ಅಂಕಣ

ಸಾಕ್ಷಾತ್ ಶ್ರೀ ಕೃಷ್ಣನೇ ಆಕಾರ ಕೊಟ್ಟ ಶಿವಲಿಂಗವಿರುವ ಆ ಪುರಾತನ ದೇಗುಲದಲ್ಲಿ ಭಕ್ತರೇ ಇಲ್ಲ! ಪ್ರಕೃತಿಯ ಮಡಿಲಲ್ಲಿ ಹರಿಹರರ ಲೀಲೆ…

ದೇವತೆಗಳೇ ಧರೆಗಿಳಿದು ಬಂದು ಇಲ್ಲಿ ಸ್ನಾನ ಮಾಡುತ್ತಿದ್ದರು ಎಂಬ ಇತಿಹಾಸವಿರುವ ಈ ದೇವಾಲಯದ ಸರೋವರದಲ್ಲಿ ಮನುಷ್ಯರು ತೀರ್ಥಸ್ನಾನ ಮಾಡುವುದರಿಂದ ಸಕಲ ರೋಗಗಳಿಂದ ಹಾಗೂ ಪಾಪದಿಂದ ಮುಕ್ತಿ ಹೊಂದುತ್ತಾರೆ ಎನ್ನುವ ಪ್ರತೀತಿಯೂ ಇದೆ!! ಪುರಾಣ, ವೇದ, ಮಾತ್ರವಲ್ಲದೆ ಪವಿತ್ರ ಮಹಾಭಾರತದಲ್ಲಿಯೂ ಉಲ್ಲೇಖಗಳಿರುವ ಈ ದೇವಾಲಯವು ಇದೀಗ ಭಕ್ತರಿಲ್ಲದ ದೇವಸ್ಥಾನವಾಗಿದೆ ಎಂದರೆ ಅದು ನಿಜಕ್ಕೂ ಕೂಡ ಬೇಸರದ ವಿಚಾರ!! ಅಷ್ಟಕ್ಕೂ ಶತಶತಮಾನಗಳಷ್ಟು ಹಳೆಯದಾದ, ಭಕ್ತರೇ ಇಲ್ಲದ ಆ ದೇವಾಲಯವಾದರೂ ಯಾವುದು?!!

ಶ್ರೀ ಕೃಷ್ಣನೇ ತನ್ನ ಕೈಯಾರೇ ಶಂಕು ಸ್ಥಾಪನೆ ಮಾಡಿ, ಶಿವಲಿಂಗಕ್ಕೆ ಆಕಾರ ಕೊಟ್ಟು ನಿರ್ಮಿಸಿದ ಎನ್ನುವ ಐತಿಹಾಸಿಕ ಹಿನ್ನಲೆಯುಳ್ಳ ಈ ದೇವಾಲಯವು ಹಿಂದುಗಳ ಪವಿತ್ರ ಸ್ಥಳವೂ ಹೌದು!! ಪಾರ್ವತಿ ದೇವಿಯನ್ನು ವಿವಾಹವಾಗುವ ಮೊದಲೇ ಶಿವನು ಸತಿಯನ್ನು ವಿವಾಹವಾಗಿದ್ದರು. ಆದರೆ ದೇವಿ ಸತಿಯು ತನ್ನ ತಂದೆ ತನ್ನ ಗಂಡನಿಗೆ ಮಾಡಿದ ಅವಮಾನವನ್ನು ಸಹಿಸಲಾರದೇ ಯಜ್ಞಕುಂಡಕ್ಕೆ ಹಾರಿ ಪ್ರಾಣಬಿಟ್ಟಿದ್ದಳು. ತನ್ನ ಸತಿ ದೇವಿಯನ್ನು ಕಳೆದುಕೊಂಡದಕ್ಕಾಗಿ ಶಿವ ಕಣ್ಣಿರು ಹಾಕುತ್ತಾನೆ… ಆ ಕಣ್ಣಿರಿಂದ ರಚನೆಯಾಗಿದೆ ಈ ತೀರ್ಥ ಸರೋವರ!! ಅದು ಇರುವುದು ಬೇರೆಲ್ಲೂ ಅಲ್ಲ ಪಾಕಿಸ್ತಾನದ ರಾಜಧಾನಿಯಾದ ಲಾಹೋರಿನಿಂದ ಸರಿಸುಮಾರು 270 ಕಿಲೋಮೀಟರ್ ದೂರದಲ್ಲಿರುವ ಚಕವಾಲ ಎಂಬ ಜಿಲ್ಲೆಯಲ್ಲಿದೆ. ಅದನ್ನು ಕಾಟಾಸ್ರಾಜ್ ಮಂದಿರ ಎಂದು ಕರೆಯಲಾಗುತ್ತದೆ!!

Shiva temple in the Katas Raj complex. Photo credit: Wikimedia Commons

ಹೌದು…. ಶಿವನ ಕಣ್ಣೀರಿನಿಂದ ಎರಡು ಸರೋವರಗಳು ಸೃಷ್ಟಿಯಾದರೆ, ಸತಿದೇವಿಯ ಅಂಗದ ಆಧಾರದಲ್ಲಿ ಶಕ್ತಿಪೀಠಗಳು ಭಾರತ ಹಾಗೂ ಪಾಕಿಸ್ತಾನದಲ್ಲಿ ರಚನೆಯಾದವು ಎಂಬ ಪ್ರತೀತಿಯಿದೆ. ಅದರಲ್ಲಿ ಪಾಕಿಸ್ತಾನದಲ್ಲಿ ನಿರ್ಮಾಣವಾದ ಶಕ್ತಿಪೀಠಾ ಒಂದು ಮಾತ ಹಿಂಗಳಜಾದೇವಿ ಮಂದಿರವಾದರೆ ಇನ್ನೊಂದು ಕಟಾಸ್ರಾಜ್ ಮಂದಿರ. ವಿಶೇಷವಾಗಿ ಗುಂಬಜಿನ ರಚನೆಗಳನ್ನು ಒಳಗೊಂಡ ಈ ದೇವಾಲಯ ಅದರ ಬಾಗಿಲಿನಲ್ಲೂ ವಿಶೇಷವಾದ ಕೆತ್ತನೆಗಳನ್ನು ಒಳಗೊಂಡಿದೆ. ಈ ದೇವಾಲಯದ ಸಂಕೀರ್ಣದಲ್ಲಿ ಮುಖ್ಯ ದೇವಾಲಯದ ಸುತ್ತಲೂ ಹಲವು ಚಿಕ್ಕ ದೇವಾಲಯಗಳು ಇದ್ದು ಇವೆಲ್ಲವೂ ಹಿಂದೂ ಶಿಲ್ಪಕಲೆಯಲ್ಲಿ ವಿಶೇಷವಾದ ಪ್ರಕಾರವಾಗಿದ್ದು, ಭಾರತದಲ್ಲೂ ಕಾಣಸಿಗದ ಹಲವಾರು ರಚನೆಗಳನ್ನು ಇದು ಒಳಗೊಂಡಿದೆ.

ಭಾರತ ವಿಭಜನೆಗಿಂತ ಮೊದಲು 428 ಹಿಂದೂ ದೇವಾಲಯಗಳು ಆ ಪ್ರದೇಶದಲ್ಲಿ ಇದ್ದವು. ಆದರೆ ಇಂದು ಕೇವಲ 26 ದೇವಾಲಯಗಳು ಮಾತ್ರ ಉಳಿದುಕೊಂಡಿವೆ. ಪಾಕಿಸ್ತಾನದಲ್ಲಿ ಈಗ ಉಳಿದ ದೇವಾಲಯಗಳ ಪೈಕಿ ಕಾಟಾಸ್ರಾಜ್ ದೇವಾಲಯ ಪ್ರಸಿದ್ಧ ದೇವಾಲಯ. ಜಗತ್ತಿನಲ್ಲಿರೋ ಅತ್ಯಂತ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಇದು ಎರಡನೇ ಪುಣ್ಯ ತೀರ್ಥ ಕ್ಷೇತ್ರ. 1947ರಲ್ಲಿ ಹಿಂದೂಗಳು ಪಾಕಿಸ್ತಾನದಿಂದ ವಲಸೆ ಬಂದಾಗಲೂ ಆ ಮಂದಿರದಲ್ಲಿ ಪೂಜೆ ನಿರಂತರವಾಗಿ ನಡೆಯುತ್ತಲೇ ಇದೆ. ಈ ದೇವಾಲಯದಲ್ಲಿ ಎಲ್ಲ ಬಗೆಯ ಶ್ರದ್ಧಾವಂತರು ಅವರವರ ನಂಬಿಕೆಗನುಸಾರವಾಗಿ ಪೂಜೆಯನ್ನು ಕೈಗೊಳ್ಳುತ್ತಾರೆ. ಆ ಮಂದಿರದ ಸರೋವರಗಳಲ್ಲಿ ಸ್ನಾನ ಮಾಡುವುದರಿಂದ ಪಾಪವು ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಹಲವು ದಶಕಗಳವರೆಗೆ ಸುಸ್ಥಿತಿಯಲ್ಲಿದ್ದ ಮಂದಿರ ಇತ್ತೀಚೆಗೆ ನಡೆದ ದಾಳಿಗಳಿಂದ ಗೋಡೆಗಳು ನಾಶಗೊಂಡಿವೆ. ಪವಿತ್ರವಾದ ಸರೋವರಗಳು ತ್ಯಾಜ್ಯಗಳಿಂದ ಮಲೀನಗೊಳ್ಳುತ್ತವೆ. ಸ್ಥಳೀಯ ಅಧಿಕಾರಿಗಳಿಂದ ನಿರ್ಲಕ್ಷಕ್ಕೊಳಗಾಗಿವೆ.

2006-07ರಲ್ಲಿ ಪಾಕಿಸ್ತಾನ ಸರಕಾರವು ಹಿಂದು ದೇವದೇವತೆಗಳ ಮೂರ್ತಿಗಳನ್ನು 7 ಮಂದಿರಗಳಲ್ಲಿ ಅವುಗಳ ನೈಜ ಸ್ಥಾನದಲ್ಲಿರಿಸಿ, ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಮಾಡಿಸಿತ್ತು. ಅಷ್ಟಕ್ಕೂ ಅಂದು ಪಾಕಿಸ್ತಾನದ ಸರಕಾರ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಏಕೆ ಮಾಡಿತ್ತು ಗೊತ್ತೆ? ಇಸ್ಲಾಂ ರಾಷ್ಟ್ರವಾಗಿದ್ದರೂ ಕೂಡಾ ದೇವಾಲಯದ ಜೀರ್ಣೋದ್ಧಾರದ ಕೆಲಸ ಮಾಡಿತ್ತು ಅಂದ್ರೆ ಅಚ್ಚರಿ ಪಡಬೇಕಾದ ವಿಷಯ. ಹೌದು.. ಭಾರತದ ಹಿರಿಯ ರಾಜಕೀಯ ಮುತ್ಸದ್ದಿ. ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಉಪಪ್ರಧಾನ ಮಂತ್ರಿಯಾಗಿದ್ದಾಗ ಇಲ್ಲಿಗೆ ಭೇಟಿಕೊಟ್ಟು ದೇವಸ್ಥಾನದ ಹಾಗೂ ಕೆರೆಯ ಜೀರ್ಣೋದ್ದಾರ ಮಾಡುವಂತೆ ಪಾಕಿಸ್ತಾನ ಸರಕಾರವನ್ನು ಒತ್ತಾಯಿಸಿದ್ದರು. ಕೆಲವೇ ವರ್ಷಗಳಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡಿತು ಪಾಕಿಸ್ತಾನ.

Pakistan,Katas Raj temple complex,LK Advani

2 ಕೋಟಿ ರೂಪಾಯಿಯಲ್ಲಿ ಶಿವಲಿಂಗಕ್ಕೆ ಮತ್ತೆ ಐತಿಹಾಸಿಕ ಮೆರುಗು ನೀಡಿದ್ದಲ್ಲದೇ 2006-07 ರಲ್ಲಿ ಈ ದೇಗುಲದ ಜೀರ್ಣೋದ್ದಾರಕ್ಕೆ ಪಾಕ್ ಸರಕಾರ ನೀಡಿದ ಮೊತ್ತ, ಬರೋಬ್ಬರಿ 8 ಕೋಟಿ!! ಈ ದೇವಸ್ಥಾನ ಒಟ್ಟು 7 ಮಂದಿರಗಳ ಒಂದು ಸಮ್ಮಿಲನ. ಕ್ರಿ.ಪೂ 650 ರಿಂದ 950 ರ ಕಾಲದಲ್ಲಿ ಈ ದೇಗುಲದ ನಿರ್ಮಾಣ ಆಗಿದೆ ಅಂತ ಅಂದಾಜಿಸಲಾಗಿದೆ. ಇನ್ನು ಪಾಕಿಸ್ತಾನ ಸರಕಾರದ ರಾಷ್ಟ್ರೀಯ ರಕ್ಷಣಾ ಸಲಹೆಗಾರನಾದ ಅಬ್ದುಲ್ ಬಾಸಿತ್ 2005ರಲ್ಲಿ ಈ ಅಮರಕುಂಡದ ಜಲವನ್ನು ಸ್ನೇಹದ ಸಂಕೇತವಾಗಿ ಅಡ್ವಾನಿಗೆ ಕಳುಹಿಸಿಕೊಟ್ಟಿದ್ದರು. ಇದೊಂದು ಹಿಂದುಗಳ ಅತ್ಯಂತ ಶ್ರದ್ಧೆಯ ಕೇಂದ್ರ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು, ಈ ದೇಗುಲವನ್ನು ಚೌಕಾಕಾರವಾಗಿ ಕಟ್ಟಲಾಗಿದ್ದು, ಪೂರ್ವದ ದಿಕ್ಕಿನಲ್ಲಿ ಪ್ರವೇಶ ದ್ವಾರ ಇದೆ. ದಕ್ಷಿಣದಲ್ಲಿ ಹನುಮಂತನ ಮಂದಿರವಿದೆ. ಮಂದಿರದೊಳಗೆ ಬಂದ ಭಕ್ತರು, ಮೊದಲಿಗೆ ಬಿಲ್ವಪತ್ರೆಯನ್ನಿಟ್ಟು, ಶಿವಲಿಂಗಕ್ಕೆ ಪೂಜೆ ಸಲ್ಲಿಸ್ತಾರೆ. ನಂತರ ಹೂವು, ಹಣ್ಣುಗಳನ್ನು ಶಿವನಿಗೆ ಸಮರ್ಪಿಸಿ, ಪಾವನರಾಗ್ತಾರೆ. ಇನ್ನು ಇಲ್ಲಿಗೆ ಬರೋ ಕೆಲವರು, ಶಿವನ ಭಜನೆ ಮಾಡ್ತಾ, ಶಿವನಾಮಸ್ಮರಣೆಯಲ್ಲಿ ಮುಳುಗಿಬಿಡ್ತಾರೆ.

ಪುರಾಣಗಳ ಪ್ರಕಾರ, ಈ ಕಟಾಸ್ರಾಜ್ ಮಂದಿರದ ಬಳಿ ಪವಿತ್ರವಾದ ಸರೋವರವೊಂದಿದ್ದು, ಮಹಾಭಾರತದಲ್ಲಿ ಯುಧಿಷ್ಠಿರನು ದಣಿದು ಸರೋವರದ ನೀರು ಕುಡಿಯಲು ಬಂದಾಗ ಆಶರೀರವಾಗಿ ಪ್ರತ್ಯಕ್ಷನಾದ ಯಕ್ಷನು ನೀರುಕುಡಿಯುವ ಮೊದಲು ನನ್ನ ಪ್ರಶ್ನೆಗೆ ಉತ್ತರಿಸು ಎಂದು “ಯಕ್ಷ ಪ್ರಶ್ನೆ” ಕೇಳಿದ ಸ್ಥಳವೂ ಇದಾಗಿದೆ. ಅಷ್ಟೇ ಅಲ್ಲದೇ ತನ್ನ ಸಹೋದರನನ್ನು ಮರಳಿ ಪಡೆದ ಸ್ಥಳವೂ ಇದಾಗಿದೆ!! ಈ ಕಟಾಸ್ರಾಜಿನ ಪಕ್ಕದಲ್ಲಿರುವ ಅಮರಕುಂಡ ಸರೋವರ ಮತ್ತು ಭಾರತದಲ್ಲಿರುವ ಪುಷ್ಕರ ತೀರ್ಥಗಳ ನಡುವೆ ಐತಿಹಾಸಿಕ ಸಂಬಂಧವಿದೆ. ಶಿವನ ಮಡದಿಯಾದ ಸತಿದೇವಿಯು ಅಗ್ನಿಕುಂಡಕ್ಕೆ ಹಾರಿ ಪ್ರಾಣಬಿಟ್ಟಾಗ ಶಿವನು ಬೇಸರಗೊಂಡು ಕಣ್ಣೀರು ಹಾಕಿದನು. ಆ ಕಣ್ಣೀರು ಒಂದು ಹನಿ ಕಟಾಸ್ರಾಜಿಗೆ ಬಿತ್ತು ಇನ್ನೊಂದು ಹನಿ ಪುಷ್ಕರತೀರ್ಥಕ್ಕೆ ಬಿದ್ದು ಈ ಎರಡು ಸರೋವರಗಳ ರಚನೆಯಾಯಿತು ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ ಶಿವನು ಪಾರ್ವತಿಯನ್ನು ವಿವಾಹವಾದ ನಂತರ ಅವರ ಮೊದಲ ವೈವಾಹಿಕ ಜೀವನ ಇದೆ ಕಟಾಸ್ ರಾಜ್ಯಲ್ಲಿ ನಡೆದಿತ್ತು.

ಈ ದೇವಸ್ಥಾನದ ಪಕ್ಕದಲ್ಲಿರುವ ಕೆರೆಯ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದ್ದು, ಜಗದೊಡೆಯ ಶ್ರೀಕೃಷ್ಣ ಪರಮಾತ್ಮ ಸ್ವತಃ ತನ್ನ ಕೈಯಾರೆ ಈ ದೇವಸ್ಥಾನದ ಶಂಕುಸ್ಥಾಪನೆ ಮಾಡಿ ಅಲ್ಲಿರುವ ಶಿವಲಿಂಗಕ್ಕೆ ಆಕಾರ ಕೊಟ್ಟ ಎಂಬ ಇತಿಹಾಸವಿದೆ. ಅಲ್ಲದೆ ಕೌರವರೊಡನೆ ಜೂಜಾಟದಲ್ಲಿ ಸೋತು ಪಾಂಡವರು 13 ವರುಷಗಳ ಕಾಲ ವನವಾಸ ಅನುಭವಿಸಬೇಕಾಯಿತು. ಆ ವನವಾಸದಲ್ಲಿ ಸುಮಾರು 4 ವರ್ಷಗಳನ್ನು ಇದೆ ಜಾಗದಲ್ಲಿ ಕಳೆದರು ಎಂಬ ನಂಬಿಕೆಯಿದೆ. ಅಲ್ಲದೆ ಅಲ್ಲಿರುವ ಶಿವಲಿಂಗವನ್ನು ಪಾಂಡವರು ಪೂಜಿಸುತ್ತಿದ್ದರು ಎನ್ನುವುದನ್ನೂ ಹೇಳಲಾಗಿದೆ!! ಇಷ್ಟೆಲ್ಲಾ ಇತಿಹಾಸವಿದ್ದರೂ ಕೂಡ ಇದೀಗ ಭಕ್ತರೇ ಇಲ್ಲದ ದೇಗುಲ ಎನ್ನುವ ಹೆಸರಿಗೆ ಪಾತ್ರವಾಗಿದೆ ಎಂದರೆ ನಿಜಕ್ಕೂ ಬೇಸರದ ವಿಚಾರ!!

ಮೂಲ: https://scroll.in/

https://www.hindustantimes.com/

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close