ಪ್ರಚಲಿತ

ಬಜೆಟ್ ಹೈಲೇಟ್ಸ್. ಚೊಚ್ಚಲ ಬಾರಿಗೆ ಪಾಸ್ ಆದ ನಿರ್ಮಲಾ ಸೀತಾರಾಮನ್.! ತೆರಿಗೆಯಿಂದ ಮುಕ್ತಿ ಪಡೆದ ಮಧ್ಯಮವರ್ಗ.!

ಪ್ರಧಾನಿ ನರೇಂದ್ರ ಮೋದಿಯವರ ದ್ವಿತೀಯ ಸರ್ಕಾರದ ಮೊದಲ ಬಜೆಟ್ ಇಂದು ಮಂಡನೆಯಾಗಿದೆ. ದೇಶದ ದ್ವಿತೀಯ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತನ್ನ ಮೊದಲ ಬಜೆಟ್ ನ್ನು ಮಂಡನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ರಕ್ಷಣಾ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿಯ ಸರ್ಕಾರದಲ್ಲಿ ವಿತ್ತ ಸ್ಥಾನ ನೀಡಿದ್ದು ಇದು ನಿರ್ಮಲಾ ಅವರಿಗೆ ಸವಾಲಾಗಿತ್ತು. ಆದರೆ ಇಂದು ಮಂಡಿಸಿದ್ದ ಬಜೆಟ್ ದೇಶವಾಸಿಗಳಿಗೆ ಫಿದಾ ಆಗಿದೆ.

ಬಜೆಟ್ ಹೈಲೇಟ್ಸ್…

* ಐದು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ, ಇದರಿಂದ ಮಧ್ಯಮ ವರ್ಗದ ಜನತೆ ತೆರಿಗೆಯಿಂದ ಮುಕ್ತಿ ಹೊಂದಿದ್ದಾರೆ.

* ವಿದ್ಯುತ್ ಚಾಲಿತ ವಾಹನಗಳ ಉದ್ದಿಮೆಗೆ ಹತ್ತು ಸಾವಿರ ಕೋಟಿ

* ವಿದ್ಯುತ್ ಚಾಲಿತ ವಾಹನಿಗಳಿಗೆ ಭಾರೀ ವಿನಾಯಿತಿ, 10 ಲಕ್ಷ ರೂಗಳ ಕಾರು ಖರೀದಿಸಿದರೆ 1.25ಲಕ್ಷ ಪ್ರೋತ್ಸಾಹಧನ. 12%ರಿಂದ 5%ರಷ್ಟು ಜಿ.ಎಸ್.ಟಿ. ಇಳಿಕೆ. ಹತ್ತು ಲಕ್ಷದ ಕಾರು ಖರೀದಿಸಿದರೆ 2..50ಲಕ್ಷ ಉಳಿಕೆ

* ಮನೆ ಬಾಡಿಗೆ ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆ, ಪುರಾತನ ಕಾಲದಿಂದ ಜಾರಿಯಿದ್ದ ಮನೆ ಬಾಡಿಗೆ ಕಾನೂನು

* ಸಾರಿಗೆ ಕ್ಷೇತ್ರದಲ್ಲಿ ಹೊಸದಾಗಿ ರೂಪಾಯ್ ಕಾರ್ಡ್ ಜಾರಿ

* ಎಲ್ಲಾ ರಾಜ್ಯಗಳಿಗೂ ಒಂದೇ ಗ್ರಿಡ್ ಮೂಲಕ ವಿದ್ಯುತ್ ಪೂರೈಕೆ

* ಭಾರತಮಾಲಾ-ಸಾಗರಮಾಲಾ ಯೋಜನೆಗಳ ಅಭಿವೃದ್ಧಿ

* ಮೂರು ಕೋಟಿ ವ್ಯಾಪಾರಿಗಳಿಗೆ ಪಿಂಚಣಿ ಸ್ಕೀಂ ಘೋಷಣೆ

* ಆಧಾರ್ ಕಾರ್ಡ್ ಮೂಲಕ ಕರ್ಮಯೋಗಿ ಸ್ಕೀಂ ಅನುಷ್ಠಾನ

* ಪ್ರಧಾನಮಂತ್ರಿ ಕರ್ಮಯೋಗಿ ಮಾನ್ ಸನ್ಮಾನ್ ಸ್ಕೀಂ

* ಮೀನುಗಾರರ ಕ್ಷೇತ್ರ ಸುಧಾರಣೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ

* ಒಂದು ಲಕ್ಷದ ಇಪ್ಪತ್ತೈದು ಸಾವಿರ ಕಿಮೀ ರಸ್ತೆ ಪೂರ್ಣಕ್ಕೆ ಕ್ರಮ

* 80,253 ಕೋಟಿ ರೂ.ಗಳಲ್ಲಿ ರಸ್ತೆ ನಿರ್ಮಾಣ

* ಮುಂದಿನ ಐದು ವರ್ಷದಲ್ಲಿ 25000 ರಸ್ತೆ ನಿರ್ಮಾಣದ ಗುರಿ

* ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ತ್ವರಿತವಾಗಿ ಸಾಲ ಸೌಲಭ್ಯ

* ಹಳ್ಳಿಗಳಿಗೆ ಉಜ್ವಲ ಭಾಗ್ಯ ಯೋಜನೆ ವಿಸ್ತರಣೆ, 7.5 ಕೋಟಿ ಮನೆಗಳಿಗೆ ಉಜ್ವಲ ಭಾಗ್ಯ ಯೋಜನೆ

* 1.95 ಕೋಟಿ ಮನೆಗಳ ನಿರ್ಮಾಣ

* 1.25 ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು ನಿರ್ಧಾರ,80,250 ಕೋಟಿ ವೆಚ್ಚದಲ್ಲಿ ರಸ್ತೆ ಮೇಲ್ದರ್ಜೆಗೆ

* ಜಿ.ಎಸ್.ಟಿ.ಯಲ್ಲಿ ಸಣ್ಣ ಉದ್ದಿಮೆದಾರರಿಗೆ 2% ಬಡ್ಡಿದರದಲ್ಲಿ ಸಾಲ

* ಸಾಂಪ್ರದಾಯಿಕ ಉದ್ಯಮಗಳಿಗೆ ಉತ್ತೇಜನ

* 1,25000 ಕಿಮೀ ರಸ್ತೆ ಪೂರ್ಣಕ್ಕೆ ಕ್ರಮ

* 97% ಗ್ರಾಮಗಳಿಗೆ ಸರ್ವಋತು ಸಾರಿಗೆ ಸೌಲಭ್ಯ

* ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ

* ಪ್ರಧಾನ ಮಂತ್ರಿ ರಸ್ತೆ ಯೋಜನೆಯಲ್ಲಿ ಹಸಿರು ತಂತ್ರಜಾÐನ ಬಳಕೆ

* ಕೃಷಿ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಹೂಡಿಕೆಗೆ ಉತ್ತೇಜನೆ

* 59 ನಿಮಿಷದಲ್ಲಿ ಒಂದು ಕೋಟಿ ಸಾಲ ಮಂಜೂರಿಗೆ ಕ್ರಮ

* ಸಣ್ಣ ಉದ್ದಿಮೆದಾರರಿಗೆ ಸಾಲಕ್ಕಾಗಿ 350 ಕೋಟಿ ರೂ. ಮೀಸಲು

* ರೈತರಿಗಾಗಿ 10,000 ಸಂಘಸಂಸ್ಥೆಗಳ ಸ್ಥಾಪನೆ

* ಶೂನ್ಯ ಬಂಡವಾಲ ಕೃಷಿಗೆ ಹೆಚ್ಚಿನ ಆದ್ಯತೆ

* ಬಿದಿರು, ಮರಗಳು, ಖಾದಿ ಕ್ಷೇತ್ರದಲ್ಲಿ ಕಂಪನಿಗಳ ಹೂಡಿಕೆ

* 10,000 ರೈತರನ್ನು ಉದ್ಯಮಿಗಳನ್ನಾಗಿ ಮಾಡುವ ಉದ್ಧೇಶ

* ದೇಶಕ್ಕೆ ಮರಳುವ ಅನಿವಾಸಿ ಭಾರತೀಯರಿಗೂ ಆಧಾರ್ ಕಾರ್ಡ್ ನೀಡಲು ಯೋಜನೆ

* ಎನ್.ಆರ್.ಐಗಳು ಇನ್ನುಮುಂದೆ ಆಧಾರ್ ಕಾರ್ಡ್‍ಗೆ 180 ದಿನ ಕಾಯಬೇಕಿಲ್ಲ

* 400ಕೋಟಿ ಆದಾಯದವರೆಗೂ ಕಂಪನಿಗಳಿಗೆ 25% ತೆರಿಗೆ. ಈ ಹಿಂದೆ 250 ಕೋಟಿ ಆದಾಯಕ್ಕೆ ಮಾತ್ರ 25%ರಷ್ಟು ತೆರಿಗೆ ಇತ್ತು. ಉದ್ಯಮಗಳ ಉತ್ತೇಜನಕ್ಕೆ ದಿಟ್ಟ ಕ್ರಮ

* 2024ರ ಒಳಗೆ ಪ್ರತೀ ಮನೆಗೂ ನೀರು, ಇದಕ್ಕಾಗಿ ಹರ್ ಗರ್ ಯೋಜನೆ ಜಾರಿ.

*ಸ್ವಚ್ಚಭಾರತ್ ಯೋಜನೆ ವಿಸ್ತರಣೆ

* ಜಲಶಕ್ತಿ ಅಭಿಯಾನ ಯೋಜನೆಗೆ 256 ಜಿಲ್ಲೆಗಳನ್ನು ಗುರುತಿಸಲಾಗಿದೆ, ಜಲಶಕ್ತಿ ಇಲಾಖೆಯ ಮೂಲಕ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ

* ಮಳೆ ಕೊಯ್ಲು ಯೋಜನೆಗೆ ಹೆಚ್ಚಿನ ಆದ್ಯತೆ

* ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ತ್ವರಿತ ಸಾಲ ಸೌಲಭ್ಯ

* ಪ್ರಧಾನಮಂತ್ರಿ ಡಿಜಿಟಲ್ ಗ್ರಾಮೀಣ ಸಾಕ್ಷರತಾ ಅಭಿಯಾನ

* ತೆರಿಗೆ ಪಾವತಿದಾರರಿಗೆ ಪಾನ್ ಕಾರ್ಡ್ ಕಡ್ಡಾಯವಿಲ್ಲ, ಆಧಾರ್ ಕಾರ್ಡ್ ಇದ್ದರೂ ಸಾಕು

* ಎನ್ ಸೈಕ್ಲೋಪಿಡಿಯಾ ಮಾದರಿ ಗಾಂಧಿಪೀಡಿಯಾ

* ನ್ಯಾಷನಲ್ ಆಣ್ ಲೈನ್ ವ್ಯವಸ್ಥೆ ಮೂಲಕಕ ಶೈಕ್ಷಣಿಕ ಕೋರ್ಸ್

* ಇಂಜಿನಿಯರಿಂಗ್ ಹಾಕೂ ಟೆಕ್ನಾಲಜಿ ಶೀಕ್ಷಣಕ್ಕೆ ಯೋಜನೆ

* ಮಧ್ಯಮ ವರ್ಗದವರ ಗೃಹಸಾಲದ ಮೇಲೆ ವಿನಾಯಿತಿ

* 4.83 ಲಕ್ಷ ಕೋಟಿ ವೆಚ್ಚದಲ್ಲಿ 81 ಲಕ್ಷ ಮೊತ್ತದ ಮನೆ ನಿರ್ಮಾಣ.

* ಡಿಜಿಟಲ್ ಪೇಮೆಂಟ್ ಗೆ ಉತ್ತೇಜನ, ಕ್ರೆಡಿಟ್ ಕಾರ್ಡ್ ಪೇಮೆಂಟ್ ಗಳ ಮೇಲೆ ಶುಲ್ಕ ವಿಧಿಸುವಂತಿಲ್ಲ

* ಜಿ.ಎಸ್.ಟಿ.ಯಿಂದ 17 ತೆರಿಗೆಗಳು ಹಾಗೂ 30 ನೀತಿಗಳು ರದ್ದಾಗಿವೆ

* 7 ಲಕ್ಷ ರೂಗಳಷ್ಟು ಗೃಹಸಾಲ ನೀಡಿಕೆ

* ಅನವಶ್ಯಕ ವಸ್ತುಗಳ ಆಮದಿಗೆ ಬ್ರೇಕ್, ವಿದೇಶಿ ವಸ್ತುಗಳ ಮೇಲೆ ಸುಂಕ ಹೆಚ್ಚಳ

* ರಕ್ಷಣಾ ಸಾಮಗ್ರಿಗಳ ಕಸ್ಟಮ್ಸ್ ತೆರಿಗೆ ರದ್ದು

* ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಉತ್ತೇಜನ

* ನರೇಗಾ ಕೂಲೆ ಹೆಚ್ಚಳ ಬೇಡಿಕೆಗೆ ಮಣೆ

* 2 ಕೋಟಿಗೂ ಅಧಿಕ ಆದಾಯದಾರರಿಗೆ ಸರ್ಜಾರ್ಚ್ ಹೆಚ್ಚಳ. ಕೋಟ್ಯಾಧಿಪತಿಗಳಿಗೆ ತೆರಿಗೆ ಹೆಚ್ಚಳ

* ಇಂಧನ ವಸ್ತುಗಳು ಹಾಗೂ ಚಿನ್ನದ ಮೇಲೆ ಸೆಸ್ ಏರಿಕೆ

* ಮೂಲಸೌಕರ್ಯ ಅಭಿವೃದ್ಧಿಗೆ ಮೂರು ಲಕ್ಷ ಕೋಟಿ

* ಕೃತಕ ಕಿಡ್ನಿ ಹಾಗೂ ಶಸ್ತ್ರ ಚಿಕಿತ್ಸೆಗಳ ಉಪಕರಣಗಳು, ಡಯಾಲಿಸ್ ಯಂತ್ರ ಮಗತ್ತು ಪರಿಕರಗಳು ಇನ್ನುಮುಂದೆ ಅಗ್ಗ

ಚೊಚ್ಚಲ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಮಧ್ಯಮ ವರ್ಗಕ್ಕೆ ತೆರಿಕೆ ಇಳಿಕೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಂಧನ ವಸ್ತುಗಳು ಹಾಗೂ ಬಂಗಾರದ ಬೆಲೆ ಕೊಂಚ ಹೆಚ್ಚಳವಾಗಿದ್ದು ಬಿಟ್ಟರೆ ಉಳಿದ ವಿಚಾರದಲ್ಲಿ ಬಜೆಟ್ ಉತ್ತಮವಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close