ಪ್ರಚಲಿತ

ಹಿಂದೂ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದೇ ಈ ಭಾರತೀಯನ ವಿದೇಶಿ ಜೀವನಕ್ಕೆ ಮುಳ್ಳಾಯಿತೇ.! ಟ್ವಿಟ್ಟರ್‌ನಲ್ಲಿ ನಡೆಯಿತು ರೋಚಕ ಸ್ಟೋರಿ.!

ಸದ್ಯದ ಪರಿಸ್ಥಿತಿಯಲ್ಲಿ ಜಗತ್ತಿನಾದ್ಯಂತದ ಹಿಂದೂ ಧರ್ಮದ ಅಥವಾ ಸತ್ಯದ ಪರವಾಗಿ ಯಾರೇ ಮಾತನಾಡಿದರು ಅಂತವರು ಕೆಟ್ಟವರಾಗಿಬಿಡುತ್ತಾರೆ. ಯಾಕೆಂದರೆ ಹಿಂದೂಗಳು ಶಾಂತಿ ಪ್ರಿಯರು, ತಾವು ಯಾರ ತಂಟೆಗೂ ಹೋಗುವುದಿಲ್ಲ, ಇದೀಗ ತಮ್ಮ ತಂಟೆಗೆ ಬಂದವರನ್ನೂ ಏನೂ ಮಾಡಲಾಗದ ಸ್ಥಿತಿಗೆ ಬಂದು ತಲುಪಿದ್ದಾರೆ. ಯಾಕೆಂದರೆ ಹಿಂದೂಗಳಿಗೆ ಹಿಂದೂಗಳೇ ವಿರೋಧಿಗಳಾಗುತ್ತಿದ್ದರೆ, ಮತ್ತೊಂದೆಡೆ ಇದನ್ನೇ ಬಂಡವಾಳವನ್ನಾಗಿಟ್ಟುಕೊಂಡ ಅನ್ಯ ಮತೀಯರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸತ್ಯದ ಪರವಾಗಿ ಹೇಳಿಕೆ ನೀಡಿದರೂ ಅಂತವರನ್ನೇ ಟಾರ್ಗೆಟ್ ಮಾಡುವ ಈ ಜನ ಸದ್ಯ ಯಾರೂ ಸತ್ಯ ಹೇಳಲೂ ಮುಂದೆ ಬರಲು ಹೆದರುವಂತೆ ಮಾಡಿದ್ದಾರೆ.!

ಇವೆಲ್ಲಾ ಯಾಕೆ ಹೇಳುತ್ತಿದ್ದೇನೆ ಎಂದು ಆಶ್ಚರ್ಯಪಡಬೇಡಿ, ಯಾಕೆಂದರೆ ವಿದೇಶದಲ್ಲಿ ನಡೆದ ಈ ಒಂದು ಘಟನೆ ಸದ್ಯ ಎಲ್ಲರ ನಿದ್ದೆಕೆಡಿಸಿದೆ. ಅರಬ್ ದೇಶದಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಜೀವನವೇ ಇದೀಗ ಕೇವಲ ಒಂದು ಟ್ವೀಟ್ ನಿಂದ ಹಾಳಾಗಿ ಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ನಡೆಯುತ್ತಲೇ ಇವೆ, ಆದರೆ ಕ್ರಮ ಕೈಗೊಳ್ಳುವುದು ಕೇವಲ ಹಿಂದೂ ಧರ್ಮದ ಪರವಾಗಿ ಯಾರು ಧ್ವನಿ ಎತ್ತುತ್ತಾರೋ ಅವರ ವಿರುದ್ಧ ಮಾತ್ರ..!

ಪ್ರಿಯಾಂಕಾ ಚೋಪ್ರಾ ಮಾಡಿದರೆ ಸರಿ, ಸಾಮಾನ್ಯ ವ್ಯಕ್ತಿ ಮಾಡಿದ್ದು ಮಾತ್ರ ತಪ್ಪು..!?

ಶ್ರೀಮಂತರಿಗೊಂದು ನ್ಯಾಯ, ಸಾಮಾನ್ಯ ವ್ಯಕ್ತಿಗಳಿಗೊಂದು ನ್ಯಾಯ ಎಂಬಂತಾಗಿದೆ ಸದ್ಯದ ಪರಿಸ್ಥಿತಿ. ಹೌದು, ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಯಾವುದೋ ಒಂದು ಟಿವಿ ಶೋನಲ್ಲಿ ಭಾರತದಲ್ಲಿ ಬಾಂಬ್ ತಯಾರಿಸಿ ಅದನ್ನು ಪಾಕಿಸ್ತಾನದ ಮೇಲೆ ಆರೋಪ ಮಾಡುವುದಾಗಿ ಒಂದು ಅಭಿನಯದ ಮೂಲಕ ತೋರಿಸಿದ್ದರು. ಇದು ದೇಶಾದ್ಯಂತ ಚರ್ಚೆಯಾಗಿತ್ತು, ಮಾತ್ರವಲ್ಲದೆ ಅನೇಕರು ಇದನ್ನು ವಿರೋಧಿಸಿದ್ದರು. ಆದರೆ ಭಾರತ ಮೂಲದ ವ್ಯಕ್ತಿಯೊಬ್ಬರು ದುಬೈ‌ನ ಸ್ಟಾರ್ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು. ‘ಕಳೆದ ೨೦೦೦ ವರ್ಷಗಳಿಂದ ಹಿಂದೂ ಧರ್ಮದ ಮೇಲೆ ಮುಸಲ್ಮಾನರಿಂದ ದಬ್ಬಾಳಿಕೆ ನಡೆಯುತ್ತಲೇ ಇದೆ,ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ಹಿಂದೂ ಧರ್ಮದ ಬಗ್ಗೆ ನಿಮಗೆಲ್ಲರಿಗೂ ಇಷ್ಟೊಂದು ತಾತ್ಸಾರವೇಕೆ?’ ಎಂದು ಪ್ರಶ್ನಿಸಿದ್ದರು. ಆದರೆ ಈ ಒಂದು ಟ್ವೀಟ್ ಇದೀಗ ಅತುಲ್ ಕೊಚ್ಚಾರ್ ಅವರ ವಿದೇಶಿ ಜೀವನಕ್ಕೆ ಮುಳ್ಳಾಗಿದೆ.!

ಯಾಕೆಂದರೆ ಅರಬ್ ದೇಶದಲ್ಲಿ ಕೂತು ಈ ರೀತಿ ಮುಸಲ್ಮಾನರ ವಿರುದ್ಧವೇ ಹೇಳಿಕೊಂಡಿದ್ದರಿಂದ ಇದೀಗ ಆ ಹೋಟೆಲ್‌ನ ಮಾಲಕರು ಅತುಲ್ ಕೊಚ್ಚಾರ್ ಅವರಿಗೆ ನೀಡಿದ್ದ ಗುತ್ತಿಗೆಯನ್ನೇ ರದ್ದುಗೊಳಿಸಿದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ತಮ್ಮ ಹೊಟೇಲ್‌ನಲ್ಲಿ ಕಾರ್ಯ ನಿರ್ವಹಿಸದಂತೆ ಎಚ್ಚರಿಕೆ ನೀಡಿ , ವಾಪಾಸು ಕಳುಹಿಸಿದೆ.

ಆದ್ದರಿಂದ ಕೇವಲ ಹಿಂದೂ ಧರ್ಮದ ವಿಚಾರವಾಗಿ ಧ್ವನಿ ಎತ್ತಿದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಕಾಗುತ್ತಿದೆಯೇ ವಿನಃ ಹಿಂದೂಗಳಿಗೆ ತೊಂದರೆಯಾದಾಗ ಅದರ ಬಗ್ಗೆ ಯಾರೂ ತುಟಿ ಬಿಚ್ಚುವುದಿಲ್ಲ. ಈ ರೀತಿಯ ಘಟನೆಯಿಂದಾಗಿ ಸತ್ಯ ಹೇಳುವುದಕ್ಕೂ ಜನಸಾಮಾನ್ಯರು ಹಿಂದೇಟು ಹಾಕುವುದು ಗ್ಯಾರಂಟಿ..!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close