ಅಂಕಣಪ್ರಚಲಿತ

ಸರ್ಜಿಕಲ್ ಸ್ಟ್ರೈಕ್ ನಲ್ಲಿ ಬಂದೂಕುಗಳ ಜತೆಗೆ ವಿಚಿತ್ರವಾದ ಆಯುಧವನ್ನು ಬಳಸಿದ್ದರು ಭಾರತೀಯ ಯೋಧರು!! ಅಷ್ಟಕ್ಕೂ ಯಾವುದು ಆ ವಿಚಿತ್ರ ಆಯುಧ?!!

2016, ಸೆಪ್ಟೆಂಬರ್ 28, 29 ರ ಮಧ್ಯರಾತ್ರಿ ಭಾರತೀಯ ಸೇನೆ ಮಾಡಿದ ಸಾಹಸ ಪಾಕಿಸ್ತಾನವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಹೌದು, ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕ್ ಬೆಂಬಲಿತ ಉಗ್ರರ ಕ್ಯಾಂಪಿಗೆ ನುಗ್ಗಿ 38 ಉಗ್ರರನ್ನು ಮತ್ತು ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈದು ಪಾಕಿಸ್ತಾನದ ವಿರುದ್ಧ ಭಾರತ ಪ್ರಮುಖ ಜಯವನ್ನು ಸಾಧಿಸಿತ್ತು. ಆದರೆ ಭಾರತೀಯ ಸೇನೆ ಯಶಸ್ವಿಯಾಗಿ ಮಾಡಿದ ಸರ್ಜಿಕಲ್ ಸ್ಟ್ರೈಕ್ ಸುಲಭವಾಗಿ ಒಲಿದು ಬಂದ ಗೆಲುವಲ್ಲ. ಬದಲಾಗಿ ಭಾರತೀಯ ಯೋಧರು ಬಂದೂಕುಗಳ ಜತೆಗೆ ವಿಚಿತ್ರವಾದ ಆಯುಧವನ್ನು ಬಳಸಿಕೊಂಡು ಗೆಲುವು ಸಾಧಿಸಿದ್ದರು. ಅಷ್ಟಕ್ಕೂ ಆ ಆಯುಧ ಯಾವುದು ಗೊತ್ತೇ?

ಭಾರತೀಯ ಸೇನೆಯ ಯೋಧರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ರಾತ್ರೋರಾತ್ರಿ ನುಗ್ಗಿ ಭಯೋತ್ಪಾದಕರ ಹುಟ್ಟಡಗಿಸಿ, ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು. ಈ ಯಶಸ್ವಿ ಕಾರ್ಯಾಚರಣೆಗೆ ಯೋಧರು ಬಳಸಿದ ಆ ಆಯುಧವೇ ಚಿರತೆ ಮೂತ್ರ. ಹೌದು, ಪಿಒಕೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುವಾಗ ನಾಯಿಗಳಿಂದ ತಪ್ಪಿಸಿಕೊಳ್ಳಲು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಭಾರತೀಯ ಯೋಧರು ಬಳಸಿದ್ದರು ಎಂದು ನಿವೃತ್ತ ನಗ್ರೋಟ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಾಜೇಂದ್ರ ನಿಂಬೋರ್ಕರ್ ಹೇಳಿದ್ದಾರೆ.

Image result for Leopards' urine helped Army in surgical strike’

2016ರ ಸೆಪ್ಟೆಂಬರ್ 29ರಂದು ಪಾಕಿಸ್ತಾನದ ಗಡಿಯಿಂದ 15 ಕಿಲೋ ಮೀಟರ್ ಒಳಗೆ ನುಗ್ಗಿ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತು ಮಾತನಾಡಿದ ರಾಜೇಂದ್ರ ಅವರು, ತಾವು ನೌಶೆರದಲ್ಲಿ ಸೇವೆಯಲ್ಲಿರುವ ವೇಳೆ ಚಿರತೆಗಳು ನಾಯಿಗಳ ಮೇಲೆ ದಾಳಿ ನಡೆಸುತ್ತಿದ್ದವು. ಚಿರತೆಗಳಿಂದ ರಕ್ಷಿಸಿಕೊಳ್ಳಲು ನಾಯಿಗಳು ರಾತ್ರಿ ಹೊತ್ತು ಹೊರಗೆ ಬರುತ್ತಿರಲಿಲ್ಲ. ಸರ್ಜಿಕಲ್ ದಾಳಿ ವೇಳೆ ಯೋಧರು ಗ್ರಾಮ, ಹಳ್ಳಿಗಳ ನಡುವೆ ಸಾಗುವ ವೇಳೆ ನಾಯಿಗಳಿಂದ ದಾಳಿಯಾಗುವ ಸಂಭವವಿತ್ತು. ಇದನ್ನು ತಪ್ಪಿಸಲು ಚಿರತೆ ಮೂತ್ರ ಹಾಗೂ ಮುಖವಾಡಗಳನ್ನು ಬಳಸಲಾಗಿತ್ತು ಎಂದರು.

ಅಂದು ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಯೋಜನೆ ಜಾರಿಗೊಳಿಸಲು ಒಂದು ವಾರದ ಗಡುವು ನೀಡಿದ್ದರು. ಯೋಧರಿಗೆ ಯೋಜನೆ ಬಗ್ಗೆ ತಿಳಿಸಲಾಗಿತ್ತು. ಆದರೆ ಯಾವ ದಿನ, ಸ್ಥಳದ ಕುರಿತು ಮಾಹಿತಿ ನೀಡಿರಲಿಲ್ಲ. ದಾಳಿಗೆ ತೆರಳುವ ಹಿಂದಿನ ದಿನ ದಾಳಿಯ ಸ್ಥಳದ ಬಗ್ಗೆ ಮಾಹಿತಿ ನೀಡಲಾಯಿತು ಎಂದರಲ್ಲದೇ ಭಾರತೀಯರು ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ನಲ್ಲಿ 29 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು ಎಂದು ರಾಜೇಂದ್ರ ಅವರು ವಿವರಿಸಿದ್ದಾರೆ.

ಥೋರ್ಲೆ ಬಾಜಿರಾವ್ ಪೇಶ್ವೆ ಪ್ರತಿಷ್ಠಾನ (ಟ್ರಸ್ಟ್) ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಾಳಿ ಸಂದರ್ಭದಲ್ಲಿ ಗ್ರಾಮಗಳಲ್ಲಿರುವ ನಾಯಿಗಳು ದಾಳಿ ಮಾಡಬಹುದು ಎಂಬುದು ಆರಂಭದಲ್ಲಿಯೇ ಗೊತ್ತಿತ್ತು. ಹಾಗಾಗಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ. ‘ನೌಶೇರಾ ವಲಯದಲ್ಲಿ ಬ್ರಿಗೇಡ್ ಕಮಾಂಡರ್ ಆಗಿದ್ದ ಸಂದರ್ಭದಲ್ಲಿ ನಾಯಿಗಳ ಕಾಟ ಜಾಸ್ತಿ ಇತ್ತು. ಹೀಗಾಗಿ ಪಾಕಿಸ್ತಾನದ ಗಡಿಯಿಂದ 15 ಕಿಲೋ ಮೀಟರ್ ಒಳಗೆ ನುಗ್ಗಿ ಉಗ್ರರನ್ನ ಸದೆಬಡಿಯೋದು ಅಷ್ಟು ಸುಲಭವಾಗಿರಲಿಲ್ಲ. ನಾಯಿಗಳು ನಮ್ಮ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದವು. ನಾನು ಜೈವಿಕ ಶಾಸ್ತ್ರವನ್ನು ಅಧ್ಯಯನ ಮಾಡಿದ್ದರಿಂದ ನಾಯಿಗಳ ಬಾಯಿ ಮುಚ್ಚಿಸೋದು ಹೇಗೆ ಅಂತಾ ನನಗೆ ತಿಳಿದಿತ್ತು. ಅಲ್ಲಿ ಚಿರತೆಗಳು ನಾಯಿಗಳ ಮೇಲೆ ದಾಳಿ ನಡೆಸೋದು ಸಾಮಾನ್ಯ ಅನ್ನೋ ಮಹತ್ವದ ವಿಚಾರ ನಮಗೆ ತಿಳಿದಿತ್ತು. ರಾತ್ರಿ ಸಮಯದಲ್ಲಿ ಚಿರತೆಗಳಿಂದ ತಪ್ಪಿಸಿಕೊಳ್ಳಲು ನಾಯಿಗಳು ಓಡಿಹೋಗುತ್ತಿದ್ದುದನ್ನು ಕಂಡಿದ್ದೆ. ಈ ಅನುಭವವನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ಯೋಧರು ಸಾಗುವ ಮಾರ್ಗದ ಉದ್ದಕ್ಕೂ ಚಿರತೆಯ ಮೂತ್ರವನ್ನು ಸಿಂಪಡಿಸಿ ನಾಯಿಗಳನ್ನು ದೂರ ಇರಿಸಲಾಯಿತು’ ಎಂದು ಹೇಳಿದರು.

‘ದಾಳಿಯ ಯೋಜನೆಯ ಬಗ್ಗೆ ಗೋಪ್ಯತೆ ಕಾಪಾಡಲಾಗಿದ್ದು, ಅಂದಿನ ರಕ್ಷಣಾ ಸಚಿವರಾಗಿದ್ದ ಮನೋಹರ ಪರ್ರಿಕರ್ ಅವರು ಯೋಜನೆ ಅನುಷ್ಠಾನಕ್ಕೆ ಒಂದು ವಾರ ಕಾಲಾವಕಾಶ ನೀಡಿದ್ದರು. ನಮ್ಮ ತಂಡದಲ್ಲಿದ್ದ ಯೋಧರಿಗೆ ಯೋಜನೆ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ದಾಳಿ ನಡೆಸುವ ಸ್ಥಳಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ದಾಳಿ ನಡೆಸುವ ಒಂದು ದಿನ ಮುಂಚೆ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದೆ. ಉಗ್ರರ ಶಿಬಿರಗಳಲ್ಲಿನ ಚಲನವಲನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿತ್ತು. ನಸುಕಿನ ಜಾವ 3.30ಕ್ಕೆ ದಾಳಿ ನಡೆಸಲು ಸೂಕ್ತ ಸಮಯ ಎಂದು ನಿರ್ಧರಿಸಿದ್ದೆವು. ನಿಗದಿತ ಸಮಯಕ್ಕೆ ಎಲ್ ಒ ಸಿ ದಾಟಿದ ಪ್ಯಾರಾಟ್ರೂಪ್ಸ್ ಮತ್ತು ಇನ್ಫೆಂಟ್ರಿ ಯೋಧರು, ಮೂರು ಶಿಬಿರಗಳನ್ನು ಧ್ವಂಸಗೊಳಿಸಿದರು. 29 ಉಗ್ರರನ್ನು ಕೊಂದು ಹಾಕಿದರು’ ಎಂದು ಅವರು ಹೇಳಿದ್ದರು.

Image result for Leopards' urine helped Army in surgical strike’

ಒಟ್ಟಿನಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನೋದು ಭಾವಿಸಿದಷ್ಟು ಸುಲಭದ ಗೆಲುವಾಗಿರಲಿಲ್ಲ. ಬದಲಾಗಿ ಯೋಧರು ಅನೇಕ ತಂತ್ರಗಳನ್ನ ಉಪಯೋಗಿಸುವ ಅನಿವಾರ್ಯತೆ ಎದುರಾಗಿದ್ದ ಸಂದರ್ಭದಲ್ಲಿ ಸೇನೆಯ ಯೋಧರು ಚಿರತೆಯ ಮೂತ್ರ ಹಾಗೂ ಮುಖವಾಡಗಳನ್ನು ಧರಿಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ರಾತ್ರೋರಾತ್ರಿ ನುಗ್ಗಿ ಭಯೋತ್ಪಾದಕ ಹುಟ್ಟಡಗಿಸಿದ್ದರು. ಅಷ್ಟೇ ಅಲ್ಲದೇ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಮೂಲಕ ಗೆಲುವಿನ ಪತಾಕೆಯನ್ನು ಆರಿಸಿದ್ದರು!!

ಮೂಲ: https://timesofindia.indiatimes.com/city/pune/leopards-urine-helped-army-in-surgical-strike/articleshow/65775327.cms

-Postcard team

Tags

Related Articles

FOR DAILY ALERTS
 
FOR DAILY ALERTS
 
Close