ಇತಿಹಾಸಪ್ರಚಲಿತ

ಭಾರತದ ಅಷ್ಟೂ ತೀರ್ಥ ಕ್ಷೇತ್ರಗಳ ‘ರಾಜ’ನಾದ ‘ಪ್ರಯಾಗ’ ದ ನಾಮಕರಣ ಮತ್ತು ಮರುನಾಮಕರಣದ ಹಿಂದಿನ ಕಥೆ ಕೇಳಿ ಆಮೇಲೆ ಯೋಗಿ ಮಾಡಿದ್ದು ಸರಿಯೋ ಅಲ್ಲವೊ ಎಂದು ತೀರ್ಮಾನಿಸಿ

ಅಖಂಡ ಭಾರತವೆ ಒಂದು ತೀರ್ಥ ಕ್ಷೇತ್ರ. ಚತುರ್ವೇದ-ಉಪನಿಷತ್ತುಗಳು-ಪುರಾಣಗಳು ಹಾಗೂ ರಾಮಾಯಣ-ಮಹಾಭಾರತ ಮಹಾಕಾವ್ಯಗಳು ರಚಿಸಲ್ಪಟ್ಟ ಪುಣ್ಯ ಭೂಮಿ. ಶಿವ-ಪಾರ್ವತಿ, ಲಕ್ಷ್ಮಿ-ನಾರಾಯಣ, ಬ್ರಹ್ಮ-ಸರಸ್ವತಿಯರ ಕರ್ಮ ಭೂಮಿ. ಈ ಪುಣ್ಯ ಭೂಮಿಯ ಎಲ್ಲಾ ಕ್ಷೇತ್ರಗಳಿಗೂ ಮುಕುಟ ಮಣಿಯಾಗಿ ವಿರಾಜಮಾನವಾಗಿತ್ತು “ಪ್ರಯಾಗ”. ಸೃಷ್ಟಿಯ ಆದಿಯಲ್ಲಿ ಚತುರ್ವೇದಗಳನ್ನು ರಚಿಸಿದ ಬ್ರಹ್ಮನು ಮೊಟ್ಟ ಮೊದಲ ಬಾರಿಗೆ ಯಾಗವನ್ನು ಕೈಗೊಂಡ ಪುಣ್ಯ ಕ್ಷೇತ್ರ. ಭಾರತದ ಜೀವನದಿ ಗಂಗೆ-ಯಮುನೆಯರ ಸಂಗಮ ಸ್ಥಳದಲ್ಲಿ ಬ್ರಹ್ಮನು “ಹತ್ತು ಅಶ್ವಮೇಧ” ಯಾಗಗಳನ್ನು ಮಾಡಿದ್ದರಿಂದ ಈ ಕ್ಷೇತ್ರ ಅತ್ಯಂತ ಪುನೀತವಾಗಿದೆ ಎಂದು ಪುರಾಣಗಳಲ್ಲಿ ವರ್ಣಿಸಲ್ಪಟ್ಟಿದೆ.

ಭೂಮಿಯ ಮೇಲೆ ಮೊಟ್ಟ ಮೊದಲ ಯಾಗ ನಡೆದ ಈ ಸ್ಥಳವೆ ಪ್ರಯಾಗ. ಎಂತಹ ಅದ್ಭುತ ಹೆಸರು! ಎಂತಹ ಪಾವನ ಕ್ಷೇತ್ರ! ಪ್ರಯಾಗದ ಬಗ್ಗೆ ಪದ್ಮ ಪುರಾಣ, ಮತ್ಸ್ಯ ಪುರಾಣ ಹಾಗೂ ಮಹಾಭಾರತದಲ್ಲೂ ಉಲ್ಲೇಖವಿದೆ. ಮಹಾಭಾರತದ ತೀರ್ಥ ಪರ್ವದಲ್ಲಿ ” ಓ ವೀರನೆ, ಗಂಗಾ-ಯಮುನಾ ಸಂಗಮ ಸ್ಥಳದಲ್ಲಿ ಪ್ರತಿ ಜೀವಿಗಳ ಆತ್ಮನಾದ ನಮ್ಮ ಪೂರ್ವಜ ಬ್ರಹ್ಮನು ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಯಾಗವನ್ನು ಕೈಗೊಂಡಿದ್ದನು. ಆದ್ದರಿಂದ ಭರತಶ್ರೇಷ್ಠನೇ, ಇದು ಪ್ರಯಾಗ ಎಂದು ಕರೆಯಲ್ಪಡುತ್ತಿದೆ” ಎಂದು ಹೇಳಲಾಗಿದೆ.

ಚತುರ್ವೇದಗಳಲ್ಲಿ ಮೊದಲನೆಯ ವೇದವಾದ ಋಗ್ವೇದವು ಅದರ ಪ್ರಸ್ತುತ ರೂಪದಲ್ಲಿ ಕ್ರಿ.ಪೂ 1700-1100 ರ ಮಧ್ಯದಲ್ಲಿ ಸಂಕಲಿಸಲ್ಪಟ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ ಅಪೌರುಷೇಯ ರೂಪದಲ್ಲಿ ಚತುರ್ವೇದಗಳು ಸಾವಿರಾರು ವರ್ಷಗಳ ಹಿಂದಿಯೆ ಈ ಭೂಮಿಯ ಮೇಲೆ ಹರಿದಾಡುತ್ತಿತ್ತು. ಅಂದರೆ ಸಾವಿರಾರು ವರ್ಷಗಳಿಂದ ಈ ಕ್ಷೇತ್ರವನ್ನು ಪ್ರಯಾಗ ಎಂದೆ ಕರೆಯಲಾಗುತ್ತಿತ್ತು ಎನ್ನುವುದು ಇದರ ಅರ್ಥ.

ಪ್ರಯಾಗವನ್ನು ಇಲ್ಲಹಾಬಾದ್ ಎಂದು ಬದಲಿಸಿದವನು ಮುಘಲ ದೊರೆ ಅಕ್ಬರ

ಅಶುತೋಷ್ ಜೋಶಿ ಅವರು ತಮ್ಮ Town Planning Regeneration of Cities ಪುಸ್ತಕದಲ್ಲಿ 1573 AD ವರೆಗೆ ಈ ಕ್ಷೇತ್ರವನ್ನು ಪ್ರಯಾಗ ಎಂದೆ ಕರೆಯಲಾಗುತ್ತಿತ್ತು ಎಂದೆ ಬರೆದಿದ್ದಾರೆ. ಜೆ ಎಸ್ ಮಿಶ್ರಾ ಅವರ ಪುಸ್ತಕ Mahakumbh, the Greatest Show on Earth ನಲ್ಲಿ ಆಗಿನ ಮೊಘಲ್ ಚಕ್ರವರ್ತಿ ಅಕ್ಬರ್ ಸುಮಾರು 1575 AD ಯಲ್ಲಿ ಪ್ರಯಾಗಕ್ಕೆ ಭೇಟಿ ನೀಡಿದ್ದಾನೆ ಎಂದು ಬರೆಯುತ್ತಾರೆ. ಆತ ಇಲ್ಲಿನ ಸೌಂದರ್ಯವನ್ನು ನೋಡಿ ಅದಕ್ಕೆ ಇಲ್ಲಹಬಾಸ್ ಅಥವಾ ಇಲ್ಲಹಾಬಾದ್ ಎಂದು ನಾಮಕರಣ ಮಾಡುತ್ತಾನೆ ಎಂದು ಈ ಪುಸ್ತಕಗಳಲ್ಲಿ ದಾಖಲಾಗಿದೆ.

ಅಕ್ಬರನ ಮಗ ಜಹಾಂಗೀರನ ಆಡಳಿತಕ್ಕೂ ಮುಂಚೆಯೆ ಈ ಕ್ಷೇತ್ರವನ್ನು ಇಲ್ಲಹಾಬಾದ್ ಎಂದು ಕರೆಯಲಾಗುತ್ತಿತ್ತು ಎಂದು ಪ್ರೊ.ಮೆಕ್ಲೇನ್ ಹೇಳುತ್ತಾರೆ. ಅಕ್ಬರನ ಕಾಲದ ವರಾಹಗಳಲ್ಲಿ ಇಲ್ಲಾಹಾಬಾದ್ ಎನ್ನುವ ಹೆಸರು ಮುದ್ರಿತವಾಗಿತ್ತು ಎಂದು ಅವರು ದೃಢಪಡಿಸಿದ್ದಾರೆ. ಇಲ್ಲಾಹಾಬಾದ್ ಅನ್ನು ಅಲಹಾಬಾದ್ ಎನ್ನುವ ಪರಿಪಾಠ ಬ್ರಿಟಿಷರ ನಂತರ ಬಂದದ್ದು. ಇಲ್ಲಹಾಬಾದ್ ಅನ್ನು ಅಲಹಾಬಾದ್ ಎನ್ನುವ ಹೆಸರಿನಿಂದ ಬ್ರಿಟಿಷರೆ ಕರೆಯುತ್ತಿದ್ದದು. ಮುಂದೆ ಈ ಹೆಸರೆ ಇತಿಹಾಸದ ಪುಸ್ತಕಗಳಲ್ಲಿ ಶಾಶ್ವತವಾಗಿ ಉಳಿದು ಬಿಟ್ಟಿತು. ನಮ್ಮ ಇತಿಹಾಸದ ಪಾಠ ಪುಸ್ತಕಗಳನ್ನು ಬರೆದ “ಎಡ-ಕೈ” ನಾಯಕರ ಗುಲಾಮರು ಇತಿಹಾಸವನ್ನು ತಿರುಚಿ ಬರೆದದ್ದೆ ನಮ್ಮ ಇವತ್ತಿನ ಬೌದ್ದಿಕ ದಿವಾಳಿತನಕ್ಕೆ ಕಾರಣ.

ಪದ್ಮ ಪುರಾಣದಲ್ಲಿ ಪ್ರಯಾಗವನ್ನು ತೀರ್ಥ ಕ್ಷೇತ್ರಗಳ ಆಕಾಶಗಂಗೆಯಲ್ಲಿ ಅತಿ ಶ್ರೇಷ್ಟ ಕ್ಷೇತ್ರ ಪ್ರಯಾಗ ಎಂದು ಬಣ್ಣಿಸಲಾಗಿದೆ. ಮತ್ಸ್ಯ ಪುರಾಣದಲ್ಲಿ ತೀರ್ಥ ಕ್ಷೇತ್ರಗಳ “ರಾಜ” ಪ್ರಯಾಗ ಎಂದು ಹೇಳಲಾಗಿದೆ. ಇದೆ ಕಾರಣಕ್ಕಾಗಿ ಯೋಗಿ ಸರಕಾರ ಪ್ರಯಾಗವನ್ನು “ಪ್ರಯಾಗರಾಜ” ಎಂದು ಮರು ನಾಮಕರಣ ಮಾಡಿದೆ. ಈಗ ಹೇಳಿ ಯೋಗಿ ತೆಗೆದು ಕೊಂಡ ನಿರ್ಧಾರದಲ್ಲಿ ಏನಾದರೂ ತಪ್ಪಿದೆಯೆ?

ಜಂಬೂದ್ವೀಪ ಆರ್ಯಾವರ್ತ ಭಾರತದ ಪರಮ ಪಾವನ ಕ್ಷೇತ್ರ ಪ್ರಯಾಗ. ಸೃಷ್ಠಿಯ ಪ್ರಪ್ರಥಮ ಯಾಗ ನಡೆದ ಸ್ಥಳ ಪ್ರಯಾಗ. ಸನಾತನ ಧರ್ಮದ ಅಷ್ಟೂ ತೀರ್ಥ ಕ್ಷೇತ್ರಗಳ ರಾಜ ಈ ಪ್ರಯಾಗ. ಒಬ್ಬ ಮತಾಂಧ ಮುಘಲನ ಮತಾಂಧತೆಗೆ ಸಾಕ್ಷಿಯಾಗಿರುವ ಅಲಹಾಬಾದ್ ಎನ್ನುವ ಹೆಸರು ಈ ಕ್ಷೇತ್ರಕ್ಕೆ ಸೂಕ್ತವೋ, ಇಲ್ಲ ಸನಾತನ ಧರ್ಮದ ಹಿರಿಮೆಯನ್ನು ಜಗತ್ತಿಗೆ ಸಾರುವ ಪ್ರಯಾಗರಾಜ ಎನ್ನುವ ಹೆಸರು ಸೂಕ್ತವೋ? “ಬುದ್ದಿ”ವಂತರಾದ ನೀವೇ ನಿರ್ಧರಿಸಿ.

-Postcard team

swarajyamag

Tags

Related Articles

FOR DAILY ALERTS
 
FOR DAILY ALERTS
 
Close