ಪ್ರಚಲಿತ

ತಪ್ಪಾಯ್ತು ಮಂಜುನಾಥ ಎಂದ ಕುಮಾರಣ್ಣಾ.! ರಾಜಕೀಯಕ್ಕಾಗಿ ಧರ್ಮಸ್ಥಳದ ಹೆಸರೆತ್ತಿದ್ದಕ್ಕೆ ಪಶ್ಚಾತ್ತಾಪ ಪಟ್ಟ ಮುಖ್ಯಮಂತ್ರಿ.!

ಈ ಹಿಂದೆ ಅಂದರೆ 2011ರಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜಕೀಯ ಕಾರಣಗಳಿಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ದೇವರ ಹೆಸರೆತ್ತಿದ್ದರು. ಆಣೆ ಪ್ರಮಾಣಕ್ಕಾಗಿ ಧರ್ಮಸ್ಥಳಕ್ಕೆ ಬನ್ನಿ ಎಂದು ಪರಸ್ಪರ ಕಾದಾಡಿದ್ದರು. ನಂತರ ಬಂದು ಆಣೆ ಪ್ರಮಾಣ ನಡೆಸದೆ ಮಂಜುನಾಥೇಶ್ವರ ದೇವರ ದರ್ಶನ ಪಡೆದು ತೆರಳಿದ್ದರು. ಆದರೆ ನಂತರ ನಡೆದಿದ್ದೇ ಮಂಜುನಾಥನ ಮಹಿಮೆ. ಕಾಕತಾಲಿಯ ಎಂಬಂತೆ ಇಬ್ಬರೂ ನಾಯಕರಿಗೂ ಅದರ ನಂತರ ರಾಜಕೀಯದಲ್ಲಿ ಅಧಿಕಾರದ ವನವಾಸ ಆರಂಭವಾಗಿತ್ತು.

ಇದೀಗ ತಾನು ಮಾಡಿದ ತಪ್ಪಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಜುನಾಥನ ಬಳಿ ಕ್ಷಮೆ ಕೋರಿದ್ದಾರೆ. “ತನ್ನ ರಾಜಕೀಯ ವಿಚಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರನ‌ ಹೆಸರು ಹೇಳಿದ್ದೆ, ಈ ಬಗ್ಗೆ ನಾನು ಪಶ್ಚಾತ್ತಾಪ ಪಡುತ್ತೇನೆ” ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಧರ್ಮಸ್ಥಳದಲ್ಲಿ ಹೇಳಿಕೊಂಡಿದ್ದಾರೆ.

ಧರ್ಮಸ್ಥಳದಲ್ಲಿ ಭಗವಾನ್ ಗೋಮಟೇಶ್ವರ ಸ್ವಾಮಿಗೆ ಮಹಾಮಸ್ಥಕಾಭಿಷೇಕ ಕಾರ್ಯಕ್ರಮ ನಡೆಯುತ್ತಿದ್ದು ಈ ಪ್ರಯುಕ್ತ ಧರ್ಮಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರು ಈ ರೀತಿ ಹೇಳಿಕೊಂಡಿದ್ದಾರೆ. “ಶ್ರೀ ಮಂಜುನಾಥ ಸ್ವಾಮಿ ಎಲ್ಲರನ್ನೂ ಗಮನಿಸುತ್ತಿರುತ್ತಾನೆ, ದೇವರಿಗೆ ಬಡವನೂ ಒಂದೇ ದೊರೆಯೂ ಒಂದೇ. ಆದರೆ ನಾನು ಶ್ರೀ ಮಂಜುನಾಥೇಶ್ವರನ‌ ಹೆಸರು ಎಳೆದು ತಂದಿದ್ದೆ, ಈ ಬಗ್ಗೆ ನಾನು ತಪ್ಪು ಒಪ್ಪಿಕೊಳ್ಳುತ್ತೇನೆ” ಎಂದು ಕುಮಾರಸ್ವಾಮಿ ಅವರು ಪಶ್ಚಾತ್ತಾಪ ಪಟ್ಟಿದ್ದಾರೆ.

ಒಟ್ಟಾರೆ ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ರಾಜಕಾರಣಿಗಳು ಇನ್ನಾದರೂ ಇಂತಹಾ ಹುಚ್ಚಾಟಗಳನ್ನು ಬಿಟ್ಟು ಜನತೆಯ ಕೆಲಸ ಮಾಡುವತ್ತ ಗಮನ ಹರಿಸಬೇಕು. ಇದು ಪ್ರತೀ ರಾಜಕೀಯ ಪಕ್ಷಗಳಿಗೂ ಅನ್ವಯವಾಗುವಂತದ್ದು.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close