ಅಂಕಣಪ್ರಚಲಿತ

ಮೋದಿ ಬಳಿ ಕಿಚ್ಚ ಸುದೀಪ್ ಕೇಳುವ ಮೊದಲ ಪ್ರಶ್ನೆ ಏನಂತೆ ಗೊತ್ತಾ.? ಮೋದಿ ಬಗ್ಗೆ ಮಾಣಿಕ್ಯನ ಅದ್ಭುತ ಮಾತುಗಳು.!

ಇತ್ತೀಚೆಗೆ ಕನ್ನಡ ಚಲನಚಿತ್ರದ ಖ್ಯಾತ ನಟ ಕಿಚ್ಚ ಸುದೀಪ್ ಅವರ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು.ಪೈಲ್ವಾನ್ ಎಂಬ ಬಹು ಬಜೆಟ್ ನ ಚಿತ್ರದಲ್ಲಿ ನಟ ಸುದೀಪ್ ನಟಿಸುತ್ತಿರುವುದು ಮತ್ತು ಇತ್ತೀಚೆಗೆ ನಡೆದ ಐಟಿ ದಾಳಿಯ ವಿಚಾರವೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಂಧರ್ಭದಲ್ಲಿ ತನ್ನ ಮೇಲೆ ದಾಳಿ ನಡೆಸಿದ ಐಟಿ ಇಲಾಖೆಯನ್ನು ಸುದೀಪ್ ಹಾಡಿ ಹೊಗಳಿ ರಿಯಲ್ ಹೀರೋ ಅನ್ನಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಕಿಚ್ಚ ಸುದೀಪ್ ಮೋದಿ ವಿಚಾರವಾಗಿ ಸುದ್ಧಿಯಾಗಿದ್ದಾರೆ.

ಪೈಲ್ವಾನ್ ಚಿತ್ರದ ಬಗ್ಗೆ ನಿರ್ದೇಶಕ ಮತ್ತು ಸುದೀಪ್ ಅವರನ್ನು ಸುವರ್ಣ ನ್ಯೂಸ್ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ಕೊನೆಯದಾಗಿ ಸುವರ್ಣ ನ್ಯೂಸ್ ನಿರೂಪಕಿ ಸುದೀಪ್ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಸರದಿಯಲ್ಲಿ ಆ ನಿರೂಪಕಿ ರಾಷ್ಟ್ರವನ್ನು ಆಳುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಬಗ್ಗೆಯೂ ಪ್ರಶ್ನೆ ಕೇಳುತ್ತಾರೆ.

“ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಮ್ಮೆದುರು ಬಂದು ನಿಂತರೆ ನೀವು ಅವರಲ್ಲಿ ಯಾವ ಪ್ರಶ್ನೆಯನ್ನು ಕೇಳುತ್ತೀರಿ?” ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಕಿಚ್ಚ ಸುದೀಪ್ ಅವರ ಉತ್ತರ ಅದ್ಬುತವಾಗಿತ್ತು. ಒಂಚೂರೂ ತಡ ಮಾಡದ ಸುದೀಪ್, “ಒಂದೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರು ನನ್ನೆದುರು ನಿಂತರೆ ನಾನು ಅವರಲ್ಲಿ ಕೇಳುವ ಮೊದಲ ಪ್ರಶ್ನೆ ನಾನು ನಿಮ್ಮ ಹಾಗೆ ಯಾವಾಗ ಆಗ್ತೇನೆ ಎಂದು” ಎಂದು ಹೇಳುತ್ತಾರೆ. ತನ್ನ ಮಾತು ಮುಂದುವರೆಸಿದ ಸುದೀಪ್, “ದೇಶದ ಎಲ್ಲಾ ಸಮಸ್ಯೆಗಳನ್ನು ಹೊತ್ತುಕೊಂಡು ದಿನವಿಡೀ18 ಗಂಟೆಗಳ ಕಾಲ ಕೆಲಸ ಮಾಡುವ ವ್ಯಕ್ತಿ ಅವರು. ನಿಜವಾಗಿಯೂ ಅವರು ಗ್ರೇಟ್. ನಾನು ಅವರಂತೆ ಆಗ್ತೀನೋ ಅನ್ನೋದೇ ಡೌಟ್. ಇದಕ್ಕಾಗಿ ಅವರು ಸಿಕ್ಕೊಡನೆ ಈ ಪ್ರಶ್ನೆಯನ್ನು ಕೇಳ್ತೇನೆ” ಎಂದು ಹೇಳುತ್ತಾರೆ.

ನಿಜವಾಗಿಯೂ ಓರ್ವ ಪ್ರಧಾನಿಯ ಬಗ್ಗೆ ರಾಜಕೀಯ ರಹಿತವಾಗಿ ಪ್ರಸಿದ್ಧ ಚಿತ್ರ ನಟ ಇಂತಹಾ ಹೇಳಿಕೆ ನೀಡ್ತಾನೆಂದರೆ ಆ ಪ್ರಧಾನಮಂತ್ರಿಯ ಯೋಗ್ಯತೆ ಎಂತದ್ದಿರಬಹುದು ಅಲ್ವೇ.? ಇಂತಹಾ ಪ್ರಧಾನಿಯ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರುವ ಕಿಚ್ಚ ಸುದೀಪ್ ನಿಜವಾದ ಮಾಣಿಕ್ಯ…

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close