ಪ್ರಚಲಿತ

ನ್ಯಾಯಾಲಯದಲ್ಲಿ ಕಾಂಗ್ರೆಸ್ ಪ್ರಭಾವವನ್ನು ಬಳಸಲು ಹೋದ ಕಾರ್ತಿ ಚಿದಂಬರಮ್‍ನ ಮೈಚಳಿ ಬಿಡಿಸಿದ ನ್ಯಾಯಾಲಯ!! ಬೆವರಿದ ಕಾರ್ತಿ!!

ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರ ಮಾಜಿ ಸಚಿವ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಫೆಬ್ರವರಿ 28 ರಂದು ಬಂಧಿಸಲಾಗಿದೆ… ಲಂಡನ್‍ನಿಂದ ವಾಪಸ್ ಆಗುತ್ತಿದ್ದಂತೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಕಾರ್ತಿ ಚಿದಂಬಂ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.. ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರ ವಿರುದ್ಧ ಸಿಬಿಐ ಸಹ ಪ್ರಕರಣ ದಾಖಲಿಸಿಕೊಂಡಿತ್ತು. ಹಲವು ದಿನಗಳಿಂದ ಪ್ರಕರಣ ಸಂಬಂಧ ಕಾರ್ತಿ ಚಿದಂಬರಂ ಅವರ ವಿರುದ್ಧ ದಾಖಲಾಗಿದ್ದ ದೂರಿನ ಅನ್ವಯ ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದರು.

ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಚಿದಂಬರಂ ಸಚಿವರಾಗಿದ್ದರು, ಈ ವೇಳೆ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆ ಹಗರಣ ನಡೆದಿತ್ತು. ಅಕ್ರಮ ಹಣ ವಹಿವಾಟು ತಡೆ ಕಾಯ್ದೆ ಅಡಿ ಕಾರ್ತಿ ಚಿದಂಬರಂ ವಿರುದ್ಧ ಇಡಿ ಮೇ, 2017ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಕಾರ್ತಿ ಚಿದಂರಬರಂ ನನ್ನು ಬಂಧಿಸಲಾಗಿದೆ.. ಇದೀಗ ಮತ್ತೆ ಕಾರ್ತಿ ಚಿದಂಬರಂರನ್ನು  ನ್ಯಾಯಾಂಗ ಬಂಧನ ಮುಂದುವರಿಸಿದ್ದು ತಂದೆ ಮತ್ತು ಮಗನಿಗೆ ದೊಡ್ಡ ಶಾಕ್ ಅಂತಾನೇ ಹೇಳಬಹುದು!!

ಕಾರ್ತಿ ಚಿದಂಬರಂ ನ್ಯಾಯಾಂಗ ಬಂಧನ ಮುಂದುವರಿಕೆ:

ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಅವರನ್ನು 12 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುವಂತೆ ಇಲ್ಲಿಯ ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದೆ. ನ್ಯಾಯಾಲಯ ಆದೇಶ ಕೇಳುತ್ತಿದ್ದಂತೆಯೇ ತಿಹಾರ್ ಜೈಲಿನಲ್ಲಿರಬೇಕಾದರೆ ನನ್ನ ಕೆಲ ಬೇಡಿಕೆಗಳನ್ನು ಪೂರೈಸಬೇಕು ಎಂದಿದ್ದಾರೆ.. ಆ ಪಟ್ಟಿಯಲ್ಲಿ ಪ್ರತ್ಯೇಕ ಜೈಲು, ಪ್ರತ್ಯೇಕ ಶೌಚಾಲಯ, ಮನೆಯೂಟ, ಆತನಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕೆಂದು ನ್ಯಾಯಾಲಯದ ಮುಂದೆ ಕೇಳಿಕೊಂಡಿದ್ದಾರೆ!!

ಕಾರ್ತಿ ಚಿದಂಬರಂ ಅವರನ್ನು ಮಾರ್ಚ್ 24ರವರೆಗೆ ತಿಹಾರ್ ಜೈಲಿನಲ್ಲಿರಿಸಲಾಗುತ್ತದೆ. ಕಾರ್ತಿ ಚಿದಂಬರಂ ಅವರಿಗೆ ಪ್ರತ್ಯೇಕ ಸೆಲ್ ಮತ್ತು ಮನೆಯೂಟ ಸೌಲಭ್ಯ ಕೊಡಬೇಕೆಂದು ಮಾಡಿಕೊಂಡ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಧೀಶ ಸುನೀಲ್ ರಾಣಾ ತಿರಸ್ಕರಿಸಿದ್ದಾರೆ. ಕಾರ್ತಿ ಅವರ ತಂದೆ ಅವರ ಅವಧಿಯಲ್ಲಿ ಹಲವಾರು ಉಗ್ರಗಾಮಿಗಳು ಮತ್ತು ಕ್ರಿಮಿನಲ್‍ಗಳಿಗೆ ಶಿಕ್ಷೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ತಿ ಚಿದಂಬರಂ ಅವರಿಗೆ ಜೈಲಿನಲ್ಲಿ ಪ್ರಾಣಾಪಾಯವಿರುವ ಸಾಧ್ಯತೆ ಇದೆ. ಅವರ ರಕ್ಷಣೆಯ ದೃಷ್ಟಿಯಿಂದ ಪ್ರತ್ಯೇಕ ಕೋಣೆ ಕೊಡಿ ಎಂದು ಅವರ ಪರ ವಕೀಲರು ಮಾಡಿದ ವಾದವನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

ಜೈಲಿನಲ್ಲಿ ಕೈದಗಳ ನಡುವೆ ಭೇದಭಾವ ಮಾಡಲು ಸಾಧ್ಯವಿಲ್ಲ. ಕಾರ್ತಿ ಚಿದಂಬರಂ ಅವರು ಸಾಮಾನ್ಯ ಕೈದಿಗಳಂತೆ ಜೈಲಿನಲ್ಲಿರಬೇಕಾಗುತ್ತದೆ ಎಂದು ಸಿಬಿಐ ನ್ಯಾಯಾಧೀಶರು ತಿಳಿಸಿದ್ದಾರೆ.

ಫೆ. 28ರಿಂದಲೂ ಕಾರ್ತಿ ಚಿದಂಬರಂ ಅವರು ಸಿಬಿಐ ಕಸ್ಟಡಿಯಲ್ಲೇ ಇದ್ದಾರೆ. ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಗೆ ಅಕ್ರಮ ರೀತಿಯಲ್ಲಿ ನೆರವು ನೀಡಿದ ಆರೋಪ ಕಾರ್ತಿ ಮೇಲಿದೆ. ಇಂದ್ರಾಣಿ ಮುಖರ್ಜಿ ಒಡೆತನದ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆಯ ಮೇಲೆ ತೆರಿಗೆ ವಂಚನೆ ಪ್ರಕರಣ ದಾಖಲಾಗದಂತೆ ಎಫ್‍ಐಸಿಬಿಯಿಂದ ಕ್ಲಿಯರೆನ್ಸ್ ಮಾಡಿಸಿರುವ ಕಾರ್ತಿ, ಅದಕ್ಕೆ ಪ್ರತಿಯಾಗಿ 10 ಲಕ್ಷ ರೂ. ಲಂಚ ಪಡೆದರೆಂಬ ಆರೋಪ ಕೂಡಾ ಇದೆ…

ಏನಿದು ಪ್ರಕರಣ

2007ರಲ್ಲಿ ಮಾರಿಷಸ್‍ನಿಂದ ಬಂಡವಾಳ ಪಡೆಯುವ ವೇಳೆ ಎಫ್‍ಐಪಿಬಿ ನಿಯಮಾವಳಿ ಉಲ್ಲಂಘನೆ ಮಾಡಲಾಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದೆ. ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಾರ್ತಿ ವಿರುದ್ಧ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

2008ರಲ್ಲಿ ಐಎನ್‍ಎಕ್ಸ್ ಮೀಡಿಯಾ ಕಾರ್ತಿ ಅವರ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಸಂಸ್ಥೆ ಹಾಗೂ ಅದರ ಸಹ ಸಂಸ್ಥೆಗಳಿಗೆ ಹಣ ಪಾವತಿಸಿ ಶೇರ್‍ಗಳನ್ನು ನೀಡಿತ್ತು. ಅಷ್ಟೇ ಅಲ್ಲದೇ, ಪೀಟರ್ ಮುಖರ್ಜಿ ಅವರ ಐಎನ್‍ಎಕ್ಸ್ ಮೀಡಿಯಾ ಸಂಸ್ಥೆ ಹಲವು ಕಂತುಗಳಲ್ಲಿ ಹಣವನ್ನು ಪಾವತಿಸಿದ್ದು, 60 ಶೇರುಗಳನ್ನು ಲಂಡನ್ ಮೂಲದ ಆರ್ಟಿವಿಯಾ ಡಿಜಿಟಲ್ ಯುಕೆ ಲಿಮಿಟೆಡ್ ಕಂಪೆನಿಯಿಂದ ಕಾರ್ತಿ ಅವರ ಸಂಸ್ಥೆಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿದೆ.

ಈ ಹಿಂದೆ ಕಾರ್ತಿ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಕಾರ್ತಿ ಅವರ ಸಂಸ್ಥೆಯ ಬಗ್ಗೆ ಮಾಹಿತಿವುಳ್ಳ ಹಾರ್ಡ್ ಡಿಸ್ಕ್‍ಗಳನ್ನ ಜಪ್ತಿ ಮಾಡಲಾಗಿತ್ತು. ಕಾರ್ತಿ ಅವರು ಐಎನ್‍ಎಕ್ಸ್ ಮೀಡಿಯಾದಿಂದ ಕಿಕ್ ಬ್ಯಾಕ್ ಪಡೆದಿದ್ದಾರೆಂಬುದು ತನಿಖೆಯಿಂದ ಬಹಿರಂಗವಾಗಿತ್ತು. 2008 ಸೆಪ್ಟೆಂಬರ್ 22ರಂದು ಎಫ್ ಐಪಿಬಿ(ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ) ನಿಂದ 220 ಮಿಲಿಯನ್ ಡಾಲರ್ ಕ್ಲಿಯರೆನ್ಸ್‍ಗಾಗಿ ಅರ್ಜಿ ಹಾಕಿದ್ದ ಐಎನ್‍ಎಕ್ಸ್ ಮೀಡಿಯಾ, ಕಾರ್ತಿ ಅವರ ಸಂಸ್ಥೆಗೆ 35 ಲಕ್ಷ ರೂಪಾಯಿ ನೀಡಿದೆ ಎನ್ನುವ ಆರೋಪ ಕೇಳಿ ಬಂಧಿಸಿತ್ತು.

Image result for karthi chidambaram

ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿ ನೇತೃತ್ವದ ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ವಿದೇಶಿ ಹೂಡಿಕೆಗೆ 2007ರಲ್ಲಿ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅನುಮತಿ ನೀಡಿದ್ದರು. ಇದಕ್ಕಾಗಿ ಸಂಸ್ಥೆಯಿಂದ ಕಾರ್ತಿ ಚಿದಂಬರಂಗೆ 10 ಲಕ್ಷ ರೂಪಾಯಿ ಕಿಕ್ ಬ್ಯಾಕ್ ದೊರೆತಿತ್ತು ಎನ್ನಲಾಗಿದೆ. ಅಲ್ಲದೇ, ವಿದೇಶಿ ಹೂಡಿಕೆ ಪೆÇತ್ಸಾಹ ಮಂಡಳಿ 4 ಕೋಟಿ ರೂಪಾಯಿ ಹೂಡಿಕೆಗೆ ಅನುಮತಿ ಕಲ್ಪಿಸಿದ್ದರೂ, ಇದನ್ನು ಮೀರಿ 305 ಕೋಟಿ ರೂಪಾಯಿ ವಿದೇಶಿ ಹೂಡಿಕೆ ಮಾಡಲಾಗಿತ್ತು. ಕಾರ್ತಿ ಚಿದಂಬರಂ ಹೆಸರಿನಲ್ಲಿರುವ ಚೆಸ್ ಮ್ಯಾನೇಜ್ ಮೆಂಟ್ ಸರ್ವಿಸಸ್ ಸಂಸ್ಥೆಗೆ 3.5 ಕೋಟಿ ರೂಪಾಯಿ ನೀಡಲಾಗಿತ್ತು.. ಇದೀಗ ನ್ಯಾಯಾಂಗ ಬಂಧನದಲ್ಲಿರುವ ಕಾರ್ತಿ ಚಿದಂಬರಂಗೆ ಮತ್ತೆ ನ್ಯಾಯಾಂಗ ಬಂಧನ ಮುಂದುವರಿಸಲಾಗಿದೆ….

ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close