ಪ್ರಚಲಿತ

ವೈರಲ್! ಪೊಲೀಸರನ್ನು ಬಲವಂತವಾಗಿ ಬರಸೆಳೆದು ಎಂಜಲು ತಿನ್ನಿಸಿದ ಸಚಿವ ಜಮೀರ್ ಅಹ್ಮದ್.! ಕಾಂಗ್ರೆಸ್ ಸಚಿವನ ನಡೆಗೆ ವ್ಯಾಪಕ ಟೀಕೆ.!

ಕೆಲ ರಾಜಕಾರಣಿಗಳು ಸಮಾಜದ ಮುಂದೆ ತಮ್ಮನ್ನು ಬಿಂಬಿಸಲು ಯತ್ನಿಸಲು ಹೋಗುವ ಕೆಲ ನಾಯಕರು ಫೋಟೋಗಾಗಿ ಯಾವ ನೀಚ ಕೆಲಸವನ್ನೂ ಮಾಡಲು ಹಿಂದೇಟು ಹಾಕೋದಿಲ್ಲ. ಇದು ಮತ್ತೆ ಸಾಭೀತಾಗಿದೆ. ದಸರಾ ಆಚರಣೆಯಲ್ಲಿ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ನಡೆಸಿರುವ ಒಂದು ಕೃತ್ಯ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪೊಲೀಸರಿಗೆ ಎಂಜಲು ತಿನ್ನಿಸಿದ ಜಮೀರ್.!

ನಾಡಹಬ್ಬ ದಸರಾ ಮೈಸೂರಿನಲ್ಲಿ ವಿಜ್ರಂಭಣೆಯಿಂದ ನಡೆದಿತ್ತು. ಈ ವೇಳೆ ಮೈಸೂರಿನಲ್ಲಿ ಆಹಾರ ಮೇಳವೂ ನಡೆದಿತ್ತು. ಈ ವೇಳೆ ಊಟಕ್ಕೆ ಕುಳಿತಿದ್ದ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಪೊಲೀಸರನ್ನು ತಾನು ಕುಳಿತಿದ್ದ ಊಟದ ಸ್ಥಳಕ್ಕೆ ಕರೆಯುತ್ತಾರೆ. ಈ ವೇಳೆ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಪೇದೆಗಳು ಜಮೀರ್ ಕರೆದ ಸ್ಥಳಕ್ಕೆ ಆಗಮಿಸುತ್ತಾರೆ.

ಈ ವೇಳೆ ತಾನು ಊಟ ಮಾಡುತ್ತಿದ್ದ ಎಲೆಯಿಂದ ಆಹಾರವನ್ನು ತೆಗೆದು ಪೊಲೀಸರ ಬಾಯಿಗೆ ಇಡುತ್ತಾರೆ. ತನ್ನ ಊಟ ಮುಗಿಯುವ ಹಂತಕ್ಕೆ ಬಂದಿದ್ದರೂ ತನ್ನ ಎಲೆಯಲ್ಲಿದ್ದ ಎಂಜಲನ್ನು ಪೊಲೀಸರಿಗೆ ತಿನ್ನಿಸಿದ್ದಾರೆ. ಪತ್ರಕರ್ತರು ಹಾಗೂ ಅಭಿಮಾನಿಗಳು ತನ್ನ ಸುತ್ತಮುತ್ತ ಸುತ್ತುವರಿದಿದ್ದನ್ನು ಕಂಡ ಜಮೀರ್ ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾರೆ. ಆದರೆ ತನ್ನ ಊಟದ ಎಲೆಯಿಂದ ಎಂಜಲು ಕೊಟ್ಟಿದ್ದಾರೆ ಎನ್ನುವ ಗೊಡವೆ ಇವರಿಗಿಲ್ಲವೇ? ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರ್ತವ್ಯನಿರತ ಪೊಲೀಸರನ್ನು ಬಲವಂತವಾಗಿ ಬರಸೆಳೆದು ಅವರಿಗೆ ತನ್ನ ತಟ್ಟೆಯ ಎಂಜಲು ತಿನ್ನಿಸಿದ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ವಿರುದ್ಧ ವ್ಯಾಪಕ ಟೀಕೆಗಳು ಎದುರಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಚಿವರಿಗೆ ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close