ಅಂಕಣಇತಿಹಾಸ

ಸಾಕ್ಷಾತ್ ದುರ್ಗೆಯೆ ಧರೆಗಿಳಿದು ಬಂದಂತೆ ಹೋರಾಡುತ್ತಿದ್ದ ರಾಣಿ ದುರ್ಗಾವತಿಯೆಂಬ ಕ್ಷತ್ರಿಯ ನಾರಿ ಮಹಾನ್ ಅಕ್ಬರನ ಸೇನೆಯನ್ನು ಮೂರು ಬಾರಿ ಥಳಿಸಿ ಸೋಲಿಸಿದ್ದಳು ಎನ್ನುವುದನ್ನು ಎಡಚ್ಚರು ತಿಳಿಸಲೆ ಇಲ್ಲ!!

ವಿದೇಶೀಯ ರಕ್ತದಿಂದ ತನ್ನ ರಕ್ತ ಕಲುಷಿತಗೊಳ್ಳಬಾರದೆಂದೂ, ತನ್ನ ದೇಶ ಸ್ವತಂತ್ರವಾಗಿಯೇ ಇರಬೇಕೆಂದೂ, ಅದಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧನೆಂದು, ಮತ್ತಿವುಗಳಿಗೆಲ್ಲಾ ಬದ್ಧನಾಗಿ, ಅತೀವ ಕಷ್ಟಪರಂಪರೆಗಳನ್ನನುಭವಿಸಿ, ಒಂದು ಬೃಹತ್ ಸಾಮ್ರಾಜ್ಯವನ್ನು ಎದುರಿಗೆ ಹಾಕಿಕೊಂಡು ಅಜೇಯರಾಗಿ ಹೋರಾಟ ಮಾಡಿದ್ದರು ರಜಪೂತರು. ರಜಪೂತರು ರಾಜರುಗಳು ಯಾವ ರೀತಿ ಧೈರ್ಯಶಾಲಿಗಳಾಗಿದ್ದರೋ ಹಾಗೆಯೇ ರಜಪೂತ ಮಹಿಳೆಯರು ಕೂಡಾ ಅದೇ ರೀತಿ ಧೈರ್ಯ ಶಾಲಿಗಳಾಗಿದ್ದರು… ಇಲ್ಲಿ ಪುರುಷ ಮತ್ತು ಮಹಿಳೆಯರಿಗೆ ಯಾವುದೇ ಭೇದ ಭಾವವಿರಲಿಲ್ಲ.. ರಜಪೂತರ ಇತಿಹಾಸ ಕೇಳಿದರೆ ಪ್ರತೀಯೊಬ್ಬ ಭಾರತೀಯನಿಗೂ ಮೈನವಿರೇಳುವುದಂತೂ ನಿಜ!! ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ಮಾಡಿದ ಮಹಾನ್ ವೀರರು ಇವರು!! ರಜಪೂತರೆಲ್ಲರೂ ಪರಾಕ್ರಮಿಯಾಗಿ ಮೆರೆದಿದರು.. ಹುಲಿಯಂತೆ ಮೊಘಲರೊಂದಿಗೆ ಘರ್ಜಿಸಿದ್ದು ನಿಜವಾಗಿಯೂ ಮರೆಯಲಸಾಧ್ಯ!! ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬ ಮಾತು ಖಂಡಿತ ಸತ್ಯ… ಈ ರಜಪೂತ ರಾಣಿಯನ್ನು ಕಂಡರೆ ಮೊಘಲರೂ ಗಡಗಡ ನಡುಗುತ್ತಿದ್ದರು!!

ಉತ್ತರ ಪ್ರದೇಶದ ಬಾಂಡಾ ಎಂಬಲ್ಲಿ ರಜಪೂತ ರಾಣಿ ದುರ್ಗಾವತಿಯು ಚಾಂಡೇಲ ರಾಜಪುತ ವಂಶದಲ್ಲಿ ಜನನವಾಯಿತು!! 1550ರಲ್ಲಿ ರಾಣಿ ದುರ್ಗಾವತಿಯ ಪತಿ, ದಳಪತ ಶಾಹನು ತೀರಿಕೊಂಡ ನಂತರ ಗೊಂಡ ರಾಜ್ಯವನ್ನು ರಾಣಿ ದುರ್ಗಾವತಿಯು ರಾಜ್ಯವನ್ನು ಆಳಿದರು!! ಆಗ ಅವರ ಮಗ ವೀರ ನಾರಾಯಣನು ವಯಸ್ಸಿನಲ್ಲಿ ಚಿಕ್ಕವನು. 1556 ರಲ್ಲಿ ಮಾಳವಾ ಪ್ರಾಂತದ ರಾಜನಾಗಿದ್ದ ಬಜ್ ಬಹದ್ದುರನು ಗೋಂಡದ ಮೇಲೆ ಆಕ್ರಮಣ ಮಾಡಿದಾಗ ರಾಣಿ ದುರ್ಗಾವತಿಯು ಅಟ್ಟಹಾಸವನ್ನು ಮಟ್ಟ ಹಾಕಿದಳು!! ರಾಜ ಬಹದ್ದುರನ ಸೋಲು ಎಷ್ಟು ಹೀನಾಯವಾಗಿತ್ತು ಎಂದರೆ ಮುಂದೆಂದೂ ಕೂಡ ಅವನು ಗೊಂಡದತ್ತ ಕಣ್ಣೆತ್ತಿ ನೋಡದ ಹಾಗೆ ಮಾಡಿದ್ದಳು ಆ ರಜಪೂತ ರಾಣಿ!!

ತದ ನಂತರ 1564ರಲ್ಲಿ ಮೊಘಲ್ ರಾಜ ಅಕ್ಬರನು ರಾಣಿ ದುರ್ಗಾವತಿಯ ರಾಜ್ಯದ ಮೇಲೆ ಕಣ್ಣು ಹಾಕಿ ಯುದ್ಧ ಸಾರಿದನು. ಇದಕ್ಕಾಗಿ 50000 ಸೈನಿಕರಿದ್ದ ಸೈನ್ಯವನ್ನು ಗೊಂಡದತ್ತ ಕಳುಹಿಸಿದನು. ಈ ಸೈನ್ಯದ ಮುಂದಾಳತ್ವವನ್ನು ಅಬ್ದುಲ್ ಮಜೀದ್ ಖಾನ್ ಎಂಬ ಮೊಘಲನು ವಹಿಸಿದ್ದನು. ಮಧ್ಯ ಪ್ರದೇಶದ ನಾರ್ರಾಯಿ ಎಂಬಲ್ಲಿ ರಾಣಿ ದುರ್ಗಾವತಿಯು ತನ್ನ ಸೈನ್ಯವನ್ನು ನಿಲ್ಲಿಸಿದಳು. ಒಂದು ಬದಿಯಲ್ಲಿ ಬೆಟ್ಟ ಗುಡ್ಡಗಳು ಮತ್ತೊಂದು ಬದಿಯಲ್ಲಿ ನರ್ಮದಾ ಮತ್ತು ಗೌರ್ ನದಿಗಳು ಇದ್ದ ಈ ಸ್ಥಳದಲ್ಲಿ ರಾಣಿ ದುರ್ಗಾವತಿ ಮತ್ತು ಮೊಘಲ್ ಸೈನ್ಯಗಳ ಮುಖಾಮುಖ ಆಯಿತು. ಎರಡು ಬದಿಗಳಿಂದ ಆಕ್ರಮಣ ಮಾಡಿದ ಮೊಘಲರೊಂದಿಗೆ ರಾಣಿ ಮತ್ತು ಅವರ ಸೈನಿಕರು ಶೌರ್ಯದಿಂದ ಹೋರಾಡಿ ಮೊಘಲರನ್ನು ಹಿಮ್ಮೆಟ್ಟುವಂತೆ ಮಾಡಿದರು! ಅದಾದ ಬಳಿಕ ರಾಣಿ ತನ್ನ ಸೇನಾಧಿಪತಿಗಳೊಂದಿಗೆ ಮುಂದಿನ ಕಾರ್ಯಾಚರಣೆಯನ್ನು ಚರ್ಚಿಸುತ್ತಿದ್ದಾಗ ರಾಣಿಯು ರಾತ್ರಿಯ ಸಮಯದಲ್ಲಿಯೆ ಮೊಘಲರ ಮೇಲೆ ಆಕ್ರಮಣ ಮಾಡುವ ಬಗ್ಗೆ ವಿಚಾರ ಮಾಡಿದರು. ಆದರೆ ಅವರ ಸೇನಾಧಿಪತಿಗಳು ಇದಕ್ಕೆ ವಿರುದ್ಧವಾಗಿ ಸಲಹೆ ನೀಡಿದರು. ಈ ಚರ್ಚೆಯಿಂದಾಗಿ ಸಮಯದ ಸದುಪಯೋಗ ಮಾಡಿಕೊಂಡ ಮೊಘಲರು ತಮ್ಮ ಫಿರಂಗಿಗಳನ್ನು ರಾಣಿ ದುರ್ಗಾವತಿಯ ಪಾಳೆಯ ಹತ್ತಿರ ತಂದು ನಿಲ್ಲಿಸಿದರು !!

ಅನಿರೀಕ್ಷಿತವಾಗಿ ಬಂದ ಆಪತ್ತನ್ನು ಕಂಡ ರಾಣಿ ಈ ಮೋಸದ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಲು ಸಿದ್ಧಳಾದಳು. ಆತ್ಮಗೌರವಕ್ಕಾಗಿ ಹೋರಾಡಬೇಕೆಂದು ರಾಣಿ ನೀಡಿದ ಕರೆಗೆ ಗೋಂಡಾಗಳನ್ನು ಬಡಿದೆದ್ದು ನಿಲ್ಲಿಸಿತು. ಇಡೀ ಗೊಂಡ್ವಾನವೇ ಸ್ಪೂರ್ತಿಯಿಂದ ಆತ್ಮರಕ್ಷಣೆಗೆ ಎದ್ದು ನಿಂತಿತು. ರಾಣಿಯ ರಭಸಕ್ಕೆ ಮೊಘಲ್ ಸೇನೆ ಕಕ್ಕಾಬಿಕ್ಕಿಯಾಯಿತು. ರಾಜಕುವರ ವೀರನಾರಾಯಣ್ ವೀರಾವೇಶದಿಂದ ಹೋರಾಡಿ ಗಾಯಗೊಂಡಾಗ ಅವನನ್ನು ಸುರಕ್ಷಿತ ಸ್ಥಳಕ್ಕೆ ಸಾಗುವಂತೆ ಆಜ್ಞೆ ಮಾಡಿ ದ್ವಿಗುಣ ಪರಾಕ್ರಮದಿಂದ ಹೋರಾಡಿದಳು. ಆದರೆ ರಾಜನ ಬೆಂಬಲಕ್ಕೆ ಕೆಲವು ಯೋಧರು ಹೋಗಬೇಕಾಗಿ ಬಂದ ಕಾರಣ ಸೇನೆಯಲ್ಲಿ ಸ್ವಲ್ಪ ಗೊಂದಲ ಉಂಟಾಯಿತು. ಅದೇ ಸಮಯಕ್ಕೆ ಬಾಣವೊಂದು ರಾಣಿ ದುರ್ಗಾವತಿಯ ಕಣ್ತಲೆಗೆ ಬಡಿಯಿತು. ಅದನ್ನು ಕಿತ್ತು ಹಾಕಲು ಯತ್ನಿಸುತ್ತಿದ್ದಾಗ ಇನ್ನೊಂದು ಬಾಣ ಆಕೆಯ ಕುತ್ತಿಗೆಯಲ್ಲಿ ಸಿಕ್ಕಿ ಹಾಕಿಕೊಂಡಿತು. ತನ್ನ ಕಥೆ ಮುಗಿಯಿತೆಂದು ರಾಣಿಗೆ ಅನ್ನಿಸಿತು. ಮತಾಂಧ ಮೊಘಲರ ಕೈಗೆ ಸಿಕ್ಕಿಬಿದ್ದು ಅಪಮಾನ ಅನುಭವಿಸುವುದಕ್ಕಿಂತ ಆತ್ಮಾರ್ಪಣೆಯೇ ಲೇಸೆಂದು ಆಕೆ ನಿರ್ಧರಿಸಿದಳು. ತನ್ನ ಪ್ರೀತಿಯ ಆನೆಗೆ ಹಾಗೂ ಮಾವುತನಿಗೆ ಸತ್ಕಾರ ಮಾಡಿ, ಉಡುಗೊರೆ ಕೊಟ್ಟು ತನ್ನ ಗಂಡನೇ ಕೊಟ್ಟಿದ್ದ ಸದಾ ಕಾಲದ ಸಂಗಾತಿಯಾಗಿದ್ದ ಖಡ್ಗ “ಭವಾನಿ”ಯಿಂದ ತನ್ನ ರುಂಡವನ್ನು ಮಾತೃಭೂಮಿಗೆ ಅರ್ಪಣೆ ಮಾಡಿದಳು.

ಗಾಯಗೊಂಡಿದ್ದ ವೀರನಾರಾಯಣ್ ಸುಧಾರಿಸಿಕೊಂಡು ಪ್ರಚಂಡವಾಗಿ ಹೋರಾಡಿದರೂ ಗೆಲುವು ದಕ್ಕಲಿಲ್ಲ. ರಾಜನೂ ಅಸುನೀಗಿದ ಮೇಲೆ ಮೊಘಲ್ ರಕ್ಕಸರು ಊರನ್ನು ಪ್ರವೇಶಿಸುವ ಮೊದಲೇ ಪೌರ ಜನರೆಲ್ಲಾ ಮೊದಲೇ ಸಿದ್ಧ ಮಾಡಿಟ್ಟುಕೊಂಡಿದ್ದ ಸೌದೆ, ಒಣಹುಲ್ಲು, ಹತ್ತಿ, ತುಪ್ಪದಂತಹ ಶೀಘ್ರ ದಹನವಾಗುವ ವಸ್ತುಗಳಿದ್ದ ಆವರಣದೊಳಗೆ ಬಂದು ಕೈಯಾರೆ ಅಗ್ನಿಸ್ಪರ್ಷ ಮಾಡಿಕೊಂಡರು. ಅಕ್ಬರನನ್ನು ಮೂರು ಬಾರಿ ಸೋಲಿಸಿದುದು ಮಾತ್ರವಲ್ಲದೆ 51 ಯುದ್ಧಗಳನ್ನು ಗೆದ್ದ ವೀರ ವನಿತೆ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ತನ್ನ ಹೆಸರನ್ನು ಬರೆದು ಭಾರತೀಯರಿಗೆ ಸ್ಪೂರ್ತಿದಾಯಕಳಾದಳು. ಇಂತಹ ಶೌರ್ಯ ಸಾಹಸಗಳ ಇಂತಹ ಕಥೆಗಳನ್ನು ಜನರಿಗೆ ತಲುಪಿಸಬೇಕು!! ಇಂತಹ ವೀರ ವನಿತೆಯರೂ ಇಂದಿಗೂ ನಮಗೆಲ್ಲಾ ಸ್ಫೂರ್ತಿ ಯಾಗಿದ್ದಾರೆ!!

source : news13.in

kalpa.news

  • Postcard team
Tags

Related Articles

FOR DAILY ALERTS
 
FOR DAILY ALERTS
 
Close