ಪ್ರಚಲಿತ

ಕುತುಬ್ ಮಿನಾರ್ ನಲ್ಲಿತ್ತು ಬ್ರಹ್ಮನ 4 ಮುಖವುಳ್ಳ ಮೂರ್ತಿ!! ಪಶ್ಚಿಮ ದಿಕ್ಕಿನಲ್ಲಿರುವ “ಟವರ್ ಆಫ್ ವಿಕ್ಟರಿ”ಯ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಪ್ರೊ. ಎಂ.ಎಸ್ ಭಟ್ನಗರ್ !!

ಭಾರತದ ಅತ್ಯಂತ ಎತ್ತರದ ಗೋಪುರ ಎಂದು ಕರೆಸಿಕೊಳ್ಳುವ, ಜಗದ್ವಿಖ್ಯಾತ ಪ್ರೇಕ್ಷಣೀಯ ಸ್ಥಳವಾಗಿರುವ ಕುತುಬ್ ಮಿನಾರ್ ನ್ನು ದೆಹಲಿಯನ್ನಾಳಿದ ಗುಲಾಮ ಮುಸ್ಲಿಂ ದೊರೆಗಳು ಕಟ್ಟಿಸಿದರೆಂದು ಇತಿಹಾಸ ಪುಸ್ತಕಗಳು ಸಾರಿ ಸಾರಿ ಹೇಳುತ್ತಿವೆ. ನಮಗೆಲ್ಲರಿಗೂ ತಿಳಿದಿರುವ ಮಾಹಿತಿಯ ಪ್ರಕಾರ, 1198 ಮತ್ತು 1368 ರ ಅವಧಿಯಲ್ಲಿ ಕುತುಬ್-ಉದ್-ದಿನ್ ಐಬಕ್ ನು ವಿಶ್ವಸಂಸ್ಥೆಯ ಪಾರಂಪರಿಕ ಸ್ಥಾನಗಳಲ್ಲಿ ಒಂದಾದ ಕುತುಬ್ ಮಿನಾರ್ ಅನ್ನು ನಿರ್ಮಿಸಿದ ಎನ್ನಲಾಗಿದೆ. ಆದರೆ ಹಲವಾರು ಸಂಶೋಧನೆಗಳು ಹಾಗೂ ನಿದರ್ಶನಗಳು ಈ ಮಾಹಿತಿ ಸುಳ್ಳೆಂದು ಸಾಬೀತು ಪಡಿಸಿದ್ದು, ವಿಶ್ವದ ಅತ್ಯಂತ ಎತ್ತರದ ಗೋಪುರ, “ಟವರ್ ಆಫ್ ವಿಕ್ಟರಿ” ಎಂಬ ಖ್ಯಾತಿಯ ಕುತುಬ್ ಮಿನಾರ್ ಹಿಂದೆ ರೋಚಕವಾದ ಇತಿಹಾಸ ಇದೆ ಎನ್ನುವುದನ್ನು ಬಿಚ್ಚಿಟ್ಟಿವೆ.

ಮುಸ್ಲಿಂ ದೊರೆಗಳು ಕಟ್ಟಿಸಿದರೆಂದು ಹೇಳುವ 72.5 ಮೀಟರ್ ಎತ್ತರದಲ್ಲಿರುವ ಈ ಕುತುಬ್ ಮಿನಾರ್ ನ ನಿಜವಾದ ಹೆಸರು ಮೇರುಸ್ತಂಭ (ಮೇರು=ಕುತುಬ್, ಸ್ತಂಭ = ಮಿನಾರ್)!! ಆದರೆ ಮುಸ್ಲಿಂ ಆಕ್ರಮಣಕಾರರು ತಮ್ಮ ಭಾಷೆಯಲ್ಲಿ ಅದನ್ನು ಕುತುಬ್ ಮಿನಾರ್ ಎಂದರು. ಆದರೆ, ಅದರ ಹಿನ್ನೆಲೆ ಮಾತ್ರ ಬಹಳಷ್ಟು ಜನಕ್ಕೆ ತಿಳಿಯದು. ಐತಿಹಾಸಿಕ ಸ್ಮಾರಕವಾದ, ದೆಹಲಿಯ ಮಧ್ಯಭಾಗದಲ್ಲಿರುವ ಕುತುಬ್-ಮಿನಾರ್ ಸ್ಥಾಪನೆಯ ಬಗ್ಗೆ ಹಲವಾರು ಗೊಂದಲಗಳು ಇರುವುದನ್ನು ಮನಗಂಡ ಪ್ರೋ. ಎಂ.ಎಸ್ ಭಟ್ನಗರ್ ಎಂಬ ಬರಹಗಾರರು ಕುತುಬ್ ಮಿನಾರ್ ಬಗೆಗಿರುವ ಅಸಲಿ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ!!

Image result for kutub minar inside hindu temple

ಹೌದು…. ಕುತುಬ್-ಮಿನಾರ್ ನ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ತನಗಾದ ಅನುಭವಗಳನ್ನು ಹಾಗೂ ಅವರಲ್ಲಿ ಉಂಟಾದ ಗೊಂದಲಗಳ ಬಗ್ಗೆ ಸಂಶೋಧನೆಯನ್ನು ನಡೆಸಿ ಅವುಗಳಿಂದ ಕೊನೆಗೂ ಉತ್ತರವನ್ನು ಕಂಡುಕೊಂಡಿದ್ದಾರೆ!! ಅಷ್ಟಕ್ಕೂ ಪ್ರೋ. ಎಂ.ಎಸ್ ಭಟ್ನಗರ್ ತನ್ನ ಸಂಶೋಧನೆಯಿಂದ ಕಂಡುಕೊಂಡ ಅ ಅಸಲಿ ಕಥೆಯಾದರೂ ಏನು ಗೊತ್ತೇ??

1961 ರಲ್ಲಿ ಭಟ್ನಗರ್ ಕೆಲ ಕಾಲೇಜು ವಿಧ್ಯಾರ್ಥಿಗಳೊಂದಿಗೆ ಕುತುಬ್-ಮಿನಾರ್ ಭೇಟಿ ನೀಡಿದಾಗ ಅಲ್ಲಿನ ಅಧಿಕೃತ ಮಾರ್ಗದರ್ಶಿಯು ಆ ಸ್ತಂಭದ ಬಗ್ಗೆ ನೀಡಿದ ಮಾಹಿತಿಯು ಅವರಲ್ಲಿ ಸಂಶಯಾಸ್ಪದವಾಗಿ ಕಾಡಿತ್ತು!!! ಮಾರ್ಗದರ್ಶಿಯು ಹೇಳಿರುವ ಪ್ರಕಾರ, ಕುತುಬ್ ಮಿನಾರ್ ಒಂದು ವಿಜಯಸ್ತಂಭವಾಗಿದ್ದು, ಮಹಮ್ಮದ್ ಘೋರಿಯು ಪೃಥ್ವಿರಾಜ್ ನ ವಿರುದ್ದ, ಪಾಣಿಪತ್‍ನಲ್ಲಿ ಸಾಧಿಸಿದ ಗೆಲುವಿನ ಗುರುತಿನ ಸ್ತಂಭ ಇದು ಎಂಬುವುದಾಗಿ ವಿವರಿಸಿದ್ದ. ಹಾಗಾದರೆ ದೆಹಲಿಯಲ್ಲಿ ಈ ವಿಜಯಸ್ತಂಭ ಹೇಗೆ ಸ್ಥಾಪನೆಯಾಗಿದೆ ಎಂದು ಪ್ರಶ್ನಿಸಿದಾಗ ಅವನಲ್ಲಿ ಉತ್ತರವಿರಲಿಲ್ಲ. ಆ ಸಂದರ್ಭದಲ್ಲಿ ಅಲ್ಲಿದ್ದ ಓರ್ವ ಸಂಭಾವಿತ ಪ್ರವಾಸಿಗರ ಹಾಗೂ ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಾಪಕ, ಘೋರಿಯ ರಾಜಧಾನಿ ದೆಹಲಿಯಾಗಿದ್ದುದರಿಂದ ಅವನ ಈ ವಿಜಯ ಸ್ತಂಭ ಸ್ಥಾಪಿಸಿದ ಎನ್ನುವುದನ್ನು ತಿಳಿಸಿದರು!!

Image result for kutub minar inside hindu temple

ಆದರೆ ಇಲ್ಲಿ ಭಟ್ನಗರ್ ಗೆ ಹಲವಾರು ಪ್ರಶ್ನೆಗಳ ಉದ್ಭವವಾಗಿದ್ದು, ಮಹಮ್ಮದ್ ಘೋರಿಯ ರಾಜಧಾನಿ ಘಜ್ನಿಯಾಗಿದ್ದು, ಯಾವ ತರ್ಕದಿಂದ ತನ್ನ ವಿಜಯಸ್ತಂಭವನ್ನು ದೆಹಲಿಯಲ್ಲಿ ನಿರ್ಮಿಸಿದ?? ಅದು ಆತನ ವಿಜಯ ಸ್ತಂಭವಾದಲ್ಲಿ “ಘೋರಿ ಮಿನಾರ್” ಎಂಬುವುದಾಗಿ ಕರೆಯಬಹುದಿತ್ತು. ಆದರೆ ಅದನ್ನು ಕುತುಬ್ ಮಿನಾರ್ ಎಂಬುವುದಾಗಿ ಯಾವ ಆಧಾರದಲ್ಲಿ ಕರೆಯಲಾಗುತ್ತದೆ?? ಇದು ನಿಜವಾಗಿಯು ಆತನೇ ನಿರ್ಮಾಣ ಮಾಡಿದ್ದಾದರೇ ಆತ ದೆಹಲಿಯಲ್ಲೇ ಈ ಸ್ತಂಭವನ್ನು ಯಾಕೆ ನಿರ್ಮಾಣ ಮಾಡಿದ?? ಕುತುಬ್-ಉದ್-ದಿನ್ ಐಬಕ್ ನ ರಾಜಧಾನಿ ದೆಹಲಿಯಾದ ಕಾರಣ ಇಲ್ಲಿ ನಿರ್ಮಾಣ ಮಾಡಲಾಗಿದೆಯೇ? ಎಂಬೆಲ್ಲಾ ಪ್ರಶ್ನೆಗಳು ಅವರಲ್ಲಿ ಮೂಡಿದ್ದಂತೂ ಅಕ್ಷರಶಃ ನಿಜ.

ಅಷ್ಟೇ ಅಲ್ಲದೇ, ಕುತುಬ್-ಉದ್-ದಿನ್ ಘೋರಿಯ ಗುಲಾಮನಾಗಿದ್ದ!! ಘೋರಿಯ ಮರಣದ ನಂತರ ಲಾಹೋರ್ ಪ್ರದೇಶವನ್ನು ಕುತುಬ್-ಉದ್-ದಿನ್ ಐಬಕ್ ಆಳಿದ್ದ!! ಆದರೆ ಲಾಹೋರನ್ನು ಈತನ ರಾಜಧಾನಿಯನ್ನಾಗಿಸಿದ್ದ ಪಕ್ಷದಲ್ಲಿ ಈತ ಅದು ಹೇಗೆ ದೆಹಲಿಯಲ್ಲಿ ವಿಜಯ ಸ್ತಂಭ ನಿರ್ಮಿಸಲು ಸಾಧ್ಯವಾಯಿತು??

Image result for kutub minar

ಜನರು ಹೇಳುವ ಪ್ರಕಾರ, ಮಿನಾರ್ ವಿಜಯ ಸ್ತಂಭವಲ್ಲ! ಇದು ಒಂದು ಕುವೈತ್-ಉಲ್-ಇಸ್ಲಾಂ ಮಸೀದಿ!! ಈ ಮಸೀದಿಯ ಬಗ್ಗೆ ಭಾರತದ ಇತಿಹಾಸದಲ್ಲಿಯೇ ಉಲ್ಲೇಖವಿಲ್ಲ. ಆದರೆ ಈ ಬಗ್ಗೆ, ಸರ್ ಸಹ್ಯದ್ ಅಹಮ್ಮದ್ 19 ನೇ ಶತಮಾನದಲ್ಲಿ ಇದರ ಬಗ್ಗೆ ಉಲ್ಲೇಖ ಮಾಡಿದ್ದರು!! ಆದರೆ, ಆಶ್ಚರ್ಯದಾಯಕ ಸಂಗತಿಯೆಂದರೆ…. ಒಂದು ವೇಳೆ ಅದು ಮಸೀದಿಯೇ ಆದಲ್ಲಿ “ಕುತುಬ್ ಮಿನಾರ್” ಎಂಬ ಹೆಸರು ಹೇಗೆ ಬಂತು?!! ಇಲ್ಲಿ ಮ್ಯುಝಿನಿ ಸ್ತಂಭವನ್ನೇ ಮಿನಾರ್ ಎಂದು ಗುರುತಿಸಲಾಯಿತೆ?!! ಹಾಗಾದರೆ ಅವರು ಮಿನಾರ್ ಗಳನ್ನು ಮೊದಲು ನಿರ್ಮಿಸಿ ನಂತರ ಅದರ ಮೇಲೆ ಮಸೀದಿಯನ್ನು ನಿರ್ಮಿಸಿದ್ದಾರೆಯೆ?? ಅದು ಹೇಗೆ ತಾನೆ ಸಾಧ್ಯ??

ಆದರೆ ಇವೆಲ್ಲವೂ ಕೇವಲ ಕಟ್ಟು ಕತೆಯಷ್ಟೇ. ಈ ಮೇಲಿನ ಎಲ್ಲಾ ಗೊಂದಲಮಯ ಪ್ರಶ್ನೆಗಳ ಕುರಿತು ಭಟ್ನಗರ್ ತನ್ನದೇ ಆದ ಅನ್ವೇಷಣೆ ನಡೆಸಿದರು. ಈ ಅನ್ವೇಷಣೆ ನಡೆಸಿದ ಬಳಿಕ ಅವರಿಗೆ ಅಚ್ಚರಿಯ ವಿಚಾರಗಳು ದೊರೆತವು!! ಹೌದು, ಮಿನಾರ್ ನ ಮೇಲೆ ಕೆತ್ತಲಾಗಿರುವ ಶಾಸನಗಳು ಅದರ ನಿರ್ಮಾಣ ಕಾಲದಲ್ಲಿ ಇರಲಿಲ್ಲ ಎನ್ನುವ ಸತ್ಯವನ್ನು ಕಂಡು ಕೊಂಡರಲ್ಲದೇ, ಹಿಂದು ಶೈಲಿಯ ಕೆತ್ತನೆಗಳಲ್ಲಿ ಕುರಾನಿನ ಶಾಸನಗಳನ್ನು ಅದು ಹೇಗೆ ಕೆತ್ತಲು ಸಾಧ್ಯ? ಇದೆಲ್ಲವೂ ಮೊಘಲರು ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಾಡಲಾದ ಒಂದು ಟ್ರಿಕ್ಸ್ ಅಷ್ಟೇ!!

ಹೌದು…. ಮಿನಾರ್ ನ ನಿಜವಾದ ರೂಪವೇ ಧ್ರುವ ಸ್ತಂಭ!! ಪ್ರಾಚೀನ ಕಾಲದಲ್ಲಿ ಧ್ರುವ ಸ್ತಂಭವನ್ನು ಖಗೋಳಶಾಸ್ತ್ರದ ಅಧ್ಯಯನ ಮಾಡಲೆಂದೆ ನಿರ್ಮಿಸಲಾಗಿದ್ದು, ಅದರ ತುದಿಯಲ್ಲಿ 24 ದಳದ ಕಮಲದ ಆಕಾರವನ್ನು ರಚಿಸಲಾಗಿದೆ. ಅಷ್ಟೇ ಅಲ್ಲದೇ, ಇದನ್ನು ಲಂಬಾಕೃತಿಯಾಗಿ ರಚನೆ ಮಾಡಲಾಗಿದ್ದು, ಬಾಹ್ಯಾಕಾಶದ ವೀಕ್ಷಣೆಗೆಂದೇ ನಿರ್ಮಾಣ ಮಾಡಲಾಗಿದೆ. 24 ದಳದ ಕಮಲದ ರಚನೆ ಇದ್ದು, ಇದು ನಿಸ್ಸಂಶಯವಾಗಿ ಹಿಂದೂ ಶೈಲಿಯೇ ಆಗಿದೆ!!! ಈ ರೀತಿಯ ಕಲಾಶೈಲಿ ಪಶ್ಚಿಮ ಏಷ್ಯಾದಲ್ಲಿ ಕಾಣಲು ಸಾಧ್ಯವಿಲ್ಲ!! ಅಷ್ಟೇ ಅಲ್ಲದೇ, ಸ್ತಂಭದಲ್ಲಿನ ಕಮಲದ ಆಕೃತಿ ಅದು ಧ್ರುವ ಸ್ತಂಭವೆಂದು ದೃಡಪಡಿಸುತ್ತದೆ. ಆದರೆ, ಶಿಲೆಯಲ್ಲಿ ಕೆತ್ತಲಾಗಿದ್ದ ಆಕೃತಿಗಳ ಹಿಂಭಾಗದಲ್ಲಿ, ಘೋರಿ ಹಾಗೂ ಐಬಕ್ ಮುಸ್ಲಿಂ ಶಾಸನಗಳನ್ನು ಕೆತ್ತಿಸಿದ್ದಾರೆ. ಅಲ್ಲಿನ ಚಪ್ಪಡಿ ಕಲ್ಲನ್ನು ಬಳಸಿ ಕಟ್ಟಡಗಳ ಗೋಡೆಗಳನ್ನು ಪುನಃ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಹೇಳಬೇಕಾದರೆ, ಕುತುಬ್ ಮಿನಾರ್ ಗೋಪುರದ ಸುತ್ತಮುತ್ತ ಸಾವಿರಾರು ಭಗ್ನ ಹಿಂದೂ ಸ್ಮಾರಕಗಳಿದ್ದು, ಕಮಲ, ಕಿನ್ನರ, ವಾದ್ಯ, ಪುರುಷ, ಕಲಶ, ಸ್ತ್ರೀ, ಭಿನ್ನ ಭಿನ್ನ ದೈವಗಳ ಕೆತ್ತನೆ ಇರುವ ಅಸಂಖ್ಯಾತ ಶಿಲೆಗಳು ಬಿದ್ದಿದ್ದವು. ಭಗ್ನ ಹಿಂದೂ ದೇವಾಲಯಗಳಲ್ಲಿ ಕೆಲವನ್ನು ಮಸೀದಿಗಳನ್ನಾಗಿ, ದರ್ಗಾಗಳನ್ನಾಗಿ ಮಾಡಿರುವುದಂತೂ ಅಕ್ಷರಶಃ ನಿಜ.

Related image

ಧ್ರುವಸ್ತಂಭವನ್ನು ಮರೆಮಾಚಿತೇ ಕುತುಬ್ ಮಿನಾರ್, ಅಷ್ಟಕ್ಕೂ ಇದರ ಇತಿಹಾಸವಾದರೂ ಏನು??

ಕುತುಬ್- ಮಿನಾರ್ ನಿರ್ಮಾಣವಾದ ನಗರದ ಮೂಲ ಹೆಸರು ಮೆಹರುಲಿ, ಇದು ಸಂಸ್ಕ್ರತ ಪದ “ಮಿಹೆರಾ-ಅವಲಿ”!! ಆಗಿನ ರಾಜ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಮಿಹಿರ ಎಂಬ ಖಗೋಳಶಾಸ್ತ್ರಜ್ಞ ಇದ್ದುದರಿಂದ ಆ ಸ್ಥಳಕ್ಕೆ ಮೆಹರುಲಿ ಎಂಬ ಹೆಸರು ಬಂತು ಎಂಬುದಾಗಿ ಪ್ರತೀತಿ ಇದೆ. ವಿಕ್ರಮಾದಿತ್ಯನ ಆಸ್ಥಾನದಲ್ಲಿ ಗಣಿತ ತಜ್ಞರು ಹಾಗೂ ತಾಂತ್ರಿಕ ತಜ್ಞರು ಆಶ್ರಯ ಪಡೆದಿದ್ದರು. ಇವರ ನೇತೃತ್ವದಲ್ಲಿ ಈ ಸ್ತಂಭವನ್ನು ರಚಿಸಲಾಗಿದ್ದು, ಬಾಹ್ಯಾಕಾಶದ ಅಧ್ಯಯನಕ್ಕಾಗಿ ಇದನ್ನು ನಿರ್ಮಾಣ ಮಾಡಲಾಗಿದೆ!! ಹಾಗಾಗಿ ಈ ಮೂಲಕ ಧ್ರುವತಾರೆಗಳ ಅಧ್ಯಯನ ನಡೆಸುತ್ತಿದ್ದರು!!

Image result for kutub minar inside hindu temple

ಆದರೆ ಕುತುಬ್-ಉದ್-ದಿನ್ ಐಬಕ್ ಆ ಪ್ರದೇಶದ ಮೇಲೆ ದಾಳಿ ಮಾಡಿ ಧ್ರುವ ಸ್ತಂಭದ ಮೇಲಿನ ಹಿಂದು ಗುರುತನ್ನು ನಾಶ ಮಾಡಿ, ದೇವಸ್ಥಾನಗಳನ್ನು ಧ್ವಂಸಮಾಡಿದ. ಅಲ್ಲಿ ಕುವತ್-ಉಲ್- ಇಸ್ಲಾಂ ಎಂಬ ಮಸೀದಿಯನ್ನು ನಿರ್ಮಿಸಿ, ದೇವಸ್ಥಾನದ ಅವಶೇಷಗಳನ್ನು ಗೋಡೆ ನಿರ್ಮಾಣಕ್ಕೆ ಬಳಸಿದ!! ಹಾಗೆಯೇ ಧ್ರುವ ಸ್ತಂಭದ ಮೇಲಿನ ಸಂಸ್ಕ್ರತ ಶಾಸನಗಳನ್ನು ನಾಶ ಮಾಡಿ ಅದರ ಮೇಲೆ ಕುರಾನ್ ಬರಹಗಳನ್ನು ಕೆತ್ತಿಸಿದ. ಆದರೆ ಇವೆಲ್ಲಾ ಮಾಹಿತಿಗಳ ಆಧಾರದ ಮೇಲೆ ಕುತುಬ್ ಮಿನಾರ್, ಹಿಂದು ಸ್ತಂಭವೆಂದು ಸಾಬೀತು ಪಡಿಸುತ್ತದೆ.

ಸಾಮಾನ್ಯವಾಗಿ ಮುಸ್ಲಿಂ ಸಂಪ್ರಾದಯದಲ್ಲಿ ಉತ್ತರ ದಿಕ್ಕಿಗೆ ದ್ವಾರವನ್ನು ನಿರ್ಮಿಸಲಾಗಿರುತ್ತದೆ. ಆದರೆ ಕುತುಬ್ ಮಿನಾರ್ ಪಶ್ಚಿಮ ದಿಕ್ಕಿಗೆ ಇದೆ. ಕುತುಬ್ ನ ಇನ್ನೊಂದು ದಿಕ್ಕಿನ ದ್ವಾರದಲ್ಲಿ ಕಮಲದ ದಳಗಳನ್ನು ಕಲ್ಲಿನಿಂದ ಕೆತ್ತಲಾಗಿದೆ. ಇವೆಲ್ಲಾ ಕುತುಬ್-ಮಿನಾರ್, ಹಿಂದುಗಳ ನಿರ್ಮಾಣ ಎಂಬುದಕ್ಕೆ ಸಾಕ್ಷಿ. ಇನ್ನು, ಹಿಂದು ಸಂಪ್ರದಾಯದಲ್ಲಿ ಈ ಸ್ತಂಭದ ಮೂಲ ಹೆಸರು “ವಿಷ್ಣುಧ್ವಜ”!!! ಕಾಲಾನಂತರ, ಇದು ಧ್ರುವಸ್ತಂಭ ಎಂದು ಬದಲಾಗಿದೆ. ವಿಷ್ಣುಪಾದಗಿರಿಯಲ್ಲಿ ವಿಷ್ಣು ಅವತಾರ ಎತ್ತಿರುವ ಸಲುವಾಗಿ ಈ ಕಂಬವನ್ನು ಸ್ಥಾಪಿಸಲಾಗಿತ್ತು. ಇದನ್ನು ಮಹಮ್ಮದ್ ಘೋರಿ ಹಾಗೂ ಆತನ ಪಾಳೆಗಾರನಾದ ಕುತುಬ್-ಉದ್-ದಿನ್ ನಾಶ ಮಾಡಿ, ಅದರ ಮೇಲೆ ಅವರ ಶಾಸನಗಳನ್ನು ಕೆತ್ತಿಸಿದ್ದರು. ಆದರಿಂದಾಗಿ ಆ ನಾಲ್ಕು ಕಂಬಗಳು (ಚಾರ್ ಮಿನಾರ್) ಹಿಂದೂ ರಾಜನಿಂದ ಮೊಟ್ಟಮೊದಲು ನಿರ್ಮಾಣ ಮಾಡಲಾಗಿತ್ತು ಎಂಬುವುದು ನಿಸ್ಸಂಶಯ!

Image result for kutub minar inside hindu temple

ಅದಲ್ಲದೆ, ಇಲ್ಲಿ ಬ್ರಹ್ಮನ 4 ಮುಖವುಳ್ಳ ಮೂರ್ತಿಯನ್ನು ಅಮೃತ ಶಿಲೆಯಲ್ಲಿ ನಿರ್ಮಾಣ ಮಾಡಲಾಗಿತ್ತು. ಅದು ಕೂಡ ಮುಸ್ಲಿಂ ನಾಯಕರಿಂದ ಕೆಡವಲಾಗಿತ್ತು. ಅಲ್ಲಿರುವ ಕಲ್ಲಿನ ಕಂಬಗಳು ವಿಷ್ಣುದೇವಾಲಯದ ಅವಶೇಷವಾಗಿದೆ. ದೇವಸ್ಥಾನದ ಒಂದು ಭಾಗದಲ್ಲಿ ಅಂಡಾಕಾರದಲ್ಲಿರುವ 27 ನಕ್ಷತ್ರಗಳಿರುವ ಶಾಸನಗಳನ್ನು ಕೆತ್ತಲಾಗಿದೆ. ದೈತ್ಯಾಕಾರದ ಕೆಂಪು ಕಲ್ಲಿನಿಂದ ಅಲ್ಲಿನ ದ್ವಾರವನ್ನು ಅಲಂಕೃತಗೊಳಿಸಲಾಗಿದೆ. ಇದರಿಂದಾಗಿ, ಅದು ಹಿಂದೂ ಪಾರಂಪರಿಕ ಸಾಂಸ್ಕ್ರತಿಕ ಆಲಯದ್ವಾರದಂತೆ ನಿರ್ಮಾಣವಾಗಿದೆ. ಈಗಿನ ರಾಜಸ್ಥಾನದಲ್ಲಿರುವ ಹಿಂದೂ ದೇವಾಲಯಗಳ ಶೈಲಿಯು ದೆಹಲಿಯಲ್ಲಿರುವ ಕುತುಬ್ ಮಿನಾರ್ ನ ಶೈಲಿಯನ್ನೇ ಹೋಲುತ್ತಿದೆ. ಆದರೆ ಇದೆಲ್ಲವೂ ಕುತುಬ್, ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಸಂಪೂರ್ಣ ನಾಶವಾಗಿದೆ!!

ವಿಶ್ವದ ಅತ್ಯಂತ ಎತ್ತರದ ಗೋಪುರ, “ಟವರ್ ಆಫ್ ವಿಕ್ಟರಿ” ಎಂಬ ಖ್ಯಾತಿಯ, ವಿಶ್ವಸಂಸ್ಥೆಯ ಪಾರಂಪರಿಕ ಸ್ಥಾನಗಳಲ್ಲಿ ಒಂದಾದ ಕುತುಬ್ ಮಿನಾರ್ 378 ಮೆಟ್ಟಿಲುಗಳಿರುವ 238 ಅಡಿ ಎತ್ತರದ ಬೃಹತ್ ಸ್ತಂಭ ಗೋಪುರ. ಹಲವರು ಅದನ್ನು ವ್ಯಾಪಾರೀಕರಣದ ಚಿಹ್ನೆ(ಲೋಗೊ)ಯಾಗಿ ಬಳಸಿಕೊಂಡಿದ್ದು, ವರ್ಷಕ್ಕೆ ಸರಾಸರಿ 40 ಲಕ್ಷ ಪ್ರೇಕ್ಷಕರು ಅದನ್ನು ನೋಡುತ್ತಾರೆ. ಆದರೆ, ಈ ಮೇಲಿನ ಎಲ್ಲಾ ಸಾಕ್ಷ್ಯಾಧಾರಗಳನ್ನು ಗಮನಿಸಿದಾಗ ಕುತುಬ್ ನ ಮೂಲ ನಿರ್ಮಾಣ ಹಿಂದೂ ರಾಜವಂಶಗಳಿಂದಾಗಿದ್ದು, ಕಾಲಾನಂತರ ಮೊಘಲರ ದಾಳಿಯಿಂದಾಗಿ ಅದರ ಮೂಲವನ್ನು ನಾಶಮಾಡಿ, ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದ್ದಾರೆ ಎಂಬುವುದು ಪ್ರೋ. ಎಂ.ಎಸ್ ಭಟ್ನಗರ್ ಅವರ ಸಂಶೋಧನೆಯ ಮೂಲಕ ಸಾಭೀತಾಗುತ್ತದೆ.

source: sanskritimagazine.com

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close