ಅಂಕಣಪ್ರಚಲಿತ

ಹಿಂದೂ ದೇವತೆಯ ಹೆಸರನ್ನು ಜಪಾನ್ ನಗರವೊಂದಕ್ಕಿಟ್ಟು ಸನಾತನ ಧರ್ಮವೇ ಶ್ರೇಷ್ಠ ಎಂದು ಜಗತ್ತಿಗೆ ಸಾರಿದ ಜಪಾನ್!!

ಭಾರತ ಎಂಬ ಹೆಸರು ಕೇಳಿದರೆ ಸಾಕು ಬೇರೆ ರಾಷ್ಟ್ರಗಳ ಅದೆಷ್ಟೋ ಜನ ಇಲ್ಲೇ ಜನಿಸಬೇಕಿತ್ತು ಎಂದು ಹೇಳುತ್ತಾರೆ!! ಅಷ್ಟರ ಮಟ್ಟಿಗೆ ಈ ದೇಶ ಪ್ರೇರಿತಗೊಂಡಿದೆ!! ಇಲ್ಲಿನ ಆಚಾರ ವಿಚಾರ ಸಂಸ್ಕೃತಿಯನ್ನು ನೋಡಿದರೆ ಕೆಲ ರಾಷ್ಟ್ರಗಳ ಜನರು ಮುಂದಿನ ಜನ್ಮದಲ್ಲಾದರೂ ಈ ದೇಶದಲ್ಲಿ ಹುಟ್ಟ ಬೇಕು ಎಂದು ಹಾತೊರೆಯುತ್ತಾರೆ!! ಹಿಂದೂ ಧರ್ಮದ ಸೊಗಡನ್ನು ತುಂಬಿಕೊಂಡಿರುವ ಭಾರತದಲ್ಲಿ ಅದೆಷ್ಟೋ ಗ್ರಂಥಗಳ ಆಗರ ತುಂಬಿಕೊಂಡಿದೆ ಎಂದರೆ ಅದಕ್ಕೆ ಲೆಕ್ಕವೇ ಇಲ್ಲ ಎಂದು ಹೇಳಬಹುದು!! ಆದರೆ ಕೆಲ ಜನರು ಇಲ್ಲೇ ಹುಟ್ಟಿ ಇದೇ ಮಣ್ಣಲ್ಲಿ ಬೆಳೆದರೂ ಭಾರತದ ಆಚಾರ ವಿಚಾರದ ಬಗ್ಗೆ ಬಾಯಿಗೆ ಬಂದಂತೆ ಜರಿಯುತ್ತಿರುತ್ತಾರೆ. ಆದರೂ ಹಿಂದೂ ಧರ್ಮವನ್ನು ಆರಾಧಿಸುವ ರಾಷ್ಟ್ರ ಮತ್ತೊಂದಿದೆ ಎಂದು ತಿಳಿದಾಕ್ಷಣ ಅಚ್ಚರಿಯಾಗುವುದು ಸಹಜ!!

ಜಪಾನ್ ನಗರವೊಂದಕ್ಕೆ ಹಿಂದೂ ದೇವತೆಯ ಹೆಸರು!!

ಇದೀಗ ಜಪಾನ್ ನಗರವೊಂದಕ್ಕೆ ಹಿಂದೂ ದೇವತೆಯಾದ `ಲಕ್ಷ್ಮಿ’ ಹೆಸರನ್ನು ಇಡಲಾಗಿದೆ ಎಂದು ಜಪಾನ್ ದೂತವಾಸ ಕಚೇರಿ ಅಧಿಕಾರಿ ಟಕಯುಕಿ ಕಿಟಗವ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಜಪಾನ್ ರಾಜಧಾನಿ ಟೋಕಿಯೊ ಸಮೀಪದ ನಗರಕ್ಕೆ `ಕಿಚಿಜೋಯ್’ ಎಂದು ಹೆಸರಿಡಲಾಗಿದೆ. ಜಪಾನಿ ಭಾಷೆಯ ಆ ಪದಕ್ಕೆ ಲಕ್ಷ್ಮಿ ದೇವಾಲಯ ಎಂಬ ಅರ್ಥ ಇದೆ ಎಂದು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ನಡೆದ ಗ್ರಾಡ್ಯುಯೇಷನ್ ಡೇ ಸಂದರ್ಭದಲ್ಲಿ ಟಕಯುಕಿ ತಿಳಿಸಿದ್ದಾರೆ. “ಜಪಾನ್ ದೇಶದಲ್ಲಿನ ನಗರವೊಂದರ ಹೆಸರನ್ನು ನೀವು ಕೇಳಿದರೆ ಚಕಿತರಾಗುತ್ತೀರ. ಲಕ್ಷ್ಮಿಮಾತೆ ಆಲಯ ಇರುವ ಆ ನಗರಕ್ಕೆ ಕಿಚಿಜೋಯ್ ಎಂದು ಹೆಸರಿಟ್ಟಿದ್ದೇವೆ. ಅದರ ಅರ್ಥ ಜಪಾನಿ ಭಾಷೆಯಲ್ಲಿ ಲಕ್ಷ್ಮಿದೇವಿ ಆಲಯ” ಎಂದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಮಾಹಿತಿ ನೀಡಿದ್ದಾರೆ!!

Image result for japan laxmi temple

ಜಪಾನ್ ಸಂಸ್ಕೃತಿ ಸಂಪ್ರದಾಯಗಳ ಜತೆಗೆ ಅಲ್ಲಿನ ಸಮಾಜದಲ್ಲಿ ಭಾರತೀಯರ ಪ್ರಭಾವ ತುಂಬಾ ಹೆಚ್ಚಾಗಿರುತ್ತದೆ. ಜಪಾನ್ ಮತ್ತು ಭಾರತ ಬೇರೆ ಬೇರೆ ಎಂದುಕೊಳ್ಳುತ್ತಾರೆ. ಇವರೆಡೂ ಬೇರೆ ಬೇರೆ ದೇಶಗಳೇ ಆದರೂ ತಮ್ಮ ದೇಶದ ಸಂಸ್ಕೃತಿಯಲ್ಲಿ ಭಾರತೀಯತೆ ಸಹ ಚೆನ್ನಾಗಿ ಬೆರೆತಿದೆ. ನಮ್ಮ ದೇಶದಲ್ಲಿ ಸಾಕಷ್ಟು ಸಂಖ್ಯೆಯ ಹಿಂದೂ ದೇವಾಲಯಗಳಿವೆ. ಅದೆಷ್ಟೋ ವರ್ಷಗಳಿಂದ ತಾವು ಹಿಂದೂ ದೇವತೆಗಳನ್ನು ಪೂಜಿಸುತ್ತಿದ್ದೇವೆ ಎಂದಿದ್ದಾರೆ.

ಅದಲ್ಲದೆ ಕನ್ನಡದಲ್ಲಿ ಭಾಷಣ ಆರಂಭಿಸಿ ವಿದ್ಯಾರ್ಥಿಗಳನ್ನು ಚಕಿತಗೊಳಿಸಿದ ಅವರು, ಜಪಾನಿ ಭಾಷೆಯ ಮೇಲೂ ಭಾರತೀಯರ ಪ್ರಭಾವ ಇದೆ. ತಮ್ಮ ಭಾಷೆಯಲ್ಲಿ ಸಾಕಷ್ಟು ಸಂಸ್ಕೃತ ಪದಗಳಿವೆ. ಸುಮಾರು 500 ಜಪಾನಿ ಪದಗಳು ಸಂಸ್ಕೃತ, ತಮಿಳಿನಿಂದ ಎರವಲಾಗಿ ಬಂದಿವೆ. ಜಪಾನ್‍ನಲ್ಲಿ ಕೌಶಲ್ಯ ಹೊಂದಿರುವ ವೃತ್ತಿಪರರಿಗೆ ಮತ್ತು ಜಪಾನಿ ಭಾಷೆ ಕಲಿತಿರುವ ಭಾರತೀಯರಿಗೆ ಅಲ್ಲಿ ಉದ್ಯೋಗ ಗಿಟ್ಟಿಸುವುದು ತುಂಬಾ ಸುಲಭ ಎಂಬ ವಿವರಗಳನ್ನು ಅವರು ನೀಡಿ ಭಾರತೀಯ ಆಚಾರ ವಿಚಾರ ಎಷ್ಟರ ಮಟ್ಟಿಗೆ ಜಪಾನಿಗರು ಅಳವಡಿಸಿಕೊಂಡಿದ್ದಾರೆ ಎಂಬುವುದನ್ನು ತಿಳಿಸಿದ್ದಾರೆ!!

ಅದಲ್ಲದೆ ಈಗಾಗಲೇ ಹಲವಾರು ರಾಷ್ಟ್ರಗಳು ಭಾರತದ ಆಚಾರ ವಿಚಾರ ಸಂಸ್ಕೃತಿಯನ್ನು ಅಳವಡಿಸಿಕೊಂಡಿದೆ. ವಿಶ್ವದ ಟಾಪ್ ಎನಿಸಿಕೊಂಡಿರುವ ಅಮೆರಿಕಾದ ಯೂನಿವರ್ಸಿಟಿಯಲ್ಲಿ ಕೂಡಾ ರಾಮಾಯಣ ಮಹಾಭಾರತವನ್ನು ಕಲಿಯಲು ಮುಂದಾಗಿದೆ!! ಅದಲ್ಲದೆ ಇಸ್ಲಾಂ ರಾಷ್ಟ್ರವಾದ ಇಂಡೋನೇಷಿಯಾದಲ್ಲೂ ಹಿಂದೂ ಧರ್ಮವನ್ನು ಆರಾಧಿಸುತ್ತಾರೆ ಎಂದರೆ ಸನಾತನ ಧರ್ಮ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬುವುದು ಇಲ್ಲಿ ತಿಳಿಯಬಹುದು!!

Image result for japan laxmi temple

ದೇವರ ಚಿತ್ರವನ್ನು ಸರಕಾರಿ ಕಚೇರಿಯಲ್ಲಿ ಹಾಕಿದರೆ ಎಲ್ಲಿ ಕೋಮುವಾದ ಎಂಬ ವಾಸನೆ ಅಂಟಿಬಿಡುತ್ತದೋ ಎಂಬ ಭಯದಲ್ಲಿ ದೇಶದ ಜಾತ್ಯಾತೀತ ನಾಯಕರು ತಾನು ಹುಟ್ಟಿದ ಧರ್ಮವನ್ನೇ ಮರೆತು ಬಿಡುತ್ತಾರೆ. ಭಾರತದಲ್ಲಿ ಹಿಂದೂ ಧರ್ಮವನ್ನು ಕೆಲವರು ಶತಾಯಗತಾಯ ಧ್ವೇಷಿಸುತ್ತಿರಬೇಕಾದರೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೆಲ್ಲಾ ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದೆ ಎಂದರೆ ನಿಜಕ್ಕೂ ಭಾರತ ಗ್ರೇಟ್. ಹಿಂದೂ ಧರ್ಮ ವಿಶ್ವಕ್ಕೇ ಪ್ರಭಾವ ಬೀರಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಅಲ್ಲ. ಸುಪ್ರೀಂ ಕೋರ್ಟೇ ಹಿಂದೂ ಒಂದು ಧರ್ಮ ಮಾತ್ರ ಅಲ್ಲ, ಅದೊಂದು ಜೀವನ ವಿಧಾನ ಎಂದು ಕೂಡಾ ಹೇಳಿದೆ.

source: vijayakarnataka

  • Postcard team
Tags

Related Articles

FOR DAILY ALERTS
 
FOR DAILY ALERTS
 
Close