ಪ್ರಚಲಿತ

ಬಿಗ್ ಬ್ರೇಕಿಂಗ್: ಪ್ರಧಾನಿ ಮೋದಿಯವರನ್ನು ಏಕ ವಚನದಲ್ಲಿ ನಿಂದಿಸಿದ ಖರ್ಗೆ.!! ಅತಿರೇಕವಾಯಿತು ಕಾಂಗ್ರೆಸ್ ನಡತೆ!!

ಈ ಕಾಂಗ್ರೆಸ್ ನಾಯಕರಿಗೆ ಬಾಯಲ್ಲಿ ಹಿಡಿತ ಅನ್ನೋದೆ ಇಲ್ಲ ಎಂದು ಮತ್ತೊಮ್ಮೆ ಸಾಭೀತಾಗಿದೆ. ಗ್ರಾಮ ಪಂಚಾಯತ್‍ನಿಂದ ಹಿಡಿದು ಲೋಕಸಭಾ ನಾಯಕರವರೆಗೂ, ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದ ನಾಯಕರ ವರೆಗೂ ಕಾಂಗ್ರೆಸ್ ನಾಯಕರ ನಡತೆ ಒಂದೇ… ಗೂಂಡಾಗಿರಿಯಲ್ಲೇ ಹೆಸರಾಗಿರುವ ಕಾಂಗ್ರೆಸ್ ನಾಯಕರು ಅವರ ಮಾತಿನಲ್ಲೂ ಹಿಡಿತ ಇಲ್ಲ ಎಂಬುವುದನ್ನು ಸಾಭೀತುಪಡಿಸುತ್ತಲೇ ಇದ್ದಾರೆ. ಈಗ ಮತ್ತೆ ತನ್ನ ನಾಲಿಗೆಯನ್ನು ಹರಿಯಬಿಟ್ಟಿದ್ದು, ಕಾಂಗ್ರೆಸ್‍ನ ನಿಜಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದ್ದಾರೆ.

ಸಾರ್ವಜನಿಕವಾಗಿಯೇ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ!

ಲೋಕ ಸಭೆಯ ವಿರೋಧ ಪಕ್ಷದ ನಾಯಕ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ. ಈ ನಾಯಕನನ್ನು ಕಂಡರೆ ಪ್ರಧಾನಿ ಮೋದೀಜಿಗೂ ಅಭಿಮಾನವಿತ್ತು. ಆದರೆ ಆ ಎಲ್ಲಾ ಅಭಿಮಾನವನ್ನು ಖರ್ಗೆ ಯಾವತ್ತೂ ಉಳಿಸುತ್ತ ಬಾರಲೇ ಇಲ್ಲ. ಕಾಂಗ್ರೆಸ್ ನಾಯಕರ ಈ ಬುದ್ಧಿಯು ಪ್ರಧಾನಿ ಮೇಲೆ ಕೆಟ್ಟ ರೀತಿಯಲ್ಲಿ ಹರಿಯುತ್ತಲೇ ಇರುತ್ತೆ. ಆದರೆ ಮೋದಿ ಮಾತ್ರ ಶಾಂ
ತ ಮೂರ್ತಿಯಾಗಿ ನಿಂತು ಬಿಡುತ್ತಾರೆ.

ಹಿಂದೊಮ್ಮೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಆರ್ಭಟಿಸಿದ್ದರು. ನಾವು ದಲಿತರು. ಇನ್ನೂ ಬಡವರಾಗಿಯೇ ಇದ್ದೇವೆ. ಸರ್ಕಾರ ನಮಗಾಗಿ ಏನೂ ಮಾಡಲೇ ಇಲ್ಲ. ನಾನು ಇಂದಿಗೂ ನನ್ನ ಜಾತಿಯ ಬಗ್ಗೆ ಮುಜುಗರವನ್ನು ಅನುಭವಿಸುತ್ತಿದ್ದೇನೆ, ಹಾಗೆ ಹೀಗೆ ಎಂದೆಲ್ಲಾ ಕಥೆ ಕಟ್ಟಿದ್ದರು.

ಖರ್ಗೆ ಮಾತುಗಳನ್ನು ತನ್ಮಯದಿಂದ ಆಲಿಸಿದ್ದ ಪ್ರಧಾನಿ ಮೋದಿ ಅದೇ ಲೋಕಸಭೆಯಲ್ಲಿ ಖರ್ಗೆಗೆ ಭಾರೀ ಆಘಾತವನ್ನೇ ನೀಡಿದ್ದರು. ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಅಷ್ಟೂ ಆಸ್ತಿಗಳ ಬಗ್ಗೆ ದಾಖಲೆಗಳನ್ನೇ ಹೊರತೆಗೆದಿದ್ದರು. ಭಾರೀ ಅವ್ಯವಹಾರವನ್ನೂ ಬಯಲಿಗೆಳೆದಿದ್ದರು. ಇದರಿಂದ ಬೆಕ್ಕಸ ಬೆರಗಾಗಿದ್ದ ಮಲ್ಲಿಕಾರ್ಜುನ ಖರ್ಗೆ ನಂತರ ಮೋದಿ ತಂಟೆಗೆ ಹೋಗಿರಲೇ ಇಲ್ಲ.

ಎಲುಬಿಲ್ಲದ ನಾಲಿಗೆ..!

ಇಂದು ರಾಹುಲ್ ಗಾಂಧಿಯ ಸಮಾವೇಶದಲ್ಲಿ ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರೀ ಅವಮಾನ ಮಾಡಿದ್ದಾರೆ. ಏಕವಚನದಲ್ಲಿ ಪ್ರಧಾನಿಯನ್ನು ಸಂಭೋದಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ “ರಾಜ್ಯಕ್ಕೆ ನೀರು ತಂದಿದ್ದು ಅವನೇನಾ? ಅವನ್ಯಾರು ನಮ್ಮನ್ನು ಕೇಳೋಕ್ಕೆ” ಎಂಬ ಏಕವಚನದ ಮಾತುಗಳನ್ನು ಆಡಿ ಭಾರೀ ಅವಮಾನವನ್ನೇ ಮಾಡಿದ್ದಾರೆ.

ದೇಶದ ಗೌರವಯುತವಾದ ಓರ್ವ ಪ್ರಧಾನಿ ಎಂಬ ಕನಿಷ್ಟ ಜ್ನಾನವೂ ಇಲ್ಲದ ಈ ಲೋಕಸಭಾ ಪ್ರತಿಪಕ್ಷ ನಾಯಕನಿಗೆ ಆ ಪಟ್ಟ ಅರ್ಹವೇ..? ತಾನೊಬ್ಬ ಲೋಕಸಭಾ ಪ್ರತಿಪಕ್ಷ ನಾಯಕನಾಗಿ, ದೇಶದ ಪ್ರಧಾನಿಯನ್ನು ಈ ರೀತಿ ಅವಮಾನಿಸಿದ್ದು ಎಷ್ಟು ಸರಿ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಪಕ್ಷ ಯಾವುದೇ ಇರಲಿ. ಆದರೆ ಸ್ಥಾನ ಮಾನಕ್ಕೆ ಬೆಲೆ ನೀಡಬೇಕು. ಈ ರೀತಿ ಅಸಭ್ಯವಾಗಿ ವರ್ತಿಸುವುದರಿಂದ ತನ್ನ ಸ್ಥಾನಮಾನಕ್ಕೇ ಕುತ್ತು ಬರುತ್ತದೆ. ತನ್ನ ಸ್ಥಾನ ಮಾನದ ಮರ್ಯಾದೆಯೂ ಮೂರು ಕಾಸಿಗೆ ಹರಾಜು ಆಗುತ್ತದೆ ಎಂಬುವುದನ್ನು ನೆನಪಿನಲ್ಲಿಕೊಟ್ಟುಕೊಳ್ಳಬೇಕಾಗಿದೆ.

ಇತಿಹಾಸ ನೆಪಿಟ್ಟುಕೊಳ್ಳಿ ಖರ್ಗೆಯವರೇ…

ಮಾನ್ಯ ಲೋಕಸಭಾ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರೇ… ನಿಮಗೆ ತುಂಬಾನೆ ವಯಸ್ಸಾಗಿದೆ. ನಿಮ್ಮ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬುದ್ಧಿ ಹೇಳಬೇಕಾದವರು ನೀವು. ಆದರೆ ನಿಮ್ಮಂತಹ ಹಿರಿಯರೇ ಇಂತಹ ಮಾತುಗಳನ್ನು ಆಡುವುದು ಎಷ್ಟು ಸರಿ..? ನೆಪಿಟ್ಟುಕೊಳ್ಳಿ… ನಿಮಗೆ ಲೋಕಸಭಾ ವಿಪಕ್ಷ ನಾಯಕನ ಸ್ಥಾನ ಮೋದಿ ಕೊಟ್ಟಿದ್ದೇ ನಿಮ್ಮ ಪುಣ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 50 ಸಂಖ್ಯೆಯನ್ನು ಪೂರೈಸದ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ವಿಪಕ್ಷ ಸ್ಥಾನವನ್ನು ಕೊಡಲು ಸಾಧ್ಯವೇ ಇಲ್ಲ. ಈ ವಿಚಾರವನ್ನು ಮೊದಲು ನೀವು ಅರಿತುಕೊಳ್ಳಿ. ನೀವು ಇಂದು ಅಲಂಕರಿಸುತ್ತಿರುವ ಹುದ್ದೆ ಪ್ರಧಾನಿ ನರೇಂದ್ರ ಮೋದಿಯವರ ಭಿಕ್ಷೆ.

ಮೊನ್ನೆ ಗುಜರಾತಿನ ರಾಜ್ಯ ವಿಧಾನ ಸಭೆಯ ಚುನಾವಣೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ನೀಚ ನಾಯಕ ಮಣಿಶಂಕರ್ ಅಯ್ಯರ್ ಪ್ರಧಾನಿ ನರೇಂದ್ರ ಮೋದಿಯವರನ್ನು “ನೀಚ” ಎಂಬ ಪದವನ್ನು ಬಳಸಿ ನಿಂದಿಸಿದ್ದಾರೆ. ಜಗತ್ತೇ ಮೆಚ್ಚುವಂತಹಾ ಪ್ರಧಾನಿಯನ್ನು ಈ ಕಾಂಗ್ರೆಸ್ ನಾಯಕ ಈ ರೀತಿಯ ಪದವನ್ನು ಬಳಸಿಕೊಂಡು ನಿಂದಿಸಿದ್ದು ಭಾರೀ ಆಕ್ರೋಷವನ್ನೇ ಸೃಷ್ಟಿಸಿತ್ತು. ಖರ್ಗೆಯವರೇ ನೀವೂ ಓರ್ವ ದಲಿತ ವರ್ಗದವರು. ಪ್ರಧಾನಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗದವರು. ಸಮಾಜದಲ್ಲಿ ಇಬ್ಬರೂ ಕೆಳವರ್ಗದವರು ಎಂಬ ಪಟ್ಟವನ್ನು ಕಟ್ಟಿಕೊಂಡವರು. ನಿಮ್ಮದೇ ಶೈಲಿಯಲ್ಲಿ ಸಾಧನೆಯನ್ನು ಮಾಡಿ ರಾಜಕೀಯ ಮಾಡುತ್ತಿರುವವರು. ಅದನ್ನು ಉತ್ತಮ ರೀತಿಯಲ್ಲಿ ಮಾಡಿ. ರಾಜಕೀಯದ ಕೊನೆ ಘಳಿಗೆಯಲ್ಲಿ ನಿಮ್ಮ ಮಾನ ಮರ್ಯಾದೆಯನ್ನು, ಘನತೆ ಗೌರವವನ್ನು ನೀವು ಬೀದಿ ಬದಿಯಲ್ಲಿ ಮಾರಾಟ ಮಾಡಬೇಡಿ. ನೆನಪಿಡಿ… ಮಣಿಶಂಕರ್ ಅಯ್ಯರ್‍ನನ್ನು ಪಕ್ಷದಿಂದ ಕಿತ್ತು ಬಿಸಾಡಿದ ಹಾಗೆ ನಿಮ್ಮನ್ನೂ ಕಿತ್ತು ಬಿಸಾಡಬಹುದು.

ನಾಲಿಗೆ ಸ್ವಲ್ಪ ಬಿಗಿ ಹಿಡಿದು ಮಾತನಾಡಿದರೆ 2 ಸ್ಥಾನ ಹೆಚ್ಚು ಗೆಲ್ಲಬಹುದು ಎಚ್ಚರಿಕೆ…

-ಸುನಿಲ್ ಪಣಪಿಲ

Tags

Related Articles

Close