ಪ್ರಚಲಿತ

ಗೋಕಳ್ಳರನ್ನು ರಕ್ಷಿಸಿ ಗೋರಕ್ಷಕರನ್ನೇ ಬಂಧಿಸಿದ ಪೊಲೀಸರು! ರೊಚ್ಚಿಗೆದ್ದು ಬೀದಿಗಿಳಿದ ಹಿಂದೂಪರ ಸಂಘಟನೆಗಳು!

ಅಧಿಕಾರ ವಹಿಸಿಕೊಂಡವರು ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ, ಆಡಳಿತ ನಡೆಸಬೇಕಾದವರು ಹುದ್ದೆ ಕಳೆದುಕೊಳ್ಳುತ್ತೇನೆ ಎಂಬ ಭಯದಿಂದ ಕೂತಿದ್ದಾರೆ. ಅಂತೂ ರಾಜ್ಯದಲ್ಲಿ ಜನರ ಪರಿಸ್ಥಿತಿ ಕೇಳುವವರೇ ಇಲ್ಲದಂತಾಗಿದೆ. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಹಿಂದೂಗಳ ಸ್ಥಿತಿ ಯಾವ ರೀತಿ ಇತ್ತು ಎಂಬುದು ಮತ್ತೊಮ್ಮೆ ಹೆಚ್ಚು ವಿವರವಾಗಿ ಹೇಳಬೇಕಾದ ಅಗತ್ಯವಿಲ್ಲ. ಆದರೆ ಅವೆಲ್ಲವೂ ಸರಿಯಾಗಬಹುದು ಎನ್ನುವಷ್ಟರಲ್ಲಿ ಅಧಿಕಾರ ವಹಿಸಿಕೊಂಡ ಕುಮಾರಸ್ವಾಮಿ ಅವರ ಸ್ಥಿತಿ ಕೂಡ ಅದೇ ರೀತಿ ಆಗಿದೆ. ಜನರು ಹಾಳಾಗಿ ಹೋಗಲಿ, ನಾವು ನಮ್ಮ ಕುಟುಂಬ ಚೆನ್ನಾಗಿರಲಿ ಎಂಬ ಉದ್ದೇಶದಿಂದ ಅಧಿಕಾರ ನಡೆಸುತ್ತಿರುವ ಕುಮಾರಸ್ವಾಮಿ ಅವರ ಆಳ್ವಿಕೆಯಲ್ಲೂ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಕಾನೂನು ಕಾಪಾಡಬೇಕಿದ್ದ ಪೊಲೀಸರೇ ಕಳ್ಳರ ಬೆಂಬಲಕ್ಕೆ ನಿಂತಿದ್ದು, ರಾಜ್ಯದಲ್ಲಿ ಯಾವ ರೀತಿಯ ಆಡಳಿತ ವ್ಯವಸ್ಥೆ ಇದೆ ಎಂಬುದು ಅರ್ಥ ಆಗುತ್ತಿಲ್ಲ.

ಯಾಕೆಂದರೆ ಕಳ್ಳರನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದು ಮಾತ್ರವಲ್ಲದೆ ಗೋರಕ್ಷಕರ ವಿರುದ್ಧವೇ ಕಳ್ಳತನದ ಪ್ರಕರಣ ದಾಖಲಿಸಿ ಗೋಕಳ್ಳರ ರಕ್ಷಣೆಗೆ ನಿಂತಿದ್ದಾರೆ. ಕಳ್ಳರ ಮಾಮೂಮು ಹಣದ ಆಸೆಗೆ ಬಿದ್ದ ಪೊಲೀಸರು ಕಳ್ಳರನ್ನು ಹಿಡಿದುಕೊಟ್ಟ ಹಿಂದೂಗಳ ಮೇಲೆಯೇ ಪ್ರಕರಣ ದಾಖಲಿಸಿದ್ದು ಇದೀಗ ಪಿಎಸ್‌ಐ ಶರತ್ ಎಂಬ ಅಧಿಕಾರಿಯ ವಿರುದ್ಧ ನಾಗಮಂಗಲ ತಾಲ್ಲೂಕಿನ ಹಿಂದೂಪರ ಸಂಘಟನೆಗಳು ಬೀದಿಗಳಿದು ಪ್ರತಿಭಟಿಸುತ್ತಿವೆ.!

ಗೋವುಗಳ ಸಮೇತ ಕಳ್ಳರನ್ನು ಹಿಡಿದು ಕೊಟ್ಟ ಹಿಂದೂಗಳ ವಿರುದ್ಧವೇ ಕಳ್ಳತನದ ಕೇಸ್!

ತಾಲೂಕಿನ ಬೆಳ್ಳುರು ಗ್ರಾಮದ ಬಳಿ ಕೇರಳಕ್ಕೆ ಸಾಗಿಸುತ್ತಿದ್ದ ಗೋವುಗಳನ್ನು ಖಚಿತ ಮಾಹಿತಿಯ ಮೇರೆಗೆ ಹಿಡಿದ ಹಿಂದೂಪರ ಸಂಘಟನೆಗಳು, ಲಾರಿ ಮತ್ತು ಕಳ್ಳತನ ಮಾಡಿದ ಗೋವುಗಳ ಸಮೇತ ಗೋಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದರು. ಅಷ್ಟೇ ಅಲ್ಲದೆ ಈ ವೇಳೆ ಸ್ವತಃ ಪೊಲೀಸರು ಕೂಡ ಸ್ಥಳದಲ್ಲೇ ಇದ್ದು, ಪೊಲೀಸರ ಸಹಾಯದಿಂದಲೇ ಈ ಕಾರ್ಯಾಚರಣೆ ನಡೆಸಲಾಗಿತ್ತು. ಅದರಂತೆಯೇ ವಶಪಡಿಸಿಕೊಂಡ ಗೋವುಗಳನ್ನು ಸಂಘಟನೆಗಳ ಮುಖಂಡರ ಮೂಲಕ ಮೈಸೂರಿನ ಗೋಶಾಲೆಗೆ ನೀಡಲಾಗಿದೆ. ಆದರೆ ಕಳ್ಳರನ್ನು ಸಾಕ್ಷಿ ಸಮೇತ ಹಿಡಿದುಕೊಟ್ಟ ಹಿಂದೂಗಳ ಮೇಲೆ ಇದೀಗ ಕೇಸ್ ದಾಖಲಾಗಿದ್ದು ರೊಚ್ಚಿಗೆದ್ದ ಹಿಂದೂಪರ ಸಂಘಟನೆಗಳು ಮಿನಿ ವಿಧಾನಸೌಧದ ಎದುರಲ್ಲೇ ಪ್ರತಿಭಟನೆ ನಡೆಸಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಗೋಕಳ್ಳತನ ಇದೇ ಮೊದಲ ಬಾರಿಗೆ ನಡೆಯುತ್ತಿಲ್ಲ, ಈ ಹಿಂದೆ ಕೂಡ ಇದೇ ರೀತಿ ಲಾರಿ ಸಮೇತ ಗೋವುಗಳನ್ನು ಹಿಡಿದುಕೊಟ್ಟ ಹಿಂದೂಪರ ಸಂಘಟನೆಗಳು, ರಕ್ಷಿಸಲ್ಪಟ್ಟ ಗೋವುಗಳನ್ನು ಗೋಶಾಲೆಗೆ ನೀಡಿದ್ದರು‌. ಪದೇ ಪದೇ ಈ ರೀತಿ ಆಗುತ್ತಿದ್ದರೆ , ಗೋಕಳ್ಳರಿಂದ ತನಗೆ ಬರುವ ಹಫ್ತಾ ಕಡಿಮೆ ಆಗುತ್ತದೆ ಎಂಬ ದುರುದ್ದೇಶದಿಂದ ಪಿಎಸ್‌ಐ ಶರತ್ ಅವರು ಹಿಂದೂಗಳ ವಿರುದ್ಧವೇ ಲಾರಿ ಚಾಲಕನಿಗೆ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಮತ್ತು ಆತನ ಮೊಬೈಲ್ ಫೋನ್ ಕಳ್ಳತನ ಮಾಡಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಕೇಸ್ ದಾಖಲಿಸಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನೂರಾರು ಕಾರ್ಯಕರ್ತರು ಪೊಲೀಸರ ವಿರುದ್ಧವೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಎಂಬ ಯುವಕನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಈ ವೇಳೆ ನ್ಯಾಯಾಧೀಶರ ಮುಂದೆ ಮಾತನಾಡಿದ ಹರೀಶ್ ಎಂಬ ಯುವಕ, ಪಿಎಸ್‌ಐ ಶರತ್ ಅವರು ಕಾರ್ಯಾಚರಣೆ ವೇಳೆ ನಮ್ಮ ಮೇಲೆಯೇ ಹಲ್ಲೆ ಮಾಡಿದ್ದಾರೆ ಮಾತ್ರವಲ್ಲದೆ ನಾನೊಬ್ಬ ದಲಿತ ಯುವಕ ಆಗಿರುವುದರಿಂದ ನಮ್ಮ ಜಾತಿ ನಿಂದನೆ ಕೂಡ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯವು ಶರತ್ ಅವರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದು, ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.!

ಪಿಎಸ್‌ಐ ಶರತ್ ಅಮಾನತಿಗೆ ಆಗ್ರಹ!

ಕಳ್ಳರನ್ನು ಹಿಡಿದುಕೊಟ್ಟರೆ ಹಿಡುದುಕೊಟ್ಟ ಹಿಂದೂಗಳ ವಿರುದ್ಧವೇ ಕೇಸ್ ಹಾಕಿದ ಪಿಎಸ್‌ಐ ಶರತ್ ಅವರನ್ನು ಅಮಾನತು ಮಾಡಲೇಬೇಕು ಎಂದು ಆಗ್ರಹಿಸಿದ ಹಿಂದೂಪರ ಸಂಘಟನೆಗಳು, ನಮ್ಮ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದವು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಶಾಸಕ ಕೆ ಸುರೇಶ್ ಗೌಡ ಅವರು ಡಿವೈಎಸ್‌ಪಿ ವಿಶ್ವನಾಥ್ ಮತ್ತು ವೃತ್ತ ನಿರೀಕ್ಷಕ ನಂಜಪ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರ ಜೊತೆ ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು, ಪಿಎಸ್‌ಐ ಶರತ್ ಅವರನ್ನು ಸಸ್ಪೆಂಡ್ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಪ್ರಕರಣಕ್ಕೆ ಶಾಸಕರು ಮಧ್ಯ ಪ್ರವೇಶ ಮಾಡಿದ್ದರಿಂದ ಪ್ರತಿಭಟನೆ ಹಿಂಪಡೆದ ಹಿಂದೂಗಳು, ಮುಂದೆ ಇದೇ ರೀತಿ ಆದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close