ಪ್ರಚಲಿತ

ಐವರು ಶಾಸಕರ ಫೋನ್ ಸ್ವಿಚ್ ಆಫ್, ಮುಂಬೈಗೆ ಶಿಫ್ಟ್.!ಸಂಕ್ರಾಂತಿಗೆ ನಡೆದೇ ಬಿಡುತ್ತಾ ರಾಜಕೀಯ ಕ್ರಾಂತಿ?

ದ್ಯ ಕರ್ನಾಟಕದ ಸ್ಥಿತಿ ಯಾವ ರೀತಿ ಇದೆ ಎಂದರೆ ಚುನಾವಣೆಯಲ್ಲಿ ಸೋತ ಎರಡು ಪಕ್ಷಗಳು ಒಂದಾಗಿ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿದರು ಕೂಡ ಇನ್ನೂ ಸರಕಾರ ನಿಷ್ಕ್ರಿಯಗೊಂಡಿದೆ ಎಂಬ ಆರೋಪವೇ ಕೇಳಿ ಬರುತ್ತಿದೆ. ಯಾಕೆಂದರೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವೇ ಹೇಳಿಕೊಂಡಿದ್ದಾರೆ, ಆಡಳಿತ ನಡೆಸಲು ಕಾಂಗ್ರೆಸ್ ಬಿಡುತ್ತಿಲ್ಲ, ನಾನು‌ ಕಾಂಗ್ರೆಸ್‌ನ‌ ಕ್ಲರ್ಕ್ ಆಗಿ ಕೆಲಸ ಮಾಡುವಂತಾಗಿದೆ ಎಂದು.‌ಇಷ್ಟರಲ್ಲೇ ಗೊತ್ತಾಗಬೇಕು ಮೈತ್ರಿ ಮಾಡಿಕೊಂಡ ಎರಡೂ ಪಕ್ಷಗಳು ಕೂಡ ರಾಜ್ಯದ ಹಿತಕಾಯಲು ಸಿದ್ಧರಿಲ್ಲ, ಬದಲಾಗಿ ಅಧಿಕಾರ ತಮ್ಮ ಕೈಯಲ್ಲಿ ಇರಬೇಕು ಅಷ್ಟೇ. ಆದರೆ ಇದೀಗ ತಮ್ಮ ತಮ್ಮಲ್ಲೇ ಕಿತ್ತಾಟ ಆರಂಭವಾಗಿದ್ದು, ಯಾವ ಸಂದರ್ಭದಲ್ಲಿ ಬೇಕಾದರೂ ಸಮ್ಮಿಶ್ರ ಸರ್ಕಾರ ಕಳಚಿಬೀಳುವ ಸಾಧ್ಯತೆ ಇದೆ. ಯಾಕೆಂದರೆ ಈಗಾಗಲೇ ರಮೇಶ್ ಜಾರಕಿಹೊಳಿ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್-ಜೆಡಿಎಸ್ ನ ಕೂಟದಿಂದ ಹೊರಬರಲು ನಿರ್ಧರಿಸಿದ್ದರು. ಇದೀಗ ಮತ್ತೆ ಐವರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂಬ ಸುದ್ಧಿ ಪ್ರಸಾರ ಆಗಿದೆ.‌!

ಮೈತ್ರಿ ಕೂಟದ ಸಂಪರ್ಕಕ್ಕೆ ಸಿಗುತ್ತಿಲ್ಲ ಐವರು ಶಾಸಕರು!

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಅಸಮಧಾನ ಎದ್ದು ಕಾಣುತ್ತಿದ್ದು, ಐವರು ಶಾಸಕರು ಮೈತ್ರಿ ಕೂಟದ ನಾಯಕರ ಸಂಪರ್ಕಕ್ಕೂ ಸಿಗದೆ ಮುಂಬೈನಿಂದ ದೆಹಲಿಯತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಅವರನ್ನೂ ಸೇರಿ ಒಟ್ಟು ಐದು ಶಾಸಕರು ಈಗಾಗಲೇ ರಾಜ್ಯ ಬಿಟ್ಟು ಮುಂಬೈಗೆ ತೆರಳಿದ್ದು, ಇದೀಗ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೂತಿದ್ದಾರೆ. ನಿನ್ನೆಯಷ್ಟೇ ಹುಕ್ಕೇರಿ ಶಾಸಕ ಗಣೇಶ್ ಹುಕ್ಕೇರಿ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ಧಿ ಪ್ರಸಾರ ಆಗಿತ್ತು. ಇದೀಗ ಮತ್ತೆ ಐದು ಶಾಸಕರು ಕಾಂಗ್ರೆಸ್‌ಗೆ ಕೈಕೊಡಲು ತಯಾರಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಯಾಕೆಂದರೆ ಅತೃಪ್ತ ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಯಾವ ಕಸರತ್ತು ನಡೆಸಿದರು ಕೂಡ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮುಂಬೈನಲ್ಲಿ ಇರುವ ಐವರು ಶಾಸಕರು ಇಂದು ಮಧ್ಯಾಹ್ನ ದೆಹಲಿಗೆ ಹೋಗಲಿದ್ದಾರೆ ಎಂಬ ಮಾಹಿತಿ ಕೂಡ ಇದ್ದು, ಎಲ್ಲರೂ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೂತಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರಿಗೆ ಶಾಸಕರ ಈ ನಡೆಯಿಂದ ಭಾರೀ ತಲೆನೋವಾಗಿದ್ದು, ಮುಂದೆ ಏನು ಮಾಡಬೇಕೆಂಬ ಚಿಂತೆ ಶುರುವಾಗಿದೆ.!

ಇತ್ತ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ, ಆದರೆ ನಮ್ಮ ಶಾಸಕರು ನಮ್ಮ ಜೊತೆಯಲ್ಲೇ ಇದ್ದಾರೆ. ಮುಂದಿನ ಐದು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಾರೆ, ಯಾರೂ ಕೂಡ ವದಂತಿಗೆ ಕಿವಿಗೊಡಬೇಡಿ ಎಂದು ಭರವಸೆ ಕೂಡ ನೀಡುತ್ತಿದ್ದಾರೆ.

ಕಾಂಗ್ರೆಸಿಗರ ಒತ್ತಡದಿಂದ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಆಡಳಿತ ನಡೆಸಲು ಕಷ್ಟವಾಗುತ್ತಿದೆ, ಕೇವಲ ಆರೇ ತಿಂಗಳಲ್ಲಿ ಸಾಕಾಗಿ ಹೋಗಿದೆ ಎಂದು ಹೇಳಿಕೊಂಡಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಸರಕಾರ ಉರುಳಬಹುದು. ಆದರೆ ಲೋಕಸಭಾ ಚುನಾವಣೆಯವರೆಗೂ ಹೇಗಾದರೂ ಸಹಿಸಿಕೊಂಡು ಹೋಗುತ್ತೇನೆ ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರಾದರೂ, ಕಾಂಗ್ರೆಸ್ ಅಥವಾ ಜೆಡಿ‌ಎಸ್‌ನ ಶಾಸಕರು ಪಕ್ಷಕ್ಕೆ ಕೈ ಕೊಟ್ಟರೆ ಸರಕಾರ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದ ಅಸಮಾಧಾನಗೊಂಡ ಶಾಸಕರನ್ನೂ ಮನವೊಲಿಸುವ ಪ್ರಯತ್ನ ಮಾಡಬೇಕು, ಇತ್ತ ಕಾಂಗ್ರೆಸ್ ನಾಯಕರ ಒತ್ತಡಕ್ಕೂ ತಲೆಬಾಗಬೇಕಾದ ಪರಿಸ್ಥಿತಿ ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಂದೊದಗಿದೆ. ಶಾಸಕ ಗಣೇಶ್ ಹುಕ್ಕೇರಿ, ನಾಗೇಂದ್ರ ಸೇರಿದಂತೆ ಇನ್ನುಳಿದ ನಾಲ್ಕು ಶಾಸಕರು ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ‌ ಸೇರಿದರೆ ಬಿಜೆಪಿಯ ಸಂಖ್ಯಾಬಲ ಹೆಚ್ಚಾಗಿ ಸರಕಾರ ರಚಿಸುವತ್ತ ಗಮನ ಹರಿಸುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಮುಂಬೈನಲ್ಲಿ ಇರುವ ಈ ಶಾಸಕರ ಮುಂದಿನ ನಡೆ ಏನೆಂಬುದನ್ನು ಕಾದು ನೋಡಬೇಕಿದೆ..!

–ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close