ಅಂಕಣ

ಕುಟುಂಬದ ಜೊತೆಗೆ ಊಟ ಮಾಡುತ್ತಿದ್ದ ಶಾಸ್ತ್ರೀಜಿ ಯೋಧರ ಬಳಿ 10 ನಿಮಿಷ ಸಮಯ ಕೇಳಿ ಕೈಗೊಂಡ ಐತಿಹಾಸಿಕ ನಿರ್ಧಾರ! ಪಾಕ್ ಬೆವರನ್ನು ಅಂದೇ ಇಳಿಸಿದ್ದ ದಿಟ್ಟ ಪ್ರಧಾನಿ…

ಲಾಲ್ ಬಹದ್ದೂರ್ ಶಾಸ್ತ್ರೀಜೀ. ರಾಷ್ಟ್ರ ಕಂಡ ಅತ್ಯಂತ ಶ್ರೇಷ್ಟ ಪ್ರಧಾನ ಮಂತ್ರಿ. ಕುಬ್ಜ ದೇಹದ ಈ ವ್ಯಕ್ತಿ ಮಾಡಿದ್ದು ಮಾತ್ರ ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವ ಕೆಲಸ. ದೇಶಕ್ಕಾಗಿ ತನ್ನ ಜೀವವನ್ನೇ ನೀಡಿದ್ದ ಶಾಸ್ತ್ರೀಜಿಯವರ ಯಶೋಗಾಥೆ ಇಂದಿಗೂ ಅಮರ. ಅದರಲ್ಲೂ 1965ರ ಭಾರತ ಹಾಗೂ ಪಾಕಿಸ್ತಾನದ ಯುದ್ಧದ ವಿಚಾರವಾಗಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ಭಾರತವನ್ನು ಮುನ್ನಡೆಸಿದ ರೀತಿ ಅಮೋಘ. ಶಾಸ್ತ್ರೀಜಿಯ ದೇಶಪ್ರೇಮ ಹಾಗೂ ಅವರ ಆಡಳಿತದ ಬಗ್ಗೆ ಕೆಲವೊಂದು ರೋಚಕ ಅಂಶಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

Image result for lal bahadur shastriji in cham sector

1. ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿರುವ ಚಮ್ ಸೆಕ್ಟರ್‍ಗೆ ಪಾಕಿಸ್ತಾನ ರಾಷ್ಟ್ರ ದಾಳಿ ಮಾಡುತ್ತೆ. 100 ಪಟಾನ್ ಟ್ಯಾಂಕ್ ಗಳೊಂದಿಗೆ ಭಾರತದ ಮೇಲೆ ಸವಾರಿ ಮಾಡುತ್ತೆ ಪಾಪಿ ರಾಷ್ಟ್ರ. ಈ ವೇಳೆ ಅಂದಿನ ಪ್ರಧಾನ ಮಂತ್ರಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಯವರು ತಮ್ಮ ನಿವಾಸದಲ್ಲಿದ್ದರು. ಸೈನ್ಯದ ಕಮಾಂಡರ್‍ಗಳಿಂದ ಶಾಸ್ತ್ರೀಜಿಗೆ ಮಾಹಿತಿ ಬರುತ್ತೆ. ಪಾಪಿ ರಾಷ್ಟ್ರ ಭಾರತವನ್ನು ಅತಿಕ್ರಮಿಸಿಕೊಂಡಿರುವ ಬಗ್ಗೆ ಮಾಹಿತಿಯನ್ನು ಶಾಸ್ತ್ರೀಜಿಗೆ ನೀಡುತ್ತಾರೆ. ತಮ್ಮ ಕುಟುಂಬ ಸದಸ್ಯರ ಜೊತೆ ಊಟಕ್ಕೆ ಕುಳಿತಿದ್ದ ಶಾಸ್ತ್ರೀಜಿ ಕಮಾಂಡರ್‍ಗಳ ಬಳಿ 10 ನಿಮಿಷಗಳ ಸಮಯ ಕೇಳುತ್ತಾರೆ. ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಹೊರ ಬಂದ ಶಾಸ್ತ್ರೀಜಿ ನಮ್ಮ ರಾಷ್ಟ್ರವನ್ನು ಆಕ್ರಮಿಸಿಕೊಂಡಿರುವ ಪಾಕಿಸ್ತಾನ ಸೈನಿಕರ ಮೇಲೆ ವೈಮಾನಿಕ ದಾಳಿ ನಡೆಸಲು ಆದೇಶ ನೀಡುತ್ತಾರೆ. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಶತ್ರುದೇಶದ ವಿರುದ್ಧ ವೈಮಾನಿಕ ದಾಳಿಗೆ ಆದೇಶ ಸಿಗುತ್ತೆ. ಈ ಆದೇಶವನ್ನು ಶಾಸ್ತ್ರೀಯವರು ಸಚಿವ ಸಂಪುಟ ಕರೆದು ಆದೇಶ ನೀಡಲಿಲ್ಲ. ನೇರವಾಗಿ ಆದೇಶವನ್ನು ನೀಡುವ ಮೂಲಕ ರಾಷ್ಟ್ರದ ಭದ್ರತೆಯ ವಿಚಾರವಾಗಿ ಯಾವುದೇ ರಾಜಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಿದ್ದರು.

Image result for lal bahadur shastri 1965 war

2. ಶಾಸ್ತ್ರೀಜಿ ಕುರ್ಚಿಗೆ ಅಂಟಿಕೊಂಡು ಕುಳಿತ ಪ್ರಧಾನಿ ಅಲ್ಲ ಎಂಬುವುದನ್ನು ಅವರು ನಿರೂಪಿಸುತ್ತಲೇ ಬಂದಿದ್ದರು. ಯಾವುದೇ ಸಮಸ್ಯೆಗಳಿರಲಿ ಅವರು ಸ್ವತಃ ಧಾವಿಸಿ ಪರಿಹಾರ ನೀಡುತ್ತಾರೆ. ಅದರಲ್ಲಿ ತಮ್ಮ ಪ್ರಧಾನಿ ಕುರ್ಚಿಗೆ ಕುತ್ತು ಬರುತ್ತೆ ಎಂದರೂ ಅವರು ಹಿಂದೇಟು ಹಾಕುವ ನಾಯಕರಲ್ಲ. ಯುದ್ಧದ ಸಂದರ್ಭದಲ್ಲಿ ಗಡಿ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದರು. ಹಲ್ವಾರ ಗಡಿ ಪ್ರದೇಶಕ್ಕೂ ಭೇಟಿ ನೀಡಿ ಸೈನಿಕರ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಎಸಿ ಕಛೇರಿಯಲ್ಲಿ ಕುಳಿತು ಆದೇಶ ನೀಡುವ ಪ್ರಧಾನಿ ಇವರಾಗಿರಲಿಲ್ಲ.

Image result for lal bahadur shastriji in cham sector

3. ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಜಗತ್ತಿನ ರಾಷ್ಟ್ರಗಳು ಭಾರತವನ್ನು ವಿರೋಧಿಸಿದ್ದವು. ಅದರಲ್ಲೂ ಅಮೇರಿಕಾ ರಾಷ್ಟ್ರವಂತೂ ತಾವು ನೀಡುತ್ತಿದ್ದ ಗೋಧಿಯನ್ನೂ ನಿಲ್ಲಿಸಿಬಿಟ್ಟಿತ್ತು. ಈ ವೇಳೆ ದಿಟ್ಟತನವನ್ನು ಪ್ರದರ್ಶಿಸಿದ್ದ ಶಾಸ್ತ್ರೀಜಿ ಅಮೇರಿಕಾಗೆ ಛಾಟಿ ಬೀಸಿದ್ದರು. “ನೀವು ನೀಡುತ್ತಿದ್ದ ಗೋಧಿಯನ್ನು ನಮ್ಮ ದೇಶದ ಹಂದಿಗಳೂ ತಿನ್ನುವುದಿಲ್ಲ” ಎಂದು ಖಡಕ್ ಆಗಿ ಹೇಳಿಬಿಟ್ಟಿದ್ದರು. ಜಗತ್ತಿನ ದೊಡ್ಡಣ್ಣನೊಂದಿಗೆ ಎದೆಗಾರಿಕೆಯಿಂದ ಮಾತನಾಡುವ ಧೈರ್ಯ ಯಾವ ದೇಶಕ್ಕೂ ಇರಲಿಲ್ಲ. ಇಂತಹ ಸಮಯದಲ್ಲಿ ಶಾಸ್ತ್ರೀಜಿ ಉಪವಾಸ ಕೂರುತ್ತಾರೆ. ಮಾತ್ರವಲ್ಲದೆ ದೇಶದ ಜನತೆಯಲ್ಲಿ ಮನವಿ ಮಾಡುತ್ತಾರೆ. ವಾರದ ಒಂದು ದಿನ, ಅಂದರೆ ಸೋಮವಾರದಂದು ಎಲ್ಲರೂ ಉಪವಾಸ ಕೂರುವಿರಾ ಎಂದು ವಿನಂತಿಸಿಕೊಳ್ಳುತ್ತಾರೆ. ಶಾಸ್ತ್ರೀಜಿಯ ಮನವಿಯೊಂದಿಗೆ ದೇಶದ ಕೋಟ್ಯಾಂತರ ಜನ ಸೋಮವಾರ ಉಪವಾಸ ಕುಳಿತು ಸೈನ್ಯಕ್ಕೆ ತಮ್ಮ ಬೆಂಬಲ ನೀಡುತ್ತಾರೆ. ಅಂದಹಾಗೆ ಶಾಸ್ತ್ರೀಜಿ ಕೇವಲ ದೇಶದ ಜನತೆಗೆ ಮಾತ್ರ ಈ ಮನವಿಯನ್ನು ಮಾಡಿಲ್ಲ. ದೇಶದ ಜನತೆ ಇದನ್ನು ಪಾಲಿಸುವ ಮುನ್ನವೇ ತಮ್ಮ ಕುಟುಂಬಸ್ಥರನ್ನು ವಾರದ ಒಂದು ದಿನ ಉಪವಾಸ ಕೂರಿಸಿದ್ದರು. ಕಣಕಣದಲ್ಲೂ ದೇಶಪ್ರೇಮವನ್ನು ಮೆರೆಯುತ್ತಿದ್ದರು.

Image result for lal bahadur shastri 1965 war

4. ತನ್ನ ಕೋಣೆಯಲ್ಲಿ ಕಾರ್ಯಾಚರಣೆಯ ಒಂದು ಮ್ಯಾಪ್ ಮಾಡಿಕೊಂಡಿದ್ದರು. ಈ ಮ್ಯಾಪ್ ನಲ್ಲಿ ಸೈನಿಕರು ನಡೆಸುವ ಕಾರ್ಯಾಚರಣೆಯನ್ನು ಹಾಗೂ ಗೆದ್ದುಕೊಂಡ ಪ್ರದೇಶವನ್ನು ನೋಡಿಕೊಳ್ಳುತ್ತಿದ್ದರು. ದಿನಕ್ಕೆ ಕೇವಲ 4-5 ಗಂಟೆಗಳ ಕಾಲ ಮಾತ್ರವೇ ನಿದ್ದೆ ಮಾಡುತ್ತಿದ್ದರು. ಯುದ್ಧದ ಸಂದರ್ಭದಲ್ಲಿ ಹಗಲು ರಾತ್ರಿಯೆನ್ನದೆ ದೇಶಕ್ಕಾಗಿ ಶ್ರಮಿಸುತ್ತಿದ್ದರು.

5. ಮತ್ತೊಂದು ವಿಚಾರವೆಂದರೆ ಶಾಸ್ತ್ರೀಜಿಯ ಸಂಬಳ. ಇದರಲ್ಲೂ ದೇಶದ ಉನ್ನತಿಯನ್ನೇ ಕಾಣುತ್ತಿದ್ದರು ಶಾಸ್ತ್ರೀಜಿ. ತನಗೆ ಬರುತ್ತಿದ್ದ ಸಂಬಳವನ್ನು ಕೆಲಾಮಿಟ್ ಎಂಬ ಫಂಡ್ ಗೆ ಹಾಕುತ್ತಿದ್ದರು. ಮಾತ್ರವಲ್ಲದೆ ತನಗೆ ಬರುತ್ತಿದ್ದ ಪೆನ್ಸನ್ ಹಣವನ್ನೂ ಈ ಫಂಡ್‍ಗೆ ಹಾಕಿದ್ದರು.

6. ಇದೊಂದು ಮನಮಿಡಿಯುವ ಕಥೆ. 1965 ಯುದ್ಧದಲ್ಲಿ ತೀವ್ರ ಗಾಯದಿಂದ ಬಳಲುತ್ತಿದ್ದ ಮೇಜರ್ ಬೂಪೇಂದ್ರ ಸಿಂಗ್ ಅವರನ್ನು ಶಾಸ್ತ್ರೀಜಿ ಮಿಲಿಟರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಅವರ ಸಂಭಾಷಣೆ ಅದ್ಭುತವಾಗಿತ್ತು. “ಏನಿದು ಮೇಜರ್ ಸಾಹೇಬ್ರೇ ನಿಮ್ಮ ಸ್ಥಿತಿ” ಎಂದು ಶಾಸ್ತ್ರೀಜಿ ಮೇಜರ್ ರನ್ನು ಕೇಳುತ್ತಾರೆ. ಈ ವೇಳೆ ಮೇಜರ್ ಒಂದು ಕಡೆ ಧುಖಃದಿಂದಲೂ ಮತ್ತೊಂದು ಕಡೆ ಸಂತಸದಿಂದಲೂ ಕಣ್ಣಲ್ಲಿ ನೀರುರಿಸುತ್ತಾರೆ. “ನನ್ನ ದುರಾದೃಷ್ಟ ಶಾಸ್ತ್ರೀಜಿ, ನಿಮಗೆ ಸೆಲ್ಯೂಟ್ ಮಾಡುವ ಭಾಗ್ಯವನ್ನೂ ಕಳೆದುಕೊಂಡಿದ್ದೇನೆ” ಎಂದು ಹೇಳುತ್ತಾರೆ. ಸ್ವತಃ ದೇಶದ ಪ್ರಧಾನಿಯೇ ತನ್ನನ್ನು ಭೇಟಿಯಾಗಲು ಬಂದಿದ್ದಕ್ಕೆ ಮೇಜರ್ ಮೂಕವಿಸ್ಮಿತರಾಗುತ್ತಾರೆ.

Image result for lal bahadur shastri ji with military

ಇದು ನಮ್ಮ ದೇಶವನ್ನು ಗುಲಾಮಗಿರಿಯಿಂದ ಮುಕ್ತ ಮಾಡಲು ನಿಸ್ವಾರ್ಥವಾಗಿ ಶ್ರಮಿಸಿದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಕಹಾನಿ. ಮೊದಲ ಪ್ರಧಾನಿ ಎನಿಸಿಕೊಂಡಿದ್ದ ಪಂಡಿತ್ ಜವಹರಲಾಲ್ ನೆಹರೂರ ದುರ್ನಡತೆಯಿಂದ ಬೇಸತ್ತಿದ್ದ ಭಾರತಕ್ಕೆ ಶಾಸ್ತ್ರೀಜಿಯಂತಹ ಉತ್ತಮ ಪ್ರಧಾನಿ ದೊರಕಿಬಿಟ್ಟಿದ್ದರು. ಆದರೆ ದೇಶದ ದುರಾದೃಷ್ಟ, ಅವರನ್ನು ದೇವರೇ ಬೇಗ ಕರೆದುಕೊಂಡು ಬಿಟ್ಟಿದ್ದ…

-Sunil Panapila

Tags

Related Articles

FOR DAILY ALERTS
 
FOR DAILY ALERTS
 
Close