ದೇಶಪ್ರಚಲಿತ

ಪಿಎಫ್‍ಐಗೆ ಬಿಗ್ ಶಾಕ್: ಝಾರ್ಕಾಂಡ್‍ನಲ್ಲಿ ಉಗ್ರ ಸಂಘಟನೆ ಬ್ಯಾನ್! ಮಹತ್ವದ ಆದೇಶ ನೀಡಿದ ಬಿಜೆಪಿ ಸರ್ಕಾರ.!!

ಪಿ.ಎಫ್.ಐ… ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಇದು ಭಾರತದಲ್ಲಿ ವಿಧ್ವಂಸಕ ಚಟುವಟಿಕೆಯನ್ನು ನಡೆಸಿ ನಂತರ ಭಾರತ ಸರ್ಕಾರದಿಂದ ನಿಷೇಧಕ್ಕೊಳಗಾಗಿ ಆ ಸಂಘಟನೆಯ ಉಳಿದ ಉಗ್ರರಿಂದ ರಚಿಸಲ್ಪಟ್ಟ ಉಗ್ರ ಸಂಘಟನೆ. ಈ ಉಗ್ರ ಸಂಘಟನೆ ರಾಷ್ಟ್ರದಾದ್ಯಂತ ಉಗ್ರ ಚಟುವಟಿಕೆಗಳನ್ನು ನಡೆಸುತ್ತಾ ಹಲವಾರು ವಿಧ್ವಂಸಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಕೊಲೆ, ಬಾಂಬ್ ಸ್ಪೋಟ ಸಹಿತ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುತ್ತಾ ಈ ದೇಶದಲ್ಲಿ ಅರಾಜಕತೆಯನ್ನು ನಿರ್ಮಾಣ ಮಾಡುತ್ತಲೇ ಬಂದಿರುವ ಒಂದು ಉಗ್ರ ಸಂಘಟನೆ ಪಿ.ಎಫ್.ಐ.

ಜಾರ್ಕಾಂಡ್‍ನಲ್ಲಿ ನಿಷೇಧವಾಯಿತು ಪಿ.ಎಫ್.ಐ…

ದೇಶದಾದ್ಯಂತ ಭಾರೀ ಅನಾಹುತಗಳಿಗೆ ಕಾರಣವಾಗಿದ್ದ ಈ ಪಿ.ಎಫ್.ಐ ಎಂಬ ರಾಷ್ಟ್ರದ್ರೋಹಿ ಸಂಘಟನೆಯನ್ನು ಇಂದು ಝಾರ್ಕಾಂಡ್ ಸರ್ಕಾರ ನಿಷೇಧಿಸಿದೆ. ದೇಶದೆಲ್ಲೆಡೆ ಈ ಉಗ್ರ ಸಂಘಟನೆಯನ್ನು ನಿಷೇಧಿಸಬೇಕೆಂಬ ಕೂಗು ಕೇಳಿ ಬರುತ್ತಿದ್ದರೂ ಯಾವ ಸರ್ಕಾರ ಕೂಡಾ ಈ ಬಗ್ಗೆ ಗಮನ ಹರಿಸಲಿಲ್ಲ. ಆದರೆ ಝಾರ್ಖಾಂಡ್‍ನಲ್ಲಿ ಆಡಳಿತ ನಡೆಸುತ್ತಿರು ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ರಘುಬರ್ ದಾಸ್ ನೇತೃತ್ವದ ಸರ್ಕಾರ ಈ ಮಹತ್ವದ ಆದೇಶವನ್ನು ಸಾರಿದೆ.

ಯಾಕೆ ನಿಷೇಧ..?

ಝಾರ್ಖಾಂಡ್ ರಾಜ್ಯದಲ್ಲಿ ಪಿ.ಎಫ್.ಐ ಉಗ್ರರ ಅಟ್ಟಹಾಸ ಮುಗಿಲು ಮುಟ್ಟಿತ್ತು. ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರಿಗೂ ಹಾಗೂ ಜಗತ್ತನ್ನೇ ಕಿತ್ತು ತಿನ್ನುತ್ತಿರುವ ಐಸಿಸ್ ಸಂಘಟನೆಗೂ ನಿಕಟ ಸಂಪರ್ಕ ಇದೆ ಎನ್ನುವ ಮಾಹಿತಿಯನ್ನು ಝಾರ್ಖಾಂಡ್ ಸರ್ಕಾರ ಕಳೆ ಹಾಕಿತ್ತು. ಈ ಬಗ್ಗೆ ತನಿಖೆಯನ್ನೂ ನಡೆಸಿತ್ತು. ಈ ತನಿಖೆಯಲ್ಲಿ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿತ್ತು.

ರಾಷ್ಟ್ರದಲ್ಲಿ ಹಾಗೂ ಝಾರ್ಖಾಂಡ್ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿ.ಎಫ್.ಐ ಸಂಘಟನೆಗೂ ಹಾಗೂ ಉಗ್ರ ಸಂಘಟನೆಯಾದ ಐಸಿಸ್ ಸಂಘಟನೆಗೂ ನಿಕಟ ಸಂಪರ್ಕವಿದೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ವರದಿಯನ್ನು ಪರಿಗಣಿಸಿದ್ದ ಝಾರ್ಖಾಂಡ್ ಸರ್ಕಾರ ಇಂದು ಮಹತ್ವದ ಆದೇಶವನ್ನೇ ನೀಡಿ ಪಿ.ಎಫ್.ಐ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಿದೆ. ಪಿ.ಎಫ್.ಐ ಸಂಘಟನೆಯನ್ನು ಬ್ಯಾನ್ ಮಾಡಿರುವ ಈ ಸುದ್ಧಿ ಕೇವಲ ಝಾರ್ಖಾಂಡ್ ರಾಜ್ಯ ಮಾತ್ರವಲ್ಲದೆ ಇಡೀ ರಾಷ್ಟ್ರದ ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದಂತಾಗಿದೆ.


ಕರ್ನಾಟಕದಲ್ಲೂ ನಿಷೇಧದ ಕೂಗು…!

ಕೆಲ ವರ್ಷಗಳ ಕಾಲ ತೆಪ್ಪಗೆ ಕುಳಿತಿದ್ದ ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ತಮ್ಮ ಕ್ರೌರ್ಯವನ್ನು ಮುಂದುವರೆಸಲು ಆರಂಭಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದೊಡನೆಯೇ ಪಿ.ಎಫ್.ಐ ಸಹಿತ ಎಲ್ಲಾ ಮುಸಲ್ಮಾನ ಗೂಂಡಾಗಳ ಮೇಲಿರುವ ಕೇಸ್‍ಗಳನ್ನು ಹಿಂಪಡೆದಿತ್ತು. ಇದರಿಂದ ಮತ್ತಷ್ಟು ಪ್ರೇರಣೆಗೊಂಡ ಪಿ.ಎಫ್.ಐ ಉಗ್ರರು ರಾಜ್ಯದಲ್ಲಿ ರಾಷ್ಟ್ರದ್ರೋಹ ಚಟುವಟಿಕೆಗಳನ್ನು ನಡೆಸಲು ಮುಂದಾಗುತ್ತಾರೆ. ರಾಜ್ಯದಲ್ಲಿ ಬರೋಬ್ಬರಿ 25ಕ್ಕೂ ಅಧಿಕ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಾರೆ. ರಾಷ್ಟ್ರಗೀತೆ ಹಾಗೂ ರಾಷ್ಟ್ರಪ್ರೇಮದ ಬಗ್ಗೆ ಧಿಕ್ಕಾರ ಕೂಗುತ್ತಾರೆ. ಪಾಕಿಸ್ಥಾನಕ್ಕೆ ಜಿಂದಾಬಾದ್ ಎನ್ನುವ ಮೂಲಕ ರಾಷ್ಟ್ರದ್ರೋಹದ ಕೆಲಸಗಳನ್ನು ಮಾಡುತ್ತಾರೆ.

ಅದೆಷ್ಟೋ ಕೊಲೆಗಳಲ್ಲಿ ಪಿ.ಎಫ್.ಐ ಕೃತ್ಯ ಸಾಭೀತಾಗಿದ್ದರೂ ಕೂಡಾ ರಾಜ್ಯದಲ್ಲಿ ಪಿ.ಎಫ್.ಐ ಸಂಘಟನೆಯನ್ನು ಬ್ಯಾನ್ ಮಾಡಲು ಸರ್ಕಾರ ಹಿಂದೇಟು ಹಾಕುತ್ತೆ. ಹಿಂದೂ ಕಾರ್ಯಕರ್ತರ ಎಲ್ಲಾ ಕೊಲೆಗಳ ಪ್ರಕರಣಗಳ ಹಿಂದಿನ ರೂವಾರಿಗಳು ಇದೇ ಪಿ.ಎಫ್.ಐ ಸಂಘಟನೆಯ ಆರೋಪಿಗಳು ಎಂದು ತಿಳಿದಿದ್ದರೂ ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಪಿ.ಎಫ್.ಐ ವಿರುದ್ಧ ಕ್ರಮ ಕೈಗೊಳ್ಳಲು ಮೀನಾ ಮೇಷ ಎನಿಸುತ್ತೆ. ಆದ್ದರಿಂದ ಈ ಪಿ.ಎಫ್.ಐ ಎಂಬ ಸಂಘಟನೆಯ ಕಾರ್ಯಕರ್ತರು ಇಂದಿಗೂ ರಾಜಾರೋಷವಾಗಿ ತಮ್ಮ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡೇ ಹೋಗುತ್ತಿದ್ದಾರೆ.

ಡ್ರಗ್ಸ್ ಮಾಫಿಯಾದಲ್ಲೂ ಎತ್ತಿದ ಕೈ..!

ಈ ಉಗ್ರ ಸಂಘಟನೆ ಕೇವಲ ಕೊಲೆ ಚಟುವಟಿಕೆಗಳಲ್ಲಿ ಮಾತ್ರ ಭಾಗಿಯಾಗಿಲ್ಲ. ಇಷ್ಟು ಮಾತ್ರವಲ್ಲದೆ ಸಮಾಜಕ್ಕೆ ಮಾರಕವಾಗಿರುವ ಡ್ರಗ್ಸ್ ದಂಧೆ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ಪಸರಿಸಿ ಅದನ್ನು ಸಮಾಜದಲ್ಲಿ ಬಿತ್ತರಿಸಿ ಶಾಂತಿ ಹಾಗೂ ಸಮಾಜದ ಸ್ವಾಸ್ಥ ಕೆಡಿಸುವಂತಹ ಚಟುವಟಿಕೆಗಳನ್ನೂ ಮಾಡುತ್ತಿದೆ. ಈ ಸಂಘಟನೆ ಇಷ್ಟು ತಡವಾಗಿ ಯಾಕೆ ನಿಷೇಧವಾಯಿತು ಎನ್ನುವ ಪ್ರಶ್ನೆಯೊಂದಿಗೆ ಇಂದಾದರೂ ನಿಷೇಧವಾಯಿತಲ್ಲಾ ಎನ್ನುವ ತೃಪ್ತಿಯನ್ನು ವ್ಯಕ್ತಪಡಿಸಬೇಕಾಗಿದೆ. ಇದು ಕೇವಲ ಝಾರ್ಖಾಂಡ್ ರಾಜ್ಯಕ್ಕೆ ಮಾತ್ರವಲ್ಲದೆ ರಾಷ್ಟ್ರದೆಲ್ಲೆಡೆ ನಿಷೇಧವಾಗಬೇಕು ಎನ್ನುವ ಕೂಗೂ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತವುಳ್ಳ ಮುಖ್ಯಮಂತ್ರಿ ರಘುಬರ್ ದಾಸ್ ನೇತೃತ್ವದ ಝಾಖಾಂಡ್ ಸರ್ಕಾರ ಇಂದು ನೀಡಿದ ಮಹತ್ವದ ಆದೇಶ ಇಡೀ ದೇಶಕ್ಕೇ ಮಾದರಿಯಾಗಿದೆ. ಮಾತ್ರವಲ್ಲದೆ ಇದು ಇನ್ನುಳಿದ ರಾಜ್ಯ ಸರ್ಕಾರಗಳಿಗೂ ಒಳ್ಳೆಯ ಪಾಠವಾಗಿದೆ. ಝಾರ್ಖಾಂಡ್ ಸರ್ಕಾರದ ಈ ಧಿಟ್ಟ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಇದು ಒಳ್ಳೆಯ ನಿರ್ಧಾರ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದು ಇನ್ನುಳಿದ ರಾಜ್ಯಗಳಲ್ಲೂ ಜಾರಿಗೆ ಬಂದು ರಾಷ್ಟ್ರದ ಒಳಗೆ ನಡೆಯುತ್ತಿರುವಂತಹ ಇಂತಹಾ ವಿಧ್ವಂಸಕ ಚಟುವಟಿಕೆಗಳನ್ನು ನಿಯಂತ್ರಿಸಬೇಕಾಗಿದೆ.

-ಸುನಿಲ್ ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close