ದೇಶ

ಕಾಂಗ್ರೆಸ್ ಹೈಕಮಾಂಡ್ ನಿಂದ ಖರ್ಗೆಗೆ ಭಾರೀ ಅವಮಾನ.!! ಖರ್ಗೆಯನ್ನು ಕಡೆಗಣಿಸಿದ್ದು ಯಾಕೆ ಗೊತ್ತಾ.?!

ಕಾಂಗ್ರೆಸ್ ನ ಪ್ರವೃತ್ತಿ ಎಂತಹದ್ದು ಎಂಬೂದಕ್ಕೆ ಉದಾಹರಣೆ ನೀಡಲು ಹೊರಟರೆ ದಿನವಿಡೀ ಬರೆಯಬೇಕಾಗುತ್ತದೆ. ಯಾಕೆಂದರೆ ಕಾಂಗ್ರೆಸ್ ನ ನೀತಿಗೆ ಕಾಂಗ್ರೆಸ್ಸೇ ಸಾಟಿ. ತಮ್ಮ ಅಧಿಕಾರಕ್ಕಾಗಿ ಯಾವುದೇ ಡ್ರಾಮಾ ಮಾಡಲು ತಯಾರಿರುವ ಕಾಂಗ್ರೆಸ್ ನಾಯಕರು ತಮಗಿಂತ ಎತ್ತರಕ್ಕೆ ಬೆಳೆಯಲು ಯಾರೊಬ್ಬರನ್ನೂ ಬಿಡುವುದಿಲ್ಲ. ಕಾಂಗ್ರೆಸ್ ಕೈಯಲ್ಲಿ ಅಧಿಕಾರ ಸಿಕ್ಕರೆ ಜನತೆ ಯಾವ ರೀತಿ ತೊಂದರೆ ಅನುಭವಿಸುತ್ತಾರೆ ಎಂಬೂದಕ್ಕೆ ಕರ್ನಾಟಕವೇ ಸಾಕ್ಷಿ.!

ಸದ್ಯ ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ‌. ಇಡೀ ದೇಶವೇ ಎದುರು ನೋಡುತ್ತಿರುವ ಕರ್ನಾಟಕದ ಚುನಾವಣೆ ಎಲ್ಲಾ ರೀತಿಯಲ್ಲೂ ಕುತೂಹಲ ಕೆರಳಿಸಿದೆ. ರಾಜಕೀಯ ಪಕ್ಷಗಳು ತಮ್ಮ ಭರ್ಜರಿ ಪ್ರಚಾರ ಆರಂಭಿಸಿದರೆ , ಇತ್ತ ಆಡಳಿತದಲ್ಲಿರುವ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆಯಲು ಸೆಣಸಾಡುತ್ತಿದೆ.

ಕಳೆದ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಸಿದ್ದರಾಮಯ್ಯನವರು, ತಾನೊಬ್ಬ ದಲಿತ ಪರ ಮುಖ್ಯಮಂತ್ರಿ ಎಂದು ಹೇಳಿಕೊಂಡು ಅಧಿಕಾರ ವಹಿಸಿಕೊಂಡಿದ್ದರು. ಆದರೆ ಇದು ಕೇವಲ ತೋರ್ಪಡಿಕೆಗಾಗಿ ಮಾತ್ರ ಎಂಬೂದು ರಾಜ್ಯದ ಜನತೆಗೆ ಕ್ರಮೇಣ ತಿಳಿಯುತ್ತಾ ಬಂತು. ಇದೀಗ ಸಿದ್ದರಾಮಯ್ಯನವರ ಅಸಲಿ ಮುಖ ಮತ್ತೊಂದು ರಾಜ್ಯದ ಜನತೆಯ ಮುಂದೆ ಬೆತ್ತಲಾಗಿದೆ.

ಕಾಂಗ್ರೆಸ್ ನಿಂದ ದಲಿತ ನಾಯಕನಿಗೆ ಅವಮಾನ..!

ಸರಕಾರ ರಚನೆ ಮಾಡುವುದಕ್ಕಾಗಿ ತಾವು ದಲಿತರ ಪರ ಎಂದು ಹೇಳಿಕೊಂಡು ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಸಿದ್ದರಾಮಯ್ಯ ಸರಕಾರ ಇದೀಗ ತಮ್ಮದೇ ಪಕ್ಷದ ರಾಷ್ಟ್ರೀಯ ನಾಯಕನಿಗೆ ಅವಮಾನವೆಸಗಿದ್ದಾರೆ. ಲೋಕಸಭಾ ವಿಪಕ್ಷ ನಾಯಕರಾಗಿರುವಂತಹ ಮಲ್ಲಿಕಾರ್ಜುನ ಖರ್ಗೆ ಯವರಿಗೆ ಇದೀಗ ಸಿದ್ದರಾಮಯ್ಯ ಸರಕಾರ ದ್ರೋಹ ಎಸಗಿದೆ. ಲೋಕಸಭೆಯಲ್ಲಿ ಏನಾದರೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಿದ್ದ ಮಲ್ಲಿಕಾರ್ಜುನ ಖರ್ಗೆ , ರಾಜ್ಯ ನಾಯಕರಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ನಾಯಕತ್ವ ಹೊಂದಿದವರು‌. ಇದೀಗ ಮುಂದಿನ ಚುನಾವಣೆಗೆ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಪರಿಶೀಲನಾ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಸ್ಥಾನ ನೀಡದೇ ಅವಮಾನ ಮಾಡಲಾಗಿದೆ.

Image result for kharge

ಪ್ರಬಲ ನಾಯಕನನ್ನು ದೂರ ಇಟ್ಟರೇ ಸಿಎಂ..?

ಸಿದ್ದರಾಮಯ್ಯನವರು ತನಗಿಂತ ಎತ್ತರಕ್ಕೆ ಬೆಳೆದ ಯಾವುದೇ ವ್ಯಕ್ತಿಯೂ ಈವರೆಗೆ ಸಹಿಸಿಕೊಂಡವರಲ್ಲ.ಮಲ್ಲಿಕಾರ್ಜುನ ಖರ್ಗೆ ದಲಿತ ನಾಯಕನಾಗಿದ್ದುಕೊಂಡು ಕಾಂಗ್ರೆಸ್ ನಲ್ಲಿ ಉತ್ತಮ ಬೆಳವಣಿಗೆ ಹೊಂದಿದವರು. ಲೋಕಸಭಾ ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವುದರಿಂದ ಸದ್ಯ ಕರ್ನಾಟಕದ ಮೇಲೆ ತನ್ನ ಪ್ರಭಾವ ಬೀರಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸದ್ಯ ಸಿದ್ದರಾಮಯ್ಯನವರೇ ರಾಜ್ಯ ಕಾಂಗ್ರೆಸ್ ನ ಹೈಕಮಾಂಡ್ ಆಗಿರುವುದರಿಂದ ತನ್ನಿಷ್ಟದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣದಲ್ಲಿ ಪ್ರವೇಶಿಸಿದರೆ ಜಿ ಪರಮೇಶ್ವರ್ ಗೆ ಮುಂದಿನ ಸಿಎಂ ಸ್ಥಾನ ಕೊಡುವುದು ಖಚಿತ ಅಥವಾ ಖರ್ಗೆ ಸ್ವತಃ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು ಇದೆ. ಅದೇ ಕಾರಣಕ್ಕಾಗಿ ಸಿದ್ದರಾಮಯ್ಯನವರು ತನ್ನ ಸ್ವಂತ ನಿರ್ಧಾರವನ್ನು ತೆಗೆದುಕೊಂಡು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರಿಗೂ ಸ್ಥಾನ ಕೊಡದೆ ಕೇವಲ ತನಗೆ ಬೇಕಾದವರನ್ನು ಮಾತ್ರ ಸಭೆಯಲ್ಲಿ ಕೂರಿಸಿದ್ದಾರೆ.!

Image result for kharge

ಮುಂದಿನ ಬಾರಿಯೂ ನಾನೇ ಸಿಎಂ ಎಂದು ಈ ಹಿಂದೆಯೇ ಹೇಳಿಕೊಂಡಿದ್ದ ಸಿದ್ದರಾಮಯ್ಯನವರು, ಪಕ್ಷಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಲಾಭ ಗಳಿಸುತ್ತಿರುವುದು ಕಾಣಬಹುದು. ತನಗಿಂತ ಮೇಲೆ ಯಾರೂ ಬೆಳೆಯಬಾರದೆಂಬ ಮನಸ್ಥಿತಿ ಹೊಂದಿರುವ ಸಿದ್ದರಾಮಯ್ಯನವರು ತನ್ನ ಸುತ್ತಮುತ್ತ ತನಗೆ ಬೇಕಾದ ಭ್ರಷ್ಟ ಸಚಿವ, ಅಧಿಕಾರಿಗಳನ್ನೇ ಇಟ್ಟುಕೊಂಡಿದ್ದಾರೆ.

ಸದ್ಯ ಕರ್ನಾಟಕ ಕಾಂಗ್ರೆಸ್ ನಲ್ಲಿ ಜಿ ಪರಮೇಶ್ವರ್ ಪ್ರಬಲ ರಾಜಕಾರಣಿ ಎಂದರೆ ತಪ್ಪಾಗದು. ಪರಮೇಶ್ವರ್ ಕೂಡಾ ‘ಈ ಬಾರಿ ನಾನೂ ಸಿಎಂ ಆಕಾಂಕ್ಷಿ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ಕಣ್ಣು ಕೆಂಪಾಗುವಂತೆ ಮಾಡಿದ್ದರು. ಸಿದ್ದರಾಮಯ್ಯನವರ ಮೇಲೆ ಅಸಮಧಾನ ಇರುವ ಕಾರ್ಯಕರ್ತರು ಮತ್ತು ಪಕ್ಷದ ನಾಯಕರು ಸದ್ಯ ಪರಮೇಶ್ವರ್ ಗೆ ಬೆಂಬಲ ನೀಡುತ್ತಿದ್ದು , ಇದರಿಂದಾಗಿಯೇ ಸಿದ್ದರಾಮಯ್ಯನವರು ತಂತ್ರ ರೂಪಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ನಾಯಕನಾಗಿರುವಂತಹ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿದರೆ ಪರಮೇಶ್ವರ್ ಗೆ ಹೆಚ್ಚಿನ ಬಲ ಸಿಗುವುದು ಖಂಡಿತ. ಆದ್ದರಿಂದಲೇ ಸಿದ್ದರಾಮಯ್ಯನವರು ಖರ್ಗೆಯವರನ್ನೂ ದೂರ ಇಟ್ಟಿದ್ದು , ಸದ್ಯ ರಾಜ್ಯ ಕಾಂಗ್ರೆಸ್ ನ ಒಳಜಗಳ ಬಹಿರಂಗಗೊಂಡಿದೆ. ಮಲ್ಲಿಕಾರ್ಜುನ ಖರ್ಗೆ ದಲಿತ ಎಂಬ ಕಾರಣಕ್ಕೆ ಸಿದ್ದರಾಮಯ್ಯನವರು ದೂರ ಇಟ್ಟಿದ್ದು , ಖರ್ಗೆಯವರು ರಾಜ್ಯ ರಾಜಕಾರಣಕ್ಕೆ ಇಳಿದರೆ ಸಿದ್ದರಾಮಯ್ಯನವರು ಮೂಲೆಗುಂಪಾಗುವುದು ಖಂಡಿತ..!

–ಅರ್ಜುನ್

 

Tags

Related Articles

FOR DAILY ALERTS
 
FOR DAILY ALERTS
 
Close