ಪ್ರಚಲಿತ

ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದ ಕೈ ಶಾಸಕರು.! ಪರಮೇಶ್ವರ್ ಅವರನ್ನೇ ತಲೆಕೆಳಗಾಗಿಸಿದ ಅತೃಪ್ತ ಶಾಸಕರು.! ಮೈತ್ರಿ ಸರಕಾರಕ್ಕೆ ಬಿತ್ತು ಮತ್ತೊಂದು ಹೊಡೆತ.!

ಅದ್ಯಾಕೋ ಈ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಲಕ್ ಚೆನ್ನಾಗಿಲ್ಲ ಅನ್ನಿಸುತ್ತೆ. ಅಧಿಕಾರದ ಆಸೆಯಿಂದ ಓಡೋಡಿ ಬಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರು, ಆದರೆ ಮುಖ್ಯಂತ್ರಿಯಾದರೂ ಸರಿಯಾಗಿ ಆಡಳಿತ ನಡೆಸಲು ಈ ಕಾಂಗ್ರೆಸ್ ಮುಖಂಡರೇ ಬಿಡುತ್ತಿಲ್ಲ. ಯಾಕಪ್ಪಾ ಕಾಂಗ್ರೆಸ್ ಜೊತೆ ಸೇರಿಕೊಂಡೆ ಎಂದು ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ತಲೆ ಚಚ್ಚಿಕೊಳ್ಳುವಂತಾಗಿದೆ. ಯಾಕೆಂದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಕಾಂಗ್ರೆಸ್ ಮುಖಂಡರಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿತ್ತು. ಒಂದೆಡೆ ಸಚಿವ ಸ್ಥಾನ ವಂಚಿತ ಶಾಸಕರು ಮೈತ್ರಿ ಸರಕಾರದ ವಿರುದ್ಧ ತಿರುಗಿ ಬಿದ್ದರೆ, ಇತ್ತ ಕಾಂಗ್ರೆಸ್‌ನಲ್ಲೇ ಇದ್ದು ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಅತೃಪ್ತ ಶಾಸಕರ ಗುಂಪು ಕೈ ಮುಖಂಡರಲ್ಲಿ ದೂರು ನೀಡಿ ತಮ್ಮ ಅಸಮಧಾನ ಹೊರ ಹಾಕಿದ್ದಾರೆ.

ಚುನಾವಣೆಯಲ್ಲಿ ಮೂರನೇ ಪಕ್ಷವಾಗಿದ್ದ ಜೆಡಿಎಸ್‌ ಜೊತೆ ಕಾಂಗ್ರೆಸ್ ಸೇರಿಕೊಂಡು ಸರಕಾರ ರಚಿಸುವ ಅವಶ್ಯಕತೆ ಇರಲಿಲ್ಲ, ಆದರೂ ಇದೀಗ ಸರಕಾರ ರಚನೆಯಾಗಿದೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದಕ್ಕೆಲ್ಲಾ ನಮ್ಮ ಮುಖಂಡರು ತಲೆ ಅಲ್ಲಾಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಭೆಯ ಮುಖ್ಯಸ್ಥತೆ ವಹಿಸಿದ್ದ ಡಿಸಿಎಂ ಜಿ ಪರಮೇಶ್ವರ್ ಅವರನ್ನೇ ಅತೃಪ್ತ ಶಾಸಕರು ತರಾಟೆಗೆ ತೆಗೆದುಕೊಂಡರು.!

ಸಮ್ಮಿಶ್ರ ಸರಕಾರದ ಮೊದಲ ಬಜೆಟ್ ವಿಫಲ..!

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ನಂತರ ಮಂಡಿಸಿದ ಮೊದಲ ಬಜೆಟ್‌ನಲ್ಲಿ ಕಾಂಗ್ರೆಸ್‌ನ ಎಲ್ಲಾ ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು ಕೂಡ ಕ್ಯಾರೇ ಅನ್ನದ ಕುಮಾರಸ್ವಾಮಿ ಅವರು ತಮ್ಮ ಹಠ ಸಾಧಿಸಿ ಬಜೆಟ್ ಮಂಡನೆ ಮಾಡಿದರು. ಆದರೆ ನಮ್ಮ ನಾಯಕರು ಇನ್ನೂ ಕುಮಾರಸ್ವಾಮಿ ಅವರು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುತ್ತಾ ಹೋದರೆ ನಮ್ಮ ಪಕ್ಷವನ್ನೇ ಮೂಲೆಗುಂಪು ಮಾಡಲಾಗುತ್ತದೆ ಎಂದ ಶಾಸಕರು, ಡಿಸಿಎಂ ಜಿ ಪರಮೇಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಅಸಮಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಾರಿಗೊಳಿಸಿದ್ದ ಯೋಜನೆಗಳಿಗೆ ಕುಮಾರಸ್ವಾಮಿ ಸರಕಾರ ಕತ್ತರಿ ಹಾಕುತ್ತಿದೆ. ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಿದ ಕುಮಾರಸ್ವಾಮಿ ಅವರು ಬಡ ಜನರಿಗೆ ನೀಡುತ್ತಿದ್ದ ೭ ಕೆಜಿ ಅಕ್ಕಿಯನ್ನು ೫ ಕೆಜಿ ಗೆ ಕಡಿತ ಮಾಡುವ ಮೂಲಕ ರಾಜ್ಯದ ಜನರಿಗೆ ಭಾರೀ ಹೊಡೆತ ನೀಡಿದ್ದಾರೆ ಎಂದ ಶಾಸಕರು, ಕಾಂಗ್ರೆಸ್‌ನ ಯೋಜನೆಗಳಿಗೆ ಮೈತ್ರಿ ಸರಕಾರದಲ್ಲಿ ಯಾವುದೇ ಬೆಲೆ ಸಿಗುತ್ತಿಲ್ಲ ಎಂದು ಹೇಳಿದರು.!

ತಮ್ಮ ಮೊದಲ ಬಜೆಟ್‌ನಲ್ಲೇ ವಿದ್ಯುತ್ ಬೆಲೆ, ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರಿಗೆ ಬರೆ ಎಳೆದ ಕುಮಾರಸ್ವಾಮಿ ಅವರ ಈ ನಿರ್ಧಾರದಿಂದ ಕಾಂಗ್ರೆಸ್‌ ಮುಜುಗರ ಪಡುವಂತಾಗಿದೆ. ಯಾಕೆಂದರೆ ಕೇಂದ್ರ ಸರಕಾರ ಪೆಟ್ರೋಲ್ ಬೆಲೆ ಹೆಚ್ಚಳ ಮಾಡುತ್ತಿದ್ದಾಗ ವಿರೋಧಿಸಿ ಪ್ರತಿಭಟಿಸುತ್ತಿದ್ದ ನಾವು ಇನ್ನು ಮುಂದೆ ಯಾವ ಮುಖ ಇಟ್ಟುಕೊಂಡು ಪ್ರತಿಭಟಿಸಲು ಸಾಧ್ಯ? ಎಂದು ಹೇಳಿಕೊಂಡ ಶಾಸಕರು, ರಾಜ್ಯ ಸರಕಾರದ ಮೊದಲ ಬಜೆಟ್ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.!

ಕೇಂದ್ರ ಸರಕಾರ ಯಾವುದೇ ವಸ್ತುವಿನ ಬೆಲೆ ಹೆಚ್ಚಳ ಮಾಡಿದಾಗ ಕಾಂಗ್ರೆಸ್ ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತಿತ್ತು, ಆದರೆ ಇದೀಗ ನಮ್ಮ ಸರಕಾರವೇ ವಿದ್ಯುತ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದು ನಾವು ಇನ್ನು ಯಾವುದನ್ನೂ ವಿರೋಧಿಸುವಂತಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಕಾಂಗ್ರೆಸ್‌ನ ಅತೃಪ್ತ ಶಾಸಕರ ಭಿನ್ನಾಭಿಪ್ರಾಯ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಯಾವ ಕ್ಷಣದಲ್ಲೂ ಮೈತ್ರಿ ಸರಕಾರಕ್ಕೆ ಕೈಕೊಡುವ ಸಾಧ್ಯತೆ ಇದೆ.!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close