ಇತಿಹಾಸ

ತಿಮ್ಮಪ್ಪನ ಮಹಿಮೆ!! ತಿರುಪತಿ ತಿಮ್ಮಪ್ಪನ ಶಿರದ ಮೇಲಿರುವ ಆ ಗಾಯದ ಗುರುತಿಗೆ ಪ್ರತಿನಿತ್ಯ ಗಂಧ ಹಚ್ಚೋದ್ಯಾಕೆ!!

ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂಬ ಹೆಗ್ಗಳಿಕೆ ತಿರುಮಲದ ಬಾಲಾಜಿ ಮಂದಿರಕ್ಕಿದೆ. ಅತೀ ಹೆಚ್ಚು ಭಕ್ತಾದಿಗಳನ್ನು ಸೆಳೆಯುವ ಸುಕ್ಷೇತ್ರವಿದು. ಬಾಲಾಜಿ ಅಥವಾ ವೆಂಕಟೇಶ್ವರನು ಮಹಾವಿಷ್ಣುವಿನ ಅವತಾರ. ತಿರುಮಲ-ತಿರುಪತಿ ಸುತ್ತಲಿರುವ ಏಳು ಬೆಟ್ಟಗಳನ್ನು ಸಪ್ತಗಿರಿ ಎಂದು ಕರೆಯಲಾಗುತ್ತದೆ. ಈ ಏಳು ಬೆಟ್ಟಗಳು ಶೇಷನಾಗನ ಏಳು ಹೆಡೆಗಳು ಎಂದೂ ನಂಬಲಾಗುತ್ತದೆ. ಏಳನೇ ಬೆಟ್ಟವಾದ ವೆಂಕಟಾದ್ರಿಯಲ್ಲಿ ಶ್ರೀ ವೆಂಕಟೇಶ್ವರನ ಸನ್ನಿಧಿ ಇದೆ.

11ನೇ ಶತಮಾನದಲ್ಲಿದ್ದ ಸಂತ ರಾಮಾನುಜರು ತಿರುಪತಿಯ ಸಪ್ತಗಿರಿಯನ್ನೇರಿದಾಗ ಅಲ್ಲಿ ಭಗವಾನ್ ಶ್ರೀನಿವಾಸನು ಅವರಿಗೆ ದರ್ಶನ ನೀಡಿದ ಎಂಬ ಪ್ರತೀತಿ ಇದೆ. ಇಲ್ಲಿ ವೈಕುಂಠ ಏಕಾದಶಿ ದಿನ ಸ್ವಾಮಿಯ ದರ್ಶನ ಪಡೆದರೆ ಎಲ್ಲಾ ಪಾಪಗಳೂ ಕಳೆಯುತ್ತವೆ ಎಂದು ಭಕ್ತರು ನಂಬುತ್ತಾರೆ. ಅದಲ್ಲದೆ ಇಹಲೋಕ ತ್ಯಜಿಸಿದ ಬಳಿಕ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದೂ ಹೇಳಲಾಗುತ್ತದೆ.

 

ದೇವಾಲಯದ ದೈವವಾದ ವೆಂಕಟೇಶ್ವರ, ವಿಷ್ಣುವಿನ ಒಂದು ಅವತಾರ . ಬಾಲಾಜಿ , ಗೋವಿಂದ , ಮತ್ತು ಶ್ರೀನಿವಾಸ ವೆಂಕಟೇಶ್ವರ ಇತರ ಹೆಸರುಗಳಿಂದ ಕರೆಯಲಾಗುತ್ತದೆ..  ಆದರೆ ಅತಿ ಹೆಚ್ಚು ಶ್ರೀಮಂತ ದೇವಾಲಯವೆಂದರೆ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಾಲಯ. ತಿರುಪತಿಯ ಬಳಿ ಇರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ದೇಣಿಗೆಯನ್ನು ದಾನರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ.

ತಿರುಮಲ ಪ್ರದೇಶದಲ್ಲಿರುವ ಒಟ್ಟು ಏಳು ಬೆಟ್ಟಗಳಲ್ಲಿ ಒಂದಾದ ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಸ್ಥಾನವಿರುವ ಕಾರಣಕ್ಕೇ ಇದಕ್ಕೆ ಏಳು ಬೆಟ್ಟಗಳ ದೇವಸ್ಥಾನ ಎಂಬ ಅನ್ವರ್ಥನಾಮವೂ ಬಂದಿದೆ. ವೆಂಕಟೇಶ್ವರನಿಗೆ ವೆಂಕಟಾಚಲಪತಿ, ಶ್ರೀನಿವಾಸ, ಬಾಲಾಜಿ, ತಿರುಪತಿ ತಿಮ್ಮಪ್ಪ ಎಂಬ ಇತರ ಹೆಸರುಗಳೂ ಇವೆ. ವೆಂಕಟೇಶ್ವರನು ದೇವರ ಒಂದು ಅವತಾರವಾಗಿದ್ದು ಈತನಲ್ಲಿ ಬೇಡಿಕೊಂಡ ಯಾವುದೇ ಹರಕೆ ಫಲಿಸದೇ ಇರುವುದಿಲ್ಲ ಎಂಬ ಕಾರಣಕ್ಕೆ ನಿತ್ಯವೂ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸಿ ತಮ್ಮ ಶಕ್ತಿಗೆ ಅನುಸಾರ ಯಾವುದಾದರೊಂದು ಕಾಣಿಕೆಯನ್ನು ನೀಡುತ್ತಾರೆ. ಈ ಕಾಣಿಕೆಗಳ ವೈವಿಧ್ಯವೂ ಅಚ್ಚರಿ ಮೂಡಿಸುತ್ತೆ!!

Related image

ತಿರುಪತಿಯ ಬಳಿ ಇರುವ ತಿರುಮಲ ಬೆಟ್ಟದ ತುದಿಯಲ್ಲಿರುವ ಈ ದೇವಸ್ಥಾನ ಒಂದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಮತ್ತು ಭಾರತದಲ್ಲಿಯೇ ಅತಿ ಹೆಚ್ಚು ದೇಣಿಗೆಯನ್ನು ದಾನರೂಪದಲ್ಲಿ ಸ್ವೀಕರಿಸುವ ದೇವಾಲಯವಾಗಿದೆ. ತಿರುಮಲ ಪ್ರದೇಶದಲ್ಲಿರುವ ಒಟ್ಟು ಏಳು ಬೆಟ್ಟಗಳಲ್ಲಿ ಒಂದಾದ ವೆಂಕಟಾದ್ರಿ ಬೆಟ್ಟದ ಮೇಲೆ ಈ ದೇವಸ್ಥಾನವಿರುವ ಕಾರಣಕ್ಕೇ ಇದಕ್ಕೆ ಏಳು ಬೆಟ್ಟಗಳ ದೇವಸ್ಥಾನ ಎಂಬ ಅನ್ವರ್ಥನಾಮವೂ ಬಂದಿದೆ.

ಪ್ರತಿ ಗುರುವಾರದಂದು ನಡೆಯುವ ನಿಜರೂಪ ದರ್ಶನಂ ಕಾರ್ಯಕ್ರಮದಲ್ಲಿ ಸ್ವಾಮಿಯ ವಿಗ್ರಹವನ್ನು ಬಿಳಿಯ ಮರದ ಕೊರಡನ್ನು ತೇದಿದ ಲೇಪನದಿಂದ ಅಲಂಕರಿಸಲಾಗುತ್ತದೆ. ಕಾರ್ಯಕ್ರಮದ ಬಳಿಕ ಒಣಗಿದ ಈ ಲೇಪನವನ್ನು ಸಿಪ್ಪೆಯಂತೆ ತೆಗೆದು ನಿವಾರಿಸಿದಾಗ ಒಳಭಾಗದಲ್ಲಿ ಲಕ್ಷ್ಮೀದೇವಿಯ ಚಿತ್ರದ ಬಿಂಬವಿರುವುದು ಗೋಚರಿಸುತ್ತದೆ ಎಂಬುವುದೇ ವಿಸ್ಮಯ!!

Image result for thirumala god

ಶ್ರೀನಿವಾಸನ ಪೂರ್ತಿ ವಿಗ್ರಹ ಸಂಪೂರ್ಣವಾಗಿ ಸ್ವಯ0 ಉದ್ಭವಮೂರ್ತಿ. ಇದನ್ನು ಯಾರೂ ಸ್ಥಾಪನೆಮಾಡಿಲ್ಲ. ಹಿಂದೆ ಶ್ರೀನಿವಾಸ ಹುತ್ತದಲ್ಲಿರುವಾಗ, ಸಾಕ್ಷಾತ್ ಶಿವ, ಹಸುವಿನ ರೂಪದಲ್ಲಿ ಬಂದು ಹಾಲುಣಿಸುತ್ತಿರುತ್ತಾನೆ. ರಾಜಾ ಚೋಳನ ಅರಮನೆ ಹಸುಗಳನ್ನ ನೋಡಿಕೊಳ್ಳುತ್ತಿದ್ದ ದನಗಾಹಿಗೆ ಈ ಕಾಮಧೇನು ಹೆಸರಿನ ಹಸು ಹಾಲು ಕೊಡದೇ ಇದ್ದುದೂ ಅನುಮಾನಕ್ಕೆ ಕಾರಣವಾಗಿರುತ್ತದೆ. ಒಂದು ದಿನ, ಹಸುವನ್ನೇ ಮರೆಯಿಂದ ಹಿಂಬಾಲಿಸಿಕೊಂಡು ಹೋಗುತ್ತಾನೆ. ಆಗ ಕಾಮಧೇನು, ಹುತ್ತದಲ್ಲಿದ್ದ ಶ್ರೀನಿವಾಸನಿಗೆ ಹಾಲು ಎರೆಯುತ್ತಿರುತ್ತಾಳೆ. ಕೋಪಗೊಂಡ ದನಗಾಹಿ, ತನ್ನ ಕೊಡಲಿಯಿಂದ ಹಸುವನ್ನ ಹೊಡೆಯೋಕೆ ಮುಂದಾಗ್ತಾನೆ. ಆಗ ಆ ಏಟು ಶ್ರೀನಿವಾಸನ ತಲೆಗೆ ಬೀಳುತ್ತದೆ!!

Image result for thirumala god

ಅನಂತರ, ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿ, ತನ್ನ ಕೂದಲನ್ನೇ ಕತ್ತರಿಸಿ, ಶ್ರೀನಿವಾಸನಿಗೆ ಜೋಡಿಸುತ್ತಾಳೆ. ಆಗ ಶ್ರೀನಿವಾಸ, ನೀಲಾದೇವಿಗೆ ಒಂದು ವರ ನೀಡುತ್ತಾನೆ. ಕಲಿಯುಗದಲ್ಲಿ, ಭಕ್ತರು, ನನ್ನ ಕ್ಷೇತ್ರಕ್ಕೆ ಬಂದು ಕೊಡುವ ತಲೆ ಕೂದಲ ಮುಡಿ, ನಿನ್ನ ಮೂಲಕವೇ ನನಗೆ ಅರ್ಪಣೆಯಾಗಲಿ ಎಂದು. ಈಗಲೂ, ಭಕ್ತರು ಕೊಡುವ ತಲೆಮುಡಿ, ನೀಲಾದೇವಿಯ ಮೂಲಕವೇ ಪರಮಾತ್ಮನಿಗೆ ಸಮರ್ಪಣೆ ಆಗುತ್ತದೆ ಎಂಬುದು ಪುರಾಣ ಐತಿಹ್ಯ. ಹೀಗೆ ನೀಲಾದೇವಿ, ಜೋಡಿಸಿದ ತಲೆಕೂದಲೇ, ಈಗಲೂ, ಪರಮಾತ್ಮನ ಹಿಂಭಾಗದ ತಲೆಯಲ್ಲಿದೆ. ದೇವಸ್ಥಾನದ ಪ್ರಾರಂಭ ಮಹಾದ್ವಾರದ ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯ ತಲೆಯ ಮೇಲೆ  ಹೊಡೆದ ಗಾಯ ಈಗಲೂ ಇದೆ!! ಆ ಕಾರಣದಿಂದನೇ ಸ್ವಾಮಿ ತಲೆಗೆ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡಾ ನಡೆದುಕೊಂಡು ಬಂದಿದೆ!! ಇಂತಹ ಅನೇಕ ಅಚ್ಚರಿ ಸಂಗತಿಗಳು ಈ ದೇವಾಲಯದಲ್ಲಿ ಅಡಗಿದೆ!!

source: kannada.boldsky.com

  • Postcard team
Tags

Related Articles

FOR DAILY ALERTS
 
FOR DAILY ALERTS
 
Close