ಪ್ರಚಲಿತ

ಮೈತ್ರಿ ಸರಕಾರದ ಒಂದು ವಿಕೆಟ್ ಪತನ ಗ್ಯಾರಂಟಿ! ಪಕ್ಷ ಬಿಟ್ಟು ಬಿಜೆಪಿಯಲ್ಲಿ ಸ್ಪರ್ಧಿಸಿ ಖರ್ಗೆಯನ್ನು ಸೋಲಿಸಲು ಸಜ್ಜಾದ ಕೈ ಶಾಸಕ!

ಮೈತ್ರಿ ಸರಕಾರದ ಆಟ ಯಾಕೋ ಕೊನೆಯಾಗುತ್ತಾ ಬಂದಿದೆ ಅನ್ನಿಸುತ್ತಿದೆ, ಸರಕಾರ ಕಳಚಿ ಬೀಳುವ ಎಲ್ಲಾ ಮುನ್ಸೂಚನೆಗಳು ಸಿಕ್ಕಿದ್ದು, ಅತೃಪ್ತ ಶಾಸಕರು ಬಿಜೆಪಿ ಸೇರುವುದು ಬಹುತೇಕ ಖಚಿತ ಎಂಬ ಮಾತು ಕೇಳಿ ಬಂದಿದೆ. ಈಗಾಗಲೇ ಕೆಲ ಕೈ ಅತೃಪ್ತ ಶಾಸಕರು ಬಿಜೆಪಿಯ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಲಾಗಿದ್ದು, ಇದೀಗ ಕಾಂಗ್ರೆಸ್‌ನ ಒಬ್ಬ ಶಾಸಕ ಪಕ್ಷ ತೊರೆದು ಬಿಜೆಪಿ ಸೇರುವುದು ಖಚಿತವಾಗಿದ್ದು, ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದು ಖಚಿತವಾಗಿದೆ. ಈ ಬಗ್ಗೆ ಸ್ವತಃ ಮಾಜಿ ಸಚಿವರೇ ಹೇಳಿಕೊಂಡಿದ್ದು, ಅತೃಪ್ತ ಶಾಸಕರಲ್ಲಿ ಒಬ್ಬ ಶಾಸಕ ಬಿಜೆಪಿ ಸೇರುತ್ತಾರೆ ಎಂಬ ಮಾಹಿತಿ ನೀಡಿದ್ದಾರೆ.

ಒಂದೆಡೆ ಸಿದ್ದರಾಮಯ್ಯನವರು ಪಕ್ಷದ ಎಲ್ಲಾ ಶಾಸಕರು ನಮ್ಮ ಹಿಡಿತದಲ್ಲಿದ್ದು, ಯಾವ ಶಾಸಕರು ಕೂಡ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ಕೇವಲ ಆಪರೇಷನ್ ಕಮಲ ಮಾಡುತ್ತಿದೆ ಎಂಬ ಭಯ ಹುಟ್ಟಿಸುತ್ತಿದೆ, ಆದರೆ ನಮ್ಮ ಯಾವ ಶಾಸಕರು ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ, ಸರಕಾರ ಸುಭದ್ರವಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಓರ್ವ ಶಾಸಕ ರಾಜೀನಾಮೆ ನೀಡಲು ತಯಾರಿ ನಡೆಸಿದ್ದು, ಮೈತ್ರಿ ಸರಕಾರಕ್ಕೆ ಭಾರೀ ಆತಂಕ ಎದುರಾಗಿದೆ.!

ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಜಾಧವ್!

ಈಗಾಗಲೇ ಕಾಂಗ್ರೆಸ್‌ನಿಂದ ದೂರ ಉಳಿದು ಬಿಜೆಪಿಯ ಸಂಪರ್ಕದಲ್ಲಿ ಇರುವ ಉಮೇಶ್ ಜಾಧವ್ ಅವರು ಸೋಮವಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಮತ್ತು ಮುಂದಿನ‌ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಅಚ್ಚರಿಯ ಹೇಳಿಕೆಯೊಂದನ್ನು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಹೇಳಿಕೊಂಡಿದ್ದು, ಮೈತ್ರಿ ಸರಕಾರದಲ್ಲಿ ಭಾರೀ ಕಳವಳ ವ್ಯಕ್ತವಾಗಿದೆ. ಯಾಕೆಂದರೆ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ ಬಿಜೆಪಿಯ ಸಂಖ್ಯಾಬಲ ಹೆಚ್ಚಾಗಲಿದೆ ಮತ್ತು ಮೈತ್ರಿ ಸರಕಾರದ ಸಂಖ್ಯಾಬಲ ಕಡಿಮೆಯಾಗಲಿದೆ. ಇಂತಹ ಬೆಳವಣಿಗೆ ಸರಕಾರಕ್ಕೆ ಅಪಾಯ ತಂದಿಡುವುದು ಗ್ಯಾರಂಟಿ ಯಾಕೆಂದರೆ ಈಗಾಗಲೇ ಬಿಜೆಪಿ ಸರಕಾರ ಉರುಳಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಜೋರಾಗಿ ಕೇಳಿ ಬರುತ್ತಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಇದೀಗ ಮಾಜಿ ಸಚಿವರ ಹೇಳಿಕೆ ಮತ್ತಷ್ಟು ಕುತೂಹಲ ಕೆರಳಿಸಿದೆ.

ಬಾಬುರಾವ್ ಚಿಂಚನಸೂರ್ ಅವರು ಅತೃಪ್ತ ಶಾಸಕರು ಇರುವ ಹೋಟೆಲ್‌ನಲ್ಲಿ ಶಾಸಕರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದು, ಸ್ವತಃ ಇವರೇ ಈ ಮಾತು ಹೇಳಿಕೊಂಡಿದ್ದು ಇದೀಗ ಹೊಸ ಆಟ ಆರಂಭವಾಗಿದೆ. ಯಾಕೆಂದರೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರೆ ಉಮೇಶ್ ಜಾಧವ್ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹೇಳಲಾಗಿದೆ.

ಅಷ್ಟೇ ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿ ಎಂದು ಹೇಳಿಕೊಂಡ ಶಾಸಕರು, ಬಿಜೆಪಿಗೆ ಸೇರುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದರೆ ಮುಂದಿನ‌ ಚುನಾವಣೆ ಮಾತ್ರವಲ್ಲದೆ ಸದ್ಯ ಮೈತ್ರಿ ಸರಕಾರಕ್ಕೂ ಭಾರೀ ಏಟು ಬೀಳಲಿದ್ದು, ಹೇಗಾದರೂ ಮಾಡಿ ಅತೃಪ್ತ ಶಾಸಕರ ಮನವೊಲಿಸಿ ಮತ್ತೆ ಪಕ್ಷದ ಕಡೆ ಮುಖ ಮಾಡುವಂತೆ ಮಾಡಲು ಕಾಂಗ್ರೆಸ್-ಜೆಡಿಎಸ್ ನಾಯಕರು ಹರಸಾಹಸ ಪಡುತ್ತಿದ್ದಾರೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close