ಪ್ರಚಲಿತ

ಮಹಿಳಾ ಪೊಲೀಸರ ಜೊತೆಯಲ್ಲೇ ಮಹಿಳೆಯರನ್ನು ಶಬರಿಮಲೆ ಸನ್ನಿಧಾನಕ್ಕೆ ಪ್ರವೇಶಿಸಲು ಸಿದ್ಧರಾದ ಕೇರಳದ ಕಮ್ಯುನಿಸ್ಟ್ ಸರಕಾರ! ಹಿಂದೂಗಳೇ ಇನ್ನೂ ಎಷ್ಟು ದಿನ ಸುಮ್ಮನೆ ಕೂರುತ್ತೀರಿ???

 

ಹೇಗಾದರೂ ಸರಿ ಇತಿಹಾಸ ಪ್ರಸಿದ್ಧ ಹಿಂದೂಗಳ ಪವಿತ್ರ ಕ್ಷೇತ್ರವಾದ ಶಬರಿಮಲೆ ಸನ್ನಿಧಾನದ ಪಾವಿತ್ರ್ಯತೆಯನ್ನು ಹಾಳು ಮಾಡಲೇಬೇಕು ಎಂದು ಪಣತೊಟ್ಟಿರುವ ಎಡಪಂಥೀಯರಿಗೆ ವರದಾನವಾಗುವಂತೆ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿತ್ತು. ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ಮುಕ್ತವಾಗಿ ಪ್ರವೇಶಿಸಬಹುದು ಎಂದ ಆದೇಶ ನೀಡುತ್ತಿದ್ದಂತೆ ಹಿಂದೂ ವಿರೋಧಿಗಳಿಗೆ ಹಾಲು ಕುಡಿದಷ್ಟು ಖುಷಿ ಆಗಿತ್ತು.

ಆದರೆ ೮೦೦ ವರ್ಷಗಳ ಇತಿಹಾಸವಿರುವ ಕ್ಷೇತ್ರವನ್ನೇ ನಾಶ ಮಾಡಲು ಹೊರಟಿರುವ ವಿರೋಧಿಗಳ ಮೊದಲ ಪ್ರಯತ್ನ ವಿಫಲ ಮಾಡುವಲ್ಲಿ ಅಯ್ಯಪ್ಪ ಭಕ್ತರು ಯಶಸ್ವಿಯಾಗಿದ್ದರು. ದೇಶಾದ್ಯಂತ ಕೋಟಿ‌ ಕೋಟಿ ಭಕ್ತರು ಪ್ರತೀ ವರ್ಷ ಶಬರಿಮಲೆಗೆ ಆಗಮಿಸುತ್ತಿದ್ದು ಈವರೆಗೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ, ಆದರೆ ಈ ವರ್ಷ ಕೇರಳ ಸರಕಾರ ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಯಾಕೆಂದರೆ ಇನ್ನೇನು ಮಂಡಲಪೂಜೆಗೆ ದೇವಾಲಯದ ಬಾಗಿಲು ತೆರೆಯುತ್ತದೆ ಮತ್ತು ದೇಶಾದ್ಯಂತ ಕೋಟಿ ಕೋಟಿ ಭಕ್ತರ ತಂಡವೇ ಆಗಮಿಸುತ್ತದೆ. ಈ ವೇಳೆ ಕೇರಳ ಸರಕಾರ ನಿಯೋಜಿಸಿರುವ ಮಹಿಳಾ ಪೊಲೀಸರ ಬಿಗಿ ಭದ್ರತೆಯಲ್ಲಿ ಮಹಿಳೆಯರನ್ನು ಸನ್ನಿಧಾನಕ್ಕೆ ಪ್ರವೇಶಿಸಲು ತಯಾರಿ ನಡೆಸಿದ್ದು ಅಯ್ಯಪ್ಪ ಭಕ್ತರ ಮೇಲೆ ದಬ್ಬಾಳಿಕೆ ನಡೆಸುವುದಕ್ಕೂ ಹಿಂಜರಿಯುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾರಿದೆ..!

೧೨೦೦ಕ್ಕೂ ಹೆಚ್ಚು ಮಹಿಳಾ ಪೊಲೀಸರ ನಿಯೋಜನೆ!

ಕೇರಳ ಪಿಣರಾಯಿ ಸರಕಾರ ಒಟ್ಟಾರೆಯಾಗಿ ಹೇಗಾದರೂ ಮಾಡಿ ಶಬರಿಮಲೆಗೆ ಮಹಿಳೆಯರನ್ನು ಪ್ರವೇಶಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದು ಈ ಬಾರಿ ಅಯ್ಯಪ್ಪ ಭಕ್ತರ ಮೇಲೆ ಯಾವುದೇ ಕ್ರಮ‌ ಕೈಗೊಳ್ಳಲು ಹಿಂಜರಿಯುವುದಿಲ್ಲ. ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ತಯಾರಿ ನಡೆಸಿದ್ದು ಮುಂಚಿತವಾಗಿ ಅಯ್ಯಪ್ಪ ಭಕ್ತರಲ್ಲಿ ಭಯದ ವಾತಾವರಣ ಸೃಷ್ಟಿಸುವಂತೆ ಮಾಡಿದೆ. ಈ ಹಿಂದೆ ಅಯ್ಯಪ್ಪ ಭಕ್ತರು ಮಹಿಳೆಯರನ್ನು ತಡೆದಂತೆ ಈ ಬಾರಿ ತಡೆಯಲು ಬಿಡಬಾರದು ಎಂಬ ಲೆಕ್ಕಾಚಾರ ಹಾಕಿಕೊಂಡ ಪಿಣರಾಯಿ ಸರಕಾರ ಶಬರಿಮಲೆಗೆ ಆಗಮಿಸುವ ಭಕ್ತರ ಮೇಲೆ ಹದ್ದಿನ ಕಣ್ಣು ಇಡಲಿದೆ.

ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಸರಕಾರದ ಕಡೆಯಿಂದ ನೇಮಿಸಲ್ಪಟ್ಟ ಮಹಿಳಾ ಪೊಲೀಸರು ಸಮವಸ್ತ್ರ ಧರಿಸದೆ ಸಾಮಾನ್ಯ ವಸ್ತ್ರ ಧರಿಸಿ ಶಬರಿಮಲೆಗೆ ಆಗಮಿಸುವ ಮಹಿಳೆಯರು ಯಾರು ಪೊಲೀಸರು ಯಾರು ಎಂಬುದು ಭಕ್ತರಿಗೆ ತಿಳಿಯದಂತೆ ಮಾಡಲು ಈ ತಂತ್ರ ರೂಪಿಸಲಾಗಿದೆ. ಪೊಲೀಸರ ಸರ್ಪಗಾವಲಿನಲ್ಲಿಯೇ ಮಹಿಳೆಯರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಎಲ್ಲಾ ತಯಾರಿ ನಡೆಸಿರುವ ಪಿಣರಾಯಿ ಸರಕಾರ ಒಂದೆಡೆಯಾದರೆ, ತಮ್ಮ ಪ್ರಾಣ ತೆತ್ತಾದರೂ ಸರಿ ಒಂದೇ ಒಂದು ಹೆಣ್ಣು ಕೂಡ ಸನ್ನಿಧಾನ ಪ್ರವೇಶಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂಬ ಪ್ರತಿಜ್ಞೆ ಅಯ್ಯಪ್ಪ ಭಕ್ತರು ಮಾಡಿದ್ದಾರೆ..!

ಶಬರಿಮಲೆಯಲ್ಲಿ ಯುದ್ಧ ರೀತಿಯ ವಾತಾವರಣ ಸೃಷ್ಟಿ!!

ಶಾಂತಿ ಅಹಿಂಸೆಗೆ ಹೆಸರಾಗಿದ್ದ ಶಬರಿಮಲೆಯಲ್ಲಿ ಇಂದು ಯುದ್ಧ ರೀತಿಯ ವಾತಾವರಣ ಸೃಷ್ಟಿಸುವಲ್ಲಿ ಕೇರಳ ಸರಕಾರ ಯಶಸ್ವಿಯಾಗಿದೆ. ಯಾಕೆಂದರೆ ಶಬರಿಮಲೆಗೆ ಆಗಮಿಸುವ ಭಕ್ತರಲ್ಲಿ ಭಯದ ವಾತಾವರಣ ಮೂಡಿಸಿದ್ದೇ ಆದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗುತ್ತದೆ, ಕಡಿಮೆಯಾದರೆ ತಾವು ಅಂದುಕೊಂಡಿದ್ದು ಸುಲಭವಾಗಿ ಸಾಧಿಸಬಹುದು ಎಂಬ ಲೆಕ್ಕಾಚಾರ. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಅಯ್ಯಪ್ಪ ಭಕ್ತರ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳಲು ಅಯ್ಯಪ್ಪ ಸೇವಾ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳು ಜಾಗೃತಿ ಮೂಡಿಸಿದ್ದು, ಕೇರಳ ಸರಕಾರಕ್ಕೆ ಸೆಡ್ಡು ಹೊಡೆಯಲು ತಯಾರಾಗಿದ್ದಾರೆ. ಆದರೆ ಹಿಂದೂಗಳು ಯಾವುದೇ ಕಾರಣಕ್ಕೂ ಅಂಜದೆ ಈ ಸವಾಲನ್ನು ಸ್ವೀಕರಿಸಿ ತಮ್ಮ ದೇವಾಲಯ, ತಮ್ಮ ಸಂಸ್ಕೃತಿ, ತಮ್ಮ ಧರ್ಮದ ಉಳಿವಿಗಾಗಿ ಹೋರಾಟ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಈ ಬಾರಿಯ ಶಬರಿಮಲೆ ಯಾತ್ರೆಗೆ ಅಡ್ಡಿ ಆತಂಕಗಳು ಎದುರಾಗಬಹುದು ಆದರೆ ಅದನ್ನೆಲ್ಲಾ ಮೆಟ್ಟಿ ನಿಲ್ಲಬೇಕಾದ ಕರ್ತವ್ಯ ನಮ್ಮದು.!!

ಸ್ವಾಮಿಯೇ ಶರಣಂ ಅಯ್ಯಪ್ಪ

—ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close