಿದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ಮತ್ತು ಯಡಿಯೂರಪ್ಪ ನವರನ್ನು ದೂಷಿಸಿದ್ದರು. ಆದರೆ ಇದೀಗ ಸಿದ್ದರಾಮಯ್ಯನವರ ಅಸಲಿ ಮುಖ ಬಯಲಾಗುತ್ತಿದ್ದಂತೆ ಈ ಲಿಂಗಾಯತ ಮತ್ತು ವೀರಶೈವ ಧರ್ಮದ ಜನರು ಕಾಂಗ್ರೆಸ್ ವಿರುದ್ಧ ಸಮರ ಸಾರಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನ‌ ಒಂದೊಂದೇ ವ್ಯಾಘ್ರ ಮುಖ ಪ್ರದರ್ಶನವಾಗುತ್ತಿದ್ದು , ಇಡೀ ರಾಜ್ಯವೇ ಸಿದ್ದರಾಮಯ್ಯನವರ ವಿರುದ್ಧ ತಿರುಗಿ ಬಿದ್ದಿದೆ. ಇವೆಲ್ಲದಕ್ಕೂ ಮುಂದಿನ ಚುನಾವಣೆಯೇ ಉತ್ತರವಾಗಲಿದ್ದು , ಎಲ್ಲದಕ್ಕೂ ಕಾದು ನೋಡಬೇಕಾಗಿದೆ.!

–ಅರ್ಜುನ್

 

Tags

Related Articles

FOR DAILY ALERTS
 
FOR DAILY ALERTS
 
Close